IPL 2022 Auction: ಐಪಿಎಲ್ ಮೂಲಕ ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾದ ಎಲೆಕ್ಟ್ರಿಷಿಯನ್ ಮಗ..!

N Tilak Varma: ಐಪಿಎಲ್​ನಲ್ಲಿ ಅವಕಾಶ ಸಿಕ್ಕಿರುವ ಬಗ್ಗೆ ಖುಷಿ ವ್ಯಕ್ತಪಡಿಸಿರುವ ತಿಲಕ್, ನನ್ನೆಲ್ಲಾ ಸಾಧನೆಗೆ ಕೋಚ್ ಸಲಾಮ್ ಭಾಯಿ ಕಾರಣ.

IPL 2022 Auction: ಐಪಿಎಲ್ ಮೂಲಕ ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾದ ಎಲೆಕ್ಟ್ರಿಷಿಯನ್ ಮಗ..!
Tilak Varma
Follow us
TV9 Web
| Updated By: ಝಾಹಿರ್ ಯೂಸುಫ್

Updated on: Feb 14, 2022 | 3:59 PM

ಅದೃಷ್ಟ ಯಾರಿಗೆ ಹೇಗೆ ಬರುತ್ತೆ ಎಂದು ಹೇಳಲಾಗುವುದಿಲ್ಲ. ಆದರೆ ಪಟ್ಟ ಪರಿಶ್ರಮಕ್ಕೆ ಒಂದಲ್ಲ ಒಂದು ದಿನ ಬೆಲೆ ಸಿಕ್ಕೇ ಸಿಗುತ್ತೆ ಎಂಬುದಕ್ಕೆ ತಾಜಾ ಉದಾಹರಣೆ ಹೈದರಾಬಾದ್​ನ ತಿಲಕ್ ವರ್ಮಾ. ಈ ಹೆಸರು ಈ ಹಿಂದೆ ಕೂಡ ನೀವು ಕ್ರಿಕೆಟ್ ಅಂಗಳದಲ್ಲಿ ಕೇಳಿರಬಹುದು. ಏಕೆಂದರೆ ತಿಲಕ್ ಈ ಹಿಂದೆ ಅಂಡರ್ 19 ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. 2020ರ ಅಂಡರ್ 19 ವಿಶ್ವಕಪ್ ರನ್ನರ್ ಅಪ್ ತಂಡದ ಭಾಗವಾಗಿದ್ದರು. ಈ ವೇಳೆ ಜೊತೆಗಿದ್ದ ಹಲವು ಆಟಗಾರರಿಗೆ ಐಪಿಎಲ್ 2020 ಮತ್ತು 2021 ರಲ್ಲಿ ಅವಕಾಶ ಸಿಕ್ಕಿತ್ತು. ಆದರೆ ತಿಲಕ್ ವರ್ಮಾ ಮಾತ್ರ ತನ್ನ ಟೈಮ್​ಗಾಗಿ ಕಾಯುತ್ತಿದ್ದರು.

ಅತ್ತ ಕಳೆದ ಎರಡು ವರ್ಷಗಳಲ್ಲಿ ಐಪಿಎಲ್​ ಅವಕಾಶ ಸಿಗದಿದ್ದಾಗ ಇತ್ತ ಕುಟುಂಬಸ್ಥರು ಕೂಡ ದುಖಃಕ್ಕೀಡಾಗಿದ್ದರು. ಏಕೆಂದರೆ ತಿಲಕ್​ನ ಕ್ರಿಕೆಟ್​ ಕನಸಿಗಾಗಿ ಕುಟುಂಬಸ್ಥರು ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿದ್ದರು. ಅದರಲ್ಲೂ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ತಿಲಕ್ ವರ್ಮಾ ಅವರ ತಂದೆಯ ಕಷ್ಟಗಳನ್ನು ನೋಡಿ ಆ ಬಳಿಕ ಖುದ್ದು ಕೋಚ್ ಕೂಡ ಯುವ ಕ್ರಿಕೆಟಿಗನ ಸಹಾಯಕ್ಕೆ ನಿಂತರು.

ಹೀಗಾಗಿಯೇ ನನ್ನ ಮಗನ ಸಾಧನೆಯಲ್ಲಿ ನನ್ನ ಬಗ್ಗೆ ನೀವು ಏನೂ ಬರೆಯದಿದ್ದರೂ ಪರವಾಗಿಲ್ಲ. ಆದರೆ ಅವನಿಗೆ ಕೋಚಿಂಗ್ ನೀಡಿದ ಸಲಾಮ್ ಅವರ ಬಗ್ಗೆ ಬರೆಯಲೇಬೇಕು. ಏಕೆಂದರೆ ನನ್ನ ಮಗ ಇಂದು ಇಷ್ಟೊಂದು ಮಟ್ಟಕ್ಕೆ ಬೆಳೆಯಲು ಕಾರಣ ಕೋಚ್ ಸಲಾಮ್. ಅವನ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸಿ ಆರ್ಥಿಕ ಸಹಾಯ ಮಾಡಿದ್ದಾರೆ. ಅಲ್ಲದೆ ಅವರೇ ಕ್ರಿಕೆಟ್ ಅಕಾಡೆಮಿಯ ಫೀಸ್ ಭರಿಸಿ ತರಬೇತಿ ನೀಡಿದ್ದಾರೆ. ಇದೀಗ ಅವರಿಂದಾಗಿ ನನ್ನ ಮಗ ಐಪಿಎಲ್​ವರೆಗೂ ಬೆಳೆದು ನಿಂತಿದ್ದಾನೆ. ಇದಕ್ಕೆಲ್ಲಾ ಕಾರಣ ಸಲಾಮ್. ಹೀಗಾಗಿ ಮಗನ ಸಾಧನೆ ಬಗ್ಗೆ ಬರೆಯುವಾಗ ನನ್ನ ಹೆಸರು ಬರದಿದ್ದರೂ ಅಡ್ಡಿಯಿಲ್ಲ, ಆದರೆ ಸಲಾಮ್ ಭಾಯಿ ಅವರ ಬಗ್ಗೆ ಬರೆಯಲೇಬೇಕು ಎಂದು ತಿಲಕ್ ವರ್ಮಾ ತಂದೆ ನಂಬೂರಿ ನಾಗರಾಜ ತಿಳಿಸಿದ್ದಾರೆ.

ಇನ್ನು ಐಪಿಎಲ್​ನಲ್ಲಿ ಅವಕಾಶ ಸಿಕ್ಕಿರುವ ಬಗ್ಗೆ ಖುಷಿ ವ್ಯಕ್ತಪಡಿಸಿರುವ ತಿಲಕ್, ನನ್ನೆಲ್ಲಾ ಸಾಧನೆಗೆ ಕೋಚ್ ಸಲಾಮ್ ಭಾಯಿ ಕಾರಣ. ಅವರೇ ನನ್ನ ಕ್ರಿಕೆಟ್​ ಕೆರಿಯರ್​ಗೆ ಬೇಕಾದ ಎಲ್ಲಾ ವೆಚ್ಚಗಳನ್ನು ನೋಡಿಕೊಂಡಿದ್ದಾರೆ. ನಾನು ಇಂದು ಈ ಹಂತಕ್ಕೆ ಬಂದಿದ್ದೇನೆ ಅಂದರೆ ಅದಕ್ಕೆ ಸಲಾಮ್ ಭಾಯಿ​ ಹಾಗೂ ಅವರ ಕುಟುಂಬಸ್ಥರ ಬೆಂಬಲವೇ ಕಾರಣ ಎಂದು ತಿಳಿಸಿದ್ದಾರೆ.

ಅಂದಹಾಗೆ ನಿನ್ನೆ ಮೊನ್ನೆಯವರೆಗೂ ಅಪರಿಚಿತನಾಗಿದ್ದ ತಿಲಕ್ ವರ್ಮಾ ಇದೀಗ 1.7 ಕೋಟಿ ಒಡೆಯ. ಈ ಬಾರಿಯ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡವು ತಿಲಕ್ ವರ್ಮಾ ಅವರನ್ನು 1.7 ಕೋಟಿ ನೀಡಿ ಖರೀದಿಸಿದೆ. ಒಟ್ಟಿನಲ್ಲಿ ಸಲಾಮ್ ಭಾಯಿ ಅವರಂತಹ ಮತ್ತಷ್ಟು ಕೋಚ್ ಬರಲಿ, ಇನ್ನಷ್ಟು ಬಡ ಪ್ರತಿಭೆಗಳು ಬೆಳಕಿಗೆ ಬರಲಿ ಎಂದು ಆಶಿಸೋಣ.

ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?

ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..! 

(IPL 2022 mega auction: Electrician`s son Tilak Varma now a crorepati)

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ