IPL Auction 2022: ರೈನಾ, ಸ್ಮಿತ್ ಅನ್ ಸೋಲ್ಡ್! ಮೊದಲ ಸುತ್ತಿನಲ್ಲಿ ಮಾರಾಟವಾಗದ ಆಟಗಾರರು ಇವರೇ

IPL Auction 2022: IPL ಹರಾಜು 2022 ರ ಮೊದಲ ಸುತ್ತಿನಲ್ಲಿ, ಸುರೇಶ್ ರೈನಾ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಮುಂದೆ ಬರಲಿಲ್ಲ. ಅವರ ಮೂಲ ಬೆಲೆ 2 ಕೋಟಿ ರೂ. ಆಗಿದ್ದು ಚೆನ್ನೈ ಸೂಪರ್ ಕಿಂಗ್ಸ್ ಕೂಡ ಇವರ ಮೇಲೆ ಬಾಜಿ ಕಟ್ಟಲಿಲ್ಲ

IPL Auction 2022: ರೈನಾ, ಸ್ಮಿತ್ ಅನ್ ಸೋಲ್ಡ್! ಮೊದಲ ಸುತ್ತಿನಲ್ಲಿ ಮಾರಾಟವಾಗದ ಆಟಗಾರರು ಇವರೇ
ಸುರೇಶ್ ರೈನಾ
Follow us
TV9 Web
| Updated By: ಪೃಥ್ವಿಶಂಕರ

Updated on:Feb 12, 2022 | 3:11 PM

ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ ಹರಾಜು 2022 (IPL Auction 2022) ರಲ್ಲಿ, ನಿರೀಕ್ಷೆಯಂತೆ, ಆಟಗಾರರ ಮೇಲೆ ಸಾಕಷ್ಟು ಹಣದ ಮಳೆಯಾಯಿತು. ಶ್ರೇಯಸ್ ಅಯ್ಯರ್ (Shreyas Iyer) 12.25 ಕೋಟಿ ಹಾಗೂ ಹರ್ಷಲ್ ಪಟೇಲ್ (Harshal Patel) 10 ಕೋಟಿ 75 ಲಕ್ಷ ರೂ. ವೇಗದ ಬೌಲರ್ ಕಗಿಸೊ ರಬಾಡ ಕೂಡ ಪಂಜಾಬ್ ಕಿಂಗ್ಸ್ 9.25 ಕೋಟಿ ರೂ. ಜೇಸನ್ ಹೋಲ್ಡರ್ ಸಹ 8.75 ಕೋಟಿ ರೂ.ಗಳ ಬೆಲೆಯನ್ನು ಪಡೆದರು. ಆದರೆ ಈ ಆಟಗಾರರಲ್ಲಿ ಮೊದಲ ಸುತ್ತಿನಲ್ಲಿ ಯಾರೂ ಖರೀದಿಸದ ಕೆಲವು ಪ್ರಮುಖ ಆಟಗಾರರು ಇದ್ದಾರೆ. ಮೊದಲ ಸುತ್ತಿನಲ್ಲಿ ಮಾರಾಟವಾಗದ ಇಬ್ಬರು ಆಟಗಾರರಲ್ಲಿ ಒಬ್ಬರು ನಾಯಕರಾಗಿದ್ದರೆ ಇನ್ನೊಬ್ಬ ಆಟಗಾರ ಐಪಿಎಲ್‌ನ ಅತ್ಯುತ್ತಮ ಫಿನಿಶರ್‌ಗಳಲ್ಲಿ ಒಬ್ಬರಾಗಿದ್ದಾರೆ.

IPL ಹರಾಜು 2022 ರ ಮೊದಲ ಸುತ್ತಿನಲ್ಲಿ, ಸುರೇಶ್ ರೈನಾ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಮುಂದೆ ಬರಲಿಲ್ಲ. ಅವರ ಮೂಲ ಬೆಲೆ 2 ಕೋಟಿ ರೂ. ಆಗಿದ್ದು ಚೆನ್ನೈ ಸೂಪರ್ ಕಿಂಗ್ಸ್ ಕೂಡ ಇವರ ಮೇಲೆ ಬಾಜಿ ಕಟ್ಟಲಿಲ್ಲ. ಇವರ ಜೊತೆಗೆ ಸ್ಟೀವ್ ಸ್ಮಿತ್ ಅವರನ್ನು ಯಾವುದೇ ತಂಡ ಖರೀದಿಸಿಲ್ಲ. ಕಳೆದ ಋತುವಿನಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್‌ನ ಭಾಗವಾಗಿದ್ದರು. ಇದಲ್ಲದೇ ಡೇವಿಡ್ ಮಿಲ್ಲರ್ ಕೂಡ ಯಾವುದೇ ಖರೀದಿದಾರರನ್ನು ಕಾಣಲಿಲ್ಲ. ಪ್ರಸ್ತುತ ಸುತ್ತಿನ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಶಕೀಬ್ ಅಲ್ ಹಸನ್ ಕೂಡ ಮೊದಲ ಸುತ್ತಿನಲ್ಲಿ ಯಾವುದೇ ಖರೀದಿದಾರರ ಹೃದಯ ಗೆಲ್ಲಲು ಸಾಧ್ಯವಾಗಲಿಲ್ಲ.

ಚೆನ್ನೈ ಸೇರಿದ ಡ್ವೇನ್ ಬ್ರಾವೋ ಐಪಿಎಲ್ 2022 ರ ಹರಾಜಿನಲ್ಲಿ, ಮುಂದಿನ ಕೆಲವು ವರ್ಷಗಳವರೆಗೆ ತಂಡವನ್ನು ಬಲಪಡಿಸುವ ತಂಡವನ್ನು ಸಿದ್ಧಪಡಿಸುವುದು ತಂಡಗಳ ಮುಂದಿರುವ ಸವಾಲು. ಇಂತಹ ಪರಿಸ್ಥಿತಿಯಲ್ಲಿ ಅತಿ ಹೆಚ್ಚು ಟಿ20 ಪ್ರಶಸ್ತಿ ಗೆದ್ದ ಅನುಭವ ಹೊಂದಿರುವ 38ರ ಹರೆಯದ ಆಟಗಾರನ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ಬೆಟ್ಟಿಂಗ್ ಕಟ್ಟಿದೆ. ವಿಶ್ವ ಕ್ರಿಕೆಟ್‌ನಲ್ಲಿ ಅವರಿಗಿಂತ ಹೆಚ್ಚು ಟಿ20 ಪ್ರಶಸ್ತಿಗಳನ್ನು ಯಾವುದೇ ಆಟಗಾರ ಗೆದ್ದಿಲ್ಲ. ಇಲ್ಲಿಯವರೆಗೆ 16 ಟಿ20 ಪ್ರಶಸ್ತಿಗಳನ್ನು ಗೆದ್ದು ದಾಖಲೆ ಬರೆದಿರುವ ಆಟಗಾರನ ಹೆಸರು ಡ್ವೇನ್ ಬ್ರಾವೋ. CSK ಈ ಕೆರಿಬಿಯನ್ ಆಲ್ ರೌಂಡರ್ ಅನ್ನು 4.40 ಕೋಟಿ ರೂ.ಗೆ ಖರೀದಿಸಿದೆ. ಬ್ರಾವೋ ಅವರನ್ನು ಖರೀದಿಸಲು ತಂಡಗಳ ನಡುವೆ ಸಾಕಷ್ಟು ಪೈಪೋಟಿ ಏರ್ಪಟ್ಟಿತ್ತು. ಆದರೆ ಅಂತಿಮವಾಗಿ, ಹಳದಿ ಜೆರ್ಸಿ ಸೂಪರ್ ಕಿಂಗ್ಸ್ ಗೆದ್ದಿತು.

Published On - 3:08 pm, Sat, 12 February 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ