AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022 Auction: ಕಾಂಗರೂಗಳಿಗೆ ಬೇಡಿಕೆಯಿಲ್ಲ! ಮೆಗಾ ಹರಾಜಿನಲ್ಲಿ ಮಾರಾಟವಾಗದ ಆಸೀಸ್ ಆಟಗಾರರ ಪಟ್ಟಿ

IPL 2022 Auction: ಆಸ್ಟ್ರೇಲಿಯನ್ ಆಟಗಾರರನ್ನು ಖರೀದಿಸುವ ಬದಲು, ಫ್ರಾಂಚೈಸಿಗಳು ಭಾರತದ ಆಟಗಾರರ ಮೇಲೆ ಒಲವು ತೋರಿದವು. ಇದರ ಪರಿಣಾಮ ಸ್ಟೀವ್ ಸ್ಮಿತ್, ಆಡಮ್ ಝಂಪಾ, ಆ್ಯರೋನ್ ಫಿಂಚ್ ರಂತಹ ಆಟಗಾರರು ಹರಾಜಿನಲ್ಲಿ ಮಾರಾಟವಾಗಲಿಲ್ಲ.

IPL 2022 Auction: ಕಾಂಗರೂಗಳಿಗೆ ಬೇಡಿಕೆಯಿಲ್ಲ! ಮೆಗಾ ಹರಾಜಿನಲ್ಲಿ ಮಾರಾಟವಾಗದ ಆಸೀಸ್ ಆಟಗಾರರ ಪಟ್ಟಿ
ಸ್ಮಿತ್, ಜಂಪಾ
TV9 Web
| Edited By: |

Updated on: Feb 14, 2022 | 3:43 PM

Share

ಇಂಡಿಯನ್ ಪ್ರೀಮಿಯರ್ ಲೀಗ್‌ (Indian Premier League)ನಲ್ಲಿ ಆಸ್ಟ್ರೇಲಿಯದ ಆಟಗಾರರನ್ನು ನೋಡುತ್ತಿದ್ದ ಕಾಲವೊಂದಿತ್ತು. ಆಸ್ಟ್ರೇಲಿಯಾದ ಆಟಗಾರರ ಮೇಲೆ ಹರಾಜಿನಲ್ಲಿ ಬಹಳಷ್ಟು ಹಣದ ಮಳೆಯಾಗುತ್ತಿತ್ತು. ಆದರೆ ಐಪಿಎಲ್ -2022 ಮೆಗಾ ಹರಾಜಿನಲ್ಲಿ (IPL -2022 Mega Auction) ಈ ವಾಡಿಕೆ ಸಂಪೂರ್ಣ ಬದಲಾಗಿದೆ. ಆಸ್ಟ್ರೇಲಿಯನ್ ಆಟಗಾರರನ್ನು ಖರೀದಿಸುವ ಬದಲು, ಫ್ರಾಂಚೈಸಿಗಳು ಭಾರತದ ಆಟಗಾರರ ಮೇಲೆ ಒಲವು ತೋರಿದವು. ಇದರ ಪರಿಣಾಮ ಸ್ಟೀವ್ ಸ್ಮಿತ್ (Steve Smith), ಆಡಮ್ ಝಂಪಾ, ಆ್ಯರೋನ್ ಫಿಂಚ್ ರಂತಹ ಆಟಗಾರರು ಹರಾಜಿನಲ್ಲಿ ಮಾರಾಟವಾಗಲಿಲ್ಲ. ಐಪಿಎಲ್​ನಲ್ಲಿ ಈ ಬಾರಿ ಒಟ್ಟು 11 ಆಸ್ಟ್ರೇಲಿಯನ್ ಆಟಗಾರರು ಮಾರಾಟವಾಗಿದ್ದಾರೆ. ಇದರೊಂದಿಗೆ ಮುಂಬರುವ ಐಪಿಎಲ್ ಸೀಸನ್‌ನಲ್ಲಿ ಭಾಗವಹಿಸುವ ಒಟ್ಟು ಆಸ್ಟ್ರೇಲಿಯಾದ ಆಟಗಾರರ ಸಂಖ್ಯೆ 13 ಕ್ಕೆ ಏರಿದೆ.

ಸ್ಟೀವ್ ಸ್ಮಿತ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರೂ ಆಗಿದ್ದರು. ರೈಸಿಂಗ್ ರಾಜಸ್ಥಾನಕ್ಕಿಂತ ಮೊದಲು ಪುಣೆ ಸೂಪರ್‌ಜೈಂಟ್ಸ್‌ಗೆ ನಾಯಕತ್ವ ವಹಿಸಿದ್ದರು ಮತ್ತು ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು. ಆದರೆ ಈ ಬಾರಿ ಯಾವುದೇ ತಂಡ ಅವರನ್ನು ಖರೀದಿಸಿಲ್ಲ. ಆಡಮ್ ಝಂಪಾ ಪ್ರಮುಖ ಲೆಗ್ ಸ್ಪಿನ್ನರ್ ಆಗಿದ್ದರು. ಆದರೆ ಈ ಬಾರಿ ಫ್ರಾಂಚೈಸಿಗಳು ಅವರ ಬಗ್ಗೆ ಆಸಕ್ತಿ ತೋರಿಸಲಿಲ್ಲ.

ಬೆಲೆ ಕುಸಿತ

ಆಸ್ಟ್ರೇಲಿಯ ಆಟಗಾರರು ಕೇವಲ 59.7 ಕೋಟಿ ಪಡೆದಿದ್ದಾರೆ. ಆಸ್ಟ್ರೇಲಿಯದ ಆಟಗಾರರು ಮಾರಾಟವಾಗದೆ ಉಳಿದುಕೊಂಡಿರುವುದನ್ನು ಹೊರತುಪಡಿಸಿ, ಅವರಿಗೆ ಮತ್ತೊಂದು ಹಾನಿಕಾರಕ ಅಂಶವೆಂದರೆ ಈ ಬಾರಿ ಅವರಿಗೆ ನೀಡಿದ ಬೆಲೆಯಲ್ಲಿ ಇಳಿಕೆಯಾಗಿದೆ. ಐಪಿಎಲ್‌ನ ಯಶಸ್ವಿ ನಾಯಕರಲ್ಲಿ ಡೇವಿಡ್ ವಾರ್ನರ್ ಅವರನ್ನು ಪರಿಗಣಿಸಲಾಗಿದೆ. ಅವರಿಗೆ ಈ ಮೊದಲು ಸನ್‌ರೈಸರ್ಸ್ ಹೈದರಾಬಾದ್‌ 12.5 ಕೋಟಿ ನೀಡುತ್ತಿತ್ತು. ಆದರೆ ಈ ಬಾರಿ ವಾರ್ನರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 6.25 ಕೋಟಿಗೆ ಖರೀದಿಸಿದೆ.

ನಾಥನ್ ಕೌಲ್ಟರ್-ನೈಲ್ ಐದು ಕೋಟಿಯಿಂದ ಎರಡು ಕೋಟಿಗೆ ಇಳಿದಿದ್ದಾರೆ. ರಿಲೇ ಮೆರಿಡಿಥೆ ಬೆಲೆ ಎಂಟು ಕೋಟಿಯಿಂದ ಒಂದು ಕೋಟಿಗೆ ಇಳಿದಿದೆ. ಜೇಸನ್ ಬಹ್ರೆಂಡಾರ್ಫ್ ಒಂದು ಕೋಟಿಯಿಂದ 75 ಲಕ್ಷಕ್ಕೆ ಮಾರಾಟವಾಗಿದ್ದಾರೆ.

ಹರಾಜಿನಲ್ಲಿ ಖರೀದಿಸಲಾದ ಆಸ್ಟ್ರೇಲಿಯಾದ ಆಟಗಾರರು

ಡೇವಿಡ್ ವಾರ್ನರ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಸೀನ್ ಅಬಾಟ್, ರಿಲೆ ಮೆರೆಡಿತ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಮಾರ್ಷ್, ಮ್ಯಾಥ್ಯೂ ವೇಡ್, ಜೋಶ್ ಹ್ಯಾಜಲ್‌ವುಡ್, ನಾಥನ್ ಕೌಲ್ಟರ್-ನೈಲ್, ಡೇನಿಯಲ್ ಸ್ಯಾಮ್ಸ್. ಇವರಲ್ಲದೆ, ಮಾರ್ಕಸ್ ಸ್ಟೊಯಿನಿಸ್ ಅವರನ್ನು ಲಕ್ನೋ ಸೂಪರ್‌ಜೈಂಟ್ಸ್ ಉಳಿಸಿಕೊಂಡರೆ, ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಉಳಿಸಿಕೊಂಡಿದೆ.

ಮಾರಾಟವಾಗದೆ ಉಳಿದ ಆಸ್ಟ್ರೇಲಿಯಾದ ಆಟಗಾರರು

ಆಡಮ್ ಝಂಪಾ, ಆಷ್ಟನ್ ಅಗರ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಆಂಡ್ರ್ಯೂ ಟೈ, ಮೊಯ್ಸೆಸ್ ಹೆನ್ರಿಕ್ಸ್, ಜೇಮ್ಸ್ ಫಾಕ್ನರ್, ಡಿ’ಆರ್ಚಿ ಶಾರ್ಟ್, ಜೋಶ್ ಫಿಲಿಪ್, ಬಿಲ್ಲಿ ಸ್ಟಾನ್ಲೇಕ್, ಬೆನ್ ಕಟಿಂಗ್, ಬೆನ್ ಮೆಕ್‌ಡರ್ಮಾಟ್, ಕುರ್ಟಿಸ್ ಪ್ಯಾಟರ್ಸನ್, ವೆಸ್ ಅಗರ್, ಜ್ಯಾಕ್ ವೈಲ್ಡರ್‌ಮತ್, ಹೆಚ್ ಜೋಲ್ ಪ್ಯಾರಿಟ್‌ಮತ್ ಕ್ರಿಸ್ ಗ್ರೀನ್, ಮ್ಯಾಟ್ ಕೆಲ್ಲಿ, ಬೆನ್ ದ್ವಾರ್ಶುಯಿಸ್, ಹೇಡನ್ ಕೆರ್, ತನ್ವೀರ್ ಸಂಘ, ಅಲೆಕ್ಸ್ ರಾಸ್, ಜೇಕ್ ವೆಥರಾಲ್ಡ್, ನಾಥನ್ ಮ್ಯಾಕ್ ಆಂಡ್ರ್ಯೂ, ಟಾಮ್ ರೋಜರ್ಸ್, ಲಿಯಾಮ್ ಗುತ್ರೀ, ಲಿಯಾಮ್ ಹ್ಯಾಚರ್, ಜಾಸೋಮ್ ಸಂಘ, ಮ್ಯಾಟ್ ಶಾರ್ಟ್, ಏಡನ್ ಕಾಹಿಲ್.

ಇದನ್ನೂ ಓದಿ:IPL 2022 Auction: ಮೆಗಾ ಹರಾಜಿನಲ್ಲಿ ದೇಶವಾರು ಮಾರಾಟವಾದ ವಿದೇಶಿ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ

ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ