IPL 2022 Auction: ಕೊಹ್ಲಿ, ಧವನ್ ವಿಕೆಟ್ ಪಡೆದಿದ್ದ ಕೆರಿಬಿಯನ್ ದೈತ್ಯನಿಗೆ ಹಣದ ಮಳೆ ಸುರಿಸಿದ ಪಂಜಾಬ್!

Odean Smith Auction Price: ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರಂತಹ ಬ್ಯಾಟ್ಸ್‌ಮನ್‌ಗಳನ್ನು ಸ್ಮಿತ್ ಔಟ್ ಮಾಡಿದ್ದರು. ಎರಡನೇ ಪಂದ್ಯದಲ್ಲಿ, ಕೀರಾನ್ ಪೊಲಾರ್ಡ್ ಗಾಯಗೊಂಡ ನಂತರ ಅವರಿಗೆ ಅವಕಾಶ ಸಿಕ್ಕಿತು

IPL 2022 Auction: ಕೊಹ್ಲಿ, ಧವನ್ ವಿಕೆಟ್ ಪಡೆದಿದ್ದ ಕೆರಿಬಿಯನ್ ದೈತ್ಯನಿಗೆ ಹಣದ ಮಳೆ ಸುರಿಸಿದ ಪಂಜಾಬ್!
ಓಡಿಯನ್ ಸ್ಮಿತ್
Follow us
TV9 Web
| Updated By: ಪೃಥ್ವಿಶಂಕರ

Updated on: Feb 13, 2022 | 1:50 PM

ಇತ್ತೀಚೆಗೆ, ಭಾರತ ವಿರುದ್ಧ ಆಡಿದ ಮೂರು ಪಂದ್ಯಗಳ ODI ಸರಣಿಯಲ್ಲಿ, ವೆಸ್ಟ್ ಇಂಡೀಸ್ ಆಟಗಾರ ಓಡಿನ್ ಸ್ಮಿತ್ (Odeen Smith) ತಮ್ಮ ಬೌಲಿಂಗ್ ಮತ್ತು ಬ್ಯಾಟಿಂಗ್‌ನಿಂದ ಅಬ್ಬರಿಸಿದ್ದರು. ಹೀಗಾಗಿಯೇ ಐಪಿಎಲ್​ 2022 ಮೆಗಾ ಹರಾಜಿನಲ್ಲಿ (IPL 2022 Mega Auction) ಸಾಕಷ್ಟು ಹಣವನ್ನು ಪಡೆದರು. ಈ ಆಟಗಾರ ತನ್ನ ಮೂಲ ಬೆಲೆಯನ್ನು ಒಂದು ಕೋಟಿ ರೂಪಾಯಿ ಇಟ್ಟುಕೊಂಡಿದ್ದರು ಮತ್ತು ಪಂಜಾಬ್ ಕಿಂಗ್ಸ್ (Punjab Kings) ಅವರನ್ನು ಆರು ಕೋಟಿ ರೂಪಾಯಿಗಳಿಗೆ ಖರೀದಿಸಿತು. ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ಈ ಆಟಗಾರನಿಗೆ ಬಿಡ್ ಮಾಡಿತ್ತು. ಆದರೆ ಅಂತಿಮವಾಗಿ ಪಂಜಾಬ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು. ಸ್ಮಿತ್‌ ಐಪಿಎಲ್‌ನಲ್ಲಿ ಆಡುತ್ತಿರುವುದು ಇದೇ ಮೊದಲು. ಅವರು 2018 ರಲ್ಲಿ ವೆಸ್ಟ್ ಇಂಡೀಸ್‌ಗಾಗಿ ತಮ್ಮ T20 ಚೊಚ್ಚಲ ಪಂದ್ಯವನ್ನು ಆಡಿದ್ದರು. ನಂತರ ಈ ವರ್ಷದ ಜನವರಿಯಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ODI ಚೊಚ್ಚಲ ಪಂದ್ಯವನ್ನು ಆಡಿದ್ದರು.

ಧವನ್-ಕೊಹ್ಲಿ ಔಟ್ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರಂತಹ ಬ್ಯಾಟ್ಸ್‌ಮನ್‌ಗಳನ್ನು ಸ್ಮಿತ್ ಔಟ್ ಮಾಡಿದ್ದರು. ಎರಡನೇ ಪಂದ್ಯದಲ್ಲಿ, ಕೀರಾನ್ ಪೊಲಾರ್ಡ್ ಗಾಯಗೊಂಡ ನಂತರ ಅವರಿಗೆ ಅವಕಾಶ ಸಿಕ್ಕಿತು ಮತ್ತು ಈ ಪಂದ್ಯದಲ್ಲಿ, ರಿಷಬ್ ಪಂತ್ ಮತ್ತು ವಿರಾಟ್ ಕೊಹ್ಲಿ ಒಂದೇ ಓವರ್‌ನಲ್ಲಿ ಔಟಾದರು. ಮೊದಲು ಪಂತ್ ಅವರನ್ನು ಬಲಿಪಶು ಮಾಡಿದ ಅವರು ನಂತರ ಕೊಹ್ಲಿ ವಿಕೆಟ್ ಪಡೆದರು. ಮೂರನೇ ಪಂದ್ಯದಲ್ಲಿ ಅವರು ಶಿಖರ್ ಧವನ್ ಅವರನ್ನು ಔಟ್ ಮಾಡಿದರು.

ಬ್ಯಾಟಿಂಗ್ ಕ್ರಮಾಂಕಕ್ಕೆ ಬಂದರೆ, ಈ ಬ್ಯಾಟ್ಸ್‌ಮನ್‌ಗೆ ಲಾಂಗ್ ಶಾಟ್‌ಗಳನ್ನು ಹೊಡೆಯುವ ಶಕ್ತಿಯೂ ಇದೆ. ಎರಡನೇ ಪಂದ್ಯದಲ್ಲಿ ಅವರು 24 ರನ್ ಗಳಿಸಿದರು ಮತ್ತು ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮೇಲೆ ದೀರ್ಘ ಸಿಕ್ಸರ್ ಬಾರಿಸಿದರು. ಎರಡನೇ ಪಂದ್ಯದಲ್ಲಿ ಅವರ ಬ್ಯಾಟ್‌ನಿಂದ 36 ರನ್ ಗಳಿಸಿ ಕುಲದೀಪ್ ಯಾದವ್ ಮೇಲೆ ಅಬ್ಬರಿಸಿದ್ದರು.

ಶಾರುಖ್ ಖಾನ್​ಗೆ ಜೊತೆಗಾರ ಪಂಜಾಬ್ ಕಿಂಗ್ಸ್ ತಂಡವು ಶಾರುಖ್ ಖಾನ್ ಅವರನ್ನು ಒಂಬತ್ತು ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಸ್ಮಿತ್ ಶಾರುಖ್ ಜೊತೆಗೆ ಪಂಜಾಬ್‌ಗೆ ಫಿನಿಶರ್ ಆಗಿ ಕಾಣಿಸಿಕೊಳ್ಳಬಹುದು. ಇಬ್ಬರೂ ಅಬ್ಬರಿಸಿದರೆ ತಂಡಕ್ಕೆ ಗೆಲುವು ಖಚಿತ. ಅಹಮದಾಬಾದ್‌ನ ಪಿಚ್‌ಗಳಲ್ಲಿ ಸ್ಮಿತ್ ಅದ್ಭುತ ಬೌಲಿಂಗ್ ಮಾಡಿದರು. ಅವರು ಬೌಲಿಂಗ್ ಮಾಡಿದ ರೀತಿಯಲ್ಲಿ, ಸ್ಮಿತ್ ಅವರು ODI ಸರಣಿಯಲ್ಲಿ ಮಾಡಿದಂತೆಯೇ ಮಾಡಬೇಕೆಂದು ಪಂಜಾಬ್ ನಿರೀಕ್ಷಿಸುತ್ತದೆ.

ಅವರ ಈವರೆಗಿನ ವೃತ್ತಿಜೀವನವನ್ನು ಗಮನಿಸಿದರೆ, ಅವರು ವೆಸ್ಟ್ ಇಂಡೀಸ್ ಪರ ಒಟ್ಟು ಎಂಟು ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು ಏಳು ವಿಕೆಟ್ ಮತ್ತು 49 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಅವರು ODIಗಳಲ್ಲಿ ಐದು ಪಂದ್ಯಗಳನ್ನು ಆಡಿದ್ದಾರೆ ಮತ್ತು ಅವರ ಹೆಸರಿನಲ್ಲಿ ಆರು ವಿಕೆಟ್ಗಳನ್ನು ಪಡೆದಿದ್ದಾರೆ. 50 ಓವರ್‌ಗಳ ಸ್ವರೂಪದಲ್ಲಿ, ಅವರ ಬ್ಯಾಟ್‌ನಿಂದ 144 ರನ್‌ಗಳು ಬಂದಿವೆ, ಇದರಲ್ಲಿ ಅವರ ಗರಿಷ್ಠ ಸ್ಕೋರ್ 46 ರನ್ ಆಗಿದೆ.

ಇದನ್ನೂ ಓದಿ:IPL 2022 Auction: ವೇದಿಕೆಯಲ್ಲೇ ಕುಸಿದು ಬಿದ್ದ ಹರಾಜುದಾರ ಹ್ಯೂ ಎಡ್ಮಿಡ್ಸ್! ಅರ್ಧಕ್ಕೆ ನಿಂತ ಐಪಿಎಲ್ ಹರಾಜು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ