AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sourav Ganguly: ಆಸ್ಪತ್ರೆಯಿಂದ ದಾದಾ ಡಿಸ್ಚಾರ್ಜ್; ಕೊರೊನಾ ಸೋಂಕಿತ ಗಂಗೂಲಿಗೆ ಮನೆಯಲ್ಲೇ ಚಿಕಿತ್ಸೆ

Sourav Ganguly: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೋಲ್ಕತ್ತಾದ ವುಡ್‌ಲ್ಯಾಂಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ ಪಾಸಿಟಿವ್ ಆದ ನಂತರ ಗಂಗೂಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದಿಗೂ ಅವರು ಕೊರೊನಾದಿಂದ ಗುಣಮುಖವಾಗಿಲ್ಲ

Sourav Ganguly: ಆಸ್ಪತ್ರೆಯಿಂದ ದಾದಾ ಡಿಸ್ಚಾರ್ಜ್; ಕೊರೊನಾ ಸೋಂಕಿತ ಗಂಗೂಲಿಗೆ ಮನೆಯಲ್ಲೇ ಚಿಕಿತ್ಸೆ
ಸೌರವ್ ಗಂಗೂಲಿ
TV9 Web
| Updated By: ಪೃಥ್ವಿಶಂಕರ|

Updated on: Dec 31, 2021 | 2:31 PM

Share

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೋಲ್ಕತ್ತಾದ ವುಡ್‌ಲ್ಯಾಂಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ ಪಾಸಿಟಿವ್ ಆದ ನಂತರ ಗಂಗೂಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದಿಗೂ ಅವರು ಕೊರೊನಾದಿಂದ ಗುಣಮುಖವಾಗಿಲ್ಲ. ಆದರೆ ಈಗ ಅವರ ಚಿಕಿತ್ಸೆ ಮನೆಯಲ್ಲೇ ನಡೆಯಲಿದೆ. ಭಾರತದ ಮಾಜಿ ನಾಯಕನಿಗೆ ಈಗ ಕೊರೊನಾ ಸೌಮ್ಯ ಲಕ್ಷಣಗಳಿವೆ. ಇದೇ ಕಾರಣಕ್ಕೆ ಅವರನ್ನು ಡಿಸ್ಚಾರ್ಜ್ ಮಾಡಲು ಆಸ್ಪತ್ರೆ ನಿರ್ಧರಿಸಿದೆ.

3 ದಿನಗಳ ಹಿಂದೆ ಬಿಸಿಸಿಐ ಅಧ್ಯಕ್ಷ ಕೊರೊನಾ ಪಾಸಿಟಿವ್ ಎಂಬ ಸುದ್ದಿ ಬಂದಿದ್ದು, ನಂತರ ಅವರನ್ನು ವುಡ್‌ಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೌರವ್ ಗಂಗೂಲಿ ಆಸ್ಪತ್ರೆಯಲ್ಲಿ 2 ದಿನಗಳ ಚಿಕಿತ್ಸೆಯ ನಂತರ ಡಿಸ್ಚಾರ್ಜ್ ಆಗಿದ್ದಾರೆ. ಈ ವರ್ಷ ಗಂಗೂಲಿ ಆಸ್ಪತ್ರೆಗೆ ದಾಖಲಾಗಿದ್ದು ಇದು ಎರಡನೇ ಬಾರಿ. ಇದಕ್ಕೂ ಮೊದಲು, ವರ್ಷದ ಆರಂಭದಲ್ಲಿ ಅಂದರೆ ಜನವರಿ 2021 ರಲ್ಲಿ, ಅವರು ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ದೀರ್ಘಕಾಲ ಉಳಿಯಬೇಕಾಯಿತು.

ವೈದ್ಯರ ಕಣ್ಣು ನಿರಂತರವಾಗಿ ಗಂಗೂಲಿಯವರ ಆರೋಗ್ಯದ ಮೇಲಿತ್ತು ವುಡ್‌ಲ್ಯಾಂಡ್ ಆಸ್ಪತ್ರೆಯ ವೈದ್ಯರು ಸೌರವ್ ಗಂಗೂಲಿ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ. ಇಲ್ಲಿ ಅಭಿಮಾನಿಗಳು ಕೂಡ ಅವರು ಬೇಗ ಗುಣಮುಖರಾಗಿ ಮನೆಗೆ ಮರಳಲಿ ಎಂದು ಹಾರೈಸುತ್ತಿದ್ದರು. ವೈದ್ಯರ ಶ್ರಮ ಹಾಗೂ ಅಭಿಮಾನಿಗಳ ಪ್ರಾರ್ಥನೆಗೆ ರಂಗು ತುಂಬಿ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದಾಗ್ಯೂ, ಅವರು ಕೊರೊನಾದಿಂದ ಸಂಪೂರ್ಣವಾಗಿ ಗುಣವಾಗುವವರೆಗೆ ಅವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ.