IPL 2022 Auction: ವೇದಿಕೆಯಲ್ಲೇ ಕುಸಿದು ಬಿದ್ದ ಹರಾಜುದಾರ ಹ್ಯೂ ಎಡ್ಮಿಡ್ಸ್! ಅರ್ಧಕ್ಕೆ ನಿಂತ ಐಪಿಎಲ್ ಹರಾಜು

IPL 2022 Auction: ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ 2022 ರ ಮೆಗಾ ಹರಾಜಿನ ಹರಾಜುದಾರ ಹಗ್ ಆಡಮ್ಸ್ ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಹೀಗಾಗಿ ಮೆಗಾ ಹರಾಜು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

IPL 2022 Auction: ವೇದಿಕೆಯಲ್ಲೇ ಕುಸಿದು ಬಿದ್ದ ಹರಾಜುದಾರ ಹ್ಯೂ ಎಡ್ಮಿಡ್ಸ್! ಅರ್ಧಕ್ಕೆ ನಿಂತ ಐಪಿಎಲ್ ಹರಾಜು
ಹ್ಯೂ ಎಡ್ಮಿಡ್ಸ್
Follow us
TV9 Web
| Updated By: ಪೃಥ್ವಿಶಂಕರ

Updated on:Feb 12, 2022 | 2:40 PM

ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ 2022 ರ ಮೆಗಾ ಹರಾಜಿ (IPL 2022 Mega Auction)ನ ಹರಾಜುದಾರ ಹ್ಯೂ ಎಡ್ಮಿಡ್ಸ್ ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಹೀಗಾಗಿ ಮೆಗಾ ಹರಾಜು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಹರಾಜಿನ ವೇಳೆಯೇ ಪ್ರಜ್ಞೆ ತಪ್ಪಿ ವೇದಿಕೆ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಹ್ಯೂ ಎಡ್ಮಿಡ್ಸ್ ಶ್ರೀಲಂಕಾದ ಆಲ್‌ರೌಂಡರ್ ವನೆಂದು ಹಸರಂಗಾ ಅವರನ್ನು ಬಿಡ್ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದರು. ಈ ವೇಳೆ ಇದ್ದಕ್ಕಿದಂತೆ ನೆಲಕ್ಕೆ ಕುಸಿದುಬಿದ್ದರು. ಹ್ಯೂ ಎಡ್ಮಿಡ್ಸ್ ವಿಶ್ವದ ಪ್ರಮುಖ ಹರಾಜು ನಿರ್ವಾಹಕರಲ್ಲಿ ಒಬ್ಬರಾಗಿದ್ದು ಅವರು 2019 ರಿಂದ ಐಪಿಎಲ್ ಹರಾಜು ನಡೆಸುತ್ತಿದ್ದಾರೆ. ಅವರು 3 ವರ್ಷಗಳ ಹಿಂದೆ ರಿಚರ್ಡ್ ಮ್ಯಾಡ್ಲಿ ಬದಲಾಗಿ ಈ ಹರಾಜು ಪ್ರಕ್ರಿಯೆಲ್ಲಿ ಹರಾಜು ನಡೆಸಿಕೊಡುವವರಾಗಿ ಪಾಲ್ಗೊಳ್ಳುತ್ತಿದ್ದರು.

ಪ್ರಪಂಚದಾದ್ಯಂತ 2300 ಕ್ಕೂ ಹೆಚ್ಚು ಹರಾಜು

60 ವರ್ಷ ವಯಸ್ಸಿನ ಹ್ಯೂ ಎಡ್ಮಿಡ್ಸ್ ಪ್ರಪಂಚದಾದ್ಯಂತ 2300 ಕ್ಕೂ ಹೆಚ್ಚು ಹರಾಜುಗಳನ್ನು ಮಾಡಿದ್ದಾರೆ. ಮೊದಲ ಹರಾಜನ್ನು 1984 ರಲ್ಲಿ ಹ್ಯೂ ಎಡ್ಮಿಡ್ಸ್ ನಡೆಸಿ ಕೊಟ್ಟಿದ್ದರು. ಎಡ್ಮಿಡ್ಸ್ ಬ್ರಿಟಿಷ್ ಅಂತರರಾಷ್ಟ್ರೀಯ ಲಲಿತಕಲೆ, ಕ್ಲಾಸಿಕ್ ಕಾರು ಮತ್ತು ಚಾರಿಟಿ ಹರಾಜುದಾರ. ಎಡ್ಮೀಡ್ಸ್ ಕ್ರಿಕೆಟ್​ ಕ್ಷೇತ್ರವೊಂದರಲ್ಲೇ ಅಲ್ಲ, ಇತರೆ ರಂಗಗಳಲ್ಲೂ ತಮ್ಮ ವೃತ್ತಿ ನೈಪುಣ್ಯತೆ ಮೆರೆದಿದ್ದಾರೆ. ಅಂತರರಾಷ್ಟ್ರೀಯ ಹರಾಜುದಾರರಾಗಿ 35 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಅವರು 2500 ಕ್ಕೂ ಹೆಚ್ಚು ಹರಾಜನ್ನು ನಡೆಸಿದ್ದಾರೆ. ಎಡ್ಮೀಡ್ಸ್ ಬ್ರಿಟಿಷ್ ಅಂತರರಾಷ್ಟ್ರೀಯ ಲಲಿತಕಲೆ, ಕ್ಲಾಸಿಕ್ ಕಾರು ಮತ್ತು ಚಾರಿಟಿ ಹರಾಜುದಾರರಾಗಿದ್ದಾರೆ. ವರ್ಣ ಚಿತ್ರಗಳು, ಉತ್ತಮ ಪೀಠೋಪಕರಣಗಳು, ಪಿಂಗಾಣಿ ಮತ್ತು ಕಲಾಕೃತಿಗಳು, ಮತ್ತು ಚಲನಚಿತ್ರ ಮತ್ತು ಕ್ರೀಡಾ ಸ್ಮರಣಿಕೆಗಳು ಸೇರಿದಂತೆ ಹಲವಾರು ವಸ್ತುಗಳನ್ನು ಹರಾಜು ಕೂಗುವುದರಲ್ಲಿ ಎಡ್ಮೀಡ್ಸ್ ಅನುಭವ ಹೊಂದಿದ್ದಾರೆ.

ಎಡ್ಮೀಡ್ಸ್ ವಿಶ್ವದ 30 ನಗರಗಳಲ್ಲಿ 850 ಕ್ಕೂ ಹೆಚ್ಚು ಚಾರಿಟಿ ನಿಧಿ ಸಂಗ್ರಹಣೆಗಳಿಗಾಗಿ ಹರಾಜು ನಡೆಸಿದ್ದಾರೆ. ಚಿಲ್ಡ್ರನ್ ಇನ್ ನೀಡ್ ಸಹಾಯಕ್ಕಾಗಿ ಅವರು 2005 ರಲ್ಲಿ ಬಿಬಿಸಿಯ ದೂರದರ್ಶನದ ಪ್ರಸಿದ್ಧ ಹರಾಜನ್ನು ನಡೆಸಿದ್ದಾರೆ. 2018 ರಲ್ಲಿ, ಎಡ್ಮೀಡ್ಸ್ ಅವರನ್ನು ಬಿಸಿಸಿಐ 2019 ಐಪಿಎಲ್ ಹರಾಜುದಾರರನ್ನಾಗಿ ನೇಮಿಸಿತು. ಪ್ರತಿಷ್ಠಿತ ಐಪಿಎಲ್ ಹರಾಜನ್ನು ನಡೆಸಲು ಆಯ್ಕೆಯಾಗಿದ್ದ ರಿಚರ್ಡ್ ಮ್ಯಾಡ್ಲಿ (ಯುನೈಟೆಡ್​ ಕಿಂಗ್​ಡಂ ನ ಪ್ರಸಿದ್ಧ ಹರಾಜುದಾರ) ಅವರ ನಂತರ, ಐಪಿಎಲ್ ಹರಾಜುದಾರರಾದ ಎರಡನೇ ವ್ಯಕ್ತಿ ಇವರಾಗಿದ್ದಾರೆ.

Published On - 2:33 pm, Sat, 12 February 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್