Virat Kohli: ಭಾರತ ಗೆದ್ದ ತಕ್ಷಣ ಮಗಳು ವಮಿಕಾ ಕಡೆ ತಿರುಗಿ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ
Kohli waving Vamika After South Africa vs India Match: ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಸಂದರ್ಭ ಭಾರತೀಯ ಆಟಗಾರರ ಖುಷಿಗೆ ಪಾರವೇ ಇರಲಿಲ್ಲ. ಅದರಲ್ಲೂ ವಿರಾಟ್ ಕೊಹ್ಲಿ ತಮ್ಮ ಮಗಳು ವಮಿಕಾ ಜೊತೆ ಖುಷಿ ಹಂಚಿಕೊಂಡಿದ್ದಾರೆ.
ಸಾಕಷ್ಟು ರೋಚಕತೆ ಸೃಷ್ಟಿಸಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಪಡೆ 113 ರನ್ಗಳ ಅಮೋಘ ಗೆಲುವು ಸಾಧಿಸಿ ವಿಶೇಷ ಸಾಧನೆ ಮಾಡಿದೆ. ಸೆಂಚೂರಿಯನ್‌ನಲ್ಲಿ ಟೆಸ್ಟ್ ಪಂದ್ಯ ಗೆದ್ದ ಏಷ್ಯಾದ ಮೊದಲ ತಂಡ ಎಂಬ ಕೀರ್ತಿಗೆ ಟೀಮ್ ಇಂಡಿಯಾ (Team India) ಭಾಜನವಾಯಿತು. ಇದರಿಂದ ನಾಯಕ ವಿರಾಟ್ ಕೊಹ್ಲಿ ಸ್ಥಾನ ಮತ್ತಷ್ಟು ಮೇಲಕ್ಕೇರಿದೆ. ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಕೊಹ್ಲಿ ಆಡಿದ ಕೆಲ ಮಾತುಗಳು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದವು. ಇದಕ್ಕೆಲ್ಲ ಕಿಂಗ್ ಕೊಹ್ಲಿ (King Kohli) ಗೆಲುವಿನ ಮೂಲಕ ತಕ್ಕ ಉತ್ತರ ಕೊಟ್ಟಿದ್ದಾರೆ. ಈ ಸ್ಮರಣೀಯ ಗೆಲುವನ್ನು ವಿರಾಟ್ ತುಂಬಾ ಸಂತಸದಿಂದ ಸಂಭ್ರಮಿಸಿದರು. ಅದರಲ್ಲೂ ಗೆದ್ದ ತಕ್ಷಣ ಮಗಳು ವಮಿಕಾ (Vamika Kohli) ಕಡೆ ನೋಡಿ ಕೊಹ್ಲಿ ಏನು ಮಾಡಿದ್ರು ಅಂತಾ ನೀವೇ ನೋಡಿ.
ಹೌದು, ಐತಿಹಾಸಿಕ ಗೆಲುವು ಸಾಧಿಸಿದ ಸಂದರ್ಭ ಭಾರತೀಯ ಆಟಗಾರರ ಖುಷಿಗೆ ಪಾರವೇ ಇರಲಿಲ್ಲ. ಅದರಲ್ಲೂ ಕೊಹ್ಲಿ ತಮ್ಮ ಮಗಳು ವಮಿಕಾ ಜೊತೆ ಖುಷಿ ಹಂಚಿಕೊಂಡಿದ್ದಾರೆ. ವಮಿಕಾ ಮತ್ತು ಕೊಹ್ಲಿ ಪತ್ನಿ ಅನುಷ್ಕಾ ನಿನ್ನೆ ಮೈದಾನದಲ್ಲಿ ಕೂತು ಪಂದ್ಯ ವೀಕ್ಷಿಸಿದ್ದರು. ಭಾರತ ಗೆದ್ದು ಆಟಗಾರರು ಪೆವಿಲಿಯನ್ ಕಡೆ ಹೋಗುತ್ತಿದ್ದ ಸಂದರ್ಭ ಕೊಹ್ಲಿ ಗ್ಯಾಲರಿ ಬಳಿ ತೆರಳಿ ಮಗಳು ವಮಿಕಾಗೆ ಚಿಯರ್ಸ್ ಸನ್ನೆ ಮಾಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗಿದೆ.
Daddy kohli waving at her princess ??#AnushkaSharma #ViratKohli #virushka pic.twitter.com/3scbHcwZJ7
— S? (@veenushkie) December 30, 2021
ವಮಿಕಾ ಮುಖವನ್ನು ಬಹಿರಂಗಪಡಿಸಿಲ್ಲ:
ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ತಮ್ಮ ಮಗಳು ವಾಮಿಕಾ ಅವರ ಮುಖವನ್ನು ಈವರೆಗೂ ಬಹಿರಂಗಪಡಿಸಿಲ್ಲ. ಅವರು ಹೇಗಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ. ಇತ್ತೀಚೆಗಷ್ಟೆ ಮಗಳು ವಮಿಕಾಳ ಫೋಟೋವನ್ನು ಪ್ರಕಟಿಸದೇ ಆಕೆಯ ಖಾಸಗಿತನವನ್ನು ಕಾಪಾಡಿರುವುದಕ್ಕೆ ನಟಿ ಅನುಷ್ಕಾ ಶರ್ಮಾ ಮಾಧ್ಯಮದವರಿಗೆ ಧನ್ಯವಾದ ಹೇಳಿದ್ದರು. ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಈ ಕುರಿತು ಅವರು ಪೋಸ್ಟ್ ಮಾಡಿ, ಮಗಳ ಫೋಟೊವನ್ನು ಹಲವರು ಕ್ಲಿಕ್ ಮಾಡಿದ್ದರು. ಆದರೆ ಅವರು ಅದನ್ನು ಪ್ರಕಟಿಸದೆ ನಮಗೆ ಸಹಕರಿಸಿದ್ದಾರೆ ಎಂದು ಹೇಳಿದ್ದರು.
ತಾರಾ ದಂಪತಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಮಗಳು ವಮಿಕಾ ಬಗ್ಗೆ ಜನರಿಗೆ ಕುತೂಹಲ ಇದೆ. ಅದಕ್ಕೆ ಕಾರಣವೇನೆಂದರೆ, ಮಗಳ ಮುಖ ಕಾಣಿಸುವಂತಹ ಫೋಟೊಗಳನ್ನು ಈವರೆಗೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಎಲ್ಲಿಯೂ ಬಹಿರಂಗಪಡಿಸಿಲ್ಲ. ಮಗಳ ಖಾಸಗಿತನ ಗೌರವಿಸಬೇಕು ಮತ್ತು ಆಕೆಗೆ ಯಾವುದೇ ತೊಂದರೆಯಾಗದಂತೆ ಎಲ್ಲರಂತೆ ಸಾಮಾನ್ಯ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎನ್ನುವುದು ಕೊಹ್ಲಿ–ಅನುಷ್ಕಾ ದಂಪತಿಯ ನಿಲುವಾಗಿದೆ.
Big Bash League: ಬಿಗ್ಬ್ಯಾಶ್ ಲೀಗ್ನಲ್ಲಿ ಕೊರೊನಾ ಸ್ಫೋಟ: 11 ಆಟಗಾರರು, 8 ಸಿಬ್ಬಂದಿಗಳಿಗೆ ಪಾಸಿಟಿವ್
South Africa vs India: ಐತಿಹಾಸಿಕ ಗೆಲುವಿನ ಖುಷಿಯಲ್ಲಿ ಹೋಟೆಲ್ಗೆ ಬಂದ ಭಾರತಕ್ಕೆ ಶಾಕ್ ನೀಡಿದ ಸಿಬ್ಬಂದಿಗಳು
(Virat Kohli was seen waving at his daughter Vamika and Anushka Sharma After South Africa vs India Test)