Big Bash League: ಬಿಗ್ಬ್ಯಾಶ್ ಲೀಗ್ನಲ್ಲಿ ಕೊರೊನಾ ಸ್ಫೋಟ: 11 ಆಟಗಾರರು, 8 ಸಿಬ್ಬಂದಿಗಳಿಗೆ ಪಾಸಿಟಿವ್
Melbourne Stars and Sydney Thunder rocked by COVID-19 cases: ಆಸ್ಟ್ರೇಲಿಯಾದ ಪ್ರಸಿದ್ಧ ಬಿಗ್ಬ್ಯಾಶ್ ಲೀಗ್ ಟೂರ್ನಿಯಲ್ಲಿ ಕೊರೊನಾ ಸ್ಫೋಟವಾಗಿದೆ. ಮೆಲ್ಬರ್ನ್ ಸ್ಟಾರ್ಸ್ ತಂಡದ 7 ಆಟಗಾರರು ಮತ್ತು 8 ಸಿಬ್ಬಂದಿಗಳಿಗೆ ಹಾಗೂ ಸಿಡ್ನಿ ಥಂಡರ್ ತಂಡದ ನಾಲ್ವರು ಆಟಗಾರರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ.
ಕ್ರಿಕೆಟ್ ವಲಯಕ್ಕೆ ಮತ್ತೆ ಕೊರೊನಾ (Corona virus) ಮಹಾಮಾರಿ ವಕ್ಕರಿಸಿದೆ. ಬಯೋ ಬಬಲ್ ಸುರಕ್ಷತೆ ಇದ್ದರೂ ಆಟಗಾರರು ಕೊರೊನಾಕ್ಕೆ ತುತ್ತಾಗುತ್ತಿದ್ದಾರೆ. ಇದೀಗ ಆಸ್ಟ್ರೇಲಿಯಾದ ಪ್ರಸಿದ್ಧ ಬಿಗ್ಬ್ಯಾಶ್ ಲೀಗ್ (Big Bash League) ಟೂರ್ನಿಯಲ್ಲಿ ಕೊರೊನಾ ಸ್ಫೋಟವಾಗಿದೆ. ಬರೋಬ್ಬರಿ 11 ಆಟಗಾರರು ಮತ್ತು 8 ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ ಎಂದು ವರದಿಯಾಗಿದೆ. ಮೆಲ್ಬರ್ನ್ ಸ್ಟಾರ್ಸ್ (Melbourne Stars) ತಂಡದ 7 ಆಟಗಾರರು ಮತ್ತು 8 ಸಿಬ್ಬಂದಿಗಳಿಗೆ ಹಾಗೂ ಸಿಡ್ನಿ ಥಂಡರ್ (Sydney Thunder) ತಂಡದ ನಾಲ್ವರು ಆಟಗಾರರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಗುರುವಾರ ಪರ್ಥ್ ಸ್ಕ್ರಾಚೆರ್ಸ್ ಮತ್ತು ಮೆಲ್ಬರ್ನ್ ಸ್ಟಾರ್ಸ್ ನಡುವೆ ಪಂದ್ಯ ನಡೆಯಬೇಕಿತ್ತು. ಆದರೆ, ಆಟಗಾರರಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದ ಕಾರಣ ಪಂದ್ಯವನ್ನು ಮುಂದೂಡಲಾಗಿದೆ. ಮೆಲ್ಬರ್ನ್ ಸ್ಟಾರ್ಸ್ ತಂಡದ ಮ್ಯಾನೇಜರ್ ಬ್ಲೈರ್ ಕ್ರೋಚ್ ಮಾತನಾಡಿ, ಇದು ವೇಗವಾಗಿ ಹರಡಿದ್ದು ಪ್ರತಿಯೊಬ್ಬರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.
“ನಮ್ಮ ಆಟಗಾರರ ಮತ್ತು ಸಿಬ್ಬಂದಿಗಳ ಆರೋಗ್ಯ, ಸುರಕ್ಷತೆಯು ಮೊದಲ ಆದ್ಯತೆಯಾಗಿದೆ. ವಿಶೇಷವಾಗಿ ಹೊಸ ಓಮಿಕ್ರಾನ್ ರೂಪಾಂತರವು ಇರುವುದರಿಂದ ಇದು ನಮಗೆ ದೊಡ್ಡ ಸವಾಲಾಗಿದೆ. ನಾವು ಆಟಗಾರರು, ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಬೇಕಾದ ಎಲ್ಲಾ ಬೆಂಬಲವನ್ನು ನೀಡುತ್ತಿದ್ದೇವೆ. ಕ್ರಿಕೆಟ್ ವಿಕ್ಟೋರಿಯಾ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಎರಡೂ ವೈದ್ಯಕೀಯ ತಂಡಗಳು ತಮ್ಮ ನಿರಂತರ ಮಾರ್ಗದರ್ಶನ ಮತ್ತು ಬೆಂಬಲ ನೀಡುತ್ತಿದ್ದಾರೆ,” ಎಂದು ಹೇಳಿದ್ದಾರೆ.
ಬಿಗ್ಬ್ಯಾಶ್ ಲೀಗ್ನ ಮ್ಯಾನೇಜರ್ ಈ ಬಗ್ಗೆ ಮಾತನಾಡಿದ್ದು, “ಟೂರ್ನಿ ಯಾವುದೇ ಕಾರಣಕ್ಕೆ ಸ್ಥಗಿತಗೊಳ್ಳುವುದಿಲ್ಲ. ಲೀಗ್ನಲ್ಲಿ ಭಾಗವಹಿಸುವವರನ್ನು ಸುರಕ್ಷಿತವಾಗಿರಿಸಲು ಹಲವಾರು ಜೈವಿಕ-ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಹೊಂದಿದ್ದೇವೆ. ಸುರಕ್ಷತೆಯು ನಮ್ಮ ಮೊದಲ ಆದ್ಯತೆಯಾಗಿದೆ. ಸಾಧ್ಯವಾದಷ್ಟು ಬೇಗ ಪಾಸಿಟಿವ್ ಬಂದ ತಂಡವನ್ನು ಮೈದಾನಕ್ಕೆ ಹಿಂತಿರುಗಿಸಲು ಕೆಲಸ ಮಾಡುತ್ತೇವೆ,” ಎಂದು ಅಲಿಸ್ಟರ್ ಡಬ್ಸನ್ ಹೇಳಿದ್ದಾರೆ.
ಆ್ಯಶಸ್ಗೂ ತಟ್ಟಿದ ಕೊರೊನಾ ಬಿಸಿ:
ಹೌದು, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿ ನಡೆಯುತ್ತಿದ್ದು ನಾಲ್ಕನೇ ಟೆಸ್ಟ್ ಪಂದ್ಯದ ಆರಂಭಕ್ಕೆ ಮುನ್ನ ಕೊರೊನಾ ವೈರಸ್ ಆಘಾತ ನೀಡಿದೆ. ಆಸ್ಟ್ರೇಲಿಯಾ ತಂಡದ ಆಟಗಾರ ಟ್ರೆವೀಸ್ ಹೆಡ್ ಕೊರೊನಾ ವೈರಸ್‌ಗೆ ತುತ್ತಾಗಿರುವುದು ದೃಢಪಟ್ಟಿದೆ. ಹೀಗಾಗಿ ಸಿಡ್ನಿಗೆ ತೆರಳಬೇಕಿದ್ದ ಆಸಿಸ್ ಆಟಗಾರರ ಪ್ರಯಾಣ ತಡವಾಗಿದೆ. ಟ್ರೆವೀಸ್ ಹೆಡ್ ಕೊರೊನಾ ವೈರಸ್ ಪಾಸಿಟಿವ್ ವರದಿಯನ್ನು ಪಡೆದುಕೊಂಡಿರುವ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಖಚಿತಪಡಿಸಿದೆ. ಶುಕ್ರವಾರ ಬೆಳಿಗ್ಗೆ ಈ ಬಗ್ಗೆ ಮಾಧ್ಯಮ ಪ್ರಕಟಣೆಯ ಮೂಲಕ ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿಯನ್ನು ನೀಡಿದೆ. ಕ್ರಿಕೆಟ್ ಆಸ್ಟ್ರೇಲಿಯಾ ನೀಡಿರುವ ಮಾಹಿತಿಯ ನಾಲ್ಕನೇ ಟೆಸ್ಟ್‌ಗೆ ಟ್ರೆವಿಸ್ ಹೆಡ್ ಅಲಭ್ಯವಾಗಲಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ಅನುಭವಿ ಆಟಗಾರ ಉಸ್ಮಾನ್ ಖವಾಜ ಕಣಕ್ಕಿಳಿಯುವುದು ಬಹುತೇಖ ಖಚಿತವಾಗಿದೆ.
South Africa vs India: ಐತಿಹಾಸಿಕ ಗೆಲುವಿನ ಖುಷಿಯಲ್ಲಿ ಹೋಟೆಲ್ಗೆ ಬಂದ ಭಾರತಕ್ಕೆ ಶಾಕ್ ನೀಡಿದ ಸಿಬ್ಬಂದಿಗಳು
Pro Kabaddi League: ಪವನ್ ಪವರ್: ಹರ್ಯಾಣಕ್ಕೆ ಮಣ್ಣು ಮುಕ್ಕಿಸಿದ ಬೆಂಗಳೂರು ಬುಲ್ಸ್ಗೆ ಹ್ಯಾಟ್ರಿಕ್ ಜಯ
(Big Bash League rocked by a raft of COVID-19 cases with 7 players and 7 support staff members)