South Africa vs India: ಐತಿಹಾಸಿಕ ಗೆಲುವಿನ ಖುಷಿಯಲ್ಲಿ ಹೋಟೆಲ್ಗೆ ಬಂದ ಭಾರತಕ್ಕೆ ಶಾಕ್ ನೀಡಿದ ಸಿಬ್ಬಂದಿಗಳು
Team India celebration: ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಅಮೋಘ ಗೆಲುವು ಸಾಧಿಸಿ ಮೈದಾನದಲ್ಲಿ ಎಲ್ಲ ಕಾರ್ಯಕ್ರಮ ಮುಗಿಸಿ ತಾವು ತಂಗುತ್ತಿದ್ದ ಇರೇಲಾ ಲಾಡ್ಜ್ ಹೋಟೆಲ್ಗೆ ಬಂದಾಗ ವಿರಾಟ್ ಕೊಹ್ಲಿ ಪಡೆಗೆ ಅಚ್ಚರಿಯೊಂದು ಕಾದಿತ್ತು.
ಅಂದುಕೊಂಡಂತೆ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ (India vs South Africa) ಐತಿಹಾಸಿಕ ಗೆಲುವು ಸಾಧಿಸಿದೆ. ಟೀಮ್ ಇಂಡಿಯಾದ (Team India) ತ್ರಿವಳಿ ವೇಗಿಗಳಾದ ಜಸ್‌ಪ್ರೀತ್ ಬುಮ್ರಾ (jasprit Bumrah), ಮೊಹಮ್ಮದ್ ಶಮಿ (Shami) ಮತ್ತು ಮೊಹಮ್ಮದ್ ಸಿರಾಜ್ ಅವರ ಬೆಂಕಿ ಚೆಂಡಿಗೆ ತರಗೆಲೆಯಂತೆ ಉರುಳಿದ ಆಫ್ರಿಕಾ ಬ್ಯಾಟರ್ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಪಂದ್ಯದಲ್ಲಿ ಹರಿಣಗಳ ವಿರುದ್ದ 113 ರನ್‌ಗಳ ಭರ್ಜರಿ ಗೆಲುವು ಪಡೆದು ಸೆಂಚೂರಿಯನ್‌ನಲ್ಲಿ ಟೆಸ್ಟ್ ಗೆದ್ದ ಏಷ್ಯಾದ ಮೊದಲ ತಂಡ ಎಂಬ ಕೀರ್ತಿಗೆ ವಿರಾಟ್ ಕೊಹ್ಲಿ (Virat Kohli) ಪಡೆ ಭಾಜನವಾಯಿತು. ಬೊಂಬಾಟ್ ಗೆಲುವಿನ ಖುಷಿಯಲ್ಲಿ ಮೈದಾನದಿಂದ ಹೋಟೆಲ್ಗೆ ಬಂದ ಟೀಮ್ ಇಂಡಿಯಾ ಆಟಗಾರರಿಗೆ ಅಲ್ಲೊಂದು ಶಾಕ್ ಕಾದಿತ್ತು. ಹೋಟೆಲ್ ಸಿಬ್ಬಂದಿಗಳು ಕೊಹ್ಲಿ ಪಡೆಗೆ ಸರ್ಪ್ರೈಸ್ ನೀಡಿದರು. ಆಟಗಾರರ ಇದನ್ನು ಕನಸಿನಲ್ಲೂ ಊಹಿಸಿರಲಿಲ್ಲವಂತೆ.
ಹೌದು, ವರುಣನ ಭಯದ ನಡುವೆ ಐದನೇ ದಿನದಾಟ ಆರಂಭಿಸಿದ ಭಾರತಕ್ಕೆ ಯಾವುದೇ ಅಡೆತಡೆ ಸಿಗಲಿಲ್ಲ. ಮಳೆಯಂತು ಸೆಂಚುರಿಯನ್ ಕಡೆ ತಲೆಹಾಕಿಯೂ ಮಲಗಲಿಲ್ಲ. ಈ ಅಮೋಘ ಗೆಲುವಿನೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಯಿಂದ ಮುನ್ನಡೆ ಪಡೆದುಕೊಂಡಿತು. ಮೈದಾನದಲ್ಲಿ ಎಲ್ಲ ಕಾರ್ಯಕ್ರಮ ಮುಗಿಸಿ ತಾವು ತಂಗುತ್ತಿದ್ದ ಇರೇಲಾ ಲಾಡ್ಜ್ ಹೋಟೆಲ್ಗೆ ಬಂದಾಗ ಭಾರತೀಯರಿಗೆ ಅಚ್ಚರಿಯೊಂದು ಕಾದಿತ್ತು.
ಹೋಟೆಲ್ನ ಎಲ್ಲ ಸಿಬ್ಬಂದಿಗಳು ಭಾರತದ ಆಟಗಾರರಿಗೆ ವಿಶೇಷವಾಗಿ ಸ್ವಾಗತಿಸಲು ಸಜ್ಜಾಗಿ ನಿಂತಿದ್ದರು. ಸೌತ್ ಆಫ್ರಿಕಾದ ಪ್ರಸಿದ್ಧ ಝುಲು ಡ್ಯಾನ್ಸ್ ಮಾಡಿ ಟೀಮ್ ಇಂಡಿಯಾದವರನ್ನು ಹೋಟೆಲ್ ಒಳಗಡೆ ಸಿಬ್ಬಂದಿಗಳು ವೆಲ್ಕಮ್ ಮಾಡಿದರು. ಇವರ ಜೊತೆ ಚೇತೇಶ್ವರ್ ಪೂಜಾರ, ಮೊಹಮ್ಮದ್ ಸಿರಾಜ್ ಮತ್ತು ಆರ್. ಅಶ್ವಿನ್ ಕೂಡ ಒಂದೆರಡು ಹೆಜ್ಜೆ ಹಾಕಿ ಖುಷಿ ಪಟ್ಟರು. ಅಶ್ವಿನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
View this post on Instagram
ಗುರುವಾರ ಬೆಳಗ್ಗೆ 4 ವಿಕೆಟ್ ಕಳೆದುಕೊಂಡು ಪಂದ್ಯದ ಐದನೇ ದಿನದಾಟ ಶುರು ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ ಗೆಲುವಿಗೆ 211 ರನ್ ಅಗತ್ಯವಿತ್ತು. ಆದರೆ, ಭಾರತದ ಬೌಲಿಂಗ್ ದಾಳಿಯನ್ನು ಮೆಟ್ಟಿನಿಲ್ಲುವಲ್ಲಿ ವಿಫಲವಾದ ದಕ್ಷಿಣ ಆಫ್ರಿಕಾ ತಂಡ 68 ಓವರ್‌ಗಳಿಗೆ 191 ರನ್‌ಗಳಿಗೆ ಆಲ್‌ಔಟ್ ಆಗಿ ಸೋಲು ಒಪ್ಪಿಕೊಂಡಿತು. ದಕ್ಷಿಣ ಆಫ್ರಿಕಾದಲ್ಲಿ ಭಾರತಕ್ಕೆ ನಾಲ್ಕನೇ ಟೆಸ್ಟ್ ಗೆಲುವು ಇದಾಯಿತು.
ಈ ಪಂದ್ಯದಲ್ಲಿ ಭಾರತದ ಮಧ್ಯಮವೇಗಿಗಳು ಒಟ್ಟು 18 ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ ಕೆ.ಎಲ್. ರಾಹುಲ್ ಪಂದ್ಯಶ್ರೇಷ್ಠ ಗೌರವ ಗಳಿಸಿದರು. ಭಾರತ ಈ ಗೆಲುವಿನೊಂದಿಗೆ ಸರಣಿಯಲ್ಲಿ ಮುನ್ನಡೆ ಪಡೆಯುವುದರ ಜೊತೆಗೆ ವಿಶ್ವ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ಗೆ ಅಮೂಲ್ಯ 12 ಅಂಕಗಳನ್ನೂ ಬಾಚಿಕೊಂಡಿತು.
Pro Kabaddi League: ಪವನ್ ಪವರ್: ಹರ್ಯಾಣಕ್ಕೆ ಮಣ್ಣು ಮುಕ್ಕಿಸಿದ ಬೆಂಗಳೂರು ಬುಲ್ಸ್ಗೆ ಹ್ಯಾಟ್ರಿಕ್ ಜಯ
(Virat Kohli Team were welcomed with Zulu dance at Irene Lodge after Team India scripted history)