IPL 2022 Auction: ಇಂದು ಎರಡನೇ ದಿನದ ಐಪಿಎಲ್ 2022 ಮೆಗಾ ಆಕ್ಷನ್: ದೊಡ್ಡ ಮೊತ್ತದ ಲಿಸ್ಟ್ನಲ್ಲಿ ಯಾರಿದ್ದಾರೆ?
ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2022 ಮೆಗಾ ಆಕ್ಷನ್ (IPL 2022 Mega Auction) ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಎರಡನೇ ದಿನದ ಹರಾಜು ಪ್ರಕ್ರಿಯೆ ಆರಂಭಗೊಳ್ಳಲಿದೆ. ಇಂದುಕೂಡ ಸ್ಟಾರ್ ಆಟಗಾರರು ದೊಡ್ಡ ಮೊತ್ತಕ್ಕೆ ಬಿಕರಿಯಾಗುವ ನಿರೀಕ್ಷೆಯಿದೆ.
ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2022 ಮೆಗಾ ಆಕ್ಷನ್ (IPL 2022 Mega Auction) ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಎರಡನೇ ದಿನದ ಹರಾಜು ಪ್ರಕ್ರಿಯೆ ಆರಂಭಗೊಳ್ಳಲಿದೆ. ಇಂದುಕೂಡ ಸ್ಟಾರ್ ಆಟಗಾರರು ದೊಡ್ಡ ಮೊತ್ತಕ್ಕೆ ಬಿಕರಿಯಾಗುವ ನಿರೀಕ್ಷೆಯಿದೆ. ಮೊದಲ ದಿನ ಎಲ್ಲ 10 ತಂಡಗಳು ಆಟಗಾರರ ಖರೀದಿ ಸಲುವಾಗಿ ಹಣದ ಹೊಳೆಯನ್ನೇ ಹರಿಸಿವೆ. ಮೊದಲ ದಿನ ಒಟ್ಟಾರೆ 74 ಆಟಗಾರರು ಮಾರಾಟಗೊಂಡಿದ್ದಾರೆ. ಇದರಲ್ಲಿ 54 ಭಾರತೀಯ ಆಟಗಾರರು ಮತ್ತು 20 ವಿದೇಶಿ ಆಟಗಾರರಾಗಿದ್ದಾರೆ. ಅಚ್ಚರಿ ಎಂದರೆ ಮುಂಬೈ ಇಂಡಿಯನ್ಸ್ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಒಬ್ಬ ಆಟಗಾರನ ಖರೀದಿ ಸಲುವಾಗಿ 10 ಕೋಟಿ ರೂ. ಗಳಿಗೂ ಹೆಚ್ಚಿನ ಹಣ ನೀಡಿದೆ. ಬರೋಬ್ಬರಿ 15.25 ಕೋಟಿ ಕೊಟ್ಟು ಇಶಾನ್ ಕಿಶನ್ (Ishan Kishan) ಅವರನ್ನು ತೆಗೆದುಕೊಂಡಿದೆ. ಆರ್ಸಿಬಿ (RCB) ವಾಣಿಂದು ಹಸರಂಗ, ಡುಪ್ಲೆಸಿಸ್, ಹರ್ಷಲ್ ಪಟೇಲ್, ದಿನೇಶ್ ಕಾರ್ತಿಕ್, ಶಾಬಾಜ್ ಅಹಮದ್ ಹಾಗೂ ಅಕಾಶ್ ದೀಪ್ ಅವರನ್ನು ಖರೀದಿ ಮಾಡಿದೆ.
ಇಂದು ಎರಡನೇ ದಿನ ಕೂಡ ಸ್ಟಾರ್ ಆಟಗಾರರಿಗಾಗಿ ಹಣದ ಮಳೆ ಸುರಿಯಲಿದೆ. ಪ್ರಮುಖವಾಗಿ ಆ್ಯರೋನ್ ಫಿಂಚ್, ಮಾರ್ನಸ್ ಲ್ಯಾಬುಶೇನ್, ಡೇವಿಡ್ ಮಲನ್, ಇಯಾನ್ ಮಾರ್ಗನ್, ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆ, ಕ್ರಿಸ್ ಜೋರ್ಡನ್, ಎವಿನ್ ಲೆವಿಸ್, ಕಾಲಿನ್ ಗ್ರ್ಯಾಂಡ್ಹೋಮ್, ಎಸ್. ಶ್ರೀಶಾಂತ್, ಶೆರ್ಫನ್ ರುಥರ್ಫಾರ್ಡ್, ನವ್ದೀಪ್ ಸೈನಿ, ಖಲೀಲ್ ಅಹ್ಮದ್, ಜಯದೇವ್ ಉನಾದ್ಕಟ್, ಇಶಾಂತ್ ಶರ್ಮಾ ಹೀಗೆ ಪ್ರಮುಖ ಆಟಗಾರರಿದ್ದಾರೆ.
ಅಂತೆಯೆ ಮೊದಲ ದಿನ ಅನ್ಸೋಲ್ಡ್ ಆದ ಸ್ಟಾರ್ ಆಟಗಾರರು ಕೂಡ ಇಂದು ಸೇಲ್ ಆಗುವ ನಿರೀಕ್ಷೆಯಿದೆ. ಇದರಲ್ಲಿ ಡೇವಿಡ್ ಮಿಲ್ಲರ್, ಸುರೇಶ್ ರೈನಾ, ಸ್ಟೀವ್ ಸ್ಮಿತ್, ಶಕಿಬ್ ಅಲ್ ಹಸನ್, ಮೊಹಮ್ಮದ್ ನಬಿ, ಮ್ಯಾಥ್ಯೂ ವೇಡ್, ವೃದ್ದಿಮಾನ್ ಸಾಹ, ಆದಿಲ್ ರಶೀದ್, ಮುಜೀಬ್ ಉರ್ ರೆಹ್ಮಾನ್, ಆ್ಯಡಂ ಝಂಪಾ ಇದ್ದಾರೆ.
ಮೊದಲ ದಿನ ಮಾರಾಟವಾದ ಆಟಗಾರರ ವಿವರ:
ಮುಂಚೂಣಿಯ ಸ್ಟಾರ್ ಆಟಗಾರರು
ಶಿಖರ್ ಧವನ್ (ಪಂಜಾಬ್ ಕಿಂಗ್ಸ್, 8.25 ಕೋಟಿ ರೂ.)
ಆರ್. ಅಶ್ವಿನ್ (ರಾಜಸ್ಥಾನ್ ರಾಯಲ್ಸ್, 5 ಕೋಟಿ ರೂ.)
ಪ್ಯಾಟ್ ಕಮಿನ್ಸ್ (ಕೋಲ್ಕತಾ ನೈಟ್ ರೈಡರ್ಸ್, ಕೋಟಿ ರೂ.)
ಕಗಿಸೊ ರಬಾಡ (ಪಂಜಾಬ್ ಕಿಂಗ್ಸ್, 9.25 ಕೋಟಿ ರೂ.)
ಟ್ರೆಂಟ್ ಬೌಲ್ಟ್ (ರಾಜಸ್ಥಾನ್ ರಾಯಲ್ಸ್ , 8 ಕೋಟಿ ರೂ.)
ಶ್ರೇಯಸ್ ಅಯ್ಯರ್ (ಕೋಲ್ಕತ್ತಾ ನೈಟ್ ರೈಡರ್ಸ್, 12.25 ಕೋಟಿ ರೂ.)
ಮೊಹಮ್ಮದ್ ಶಮಿ (ಗುಜರಾತ್ ಟೈಟನ್ಸ್, 6.25 ಕೋಟಿ ರೂ.)
ಫಾಫ್ ಡು’ಪ್ಲೆಸಿಸ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು, 7 ಕೋಟಿ ರೂ.)
ಕ್ವಿಂಟನ್ ಡಿ’ಕಾಕ್ ಲಖನೌ ಸೂಪರ್ ಜಯಂಟ್ಸ್ (6.75 ಕೋಟಿ ರೂ.)
ಡೇವಿಡ್ ವಾರ್ನರ್ (ಡೆಲ್ಲಿ ಕ್ಯಾಪಿಟಲ್ಸ್, 6.25 ಕೋಟಿ ರೂ.)
ಬ್ಯಾಟ್ಸ್‌ಮನ್‌ಗಳು:
ಮನೀಶ್ ಪಾಂಡೆ (ಲಖನೌ ಸೂಪರ್ ಜಯಂಟ್ಸ್, 4.60 ಕೋಟಿ ರೂ.)
ಶಿಮ್ರಾನ್ ಹೆಟ್ಮೇರ್ (ರಾಜಸ್ಥಾನ ರಾಯಲ್ಸ್, 8.50 ಕೋಟಿ ರೂ.)
ರಾಬಿನ್ ಉತ್ತಪ್ಪ (ಚೆನ್ನೈ ಸೂಪರ್ ಕಿಂಗ್ಸ್, 2 ಕೋಟಿ ರೂ.)
ಜೇಸನ್ ರಾಯ್ (ಗುಜರಾತ್ ಟೈಟಾನ್ಸ್, 2 ಕೋಟಿ ರೂ.)
ದೇವದತ್ ಪಡಿಕ್ಕಲ್ (ರಾಜಸ್ಥಾನ ರಾಯಲ್ಸ್, 7.75 ಕೋಟಿ ರೂ.)
ಆಲ್‌ರೌಂಡರ್‌ಗಳು:
ಡ್ವೇನ್ ಬ್ರಾವೋ (ಚೆನ್ನೈ ಸೂಪರ್ ಕಿಂಗ್ಸ್, 4.40 ಕೋಟಿ ರೂ.)
ನಿತೀಶ್ ರಾಣಾ (ಕೋಲ್ಕತ್ತಾ ನೈಟ್ ರೈಡರ್ಸ್, 8 ಕೋಟಿ ರೂ.)
ಜೇಸನ್ ಹೋಲ್ಡರ್ (ಲಖನೌ ಸೂಪರ್ ಜಯಂಟ್ಸ್, 8.75 ಕೋಟಿ ರೂ.)
ಹರ್ಷಲ್ ಪಟೇಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು, 10.75 ಕೋಟಿ ರೂ.)
ದೀಪಕ್ ಹೂಡಾ (ಲಖನೌ ಸೂಪರ್ ಜಯಂಟ್ಸ್, 5.75 ಕೋಟಿ ರೂ.)
ವಾನಿಂದು ಹಸರಂಗ (ರಾಯಲ್ ಚಾಲೆಂಜರ್ಸ್ ಬೆಂಗಳೂರು, 10.75 ಕೋಟಿ ರೂ.)
ವಾಷಿಂಗ್ಟನ್ ಸುಂದರ್ (ಸನ್ ರೈಸರ್ಸ್ ಹೈದರಾಬಾದ್, 8.75 ಕೋಟಿ ರೂ.)
ಕೃಣಾಲ್ ಪಾಂಡ್ಯ (ಲಖನೌ ಸೂಪರ್ ಜಯಂಟ್ಸ್, 8.25 ಕೋಟಿ ರೂ.)
ಮಿಚೆಲ್ ಮಾರ್ಷ್ (ಡೆಲ್ಲಿ ಕ್ಯಾಪಿಟಲ್ಸ್, 6.50 ಕೋಟಿ ರೂ.)
ವಿಕೆಟ್ ಕೀಪರ್ಸ್:
ಅಂಬಾಟಿ ರಾಯುಡು (ಚೆನ್ನೈ ಸೂಪರ್ ಕಿಂಗ್ಸ್, 6.75 ಕೋಟಿ ರೂ.)
ಇಶಾನ್ ಕಿಶನ್ (ಮುಂಬೈ ಇಂಡಿಯನ್ಸ್, 15.25 ಕೋಟಿ ರೂ.)
ಜಾನಿ ಬೈರ್‌ಸ್ಟೋವ್ (ಪಂಜಾಬ್ ಕಿಂಗ್ಸ್, 6.75 ಕೋಟಿ ರೂ.)
ದಿನೇಶ್ ಕಾರ್ತಿಕ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು, 5.50 ಕೋಟಿ ರೂ.)
ನಿಕೋಲಸ್ ಪೂರನ್ (ಸನ್ ರೈಸರ್ಸ್ ಹೈದರಾಬಾದ್, 10.75 ಕೋಟಿ ರೂ.)
ವೇಗಿಗಳು:
ಟಿ. ನಟರಾಜನ್ (ಸನ್ ರೈಸರ್ಸ್ ಹೈದರಾಬಾದ್, 4 ಕೋಟಿ ರೂ.)
ದೀಪಕ್ ಚಹಾರ್ (ಚೆನ್ನೈ ಸೂಪರ್ ಕಿಂಗ್ಸ್, 14 ಕೋಟಿ ರೂ.)
ಪ್ರಸಿದ್ಧ್ ಕೃಷ್ಣ (ರಾಜಸ್ಥಾನ್ ರಾಯಲ್ಸ್, 10 ಕೋಟಿ ರೂ.)
ಲಾಕಿ ಫರ್ಗುಸನ್ (ಗುಜರಾತ್ ಟೈಟನ್ಸ್, 10 ಕೋಟಿ ರೂ.)
ಜಾಶ್ ಹೇಝಲ್‌ವುಡ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು, 7.75 ಕೋಟಿ ರೂ.)
ಮಾರ್ಕ್ ವುಡ್ (ಲಖನೌ ಸೂಪರ್ ಜಯಂಟ್ಸ್, 7.5 ಕೋಟಿ ರೂ.)
ಭುವನೇಶ್ವರ್ ಕುಮಾರ್ (ಸನ್ ರೈಸರ್ಸ್ ಹೈದರಾಬಾದ್, 4.2 ಕೋಟಿ ರೂ.)
ಶಾರ್ದುಲ್ ಠಾಕೂರ್ (ಡೆಲ್ಲಿ ಕ್ಯಾಪಿಟಲ್ಸ್, 10.75 ಕೋಟಿ ರೂ.)
ಮುಸ್ತಾಫಿಝುರ್ ರೆಹಮಾನ್ (ಡೆಲ್ಲಿ ಕ್ಯಾಪಿಟಲ್ಸ್, 2 ಕೋಟಿ ರೂ.)
ಸ್ಪಿನ್ನರ್ಸ್:
ಕುಲ್ದೀಪ್ ಯಾದವ್ (ಡೆಲ್ಲಿ ಕ್ಯಾಪಿಟಲ್ಸ್, 2 ಕೋಟಿ ರೂ.)
ರಾಹುಲ್ ಚಹರ್ (ಪಂಜಾಬ್ ಕಿಂಗ್ಸ್, 5.25 ಕೋಟಿ ರೂ.)
ಯುಜ್ವೇಂದ್ರ ಚಹಲ್ (ರಾಜಸ್ಥಾನ್ ರಾಯಲ್ಸ್, 6.5 ಕೋಟಿ ರೂ.)
ಅನ್ಕ್ಯಾಪ್ಡ್ ಬ್ಯಾಟ್ಸ್‌ಮನ್ಸ್:
ಪ್ರಿಯಂ ಗರ್ಗ್ (ಸನ್‌ರೈಸರ್ಸ್ ಹೈದರಾಬಾದ್‌ಮ 20 ಲಕ್ಷ ರೂ.)
ಅಭಿನವ್ ಸದಾರಂಗನಿ (ಗುಜರಾತ್ ಟೈಟನ್ಸ್, 2.6 ಕೋಟಿ ರೂ.)
ಡೆವಾಲ್ಡ್ ಬ್ರೆವಿಸ್ (ಮುಂಬೈ ಇಂಡಿಯನ್ಸ್, 3 ಕೋಟಿ ರೂ.)
ಅಶ್ವಿನ್ ಹೆಬ್ಬಾರ್ (ಡೆಲ್ಲಿ ಕ್ಯಾಪಿಟಲ್ಸ್, 20 ಲಕ್ಷ ರೂ.)
ರಾಹುಲ್ ತ್ರಿಪಾಠಿ (ಸನ್‌ರೈಸರ್ಸ್ ಹೈದರಾಬಾದ್, 8.5 ಕೋಟಿ)
ಅನ್ಕ್ಯಾಪ್ಡ್ ಆಲ್‌ರೌಂಡರ್ಸ್:
ರಿಯಾನ್ ಪರಾಗ್ (ರಾಜಸ್ಥಾನ್ ರಾಯಲ್ಸ್, 3.8 ಕೋಟಿ ರೂ.)
ಅಭಿಷೇಕ್ ಶರ್ಮಾ (ಸನ್ ರೈಸರ್ಸ್ ಹೈದರಾಬಾದ್, 6.5 ಕೋಟಿ ರೂ.)
ಸರ್ಫರಾಝ್ ಖಾನ್ (ಡೆಲ್ಲಿ ಕ್ಯಾಪಿಟಲ್ಸ್, 20 ಲಕ್ಷ ರೂ.)
ಶಾರುಖ್ ಖಾನ್ (ಪಂಜಾಬ್ ಕಿಂಗ್ಸ್, 9 ಕೋಟಿ ರೂ.)
ಶಿವಂ ಮಾವಿ (ಕೋಲ್ಕತ್ತಾ ನೈಟ್ ರೈಡರ್ಸ್, 7.25 ಕೋಟಿ ರೂ.)
ರಾಹುಲ್ ತೆವಾಟಿಯ (ಗುಜರಾತ್ ಟೈಟನ್ಸ್, 9 ಕೋಟಿ ರೂ.)
ಕಮಲೇಶ್ ನಾಗರಕೋಟಿ (ಡೆಲ್ಲಿ ಕ್ಯಾಪಿಟಲ್ಸ್, 1.10 ಕೋಟಿ ರೂ.)
ಹರ್ಪ್ರೀತ್ ಬ್ರಾರ್ (ಪಂಜಾಬ್ ಕಿಂಗ್ಸ್, 3.80 ಕೋಟಿ ರೂ.)
ಶಹಬಾಜ್ ಅಹಮದ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು, 2.40 ಕೋಟಿ ರೂ.)
ಅನ್ಕ್ಯಾಪ್ಡ್ ವಿಕೆಟ್‌ಕೀಪರ್ಸ್:
ಕೆಎಸ್ ಭಾರತ್ (ಡೆಲ್ಲಿ ಕ್ಯಾಪಿಟಲ್ಸ್, 2 ಕೋಟಿ ರೂ.)
ಅನುಜ್ ರಾವತ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು, 3.4 ಕೋಟಿ ರೂ.)
ಪ್ರಭಸಿಮ್ರನ್ ಸಿಂಗ್ (ಪಂಜಾಬ್ ಕಿಂಗ್ಸ್, 60 ಲಕ್ಷ ರೂ.)
ಶೆಲ್ಡನ್ ಜಾಕ್ಸನ್ (ಕೋಲ್ಕತ್ತಾ ನೈಟ್ ರೈಡರ್ಸ್, 60 ಲಕ್ಷ ರೂ.)
ಜಿತೇಶ್ ಶರ್ಮಾ (ಪಂಜಾಬ್ ಕಿಂಗ್ಸ್, 20 ಲಕ್ಷ ರೂ.)
ಅನ್ಕ್ಯಾಪ್ಡ್ ವೇಗಿಗಳು:
ಬಸಿಲ್ ಥಂಪಿ (ಮುಂಬೈ ಇಂಡಿಯನ್ಸ್, 30 ಲಕ್ಷ ರೂ.)
ಕಾರ್ತಿಕ್ ತ್ಯಾಗಿ (ಸನ್ ರೈಸರ್ಸ್ ಹೈದರಾಬಾದ್, 4 ಕೋಟಿ ರೂ.)
ಆಕಾಶ್ ದೀಪ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು, 20 ಲಕ್ಷ ರೂ.)
ಕೆಎಂ ಆಸಿಫ್ (ಚೆನ್ನೈ ಸೂಪರ್ ಕಿಂಗ್ಸ್, 20 ಲಕ್ಷ ರೂ.)
ಅವೇಶ್ ಖಾನ್ (ಲಖನೌ ಸೂಪರ್ ಜಯಂಟ್ಸ್, 10 ಕೋಟಿ ರೂ.)
ಇಶಾನ್ ಪೊರೆಲ್ (ಪಂಜಾಬ್ ಕಿಂಗ್ಸ್, 25 ಲಕ್ಷ ರೂ.)
ತುಷಾರ್ ದೇಶಪಾಂಡೆ (ಚೆನ್ನೈ ಸೂಪರ್ ಕಿಂಗ್ಸ್, 20 ಲಕ್ಷ ರೂ.)
ಅಂಕಿತ್ ರಾಜಪೂತ್ (ಲಖನೌ ಸೂಪರ್ ಜೈಂಟ್ಸ್, 50 ಲಕ್ಷ ರೂ.)
ಅನ್ಕ್ಯಾಪ್ಡ್ ಸ್ಪಿನ್ನರ್ಸ್:
ನೂರ್ ಅಹ್ಮದ್ (ಗುಜರಾತ್ ಟೈಟಾನ್ಸ್, 30 ಲಕ್ಷ ರೂ.)
ಮುರುಗನ್ ಅಶ್ವಿನ್ (ಮುಂಬೈ ಇಂಡಿಯನ್ಸ್, 1.6 ಕೋಟಿ ರೂ.)
ಕೆಸಿ ಕಾರಿಯಪ್ಪ (ರಾಜಸ್ಥಾನ್ ರಾಯಲ್ಸ್, 30 ಲಕ್ಷ ರೂ.)
ಶ್ರೇಯಸ್ ಗೋಪಾಲ್ (ಸನ್ ರೈಸರ್ಸ್ ಹೈದರಾಬಾದ್, 75 ಲಕ್ಷ ರೂ.)
ಜಗದೀಶ ಸುಚಿತ್ (ಸನ್ ರೈಸರ್ಸ್ ಹೈದರಾಬಾದ್, 20 ಲಕ್ಷ ರೂ.)
ಆರ್ ಸಾಯ್ ಕಿಶೋರ್ (ಗುಜರಾತ್ ಟೈಟನ್ಸ್, 3 ಕೋಟಿ ರೂ.)
IPL 2022 Auction: ಚಹಾಲ್ಗಾಗಿ ಹರಾಜು ನಡೆಸದ RCB..!
Published On - 7:44 am, Sun, 13 February 22