ಧೋನಿ ವಿದಾಯವನ್ನು ನೆನಪಿಸಿದ ಡಿ ಕಾಕ್‌; ಡಿ. 30 ರಂದು ಟೆಸ್ಟ್ ಕ್ರಿಕೆಟ್‌ಗೆ ಹಠಾತ್ ನಿವೃತ್ತಿ ಘೋಷಿಸಿದ ವಿಕೆಟ್‌ಕೀಪರ್

ಇಬ್ಬರು ಆಟಗಾರರು ಟೆಸ್ಟ್ ಕ್ರಿಕೆಟ್ ತೊರೆಯುವುದರ ನಡುವೆ ಸಾಕಷ್ಟು ಸಾಮ್ಯತೆ ಇದೆ. ಇಬ್ಬರೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳು. ಬಾಕ್ಸಿಂಗ್ ಡೇ ಟೆಸ್ಟ್ ಆಡಿದ ನಂತರ ಇಬ್ಬರೂ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

ಧೋನಿ ವಿದಾಯವನ್ನು ನೆನಪಿಸಿದ ಡಿ ಕಾಕ್‌; ಡಿ. 30 ರಂದು ಟೆಸ್ಟ್ ಕ್ರಿಕೆಟ್‌ಗೆ ಹಠಾತ್ ನಿವೃತ್ತಿ ಘೋಷಿಸಿದ ವಿಕೆಟ್‌ಕೀಪರ್
ಡಿಕಾಕ್ , ಧೋನಿ
Follow us
TV9 Web
| Updated By: ಪೃಥ್ವಿಶಂಕರ

Updated on: Dec 31, 2021 | 3:38 PM

ಮೊದಲು ಧೋನಿ, ಈಗ ಡಿಕಾಕ್. ಈ ಇಬ್ಬರು ಆಟಗಾರರು ಟೆಸ್ಟ್ ಕ್ರಿಕೆಟ್ ತೊರೆಯುವುದರ ನಡುವೆ ಸಾಕಷ್ಟು ಸಾಮ್ಯತೆ ಇದೆ. ಇಬ್ಬರೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳು. ಬಾಕ್ಸಿಂಗ್ ಡೇ ಟೆಸ್ಟ್ ಆಡಿದ ನಂತರ ಇಬ್ಬರೂ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಇದಕ್ಕೆ ಆಯ್ಕೆ ಮಾಡಿಕೊಂಡ ದಿನಾಂಕ ಡಿಸೆಂಬರ್ 30. ಆದರೆ ಇದಕ್ಕಿಂತ ದೊಡ್ಡ ಸಾಮ್ಯತೆ ಏನೆಂದರೆ ಇಬ್ಬರೂ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿರುವುದು ಟೆಸ್ಟ್ ಕ್ರಿಕೆಟ್‌ನಿಂದ ನಿರ್ಗಮಿಸಿರುವುದು. 30 ಡಿಸೆಂಬರ್ 2014 ರಂದು ಧೋನಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದಾಗ, ಜನರು ಇನ್ನೂ ಆಶ್ಚರ್ಯಚಕಿತರಾದರು. ಮತ್ತು ಈಗ ದಕ್ಷಿಣ ಆಫ್ರಿಕಾದ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಕೇವಲ 29 ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್ ತೊರೆಯಲು ನಿರ್ಧರಿಸಿದ್ದಾರೆ.

ಸೆಂಚುರಿಯನ್‌ನಲ್ಲಿ ಭಾರತ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋತ ನಂತರ ಡಿ ಕಾಕ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಇಚ್ಛಿಸುವ ಸಲುವಾಗಿ ಟೆಸ್ಟ್ ಕ್ರಿಕೆಟ್ ತೊರೆಯುತ್ತಿದ್ದೇನೆ ಎಂಬ ಕಾರಣ ನೀಡಿದರು. ಅಂದರೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಡಿಕಾಕ್ ಆಟ ಇನ್ನೂ ಮುಂದುವರೆಯಲಿದೆ.

2014ರಲ್ಲಿ ಧೋನಿ ಅಚ್ಚರಿ ಮೂಡಿಸಿದ್ದರು 2014ರಲ್ಲಿ ರವಿಶಾಸ್ತ್ರಿ ತಂಡದ ನಿರ್ದೇಶಕರಾಗಿದ್ದಾಗ ಧೋನಿ ಅವರು ಟೆಸ್ಟ್ ಕ್ರಿಕೆಟ್ ತ್ಯಜಿಸುವುದಾಗಿ ಘೋಷಿಸಿದ್ದರು. ಆ ಸಮಯವನ್ನು ನೆನಪಿಸಿಕೊಂಡ ರವಿಶಾಸ್ತ್ರಿ, “ಧೋನಿ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ಹೇಳಿದಾಗ ನಮಗೆಲ್ಲ ಆಘಾತವಾಯಿತು. ಅವರು ನನ್ನ ಬಳಿಗೆ ಬಂದು ಆಟಗಾರರಿಗೆ ನಾನು ನಿಮ್ಮ ಬಳಿ ಏನನ್ನೋ ಹೇಳಬೇಕು ಎಂದರು. ನಾನು, ಬಹುಶಃ ಧೋನಿ ನಾವು ಅಮೋಘ ಪಂದ್ಯವನ್ನು ಡ್ರಾ ಮಾಡಿದ್ದೇವೆ ಎಂದು ಹೇಳುತ್ತಾರೆ ಎಂದು ಭಾವಿಸಿದೆ. ಆದರೆ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯ ಸುದ್ದಿಯನ್ನು ವಿವರಿಸಿದರು. ನಾನು ಡ್ರೆಸ್ಸಿಂಗ್ ರೂಮ್‌ನಲ್ಲಿ ಎಲ್ಲರ ಮುಖಗಳನ್ನು ನೋಡಿದೆ, ಅವರೆಲ್ಲರೂ ಶಾಕ್ ಆಗಿದ್ದರು. ಎಂದು ಅಂದು ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದರು

ಡಿಕಾಕ್ ಅವರ ನಿರ್ಧಾರವು ಕಡಿಮೆ ಆಶ್ಚರ್ಯಕರವಲ್ಲ ಆಗ ಧೋನಿ ನಿರ್ಧಾರದಿಂದ ಆಶ್ಚರ್ಯವಾಗಿತ್ತು. ಈಗ 8 ವರ್ಷಗಳ ನಂತರ, ಕ್ವಿಂಟನ್ ಡಿ ಕಾಕ್ ಕೂಡ ಅದೇ ಕೆಲಸವನ್ನು ಮಾಡಿದ್ದಾರೆ. ಡಿ ಕಾಕ್ ಈ ವರ್ಷ ಅಲ್ಪಾವಧಿಗೆ ದಕ್ಷಿಣ ಆಫ್ರಿಕಾದ ಟೆಸ್ಟ್ ತಂಡದ ನಾಯಕರಾಗಿದ್ದರು. ಆದರೆ ಇದೀಗ ಟೆಸ್ಟ್ ಕ್ರಿಕೆಟ್ ತೊರೆಯಲು ನಿರ್ಧರಿಸಿದ್ದಾರೆ. ಅವರು ದಕ್ಷಿಣ ಆಫ್ರಿಕಾದ ಪ್ರಮುಖ ಆಟಗಾರರಲ್ಲಿ ಒಬ್ಬರು, ಎಲ್ಲಾ ಮೂರು ಸ್ವರೂಪಗಳಲ್ಲಿ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಆದಾಗ್ಯೂ, ಶೀಘ್ರದಲ್ಲೇ ತಂದೆಯಾಗುತ್ತಿರುವ ಡಿ ಕಾಕ್ ಈಗ ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ.