NZ vs SA: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಯಾರು ಮಾಡದ ವಿಶಿಷ್ಟ ದಾಖಲೆಗೆ ಕೊರಳೊಡ್ಡಿದ ಕಿವೀಸ್ ಆಟಗಾರ
NZ vs SA: ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮ್ಯಾಟ್ ಹೆನ್ರಿ 7 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದರು. ಈ ಮೂಲಕ ಪಂದ್ಯದಲ್ಲಿ ಒಟ್ಟು 9 ವಿಕೆಟ್ ಪಡೆದು ಅಜೇಯ 58 ರನ್ ಗಳಿಸಿದರು.
ದಕ್ಷಿಣ ಆಫ್ರಿಕಾ (South Africa)ಎದುರು ನಡೆದ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ (New Zealand)ಗೆಲುವು ಸಾಧಿಸಿದೆ. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ, ಕಿವೀಸ್, ದಕ್ಷಿಣ ಆಫ್ರಿಕಾವನ್ನು ಇನ್ನಿಂಗ್ಸ್ ಮತ್ತು 276 ರನ್‌ಗಳಿಂದ ಸೋಲಿಸಿದತು ಇದು ಕಿವೀಸ್ನ ಮೂರನೇ ಅತಿದೊಡ್ಡ ಗೆಲುವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್‌ನ ಈ ಟೆಸ್ಟ್ ಗೆಲುವು ವಿಶೇಷವಾಗಿದೆ. ಏಕೆಂದರೆ ಈ ಗೆಲುವಿಗಾಗಿ ಕಿವೀಸ್ ಬರೊಬ್ಬರಿ 18 ವರ್ಷಗಳನ್ನು ಕಾಯಬೇಕಾಯ್ತು. ಚೆಂಡು ಮತ್ತು ಬ್ಯಾಟಿಂಗ್ ಎರಡರಲ್ಲೂ ತನ್ನ ತಂಡಕ್ಕೆ ನಿರ್ಣಾಯಕ ಪಾತ್ರ ವಹಿಸಿದ್ದ ಮ್ಯಾಟ್ ಹೆನ್ರಿ (Matt Henry)ಯನ್ನು ಕಿವೀ ತಂಡದ ಈ ಅದ್ಭುತ ಗೆಲುವಿನ ನಾಯಕರಾಗಿದ್ದಾರೆ.
ಮ್ಯಾಟ್ ಹೆನ್ರಿ ಮೊದಲು ದಕ್ಷಿಣ ಆಫ್ರಿಕಾವನ್ನು ತನ್ನ ಬೌಲಿಂಗ್‌ನಿಂದ ಕಟ್ಟಿಹಾಕಿದರು. ನಂತರ ಬ್ಯಾಟ್‌ನ ಬಲದ ಮೇಲೆ ಸಾಕಷ್ಟು ಹಾನಿಯನ್ನುಂಟುಮಾಡಿದರು. ಕ್ರೈಸ್ಟ್‌ಚರ್ಚ್ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಗೆಲುವಿಗೆ 30 ವರ್ಷದ ಹೆನ್ರಿ ಅದರ ಹೀರೋ ಆಗಿ ಹೊರಹೊಮ್ಮಲು ಇದು ಕಾರಣವಾಗಿತ್ತು.
ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಮ್ಯಾಟ್ ಹೆನ್ರಿ
ಮ್ಯಾಟ್ ಹೆನ್ರಿ ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ನಲ್ಲಿ ದಕ್ಷಿಣ ಆಫ್ರಿಕಾದ 7 ವಿಕೆಟ್‌ಗಳನ್ನು ಪಡೆದರು. ಪರಿಣಾಮ ದಕ್ಷಿಣ ಆಫ್ರಿಕಾ ತಂಡ 95 ರನ್‌ಗಳಿಗೆ ಆಲೌಟ್ ಆಯಿತು. ಇದರ ನಂತರ, ನ್ಯೂಜಿಲೆಂಡ್ ಪರ 11 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಅರ್ಧಶತಕವನ್ನು ಗಳಿಸಿದರು ಮತ್ತು 58 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಒಂದೇ ಟೆಸ್ಟ್ ಪಂದ್ಯದಲ್ಲಿ ಈ ಎರಡೂ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ ಮ್ಯಾಟ್ ಹೆನ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮೊದಲ ಟೆಸ್ಟ್‌ನಲ್ಲಿ 9 ವಿಕೆಟ್ ಪಡೆದ ಮ್ಯಾಟ್ ಹೆನ್ರಿ
ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮ್ಯಾಟ್ ಹೆನ್ರಿ 7 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದರು. ಈ ಮೂಲಕ ಪಂದ್ಯದಲ್ಲಿ ಒಟ್ಟು 9 ವಿಕೆಟ್ ಪಡೆದು ಅಜೇಯ 58 ರನ್ ಗಳಿಸಿದರು. ಈ ಅದ್ಭುತ ಪ್ರದರ್ಶನಕ್ಕಾಗಿ ಮ್ಯಾಟ್ ಹೆನ್ರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.