Asian Games: 8 ವರ್ಷಗಳ ಬಳಿಕ ಏಷ್ಯಾಡ್‌ಗೆ ಕ್ರಿಕೆಟ್ ಎಂಟ್ರಿ; ಭಾರತ ಪಾಲ್ಗೊಳ್ಳುವುದು ಭಾಗಶಃ ಅನುಮಾನ! ಕಾರಣ ಇಲ್ಲಿದೆ
Asian Games: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ T20 ವಿಶ್ವಕಪ್‌ಗೆ ಮೊದಲು, ಆಟಗಾರರ ಇಂಜುರಿ ಸಮಸ್ಯೆ ತಪ್ಪಿಸಲು ಟೀಂ ಇಂಡಿಯಾ ಹ್ಯಾಂಗ್‌ಝೌ ಏಷ್ಯಾಡ್‌ಗೆ ಹಾಜರಾಗುವುದರಿಂದ ಹಿಂದೆ ಸರಿಯಬಹುದು.
ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ (Hangzhou Asian Games)ನಲ್ಲಿ ಕ್ರಿಕೆಟ್ ಪುನರಾಗಮನ ಮಾಡುತ್ತಿದೆ. ಆದರೆ, ಕ್ರಿಕೆಟ್ ಅಭಿಮಾನಿಗಳಿಗೆ ಕೊಂಚ ನಿರಾಸೆ ಕಾದಿದೆ. ಕಾರಣ ಇದರಲ್ಲಿ ಟೀಂ ಇಂಡಿಯಾ ಆಡುವ ಬಗ್ಗೆ ಅನುಮಾನ ಸುಳಿದಾಡುತ್ತಿದೆ. ವಾಸ್ತವವಾಗಿ, ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ T20 ವಿಶ್ವಕಪ್ (T20 World Cup)ಗೆ ಮೊದಲು, ಆಟಗಾರರ ಇಂಜುರಿ ಸಮಸ್ಯೆ ತಪ್ಪಿಸಲು ಟೀಂ ಇಂಡಿಯಾ ಹ್ಯಾಂಗ್‌ಝೌ ಏಷ್ಯಾಡ್‌ಗೆ ಹಾಜರಾಗುವುದರಿಂದ ಹಿಂದೆ ಸರಿಯಬಹುದು. ಭಾರತ ಪುರುಷರ ಕ್ರಿಕೆಟ್ ತಂಡದ ಹೊರತಾಗಿ, ಮಹಿಳಾ ತಂಡವೂ ಭಾಗವಹಿಸುವ ಬಗ್ಗೆ ಸಸ್ಪೆನ್ಸ್ ಇದೆ.
ಭಾರತ ಮಹಿಳಾ ಕ್ರಿಕೆಟ್ ತಂಡವು ಏಷ್ಯಾಡ್ ಸಮಯದಲ್ಲಿ 3 ODI ಮತ್ತು 3 T20 ಸರಣಿಗಳನ್ನು ಆಡಲು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಬೇಕಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಮಹಿಳಾ ತಂಡವು ಆ ಸರಣಿಗೆ ಸಂಬಂಧಿಸಿದಂತೆ ಹ್ಯಾಂಗ್‌ಝೌ ಏಷ್ಯಾಡ್‌ನಲ್ಲಿ ಆಡುವುದು ಅನುಮಾನ.
ನಂತರ ಏಷ್ಯಾಡ್‌ನಲ್ಲಿ ಆಡುವ ನಿರ್ಧಾರ ಆದರೆ, ಏಷ್ಯಾಡ್‌ನಲ್ಲಿ ಭಾರತ ಪುರುಷ ಮತ್ತು ಮಹಿಳಾ ತಂಡದ ಆಟದ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಲಾಗಿಲ್ಲ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, “ಆ ಸಮಯದಲ್ಲಿ ನಮ್ಮ ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು ನಾವು ನಂತರ ಏಷ್ಯಾಡ್‌ಗೆ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳನ್ನು ಕಳುಹಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಕ್ರಿಕೆಟ್ ಈ ಹಿಂದೆ 2010 ಮತ್ತು 2014 ರ ಏಷ್ಯನ್ ಗೇಮ್ಸ್‌ನ ಭಾಗವಾಗಿತ್ತು. ಅವರ ಬಿಡುವಿಲ್ಲದ ಅಂತರಾಷ್ಟ್ರೀಯ ವೇಳಾಪಟ್ಟಿಯನ್ನು ಉಲ್ಲೇಖಿಸಿ ಭಾರತ ತಂಡವು ಅದರಿಂ ಹೊರಬಂದಿತು. ಈ ಬಾರಿಯೂ ಅದೇ ಸಂಭವಿಸುವ ಲಕ್ಷಣಗಳು ದಟ್ಟವಾಗಿವೆ. 2018 ರಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಿಂದ ಕ್ರಿಕೆಟ್ ಅನ್ನು ಕೈಬಿಡಲಾಯಿತು. 2010 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಭಾಗವಹಿಸದಿದ್ದಾಗ ಬಾಂಗ್ಲಾದೇಶ ಪುರುಷರ ತಂಡ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಮಹಿಳಾ ವಿಭಾಗದಲ್ಲಿ ಪಾಕಿಸ್ತಾನ ಈ ಪ್ರಶಸ್ತಿ ಗೆದ್ದುಕೊಂಡಿತು. ಅದೇ ಸಮಯದಲ್ಲಿ, ಶ್ರೀಲಂಕಾ 2014 ರ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ತಂಡ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಆದರೆ ಇಲ್ಲಿಯೂ ಸಹ ಪಾಕಿಸ್ತಾನದ ಮಹಿಳಾ ತಂಡ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಏಷ್ಯನ್ ಗೇಮ್ಸ್ 15 ದಿನಗಳ ಕಾಲ ನಡೆಯಲಿದೆ
2022 ರ ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 10 ರಿಂದ ಸೆಪ್ಟೆಂಬರ್ 25 ರವರೆಗೆ ನಡೆಯಲಿದೆ. ಭಾರತ ಇದುವರೆಗೆ ಪ್ರತಿ ಏಷ್ಯನ್ ಗೇಮ್ಸ್‌ನಲ್ಲಿ ಕನಿಷ್ಠ ಒಂದು ಚಿನ್ನದ ಪದಕವನ್ನು ಗೆದ್ದಿದೆ. ಇದಲ್ಲದೇ, 1990ರಲ್ಲಿ ಹೊರತುಪಡಿಸಿ ಪ್ರತಿ ಬಾರಿ ಏಷ್ಯನ್ ಗೇಮ್ಸ್‌ನ ಪದಕ ಪಟ್ಟಿಯಲ್ಲಿ ಅಗ್ರ 10 ತಂಡಗಳಲ್ಲಿ ಸ್ಥಾನ ಪಡೆದಿದೆ. ಭಾರತ ಇದುವರೆಗೆ 139 ಚಿನ್ನದ ಪದಕಗಳು, 178 ಬೆಳ್ಳಿ ಪದಕಗಳು ಮತ್ತು 299 ಕಂಚಿನ ಪದಕಗಳನ್ನು ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದಿದೆ.
ಇದನ್ನೂ ಓದಿ:IND vs WI: ಭಾರತಕ್ಕೆ ಡಬಲ್ ಶಾಕ್! ಕೊಹ್ಲಿ ಜೊತೆಗೆ ಪಂತ್ ಕೂಡ ಅಂತಿಮ ಟಿ20ಗೆ ಗೈರು; ಲಂಕಾ ಸರಣಿಗೂ ಅಲಭ್ಯ