IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?

IPL 2022 RCB Team: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡುಪ್ಲೆಸಿಸ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ ವುಡ್.

IPL 2022: RCB ತಂಡ ಕಟ್ಟಿದೆ...ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?
RCB
Follow us
| Updated By: ಝಾಹಿರ್ ಯೂಸುಫ್

Updated on: Feb 14, 2022 | 3:15 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಹರಾಜಿನ ಮೂಲಕ ಆರ್​ಸಿಬಿ ತಂಡವು ಒಟ್ಟು 19 ಆಟಗಾರರನ್ನು ಖರೀದಿಸಿದೆ. ಈ ಮೂಲಕ 22 ಸದಸ್ಯರ ಬಳಗದ ಹೊಸ ತಂಡವನ್ನು ರೂಪಿಸಿದೆ. ಈ ಪಟ್ಟಿಯಲ್ಲಿ ಅತ್ಯುತ್ತಮ ಆಯ್ಕೆಯಾಗಿ ಫಾಫ್ ಡುಪ್ಲೆಸಿಸ್​ ಅಗ್ರಸ್ಥಾನದಲ್ಲಿದ್ದಾರೆ. ಏಕೆಂದರೆ ಕಳೆದೆರಡು ಸೀಸನ್​ಗಳಲ್ಲಿ ಸಿಎಸ್​ಕೆ ಪರ ಅತ್ಯುತ್ತಮ ಆರಂಭಿಕನಾಗಿ ಗುರುತಿಸಿಕೊಂಡಿದ್ದ ಡುಪ್ಲೆಸಿಸ್​ ಅವರನ್ನು ಆರ್​ಸಿಬಿ 7 ಕೋಟಿ ನೀಡಿ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಆರ್​ಸಿಬಿ ಪರ ಡುಪ್ಲೆಸಿಸ್ ಆರಂಭಿಕನಾಗಿ ಆಡುವುದು ಬಹುತೇಕ ಖಚಿತ. ಆದರೆ ಇಲ್ಲಿ ಈಗ ಹುಟ್ಟಿಕೊಂಡಿರುವ ಪ್ರಶ್ನೆಯೆಂದರೆ ಮತ್ತೋರ್ವ ಆರಂಭಿಕ ಆಟಗಾರ ಯಾರು ಎಂಬುದು? ಏಕೆಂದರೆ ಅತ್ಯುತ್ತಮ ಎನಿಸಿಕೊಳ್ಳುವಂತಹ ಯಾವುದೇ ಭಾರತೀಯ ಆರಂಭಿಕ ಆಟಗಾರ ಆರ್​​ಸಿಬಿ ತಂಡದಲ್ಲಿಲ್ಲ.

ಮೆಗಾ ಹರಾಜಿನ ಪಟ್ಟಿಯಲ್ಲಿ ಆರಂಭಿಕರಾಗಿ ಕಾಣಿಸಿಕೊಂಡಿದ್ದ ಶಿಖರ್ ಧವನ್, ದೇವದತ್ ಪಡಿಕ್ಕಲ್, ಇಶಾನ್ ಕಿಶನ್​ನಂತನಹ ಆಟಗಾರರನ್ನು ಖರೀದಿಸುವಲ್ಲಿ ಆರ್​ಸಿಬಿ ವಿಫಲವಾಗಿದೆ. ಇದಾಗ್ಯೂ ಆರ್​ಸಿಬಿ ಆರಂಭಿಕ ಆಟಗಾರನಾಗಿ ನ್ಯೂಜಿಲೆಂಡ್​ನ ಫಿನ್ ಅಲೆನ್ ಅವರನ್ನು ಖರೀದಿಸಿದೆ. ಆದರೆ ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ ನಾಲ್ವರು ವಿದೇಶಿ ಆಟಗಾರರು ಆಡಬಹುದು.

ಅದರಂತೆ ಆರ್​ಸಿಬಿ ತಂಡದ ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಇರಲಿದ್ದಾರೆ. ಇನ್ನು ಆರಂಭಿಕನಾಗಿ ಫಾಫ್ ಡುಪ್ಲೆಸಿಸ್ ಆಡಲಿದ್ದಾರೆ. ಜೊತೆಗೆ ವೇಗಿಯಾಗಿ ಜೋಶ್ ಹ್ಯಾಝಲ್​ವುಡ್ ಅವರನ್ನೂ ಕೂಡ ಕಣಕ್ಕಿಳಿಸಬಹುದು. ಏಕೆಂದರೆ ಹ್ಯಾಝಲ್​ವುಡ್​ ಪ್ರಸ್ತುತ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರು. ಹೀಗಾಗಿ ಪ್ಲೇಯಿಂಗ್​ 11 ನಲ್ಲಿ ಸ್ಥಾನ ಪಡೆಯುವಂತಹ ಆಟಗಾರ. ಇನ್ನು ಆರ್​ಸಿಬಿ 10.75 ಕೋಟಿ ನೀಡಿ ಖರೀದಿಸಿದ ವನಿಂದು ಹಸರಂಗ ಅವರನ್ನು ಸ್ಪಿನ್ ಆಲ್​​ರೌಂಡರ್ ಆಗಿ ಆಡಿಸಲಿದೆ. ಅಂದರೆ ಈ ನಾಲ್ವರನ್ನು ಆಡಿಸಿದ್ರೆ ಆರ್​ಸಿಬಿ ಫಿನ್ ಅಲೆನ್ ಅವರನ್ನು ಕೈ ಬಿಡಬೇಕಾಗುತ್ತದೆ.

ಇಲ್ಲಿ ಆರ್​ಸಿಬಿ ಆರಂಭಿಕರಾಗಿ ಹೊಸ ಆಟಗಾರರನ್ನು ಕಣಕ್ಕಿಳಿಸಲು ಬಯಸಿದರೂ, ಅನುಭವದ ಕೊರತೆ ಎದ್ದು ಕಾಣುತ್ತದೆ. ಏಕೆಂದರೆ ತಂಡದಲ್ಲಿರುವ ಅನೂಜ್ ರಾವತ್, ಲವ್​ನೀತ್ ಸಿಸೋಡಿಯಾರಂತಹ ಆಟಗಾರರಿದ್ದರೂ, ಇವರು ಅಂತಾರಾಷ್ಟ್ರೀಯ ಮಟ್ಟದ ಬೌಲರುಗಳನ್ನು ಎದುರಿಸಿದ ಅನುಭವ ಹೊಂದಿಲ್ಲ. ಹೀಗಾಗಿ ಈ ಯುವ ಆಟಗಾರರನ್ನು ಬಳಸಿ ಪ್ರಯೋಗ ಮಾಡಬಹುದೇ ಹೊರತು, ಅದು ಸಕ್ಸಸ್ ಆಗಲಿದೆ ಎಂದೇಳಲಾಗುವುದಿಲ್ಲ.

ಇನ್ನು ತಂಡದಲ್ಲಿರುವ ಮಹಿಪಾಲ್ ಲೊಮ್ರೋರ್ ಮಧ್ಯಮ ಕ್ರಮಾಂಕಕ್ಕೆ ಸೂಕ್ತ ಆಟಗಾರ. ಸುಯಶ್ ಪ್ರಭುದೇಸಾಯಿ ಈ ಬಾರಿ ಕೂಡ ತಂಡದಲ್ಲಿದ್ದರೂ, ಕಳೆದ ಸೀಸನ್​ನಲ್ಲಿ ಆರ್​ಸಿಬಿ ಒಂದೇ ಒಂದು ಅವಕಾಶ ನೀಡಿರಲಿಲ್ಲ. ಅಂದರೆ ಇಲ್ಲಿ ಆರ್​ಸಿಬಿ ಭಾರತೀಯ ಆಟಗಾರರನ್ನು ಕಡಿಮೆ ಮೊತ್ತಕ್ಕೆ ಖರೀದಿಸಿ ತಂಡವನ್ನು ಕಟ್ಟಿರುವುದು ಸ್ಪಷ್ಟ. ಇದಾಗ್ಯೂ ಆರಂಭಿಕ ಸ್ಥಾನಕ್ಕೆ ಭಾರತೀಯ ಅನುಭವಿ ಆಟಗಾರರನ್ನು ಆಯ್ಕೆ ಮಾಡಿಕೊಂಡಿಲ್ಲ. ಅದರಲ್ಲೂ ಕಳೆದ ಎರಡು ಸೀಸನ್​ನಲ್ಲಿ ಆರ್​ಸಿಬಿ ಪರ ಆರಂಭಿಕರಾಗಿ ಆಡಿದ್ದ ದೇವದತ್ ಪಡಿಕ್ಕಲ್ ಅವರನ್ನೂ ಕೂಡ ಖರೀದಿಸಿಲ್ಲ.

ಒಂದು ವೇಳೆ ಆರ್​ಸಿಬಿ ಫಿನ್ ಅಲೆನ್ ಹಾಗೂ ಫಾಫ್ ಡುಪ್ಲೆಸಿಸ್ ಅವರನ್ನು ಆಡಿಸಿದ್ರೆ, ವನಿಂದು ಹಸರಂಗ ಅಥವಾ ಜೋಶ್ ಹ್ಯಾಝಲ್​ವುಡ್​, ಇಬ್ಬರಲ್ಲಿ ಒಬ್ಬರನ್ನು ಕೈ ಬಿಡಬೇಕಾಗುತ್ತದೆ. ಇನ್ನು ಆರ್​ಸಿಬಿ ಫಾಫ್ ಡುಪ್ಲೆಸಿಸ್, ವನಿಂದು ಹಸರಂಗ, ಜೋಶ್ ಹ್ಯಾಝಲ್​ವುಡ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ಆಡಿಸುವುದಾದರೆ, ವಿರಾಟ್ ಕೊಹ್ಲಿ ಆರಂಭಿಕನಾಗಿ ಆಡಬೇಕಾದ ಅನಿವಾರ್ಯತೆ ಬರಬಹುದು. ಒಟ್ಟಿನಲ್ಲಿ ಆರ್​ಸಿಬಿ ತಂಡವೊಂದನ್ನು ಕಟ್ಟಿದೆ. ಆದರೆ ತಂಡದ ಕಟ್ಟಿದ ಬಳಿಕ ನಮ್ಮ ತಂಡದ ಆರಂಭಿಕ ಯಾರು ಎಂಬ ದೊಡ್ಡ ಪ್ರಯ್ನೆಯೊಂದು ಇದೀಗ ಆರ್​ಸಿಬಿ ಫ್ರಾಂಚೈಸಿ ಮುಂದಿದೆ.

ಆರ್​ಸಿಬಿ ಹೊಸ ತಂಡ ಹೀಗಿದೆ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡುಪ್ಲೆಸಿಸ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ ವುಡ್, ಶಹಬಾಜ್ ಅಹ್ಮದ್, ಅನೂಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಆಲೆನ್, ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆನ್‌ಡಾರ್ಫ್, ಸುಯಶ್‌ ಪ್ರಭುದೇಸಾಯ್, ಚಮ ಮಿಲಿಂದ್, ಅನೀಶ್ವರ್‌ ಗೌತಮ್, ಕರಣ್‌ ಶರ್ಮಾ, ಸಿದ್ಧಾರ್ಥ್ ಕೌಲ್, ಡೇವಿಡ್ ವಿಲ್ಲಿ, ಲವ್ನೀತ್ ಸಿಸೋಡಿಯಾ.

ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..! 

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ