AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022 Auction: ಎರಡನೇ ದಿನದ ಹರಾಜಿನಲ್ಲಿ ಆರ್​ಸಿಬಿ ಯಾವ ಪ್ಲೇಯರ್ ಮೇಲೆ ಕಣ್ಣಿಟ್ಟಿದೆ?

RCB Full Squad IPL 2022 Mega Auction: ಎರಡನೇ ದಿನ ಕೂಡ ಉತ್ತಮ ಫಾರ್ಮಿನಲ್ಲಿ ಇರುವ ಆಟಗಾರರನ್ನ ಖರೀದಿ ಮಾಡಲು ಎಲ್ಲ ಫ್ರಾಂಚೈಸಿ ಲೆಕ್ಕಾಚಾರ ಹಾಕಿಕೊಂಡಿವೆ. ಮೊದಲ ದಿನದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬರೋಬ್ಬರಿ 8 ಆಟಗಾರರನ್ನು ಖರೀದಿಸಿತು. ಇದೀಗ ಎರಡನೇ ದಿನದ ಹರಾಜಿನ ಮೇಲೆ ಆರ್​ಸಿಬಿ ಕಣ್ಣಿಟ್ಟಿದೆ.

IPL 2022 Auction: ಎರಡನೇ ದಿನದ ಹರಾಜಿನಲ್ಲಿ ಆರ್​ಸಿಬಿ ಯಾವ ಪ್ಲೇಯರ್ ಮೇಲೆ ಕಣ್ಣಿಟ್ಟಿದೆ?
RCB IPL 2022 Auction
TV9 Web
| Updated By: Vinay Bhat|

Updated on: Feb 13, 2022 | 9:39 AM

Share

ಮಿಲಿಯನ್ ಡಾಲರ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ 2022 ಆವೃತ್ತಿಯ ಮೆಗಾ ಹರಾಜು (IPL 2022 Auction) ಪ್ರಕ್ರಿಯೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಇಂದು ಎರಡನೇ ದಿನದ ಆಕ್ಷನ್​​ಗೆ ತಯಾರಾಗುತ್ತಿದೆ. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಬಯೋಬಲ್ ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ನಡೆಯುತ್ತಿರುವ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 10 ತಂಡಗಳ ಫ್ರಾಂಚೈಸಿಗಳು ಮೊದಲ ಹಣದ ಮಳೆಯನ್ನೇ ಸುರಿಸಿದರು. ಇದೀಗ ಎರಡನೇ ದಿನ ಕೂಡ ಉತ್ತಮ ಫಾರ್ಮಿನಲ್ಲಿ ಇರುವ ಆಟಗಾರರನ್ನ ಖರೀದಿ ಮಾಡಲು ಎಲ್ಲ ಫ್ರಾಂಚೈಸಿ ಲೆಕ್ಕಾಚಾರ ಹಾಕಿಕೊಂಡಿವೆ. ಮೊದಲ ದಿನದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಬರೋಬ್ಬರಿ 8 ಆಟಗಾರರನ್ನು ಖರೀದಿಸಿತು. ಹರ್ಷಲ್ ಪಟೇಲ್ ಹಾಗೂ ವನಿಂದು ಹಸರಂಗ ಈ ಇಬ್ಬರು ಆಟಗಾರರ ಮೇಲೆಯೇ ಬರೋಬ್ಬರಿ ತಲಾ 10.75 ಕೋಟಿ ಹೂಡಿಕೆ ಮಾಡಿ ಅಚ್ಚರಿ ಮೂಡಿಸಿತು. ಫಾಫ್ ಡುಪ್ಲೆಸಿಸ್ ಅವರನ್ನು 7 ಕೋಟಿಗೆ ಖರೀದಿ ಮಾಡಿತು. ಇದೀಗ ಎರಡನೇ ದಿನದ ಹರಾಜಿನ ಮೇಲೆ ಆರ್​ಸಿಬಿ (RCB) ಕಣ್ಣಿಟ್ಟಿದೆ.

ಮೊದಲನೇ ದಿನದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 74 ಆಟಗಾರರು ಹರಾಜಾಗಿದ್ದು, ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅತಿ ದೊಡ್ಡ ಮೊತ್ತದ ಬಿಡ್ ಮಾಡಿದ ಫ್ರಾಂಚೈಸಿ ಎನಿಸಿಕೊಂಡಿತು. ರೋಹಿತ್ ಪಡೆ ಇಶಾನ್ ಕಿಶನ್ ಮೇಲೆ 15.25 ಕೋಟಿ ಸುರಿಯಿತು. ಅತ್ತ ನೂತನ ಫ್ರಾಂಚೈಸಿಯಾದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾದ ಆವೇಶ್ ಖಾನ್ 10 ಕೋಟಿ ಪಡೆಯುವ ಮೂಲಕ ಐಪಿಎಲ್ ಹರಾಜಿನಲ್ಲಿ ಅತಿ ದೊಡ್ಡ ಮೊತ್ತ ಪಡೆದ ಅನ್ ಕ್ಯಾಪ್ಡ್ ಪ್ಲೇಯರ್ ಎನಿಸಿಕೊಂಡರು. ಹೀಗೆ ಮೊದಲನೇ ದಿನ ಹಲವಾರು ದಾಖಲೆಯ ಬಿಡ್ಡಿಂಗ್ ನಡೆದರೆ, ಎರಡನೇ ದಿನ ಕೂಡ ಇದೇರೀತಿ ಹಣದ ಮಳೆ ಸುರಿಯುವ ನಿರೀಕ್ಷೆಯಿದೆ.

ಆರ್​ಸಿಬಿ ಮೆಗಾ ಹರಾಜು ಪ್ರಕ್ರಿಯೆಯ ಮೊದಲನೇ ದಿನ 11 ಆಟಗಾರರನ್ನು ಹೊಂದಿದೆ. ಸದ್ಯ ಬೆಂಗಳೂರು ಫ್ರಾಂಚೈಸಿ ಬಳಿ 9.25 ಕೋಟಿ ರೂ. ಮೊತ್ತವನ್ನಷ್ಟೆ ಉಳಿಸಿಕೊಂಡಿದೆ. ಆರ್​​ಸಿಬಿ ಇಂದು ಎರಡನೇ ದಿನದ ಹರಾಜಿನಲ್ಲಿ ಮತ್ತೊಬ್ಬ ಓಪನರ್ ಅನ್ನು ಹುಡುಕಬೇಕಿದೆ, ಹೀಗಾಗಿ ಯಾರನ್ನು ಎಷ್ಟು ಮೊತ್ತಕ್ಕೆ ಖರೀದಿ ಮಾಡ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಈ ಲಿಸ್ಟ್​ನಲ್ಲಿ ಪ್ರಮುಖವಾಗಿ ಆ್ಯರೋನ್ ಫಿಂಚ್, ಮಾರ್ನಸ್ ಲ್ಯಾಬುಶೇನ್, ಡೇವಿಡ್ ಮಲನ್, ಇಯಾನ್ ಮಾರ್ಗನ್ ಇದ್ದಾರೆ. ಅಂತೆಯೆ ಅಜಿಂಕ್ಯಾ ರಹಾನೆ, ಕ್ರಿಸ್ ಜೋರ್ಡನ್, ಎವಿನ್ ಲೆವಿಸ್ ಖರೀದಿಸಿದರೆ ಅಚ್ಚರಿ ಪಡಬೇಕಿಲ್ಲ.

ಇಂದಿನ ಹರಾಜಿನಲ್ಲಿ ಕಾಲಿನ್ ಗ್ರ್ಯಾಂಡ್​ಹೋಮ್, ಎಸ್. ಶ್ರೀಶಾಂತ್, ಶೆರ್ಫನ್ ರುಥರ್​ಫಾರ್ಡ್, ನವ್​ದೀಪ್ ಸೈನಿ, ಖಲೀಲ್ ಅಹ್ಮದ್, ಜಯದೇವ್ ಉನಾದ್ಕಟ್, ಇಶಾಂತ್ ಶರ್ಮಾ ಹೀಗೆ ಪ್ರಮುಖ ಆಟಗಾರರಿದ್ದಾರೆ. ಮೊದಲ ದಿನ ಅನ್​ಸೋಲ್ಡ್ ಆದ ಸ್ಟಾರ್ ಆಟಗಾರರು ಕೂಡ ಇಂದು ಸೇಲ್ ಆಗುವ ನಿರೀಕ್ಷೆಯಿದೆ. ಇದರಲ್ಲಿ ಡೇವಿಡ್ ಮಿಲ್ಲರ್, ಸುರೇಶ್ ರೈನಾ, ಸ್ಟೀವ್ ಸ್ಮಿತ್, ಶಕಿಬ್ ಅಲ್ ಹಸನ್, ಮೊಹಮ್ಮದ್ ನಬಿ, ಮ್ಯಾಥ್ಯೂ ವೇಡ್, ವೃದ್ದಿಮಾನ್ ಸಾಹ, ಆದಿಲ್ ರಶೀದ್, ಮುಜೀಬ್ ಉರ್ ರೆಹ್ಮಾನ್, ಆ್ಯಡಂ ಝಂಪಾ ಇದ್ದಾರೆ.

IPL 2022 Auction: ಇತ್ತ ಆರ್​ಸಿಬಿ ಹರಾಜಿನಲ್ಲಿ ಖರೀದಿಸಿದ ಬೆನ್ನಲ್ಲೇ ಅತ್ತ ಸ್ಫೋಟಕ ಶತಕ ಸಿಡಿಸಿ ಅಬ್ಬರಿಸಿದ ಸ್ಟಾರ್ ಬ್ಯಾಟರ್

IPL 2022 Auction: ಇಂದು ಎರಡನೇ ದಿನದ ಐಪಿಎಲ್ 2022 ಮೆಗಾ ಆಕ್ಷನ್: ದೊಡ್ಡ ಮೊತ್ತದ ಲಿಸ್ಟ್​ನಲ್ಲಿ ಯಾರಿದ್ದಾರೆ?

ಹೊಯ್ಸಳ ಡ್ರೈವರ್ ಜತೆ ಗೃಹಿಣಿ ಎಸ್ಕೇಪ್
ಹೊಯ್ಸಳ ಡ್ರೈವರ್ ಜತೆ ಗೃಹಿಣಿ ಎಸ್ಕೇಪ್
ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ
ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ
‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ
‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ
ತಿರುವನಂತಪುರಂ ಕಾರ್ಪೊರೇಷನ್‌ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ
ತಿರುವನಂತಪುರಂ ಕಾರ್ಪೊರೇಷನ್‌ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್