IPL 2022: ಕೋಟಿ ಮೊತ್ತ ಬಾಕಿಯಿದ್ದರೂ ರೈನಾರನ್ನು ಖರೀದಿಸದ CSK
IPL 2022 CSK Team: ಮಹೇಂದ್ರ ಸಿಂಗ್ ಧೋನಿ (ನಾಯಕ), ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಅಂಬಾಟಿ ರಾಯುಡು, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ದೀಪಕ್ ಚಹರ್
ಐಪಿಎಲ್ ಮೆಗಾ ಹರಾಜಿನ ಮೂಲಕ ಸಿಎಸ್ಕೆ ತಂಡವು 21 ಆಟಗಾರರನ್ನು ಖರೀದಿಸಿದೆ. ಈ ಮೂಲಕ 25 ಸದಸ್ಯರ ಬಲಿಷ್ಠ ಬಳಗವನ್ನು ರೂಪಿಸಿಕೊಂಡಿದೆ. ಅದರಲ್ಲೂ ಈ ಬಾರಿ ಕೂಡ ಸಿಎಸ್ಕೆ ತಂಡವು ತನ್ನ ಹಳೆಯ ಆಟಗಾರರನ್ನು ಖರೀದಿಸುವಲ್ಲಿ ಹೆಚ್ಚಿನ ಆಸಕ್ತಿ ತೋರಿತು. ಅದರಂತೆ ತಂಡಕ್ಕೆ ಅಂಬಾಟಿ ರಾಯುಡು, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ದೀಪಕ್ ಚಹರ್, ಕೆಎಂ ಆಸಿಫ್, ಮಿಚೆಲ್ ಸ್ಯಾಂಟ್ನರ್, ಹರಿ ನಿಶಾಂತ್, ಎನ್ ಜಗದೀಸನ್ ಮರಳಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಸುರೇಶ್ ರೈನಾ ಇಲ್ಲದಿರುವುದೇ ಅಚ್ಚರಿ.
ಸಿಎಸ್ಕೆ ತಂಡದಲ್ಲಿ ಚಿನ್ನ ಥಲಾ ಎಂದೇ ಖ್ಯಾತರಾಗಿದ್ದ ಸುರೇಶ್ ರೈನಾರನ್ನು ಖರೀದಿಸಲು ಸಿಎಸ್ಕೆ ತಂಡವು ಯಾವುದೇ ಆಸಕ್ತಿ ತೋರಲಿಲ್ಲ. 25 ಆಟಗಾರರಿಗಾಗಿ ಸಿಎಸ್ಕೆ ಫ್ರಾಂಚೈಸಿ ಒಟ್ಟು 87 ಕೋಟಿ 5 ಲಕ್ಷ ವ್ಯಯಿಸಿತ್ತು. ಇದಾಗ್ಯೂ ಮೆಗಾ ಹರಾಜು ಮುಕ್ತಾಯವಾದಾಗ ಸಿಎಸ್ಕೆ ಬಳಿ 2 ಕೋಟಿ 95 ಲಕ್ಷ ರೂ. ಉಳಿದಿತ್ತು.
ಆದರೆ 2ನೇ ದಿನದ ಅಂತಿಮ ರೌಂಡ್ನಲ್ಲಿ ಸಿಎಸ್ಕೆ ತಂಡವು ಹಲವು ಆಟಗಾರರನ್ನು ಖರೀದಿಸಿದರೂ ರೈನಾ ಅವರ ಬಗ್ಗೆ ಖರೀದಿಗೆ ಒಲವು ತೋರಲಿಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸುರೇಶ್ ರೈನಾ ಅವರ ಮೂಲ ಬೆಲೆ 2 ಕೋಟಿ ರೂ. ಯಾವುದೇ ತಂಡ ಖರೀದಿಸದ ಕಾರಣ ಸಿಎಸ್ಕೆ ತಂಡಕ್ಕೆ ರೈನಾ 2 ಕೋಟಿ ಬೆಲೆಗೆ ಸಿಗುತ್ತಿತ್ತು. ಆದರೆ ಫೈನಲ್ ರೌಂಡ್ಗಳ ವೇಳೆ ಫ್ರಾಂಚೈಸಿಗಳ ಆಸಕ್ತ ಆಟಗಾರರ ಪಟ್ಟಿಯಲ್ಲಿ ರೈನಾ ಹೆಸರು ಇರಲಿಲ್ಲ. ಒಂದು ವೇಳೆ ಸಿಎಸ್ಕೆ ತಂಡವು ಖರೀದಿಸಲು ಬಯಸಿದ್ದರೆ, ಯಾವುದಾದರೂ ಒಬ್ಬ ಆಟಗಾರನ ಬದಲಿಗೆ ರೈನಾ ಅವರನ್ನು ಸುಲಭವಾಗಿ ಬಿಡ್ ಮಾಡಬಹುದಿತ್ತು. ಏಕೆಂದರೆ 25 ಆಟಗಾರರನ್ನು ಖರೀದಿಸಿದ ಬಳಿಕ ಸಿಎಸ್ಕೆ ಬಳಿ 2 ಕೋಟಿ 95 ಲಕ್ಷ ರೂ. ಉಳಿದಿತ್ತು.
ಅಂದಹಾಗೆ ಸಿಎಸ್ಕೆ ಪರ ಐಪಿಎಲ್ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ದಾಖಲೆ ಸುರೇಶ್ ರೈನಾ ಅವರ ಹೆಸರಿನಲ್ಲಿದೆ. ಇದಾಗ್ಯೂ ಒಂದು ದಶಕಗಳ ಕಾಲ ತಂಡದ ಪರ ಆಡಿದ್ದ ಆಟಗಾರನಿಗೆ ಸಿಎಸ್ಕೆ ಅವಕಾಶ ನೀಡಲಿಲ್ಲ. ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ ಮೆಗಾ ಹರಾಜಿನ ಮುಕ್ತಾಯದೊಂದಿಗೆ 35 ವರ್ಷದ ರೈನಾ ಅವರ ಯುಗಾಂತ್ಯವಾಗಿದೆ ಎಂದೇ ಹೇಳಬಹುದು. ಇದಾಗ್ಯೂ ಬದಲಿ ಆಟಗಾರನಾಗಿ ರೈನಾ ಕಂಬ್ಯಾಕ್ ಮಾಡಲಿದ್ದಾರಾ? ಕಾದು ನೋಡಬೇಕಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ: ಮಹೇಂದ್ರ ಸಿಂಗ್ ಧೋನಿ (ನಾಯಕ), ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಅಂಬಾಟಿ ರಾಯುಡು, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ದೀಪಕ್ ಚಹರ್, ಕೆ.ಎಂ, ಆಸಿಫ್, ತುಷಾರ್ ದೇಶಪಾಂಡೆ, ಶಿವಂ ದುಬೆ, ಮಹೀಶ್ ತೀಕ್ಷಣ, ರಾಜವರ್ಧನ್ ಹಂಗರ್ಗೇಕರ್, ಸಿಮರ್ಜೀತ್ ಸಿಂಗ್, ಡೆವೊನ್ ಕಾನ್ವೇ, ಡ್ವೇನ್ ಪ್ರೆಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನ್, ಸುಭ್ರಾಂಶು ಸೇನಾಪತಿ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿ ಹರಿ ನಿಶಾಂತ್, ಎನ್ ಜಗದೀಸನ್, ಕ್ರಿಸ್ ಜಾರ್ಡನ್, ಕೆ ಭಗತ್ ವರ್ಮಾ.
ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?
ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..!
(CSK Remaining Purse Balance 2.95 cr: Suresh Raina unsold)