IND vs SA: ಸೆಂಚುರಿಯನ್ ಟೆಸ್ಟ್ ಗೆಲುವಿನ ಬಳಿಕ ಹೋಟೆಲ್ ಸಿಬ್ಬಂದಿಗಳೊಂದಿಗೆ ಕುಣಿದು ಕುಪ್ಪಳಿಸಿದ ಕೊಹ್ಲಿ! ವಿಡಿಯೋ
IND vs SA: ಕೊಹ್ಲಿ ಕೆಳಗಿಳಿದ ಕೂಡಲೇ ಸಿಬ್ಬಂದಿಗಳ ಜೊತೆ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದಾರೆ. ಒಂದು ಕೈಯಲ್ಲಿ ಜಾಕೆಟ್ ಹಿಡಿದುಕೊಂಡು ಕೊಹ್ಲಿ ಆ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಏಕದಿನ ಪಂದ್ಯದ ನಾಯಕತ್ವವನ್ನು ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಕಳೆದುಕೊಂಡಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ, ಕೊಹ್ಲಿಗೆ ತನ್ನನ್ನು ತಾನು ಸಾಬೀತುಪಡಿಸುವ ಅವಕಾಶವಿತ್ತು. ಸೆಂಚುರಿಯನ್‌ನಲ್ಲಿ ಐತಿಹಾಸಿಕ ವಿಜಯದ ನಂತರ ಅವರು ಅದನ್ನು ಸಾಭೀತುಪಡಿಸಿದ್ದಾರೆ. ಗೆಲುವಿನ ಖುಷಿಯಲ್ಲಿ ಹೋಟೆಲ್‌ಗೆ ಆಗಮಿಸಿದ ಕೊಹ್ಲಿ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ದು, ಕೊಹ್ಲಿ ಡಾನ್ಸ್ ಮಾಡಿದ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಸೆಂಚುರಿಯನ್ ಟೆಸ್ಟ್‌ನಲ್ಲಿ ಭಾರತ 113 ರನ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. 2014ರ ನಂತರ ಇದೇ ಮೊದಲ ಬಾರಿಗೆ ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ಸೋಲನ್ನು ಎದುರಿಸಬೇಕಾಯಿತು. ಈ ಮೈದಾನದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ಏಷ್ಯಾದ ಮೊದಲ ತಂಡ ಟೀಂ ಇಂಡಿಯಾ. ಕೊಹ್ಲಿಯ ಬ್ಯಾಟ್ ಶಾಂತವಾಗಿರಬಹುದು ಆದರೆ ನಾಯಕನಾಗಿ, ಅವರು ತಮ್ಮ ಕಡೆಯಿಂದ ಮತ್ತೊಂದು ಐತಿಹಾಸಿಕ ವಿಜಯವನ್ನು ದಾಖಲಿಸಿದರು. ಹೀಗಾಗಿ ಅವರ ಸಂತೋಷವು ಪಂದ್ಯದ ನಂತರ ಸ್ಪಷ್ಟವಾಗಿ ಗೋಚರಿಸಿತು.
ಕೊಹ್ಲಿ ಡ್ಯಾನ್ಸ್ ವಿಡಿಯೋ ವೈರಲ್ ಪಂದ್ಯ ಮುಗಿಸಿ ಹೋಟೆಲ್‌ಗೆ ಆಗಮಿಸಿದ ಟೀಂ ಇಂಡಿಯಾವನ್ನು ಹೋಟೆಲ್ ಸಿಬ್ಬಂದಿ ಸ್ವಾಗತ ಕೋರಿದರು. ಈ ವಿಡಯೋದಲ್ಲಿ ಸಿಬ್ಬಂದಿಗಳು ಪಿಪಿಇ ಕಿಟ್‌ಗಳನ್ನು ಧರಿಸಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಕೊಹ್ಲಿ ಕೆಳಗಿಳಿದ ಕೂಡಲೇ ಸಿಬ್ಬಂದಿಗಳ ಜೊತೆ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದಾರೆ. ಒಂದು ಕೈಯಲ್ಲಿ ಜಾಕೆಟ್ ಹಿಡಿದುಕೊಂಡು ಕೊಹ್ಲಿ ಆ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದಾರೆ. ಕೊಹ್ಲಿ ಜೊತೆಗೆ ಟೀಂ ಇಂಡಿಯಾದ ಹಲವು ಆಟಗಾರರು ಕೂಡ ಇದನ್ನು ಆನಂದಿಸುತ್ತಿರುವುದು ಕಂಡುಬಂದಿದೆ. ಪೂಜಾರ ಅಶ್ವಿನ್ ಮತ್ತು ಮೊಹಮ್ಮದ್ ಸಿರಾಜ್ ಅವರ ಡ್ಯಾನ್ಸ್ ವಿಡಿಯೋ ಕೂಡ ವೈರಲ್ ಆಗಿದೆ.
Waking up after historic overseas test win be like ???❤️@imVkohli #ViratKohli pic.twitter.com/fDdBdHVW2q
— “ (@KohlifiedGal) December 31, 2021
ಭಾರತಕ್ಕಿಂತ ಮೊದಲು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮಾತ್ರ ಸೆಂಚುರಿಯನ್ ಮೈದಾನದಲ್ಲಿ ಆಫ್ರಿಕಾವನ್ನು ಸೋಲಿಸಲು ಶಕ್ತವಾಗಿದ್ದವು. 2014ರಲ್ಲಿ ಇಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಆಫ್ರಿಕಾ ತಂಡ ಸೋತಿತ್ತು.ಆಗ ಆಸ್ಟ್ರೇಲಿಯಾ ಅವರನ್ನು ಸೋಲಿಸಿತ್ತು. ಇದೀಗ 7 ವರ್ಷಗಳ ನಂತರ ಭಾರತವು ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಅಜೇಯ ಎಂಬ ದಕ್ಷಿಣ ಆಫ್ರಿಕಾದ ಗೆರೆಯನ್ನು ಮುರಿದಿದೆ. ಇದು ದಕ್ಷಿಣ ಆಫ್ರಿಕಾದಲ್ಲಿ ಭಾರತಕ್ಕೆ ನಾಲ್ಕನೇ ಟೆಸ್ಟ್ ಗೆಲುವು.