MI, IPL 2022 Auction: ಕಿಶನ್ಗೆ ದಾಖಲೆ ಹಣ ನೀಡಿದ ಮುಂಬೈ! ಈ ಬಾರಿ ರೋಹಿತ್ ತಂಡ ಹೇಗಿದೆ ಗೊತ್ತಾ?
Mumbai Indians Auction Players: ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಉಳಿಸಿಕೊಂಡಿರುವ ಆಟಗಾರರ ಪೈಕಿ ಅತ್ಯಂತ ದುಬಾರಿ ಆಟಗಾರ ಎಂದರೆ ತಂಡದ ನಾಯಕ ರೋಹಿತ್ ಶರ್ಮಾ. ಅವರಿಗಾಗಿ ಮುಂಬೈ 16 ಕೋಟಿ ಖರ್ಚು ಮಾಡಿದೆ.
ಮುಂಬೈ ಇಂಡಿಯನ್ಸ್ (Mumbai Indians) ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಪ್ರಶಸ್ತಿ ಗೆದ್ದು ಅತ್ಯಂತ ಯಶಸ್ವಿ ತಂಡವಾಗಿದೆ. ತಂಡ ಐದು ಬಾರಿ ಪ್ರಶಸ್ತಿ ಗೆದ್ದಿದೆ. ರೋಹಿತ್ ಶರ್ಮಾ (Rohit Sharma) ನೇತೃತ್ವದ ತಂಡವು ಹರಾಜಿಗೂ ಮುನ್ನ ನಾಲ್ವರು ಆಟಗಾರರನ್ನು ಉಳಿಸಿಕೊಂಡಿತ್ತು ಮತ್ತು 48 ಕೋಟಿ ಪರ್ಸ್‌ನೊಂದಿಗೆ ಹರಾಜಿಗೆ ಪ್ರವೇಶಿಸಿತ್ತು. ಮೆಗಾ ಹರಾಜಿನಲ್ಲಿ 21 ಆಟಗಾರರನ್ನು ಖರೀದಿಸುವ ಮೂಲಕ ಮುಂಬೈ ತಮ್ಮ ತಂಡವನ್ನು ಪೂರ್ಣಗೊಳಿಸಿದೆ. ಮುಂಬೈ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರನ್ನು ಹರಾಜಿನಲ್ಲಿ ದಾಖಲೆಯ ಬೆಲೆಗೆ ಖರೀದಿಸಿತು. ಅದೇ ಸಮಯದಲ್ಲಿ, ಜೋಫ್ರಾ ಆರ್ಚರ್ಗಾಗಿ ಬಾರಿ ಮೊತ್ತವನ್ನು ಖರ್ಚು ಮಾಡಿದರು.
ಮುಂಬೈ ತಂಡವು ಐಪಿಎಲ್ 2022 ರ ಹರಾಜಿನಲ್ಲಿ ಯಾವುದೇ ಮಾರ್ಕ್ಯೂ ಆಟಗಾರನನ್ನು ಖರೀದಿಸಿಲ್ಲ. ಆದರೆ ಈ ಬಾರಿ ಮುಂಬೈ ಸಹ ಅನೇಕ ಯುವ ಆಟಗಾರರಲ್ಲಿ ವಿಶ್ವಾಸವನ್ನು ತೋರಿಸಿದೆ. 5 ಬಾರಿಯ ಚಾಂಪಿಯನ್ ತನ್ನ ತಂಡದಲ್ಲಿ ಮೂರು ಕೋಟಿಗೆ ಬೇಬಿ ಎಬಿ ಎಂದು ಕರೆಯಲ್ಪಡುವ ಸ್ಫೋಟಕ ಬ್ಯಾಟ್ಸ್‌ಮನ್ ಡೆವೊಲ್ಡ್ ಬ್ರೆವಿಸ್ ಅವರನ್ನು ಖರೀದಿಸಿತು. ಇದಲ್ಲದೇ ಒಂದು ಕೋಟಿಗಿಂತ ಕಡಿಮೆ ಮೊತ್ತದಲ್ಲಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದ್ದು, ಇದರಲ್ಲಿ ಅರ್ಜುನ್ ತೆಂಡೂಲ್ಕರ್ ಕೂಡ ಇದ್ದಾರೆ.
ಇಶಾನ್ ಮತ್ತು ಆರ್ಚರ್ ದುಬಾರಿ
ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಉಳಿಸಿಕೊಂಡಿರುವ ಆಟಗಾರರ ಪೈಕಿ ಅತ್ಯಂತ ದುಬಾರಿ ಆಟಗಾರ ಎಂದರೆ ತಂಡದ ನಾಯಕ ರೋಹಿತ್ ಶರ್ಮಾ. ಅವರಿಗಾಗಿ ಮುಂಬೈ 16 ಕೋಟಿ ಖರ್ಚು ಮಾಡಿದೆ. ರೋಹಿತ್ ಹೊರತುಪಡಿಸಿ, ಮುಂಬೈ ಭಾರತದ ಅತ್ಯುತ್ತಮ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಮತ್ತು ವೆಸ್ಟ್ ಇಂಡೀಸ್ ಆಲ್‌ರೌಂಡರ್ ಕೀರನ್ ಪೊಲಾರ್ಡ್ ಅವರನ್ನು ಉಳಿಸಿಕೊಂಡಿದೆ. ಮುಂಬೈ 15.5 ಕೋಟಿ ರೂ.ಗೆ ಬಿಡ್ ಮಾಡುವ ಮೂಲಕ ಇಶಾನ್ ಕಿಶನ್‌ನನ್ನು ಲೀಗ್‌ನಲ್ಲಿ ಎರಡನೇ ಅತ್ಯಂತ ದುಬಾರಿ ಆಟಗಾರನನ್ನಾಗಿ ಮಾಡಿದೆ. ಅದೇ ಸಮಯದಲ್ಲಿ, ಅವರು ಜೋಫ್ರಾ ಆರ್ಚರ್‌ಗೆ 8 ಕೋಟಿ ಖರ್ಚು ಮಾಡಿದರು.
ಮುಂಬೈ ಇಂಡಿಯನ್ಸ್ ತಂಡ
ಇಶಾನ್ ಕಿಶನ್: 15.25 ಕೋಟಿ ಡೆವಾಲ್ಡ್ ಬ್ರೆವಿಸ್: 3 ಕೋಟಿ ಅನ್ಮೋಲ್ಪ್ರೀತ್ ಸಿಂಗ್: 20 ಲಕ್ಷ ವಾಸಿಲ್ ಥಂಪಿ: 30 ಲಕ್ಷ ಮುರುಗನ್ ಅಶ್ವಿನ್: 1.60 ಕೋಟಿ ಜಯದೇವ್ ಉನದ್ಕತ್: 1.30 ಕೋಟಿ ಮಯಾಂಕ್ ಮಾರ್ಕಾಂಡೆ: 65 ಲಕ್ಷ ಎನ್. ತಿಲಕ್ ವರ್ಮಾ: 1 ಕೋಟಿ ಜೊವ್ಫ್ರಾ ಅರ್: 1.70 ಕೋಟಿ ಡೇನಿಯಲ್ ಸ್ಯಾಮ್: 2.60 ಕೋಟಿ ಟಿಮಲ್ ಮಿಲ್ಸ್: 1.50 ಕೋಟಿ ಟಿಮ್ ಡೇವಿಡ್: 8.25 ಕೋಟಿ ರಮಣ್‌ದೀಪ್ ಸಿಂಗ್: 20 ಲಕ್ಷ ಆರ್ಯನ್ ಜುಯಲ್: 20 ಲಕ್ಷ ಫ್ಯಾಬಿಯನ್ ಅಲೆನ್: 75 ಲಕ್ಷ ರಿಲೆ ಮೆರೆಡಿತ್: 1 ಕೋಟಿ ರಾಹುಲ್: 20 ಲಕ್ಷ ಹೃತಿಕ್ ಶೋಕೇನ್: 20 ಲಕ್ಷ ಅರ್ಷದ್ ಖಾನ್: 20 ಲಕ್ಷ ಅರ್ಜುನ್ ತೆಂಡೂಲ್ಕರ್: 30 ಲಕ್ಷ
ಆರನೇ ಬಾರಿ ಪ್ರಶಸ್ತಿ ಜಯಿಸುತ್ತಾ ಮುಂಬೈ
ಮುಂಬೈ ತಂಡ ಐಪಿಎಲ್‌ನ 14 ಸೀಸನ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ತಂಡದ ನಾಯಕತ್ವರಾದ ಬಳಿಕ ರೋಹಿತ್ ಐದು ಬಾರಿ ಪ್ರಶಸ್ತಿ ಗೆದ್ದಿದ್ದಾರೆ. 2013 ರಲ್ಲಿ ಮುಂಬೈ ತನ್ನ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದರ ನಂತರ, ಈ ತಂಡ ಮುಂದಿನ ಎಂಟು ಸೀಸನ್‌ಗಳಲ್ಲಿ ಐದು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಮುಂಬೈ 2013 ರಲ್ಲಿ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದರ ನಂತರ, 2015, 2017, 2019 ಮತ್ತು 2020 ರಲ್ಲಿ ಐಪಿಎಲ್ ಟ್ರೋಫಿ ಗೆದ್ದಿದೆ.
ಇದನ್ನೂ ಓದಿ:IPL 2022 Auction: ಈ ಬಾರಿಯ ಮೆಗಾ ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಬೌಲರ್‌ಗಳ ವಿವರ ಇಲ್ಲಿದೆ