IPL 2022 Auction: 9 ಕೋಟಿಯಲ್ಲಿ 7 ಆಟಗಾರರ ಟಾರ್ಗೆಟ್: RCBಗೆ ಸಂಕಷ್ಟ ಶುರು
IPL 2022 Auction: ಶಹಬಾಜ್ ಅಹಮದ್ ಅವರನ್ನು 2. 40 ಕೋಟಿ ರೂ.ಗೆ ಹಾಗೂ ಆಕಾಶ್ ದೀಪ್ ಅವರನ್ನು 20 ಲಕ್ಷ ರೂ.ಗೆ ಆರ್ಸಿಬಿ ಖರೀದಿಸಿದೆ. ಅಲ್ಲಿಗೆ ಮೊದಲ ದಿನವೇ ಆರ್ಸಿಬಿ ತಂಡವು ಕೇವಲ 8 ಆಟಗಾರರಿಗೆ 47 ಕೋಟಿ 75 ಲಕ್ಷ ರೂ. ಖರ್ಚು ಮಾಡಿದೆ.
ಐಪಿಎಲ್ ಮೆಗಾ ಹರಾಜಿನ ಮೊದಲ ದಿನದಲ್ಲಿ 96 ಆಟಗಾರರು ಹರಾಜಾಗಿದ್ದಾರೆ. ಇವರಲ್ಲಿ ಕೆಲ ಆಟಗಾರರು ಹರಾಜಾಗದೇ ಉಳಿದರೇ, ಬಹುತೇಕ ಆಟಗಾರರನ್ನು ಬಿಕರಿಯಾಗಿದ್ದಾರೆ. ಹೀಗೆ ಆರ್ಸಿಬಿ ಕೂಡ ಮೊದಲ ದಿನ 8 ಆಟಗಾರರನ್ನು ಖರೀದಿಸಿದೆ. ಅಚ್ಚರಿ ಎಂದರೆ 57 ಕೋಟಿಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡ ಆರ್ಸಿಬಿ ಮೊದಲ ದಿನವೇ ಬಹುತೇಕ ಮೊತ್ತವನ್ನು ಖರ್ಚು ಮಾಡಿದೆ.
ಅಂದರೆ ಆರ್ಸಿಬಿ ಖರೀದಿಸಿದ ಮೊದಲ ಆಟಗಾರ ಫಾಫ್ ಡುಪ್ಲೆಸಿಸ್ಗೆ 7 ಕೋಟಿ ನೀಡಿದರೆ, ಹರ್ಷಲ್ ಪಟೇಲ್ಗೆ 10.75 ಕೋಟಿ ನೀಡಿದೆ. ಅಚ್ಚರಿ ಎಂದರೆ ಆರ್ಸಿಬಿ ವನಿಂದು ಹಸರಂಗ ಅವರನ್ನು 10.75 ಕೋಟಿ ನೀಡಿ ಖರೀದಿಸಿರುವುದು. ಇನ್ನು ದಿನೇಶ್ ಕಾರ್ತಿಕ್ 5.50 ಕೋಟಿ ನೀಡಿದೆ. ಹಾಗೆಯೇ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಅನೂಜ್ ರಾವತ್ ಅವರನ್ನೂ ಕೂಡ 3.40 ಕೋಟಿ ನೀಡಿ ಖರೀದಿಸಿ ಅಚ್ಚರಿ ಮೂಡಿಸಿದೆ. ಇನ್ನು ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಝಲ್ವುಡ್ ಅವರನ್ನು 7.75 ಕೋಟಿ ರೂ. ನೀಡಿ ತನ್ನದಾಗಿಸಿಕೊಂಡಿದೆ.
ಇನ್ನು ಶಹಬಾಜ್ ಅಹಮದ್ ಅವರನ್ನು 2. 40 ಕೋಟಿ ರೂ.ಗೆ ಹಾಗೂ ಆಕಾಶ್ ದೀಪ್ ಅವರನ್ನು 20 ಲಕ್ಷ ರೂ.ಗೆ ಆರ್ಸಿಬಿ ಖರೀದಿಸಿದೆ. ಅಲ್ಲಿಗೆ ಮೊದಲ ದಿನವೇ ಆರ್ಸಿಬಿ ತಂಡವು ಕೇವಲ 8 ಆಟಗಾರರಿಗೆ 47 ಕೋಟಿ 75 ಲಕ್ಷ ರೂ. ಖರ್ಚು ಮಾಡಿದೆ. ಇದೀಗ ರಿಟೈನ್ ಆಟಗಾರರು ಸೇರಿದಂತೆ ಆರ್ಸಿಬಿ ತಂಡದಲ್ಲಿ 11 ಆಟಗಾರರಿದ್ದಾರೆ. ಆದರೆ ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ ಕನಿಷ್ಠ 18 ಆಟಗಾರರು ಇರಲೇಬೇಕು. ಅಂದರೆ ಆರ್ಸಿಬಿಗೆ ಇನ್ನೂ 7 ಆಟಗಾರರ ಅವಶ್ಯಕತೆಯಿದೆ.
ಇದೀಗ ಆರ್ಸಿಬಿ ಬಳಿ ಉಳಿದಿರುವುದು 9.25 ಕೋಟಿ ಮಾತ್ರ. ಅಂದರೆ ಈ ಮೊತ್ತದಲ್ಲಿ ಒಟ್ಟು 7 ಆಟಗಾರರನ್ನು ಖರೀದಿಸಬೇಕಾಗುತ್ತದೆ. ಒಂದು ವೇಳೆ ಸ್ಟಾರ್ ಆಟಗಾರರಿಗಾಗಿ ಆರ್ಸಿಬಿ ಬಿಡ್ ಮಾಡಿದರೂ ಎದುರಾಳಿ ತಂಡದಿಂದ ಪೈಪೋಟಿ ಕಂಡು ಬರಲಿದೆ. ಇದರಿಂದ ಕಡಿಮೆ ಮೊತ್ತಕ್ಕೆ ಉತ್ತಮ ಆಟಗಾರರು ಕೂಡ ಸಿಗುವುದು ಡೌಟ್. ಒಂದು ವೇಳೆ ಒಂದಿಬ್ಬರು ಸ್ಟಾರ್ ಆಟಗಾರರ ಖರೀದಿಗೆ ಆರ್ಸಿಬಿ ದೊಡ್ಡ ಮೊತ್ತ ಪಾವತಿಸಿದರೂ, ಆ ಬಳಿಕ ಕಡಿಮೆ ಮೊತ್ತ ಬೇಸ್ ಪ್ರೈಸ್ ಹೊಂದಿರುವ ಯುವ ಆಟಗಾರರ ಮೊರೆ ಹೋಗಬೇಕಾಗುತ್ತದೆ.
ಮೊದಲ ದಿನವೇ ಬಹುತೇಕ ಹಣ ಖರ್ಚು ಮಾಡಿರುವ ಆರ್ಸಿಬಿಗೆ ಇದೀಗ 18 ಆಟಗಾರರನ್ನು ಕಂಪ್ಲೀಟ್ ಮಾಡುವುದು ದೊಡ್ಡ ಸವಾಲು. ಅದರಲ್ಲಿ ಸ್ಟಾರ್ ಆಟಗಾರರನ್ನು ಟಾರ್ಗೆಟ್ ಮಾಡುವುದು ಅತೀ ದೊಡ್ಡ ಸವಾಲು ಎಂದೇ ಹೇಳಬಹುದು. ಒಟ್ಟಿನಲ್ಲಿ 9.25 ಕೋಟಿ ರೂ. ಹೊಂದಿರುವ ಆರ್ಸಿಬಿ 2ನೇ ದಿನ ಹೇಗೆ ಬಿಡ್ಡಿಂಗ್ ನಡೆಸಲಿದೆ ಎಂಬುದೇ ಈಗ ಕುತೂಹಲ.
ಇದನ್ನೂ ಓದಿ: IPL 2022 RCB Players: Rcb ತಂಡಕ್ಕೆ ಎಂಟ್ರಿ ಕೊಟ್ಟ ಹೊಸ ಆಟಗಾರರು ಇವರೇ..!
ಇದನ್ನೂ ಓದಿ: IPL 2022 Auction: ಹರಾಜಾದ ಮತ್ತು ಹರಾಜಾಗದ ಆಟಗಾರರ ಸಂಪೂರ್ಣ ಪಟ್ಟಿ ಹೀಗಿದೆ
(IPL 2022 Auction: Rcb Purse remaining)