AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ವಿರಾಟ್ ಕೂಡಲೇ ಸಚಿನ್​ಗೆ ಕರೆ ಮಾಡಲಿ; ಕೊಹ್ಲಿ ಕಳಪೆ ಫಾರ್ಮ್​ಗೆ ಪರಿಹಾರ ಸೂಚಿಸಿದ ಗವಾಸ್ಕರ್

Virat Kohli: ವಿರಾಟ್ 11 ಟೆಸ್ಟ್‌ಗಳಲ್ಲಿ ಕೇವಲ 28.21 ಸರಾಸರಿಯಲ್ಲಿ 536 ರನ್ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ ಕೇವಲ 4 ಅರ್ಧಶತಕಗಳು ಮಾತ್ರ ಹೊರಬಂದವು. 2021 ರಲ್ಲಿಯೂ ಸಹ, ವಿರಾಟ್ ಕೊಹ್ಲಿ ಅವರ ಟೆಸ್ಟ್ ಸರಾಸರಿ 20 ಕ್ಕಿಂತ ಕಡಿಮೆ ಇತ್ತು.

IND vs SA: ವಿರಾಟ್ ಕೂಡಲೇ ಸಚಿನ್​ಗೆ ಕರೆ ಮಾಡಲಿ; ಕೊಹ್ಲಿ ಕಳಪೆ ಫಾರ್ಮ್​ಗೆ ಪರಿಹಾರ ಸೂಚಿಸಿದ ಗವಾಸ್ಕರ್
ಕೊಹ್ಲಿ
Follow us
TV9 Web
| Updated By: ಪೃಥ್ವಿಶಂಕರ

Updated on: Dec 31, 2021 | 4:24 PM

2020ರಲ್ಲಿ ಫೇಲ್ ಆದ ಬ್ಯಾಟ್ 2021ರಲ್ಲೂ ಮೌನವಾಗಿತ್ತು.. 2 ವರ್ಷದಿಂದ ವಿರಾಟ್ ಕೊಹ್ಲಿ ಶತಕ ಸಿಡಿಸಿಲ್ಲ. ಕ್ರೀಸ್‌ಗೆ ಇಳಿದ ತಕ್ಷಣ ರನ್‌ಗಳ ಮಳೆ ಸುರಿಸುತ್ತಿದ್ದ ಆಟಗಾರ. ಯಾವ ಆಟಗಾರನ ಮುಂದೆ ದೊಡ್ಡ ಬೌಲರ್‌ಗಳು ಬೌಲಿಂಗ್ ಮಾಡಲು ಹೆದರುತ್ತಿದ್ದರೋ, ಈಗ ಅದೇ ಆಟಗಾರ ಶತಕದ ಹಂಬಲದಲ್ಲಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ವಿರಾಟ್ ಕೊಹ್ಲಿಯ ಬ್ಯಾಟ್ ಅಂತರಾಷ್ಟ್ರೀಯ ಶತಕ ಬಾರಿಸಿರಲಿಲ್ಲ. ವರ್ಷದ ಕೊನೆಯ ಟೆಸ್ಟ್‌ನಲ್ಲೂ ವಿರಾಟ್‌ನ ಈ ತೊಂದರೆ ಮುಂದುವರಿದಿತ್ತು. ಸೆಂಚುರಿಯನ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಕೊಹ್ಲಿ ವಿಫಲರಾಗಿದ್ದರು.

ವಿರಾಟ್ ಕೊಹ್ಲಿ ಔಟ್ ಆಗುತ್ತಿರುವ ರೀತಿ ನಿಜಕ್ಕೂ ಆತಂಕಕಾರಿ. ವಿರಾಟ್ ಅವರ ಈ ಕಳಪೆ ಫಾರ್ಮ್ ಬಗ್ಗೆ ಮಾಜಿ ನಾಯಕ ಮತ್ತು ವೀಕ್ಷಕ ವಿವರಣೆಗಾರ ಸುನಿಲ್ ಗವಾಸ್ಕರ್ ಅವರು ಭಾರತೀಯ ಟೆಸ್ಟ್ ನಾಯಕನಿಗೆ ಆಸಕ್ತಿದಾಯಕ ಸಲಹೆಯನ್ನು ನೀಡಿದ್ದಾರೆ. ವಿರಾಟ್ ಕೊಹ್ಲಿ ಅವರು ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ಹೊಸ ವರ್ಷದ ಶುಭಾಶಯ ಕೋರಿದರೆ ಅವರ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಸಚಿನ್‌ಗೆ ಹೊಸ ವರ್ಷದ ಶುಭಾಶಯಗಳನ್ನು ಹೇಳುವ ಮೂಲಕ ಕೆಟ್ಟ ಫಾರ್ಮ್ ಕೊನೆಗೊಳ್ಳುತ್ತದೆಯೇ? ಸೆಂಚುರಿಯನ್ ಟೆಸ್ಟ್ ಮುಗಿದ ನಂತರ ವಿರಾಟ್ ಕೊಹ್ಲಿಗೆ ಸುನಿಲ್ ಗವಾಸ್ಕರ್ ಆಸಕ್ತಿದಾಯಕ ಸಲಹೆ ನೀಡಿದರು. ಸುನಿಲ್ ಗವಾಸ್ಕರ್, ‘ಸಚಿನ್ ತೆಂಡೂಲ್ಕರ್‌ಗೆ ವಿರಾಟ್ ಹೊಸ ವರ್ಷದ ಶುಭಾಶಯ ಕೋರಿದರೆ ಅದು ತುಂಬಾ ಒಳ್ಳೆಯದು. ಅವರಿಬ್ಬರ ಸಂಭಾಷಣೆಯ ಸಮಯದಲ್ಲಿ, ಸಚಿನ್ ಅವರ ಆಫ್-ಸೈಡ್ ಹೊಡೆತಗಳನ್ನು ಹೇಗೆ ಆಡಬೇಕು ಎಂಬುದರ ಬಗ್ಗೆ ಕೊಹ್ಲಿಗೆ ಸಲಹೆ ನೀಡಬಹುದು. 2003-04ರ ಆಸ್ಟ್ರೇಲಿಯ ಪ್ರವಾಸದ ವೇಳೆ ಸ್ವತಃ ಸಚಿನ್ ಕೂಡ ವಿರಾಟ್​ರಂತೆ ತೊಂದರೆ ಪಡುತ್ತಿದ್ದರು. ಸಚಿನ್ ಕವರ್ ಮತ್ತು ವಿಕೆಟ್‌ಗಳ ಹಿಂದೆ ನಿರಂತರವಾಗಿ ಔಟ್ ಆಗುತ್ತಿದ್ದರು. ಅದರ ನಂತರ ನಾಲ್ಕನೇ ಟೆಸ್ಟ್‌ನಲ್ಲಿ, ಸಚಿನ್ ಆಫ್ ಸೈಡ್‌ನಲ್ಲಿ ಶಾಟ್‌ಗಳನ್ನು ಆಡದೆ ಇರುವುದಕ್ಕೆ ನಿರ್ಧರಿಸಿದರು. ಇದಾದ ಬಳಿಕ ನಾಲ್ಕನೇ ಟೆಸ್ಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಔಟಾಗದೆ 241 ರನ್‌ಗಳ ಇನ್ನಿಂಗ್ಸ್‌ ಆಡಿದರು. ಸಚಿನ್ ತೆಂಡೂಲ್ಕರ್ ಅವರೊಂದಿಗೆ ಮಾತನಾಡುವಾಗ ವಿರಾಟ್ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಇದನ್ನು ಹೇಗೆ ಮಾಡಿದರು ಎಂದು ತಿಳಿದುಕೊಳ್ಳಬೇಕು ಎಂದು ಗವಾಸ್ಕರ್ ಹೇಳಿದರು.

ಸೆಂಚುರಿಯನ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಕೊಹ್ಲಿ ಆಫ್ ಸೈಡ್​ ಬಾಲ್​ಗೆ ಔಟಾದರು. ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 10 ನೇ ಸ್ಟಂಪ್‌ನ ಬಾಲ್‌ನಲ್ಲಿ ಶಾಟ್ ಆಡಲು ಪ್ರಯತ್ನಿಸಿದರು, ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 8 ನೇ ಸ್ಟಂಪ್‌ನ ಬಾಲ್ ಅನ್ನು ಆಡುವ ಯತ್ನದಲ್ಲಿ ವಿಕೆಟ್ ಕಳೆದುಕೊಂಡರು.

ವಿರಾಟ್‌ಗೆ 2021 ದುರದೃಷ್ಟಕರ ವರ್ಷ 2021 ರ ವರ್ಷವು ವಿರಾಟ್ ಕೊಹ್ಲಿಗೆ ತುಂಬಾ ಕೆಟ್ಟದಾಗಿದೆ. ವಿರಾಟ್ 11 ಟೆಸ್ಟ್‌ಗಳಲ್ಲಿ ಕೇವಲ 28.21 ಸರಾಸರಿಯಲ್ಲಿ 536 ರನ್ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ ಕೇವಲ 4 ಅರ್ಧಶತಕಗಳು ಮಾತ್ರ ಹೊರಬಂದವು. 2021 ರಲ್ಲಿಯೂ ಸಹ, ವಿರಾಟ್ ಕೊಹ್ಲಿ ಅವರ ಟೆಸ್ಟ್ ಸರಾಸರಿ 20 ಕ್ಕಿಂತ ಕಡಿಮೆ ಇತ್ತು. ವಿರಾಟ್ ಕೊಹ್ಲಿ ಹೊಸ ವರ್ಷದಿಂದ ಹೊಸ ಆರಂಭವನ್ನು ಮಾಡುತ್ತಾರೆ ಮತ್ತು ಅವರ ಶತಕಗಳ ಬರವು ಕೊನೆಗೊಳ್ಳುತ್ತದೆ ಎಂದು ಭಾವಿಸುತ್ತೇವೆ.