IPL 2022 Auction: ಮೊದಲ ದಿನ ಯಾವ ತಂಡ ಎಷ್ಟು ಹಣ ಖರ್ಚು ಮಾಡಿದೆ? ಉಳಿದಿರುವುದೆಷ್ಟು? ಇಲ್ಲಿದೆ ವಿವರ

IPL 2022 Auction: ಬೆಂಗಳೂರಿನಲ್ಲಿ ನಡೆದ ಹರಾಜಿನಲ್ಲಿ 10 ಆಟಗಾರರು 10 ಕೋಟಿಗೂ ಹೆಚ್ಚು ಗಳಿಸಿದ್ದು ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು. ಕಳೆದ ಐಪಿಎಲ್ ಹರಾಜಿನ ಬಗ್ಗೆ ಮಾತನಾಡುವುದಾದರೆ, 2018 ರಲ್ಲಿ ಕೇವಲ 4 ಆಟಗಾರರು 10 ಕೋಟಿಗೂ ಹೆಚ್ಚು ಹಣ ಪಡೆದಿದ್ದರು.

IPL 2022 Auction: ಮೊದಲ ದಿನ ಯಾವ ತಂಡ ಎಷ್ಟು ಹಣ ಖರ್ಚು ಮಾಡಿದೆ? ಉಳಿದಿರುವುದೆಷ್ಟು? ಇಲ್ಲಿದೆ ವಿವರ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಪೃಥ್ವಿಶಂಕರ

Updated on: Feb 13, 2022 | 12:21 PM

ಐಪಿಎಲ್ 2022 ಹರಾಜಿನ (IPL 2022 Auction) ಮೊದಲ ದಿನದಂದು ಇತಿಹಾಸ ರಚಿಸಲಾಗಿದೆ. ಬೆಂಗಳೂರಿನಲ್ಲಿ (IPL 2022) ನಡೆದ ಹರಾಜಿನಲ್ಲಿ 10 ಆಟಗಾರರು 10 ಕೋಟಿಗೂ ಹೆಚ್ಚು ಗಳಿಸಿದ್ದು ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು. ಕಳೆದ ಐಪಿಎಲ್ ಹರಾಜಿನ ಬಗ್ಗೆ ಮಾತನಾಡುವುದಾದರೆ, 2018 ರಲ್ಲಿ ಕೇವಲ 4 ಆಟಗಾರರು 10 ಕೋಟಿಗೂ ಹೆಚ್ಚು ಹಣ ಪಡೆದಿದ್ದರು. ಆದರೆ ಈ ಬಾರಿ ಆಟಗಾರರ ಮೇಲೆ, ಅದರಲ್ಲೂ ವಿಶೇಷವಾಗಿ ಭಾರತೀಯ ಆಟಗಾರರ ಮೇಲೆ ಹಣದ ಮಳೆಯಾಗಿದೆ. ಕ್ಯಾಪ್ಡ್ ಆಟಗಾರರು ಮಾತ್ರವಲ್ಲದೆ ಅನ್ ಕ್ಯಾಪ್ಡ್ ಭಾರತೀಯ ಆಟಗಾರರು ಕೂಡ ಹೆಚ್ಚಿನ ಬೇಡಿಕೆಯಲ್ಲಿದ್ದರು. ಇಶಾನ್ ಕಿಶನ್ ಗರಿಷ್ಠ 15.25 ಕೋಟಿ ಹಾಗೂ ಶ್ರೇಯಸ್ ಅಯ್ಯರ್ ಕೂಡ 12.25 ಕೋಟಿ ಪಡೆದಿದ್ದಾರೆ. ದೀಪಕ್ ಚಹಾರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 14 ಕೋಟಿ ರೂಪಾಯಿಗೆ ಖರೀದಿಸಿತು. ಅದೇ ಸಮಯದಲ್ಲಿ, ವೇಗದ ಬೌಲರ್ ಅವೇಶ್ ಖಾನ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಅನ್ ಕ್ಯಾಪ್ಡ್ ಆಟಗಾರರಾದರು. ಅವರನ್ನು ಲಕ್ನೋ ಸೂಪರ್‌ಜೈಂಟ್ 10 ಕೋಟಿಗೆ ಖರೀದಿಸಿದೆ. IPL 2022 ಆಟಗಾರರ ಹರಾಜಿನಲ್ಲಿ ಲಕ್ನೋ, ಡೆಲ್ಲಿ ಕ್ಯಾಪಿಟಲ್ಸ್ ಮೊದಲ ದಿನದಂದು ಬಹಳಷ್ಟು ಆಟಗಾರರನ್ನು ಖರೀದಿಸಿತು. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಹೆಚ್ಚು ಆಟಗಾರರನ್ನು ಖರೀದಿಸದಿದ್ದರೂ ಹೈದರಾಬಾದ್, ಪಂಜಾಬ್ ಮತ್ತು ರಾಜಸ್ಥಾನ ಕೂಡ ಹಿಂದೆ ಬೀಳಲಿಲ್ಲ.

IPL 2022 ಹರಾಜಿನ ಮೊದಲ ದಿನದ ನಂತರ, 13 ಆಟಗಾರರನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದೆ. ಅದೇ ಸಮಯದಲ್ಲಿ, ಮುಂಬೈ ಮತ್ತು ಕೆಕೆಆರ್ ತಂಡದಲ್ಲಿ ಕಡಿಮೆ ಸಂಖ್ಯೆಯ ಆಟಗಾರರನ್ನು ಹೊಂದಿದೆ. ಮುಂಬೈ ತಂಡದಲ್ಲಿ ಒಟ್ಟು 8 ಆಟಗಾರರಿದ್ದು, ಕೆಕೆಆರ್ ತಂಡದಲ್ಲಿ ಕೇವಲ 9 ಆಟಗಾರರಿದ್ದಾರೆ. ಮೊದಲ ದಿನದ ನಂತರ, ಯಾವ ತಂಡದಲ್ಲಿ ಎಷ್ಟು ಹಣ ಉಳಿದಿದೆ ಮತ್ತು ಎಷ್ಟು ಆಟಗಾರರನ್ನು ಖರೀದಿಸಿದೆ ಎಂಬುದರ ವಿವರ ಹೀಗಿದೆ.

ಪಂಜಾಬ್ ಕಿಂಗ್ಸ್ ಪರ್ಸ್ ಐಪಿಎಲ್ 2022 ರ ಹರಾಜಿನಲ್ಲಿ ಹೆಚ್ಚು ಹಣ ಉಳಿಸಿಕೊಂಡಿದ್ದ ಪಂಜಾಬ್ ಕಿಂಗ್ಸ್‌ನ ಪರ್ಸ್‌ನಲ್ಲಿ ಈಗ ಕೇವಲ 28.65 ಕೋಟಿ ಮಾತ್ರ ಉಳಿದಿದೆ. ಮೊದಲ ದಿನವೇ 43.35 ಕೋಟಿ ರೂ. ಖರ್ಚು ಮಾಡಿದೆ.

ಮುಂಬೈ ಇಂಡಿಯನ್ಸ್ ಪರ್ಸ್ IPL 2022 ಹರಾಜಿನ ಮೊದಲ ದಿನ, ಮುಂಬೈ ಇಂಡಿಯನ್ಸ್ ಕೇವಲ 4 ಆಟಗಾರರನ್ನು ಖರೀದಿಸಿತು. ಈಗ ಅದರ ಪರ್ಸ್‌ನಲ್ಲಿ ಕೇವಲ 27.85 ಕೋಟಿ ಉಳಿದಿದೆ. ಮುಂಬೈ 4 ಆಟಗಾರರಿಗೆ 20.15 ಕೋಟಿ ರೂ. ಖರ್ಚು ಮಾಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ಪರ್ಸ್ IPL 2022 ಹರಾಜಿನ ಮೊದಲ ದಿನ, ಚೆನ್ನೈ ಸೂಪರ್ ಕಿಂಗ್ಸ್ ಕೇವಲ 6 ಆಟಗಾರರನ್ನು ಖರೀದಿಸಿತು ಮತ್ತು ಅವರು 27.55 ಕೋಟಿಗಳನ್ನು ಖರ್ಚು ಮಾಡಿದರು. ಈಗ ಚೆನ್ನೈನ ಪರ್ಸ್ ನಲ್ಲಿ ಕೇವಲ 20.45 ಕೋಟಿ ರೂ. ಉಳಿದಿದೆ.

ಸನ್ ರೈಸರ್ಸ್ ಹೈದರಾಬಾದ್ ಪರ್ಸ್ ಸನ್‌ರೈಸರ್ಸ್ ಹೈದರಾಬಾದ್ ತನ್ನ ಪರ್ಸ್‌ನಲ್ಲಿ 20.15 ಕೋಟಿ ರೂಪಾಯಿಗಳನ್ನು ಉಳಿಸಿಕೊಂಡಿದೆ ಮತ್ತು ಒಟ್ಟು 13 ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮೊದಲ ದಿನದ ಹರಾಜಿನಲ್ಲಿ ಹೈದರಾಬಾದ್ 47.85 ಕೋಟಿ ರೂ. ಖರ್ಚು ಮಾಡಿತು.

ಗುಜರಾತ್ ಟೈಟಾನ್ಸ್ ಪರ್ಸ್ ಗುಜರಾತ್ ಟೈಟಾನ್ಸ್ 18.85 ಕೋಟಿ ರೂ.ಗಳನ್ನು ತನ್ನ ಪರ್ಸ್ನಲ್ಲಿ ಉಳಿಸಿಕೊಂಡಿದ್ದು, ಮೊದಲ ದಿನ 33.15 ಕೋಟಿ ರೂ. ಖರ್ಚು ಮಾಡಿದೆ.

ದೆಹಲಿ ಕ್ಯಾಪಿಟಲ್ಸ್ ಪರ್ಸ್ ದೆಹಲಿ ಕ್ಯಾಪಿಟಲ್ಸ್‌ನ ಪರ್ಸ್‌ನಲ್ಲಿ ಎರಡನೇ ದಿನಕ್ಕೆ 16.5 ಕೋಟಿ ಉಳಿದಿದೆ. ಮೊದಲ ದಿನವೇ 31 ಕೋಟಿ ರೂ. ಖರ್ಚಾಗಿದೆ.

ಕೆಕೆಆರ್‌ ಪರ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ಪರ್ಸ್‌ನಲ್ಲಿ ಕೇವಲ 12.65 ಕೋಟಿ ರೂ. ಉಳಿದಿದೆ. ಮೊದಲ ದಿನವೇ 35.35 ಕೋಟಿ ರೂ. ಖಾಲಿ ಮಾಡಿದೆ.

ರಾಜಸ್ಥಾನ ರಾಯಲ್ಸ್ ಪರ್ಸ್ ರಾಜಸ್ಥಾನದಲ್ಲಿ ಈಗ ಕೇವಲ 12.15 ಕೋಟಿ ರೂ. ಉಳಿದಿದೆ. ಅವರು ಮೊದಲ ದಿನವೇ 49.85 ಕೋಟಿ ರೂ. ಖರ್ಚು ಮಾಡಿದ್ದಾರೆ.

rcb ಪರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೇವಲ 9.25 ಕೋಟಿ ರೂ. ಉಳಿಸಿಕೊಂಡಿದೆ. ಮೊದಲ ದಿನವೇ ಈ ತಂಡ 47.25 ಕೋಟಿ ರೂ. ಖಾಲಿ ಮಾಡಿದೆ.

ಲಕ್ನೋ ಸೂಪರ್ಜೈಂಟ್ಸ್ ಪರ್ಸ್ ಲಕ್ನೋ ಕೇವಲ 6.9 ಕೋಟಿ ರೂ. ಉಳಿಸಿಕೊಂಡಿದೆ. ಮೊದಲ ದಿನವೇ ಈ ತಂಡ 52.1 ಕೋಟಿ ರೂ. ಖಾಲಿ ಮಾಡಿತ್ತು.

ಇದನ್ನೂ ಓದಿ:IPL 2022 Auction: ಇಂದು ಎರಡನೇ ದಿನದ ಐಪಿಎಲ್ 2022 ಮೆಗಾ ಆಕ್ಷನ್: ದೊಡ್ಡ ಮೊತ್ತದ ಲಿಸ್ಟ್​ನಲ್ಲಿ ಯಾರಿದ್ದಾರೆ?

ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ