PBKS, IPL 2022 Auction: ಪಂಜಾಬ್ ಕಿಂಗ್ಸ್ ಖರೀದಿಸಿದ ಆಟಗಾರರ ಸಂಪೂರ್ಣ ಪಟ್ಟಿ ಮತ್ತು ಅವರ ಸಂಭಾವನೆ
Punjab Kings Auction Players: ಕಳೆದ ಎರಡು ಋತುಗಳಲ್ಲಿ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ ಈ ಬಾರಿ ತಂಡದಲ್ಲಿ ಇಲ್ಲ. ಈ ಋತುವಿನಲ್ಲಿ ತಂಡಕ್ಕೆ ಹೊಸ ನಾಯಕನ ಅಗತ್ಯವಿದೆ. ಶಿಖರ್ ಧವನ್ ಈ ಬಾರಿ ಈ ತಂಡದ ನಾಯಕತ್ವ ವಹಿಸಬಹುದು.
ಐಪಿಎಲ್ 2022 ರ ಮೆಗಾ ಹರಾಜು (IPL 2022 Mega Auction ) ಮುಗಿದಿದೆ. ಎರಡು ದಿನಗಳ ಕಾಲ 10 ಫ್ರಾಂಚೈಸಿಗಳು ಬೆಂಗಳೂರಿನಲ್ಲಿ ಜಮಾಯಿಸಿ ತಮ್ಮ ತಂಡಗಳನ್ನು ರಚಿಸಿಕೊಂಡಿವೆ. ಪಂಜಾಬ್ ಕಿಂಗ್ಸ್ (Punjab Kings) ಕೂಡ ತಮ್ಮ ಆಯ್ಕೆಯ ಆಟಗಾರರಿಗೆ ಸಾಕಷ್ಟು ಹಣವನ್ನು ಖರ್ಚು ಮಾಡಿತು. ಇದುವರೆಗೆ ಈ ತಂಡ ಒಂದೇ ಒಂದು ಪ್ರಶಸ್ತಿ ಗೆದ್ದಿಲ್ಲ. 2014 ರಲ್ಲಿ, ಈ ತಂಡ ಫೈನಲ್ ಆಡಿತ್ತಾದರೂ ಗೆಲುವು ತನ್ನ ಪಾಲಿಗೆ ಬರಲಿಲ್ಲ. ಈ ಬಾರಿ ತಂಡ ಸಂಪೂರ್ಣ ಬದಲಾಗಿದ್ದು, ಹೊಸ ನಾಯಕನೊಂದಿಗೆ ಕಣಕ್ಕಿಳಿಯಲಿದೆ. ಕಳೆದ ಎರಡು ಋತುಗಳಲ್ಲಿ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ ಈ ಬಾರಿ ತಂಡದಲ್ಲಿ ಇಲ್ಲ. ಈ ಋತುವಿನಲ್ಲಿ ತಂಡಕ್ಕೆ ಹೊಸ ನಾಯಕನ ಅಗತ್ಯವಿದೆ. ಶಿಖರ್ ಧವನ್ (Shikhar Dhawan) ಈ ಬಾರಿ ಈ ತಂಡದ ನಾಯಕತ್ವ ವಹಿಸಬಹುದು.
ಅದೇ ಸಮಯದಲ್ಲಿ, ಶಾರುಖ್ ಖಾನ್ಗಾಗಿ ತಂಡವು ಭಾರಿ ಮೊತ್ತವನ್ನು ನೀಡಿದೆ. ಕಳೆದ ಋತುವಿನಲ್ಲಿ ಅವರು ತಂಡದಲ್ಲಿದ್ದರೂ ತಂಡವು ಅವರನ್ನು ಉಳಿಸಿಕೊಂಡಿರಲಿಲ್ಲ. ಆದರೆ, ಮೆಗಾ ಹರಾಜಿನಲ್ಲಿ ಫ್ರಾಂಚೈಸಿ 9 ಕೋಟಿಯಷ್ಟು ದೊಡ್ಡ ಮೊತ್ತವನ್ನು ಪಾವತಿಸಿ ಅವರನ್ನು ಖರೀದಿಸಿದೆ.
ಪಂಜಾಬ್ ಕಿಂಗ್ಸ್ ಆಟಗಾರರ ಸಂಪೂರ್ಣ ಪಟ್ಟಿ
ಶಿಖರ್ ಧವನ್ – ರೂ 8.25 ಕೋಟಿ, ಕಗಿಸೊ ರಬಾಡ – ರೂ 9.25 ಕೋಟಿ, ಜಾನಿ ಬೈರ್‌ಸ್ಟೋವ್ – ರೂ 6.75 ಕೋಟಿ, ರಾಹುಲ್ ಚಹಾರ್ – ರೂ 5.25 ಕೋಟಿ, ಶಾರುಖ್ ಖಾನ್ – ರೂ 9 ಕೋಟಿ ಹರ್‌ಪ್ರೀತ್ ಬ್ರಾರ್ – ರೂ 3.8 ಕೋಟಿ ಪ್ರಭುಸಿಮ್ರಾನ್ ಸಿಂಗ್ – ರೂ 3.8 ಕೋಟಿ ಜಿತೇಶ್ ಶರ್ಮಾ – ರೂ 60 ಲಕ್ಷ ಪೊರೆಲ್ – 25 ಲಕ್ಷ ರೂ ಲಿಯಾಮ್ ಲಿವಿಂಗ್‌ಸ್ಟನ್ – ರೂ 11.50 ಕೋಟಿ ಓಡಿನ್ ಸ್ಮಿತ್ – ರೂ 6 ಕೋಟಿ ಸಂದೀಪ್ ಶರ್ಮಾ – ರೂ 50 ಲಕ್ಷ ರಾಜ್ ಬಾವಾ – ರೂ 2 ಕೋಟಿ ರಿಷಿ ಧವನ್ – ರೂ 55 ಲಕ್ಷ ವೈಭವ್ ಅರೋರಾ – ರೂ 2 ಕೋಟಿ ಅಂಶ್ ಪಟೇಲ್ – ರೂ 20 ಲಕ್ಷ ಹೃತಿಕ್ ಚಟರ್ಜೆ – ರೂ. 20 ಬಲ್ತೇಜ್ ಧಂಡಾ – ರೂ 20 ಲಕ್ಷ ಬೆನ್ನಿ ಹೋವೆಲ್ – ರೂ 40 ಲಕ್ಷ ಭಾನುಕಾ ರಾಜಪಕ್ಸೆ – ರೂ 50 ಲಕ್ಷ ಅಥರ್ವ ತೇಡೆ – ರೂ 20 ಲಕ್ಷ ನಾಥನ್ ಎಲ್ಲಿಸ್ – ರೂ 75 ಲಕ್ಷ ಪ್ರೇರಕ್ ಮಂಕಡ್ – ರೂ 20 ಲಕ್ಷ
ಇದನ್ನೂ ಓದಿ:IPL 2022 Auction: ಮೆಗಾ ಹರಾಜಿನಲ್ಲಿ ದೇಶವಾರು ಮಾರಾಟವಾದ ವಿದೇಶಿ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
Published On - 4:17 pm, Mon, 14 February 22