ಇತ್ತೀಚೆಗಷ್ಟೆ ಟೋಕಿಯೋ ಒಲಿಂಪಿಕ್ಸ್ (Tokyo Olympics) 2020ಕ್ಕೆ ಅದ್ದೂರಿಯಾಗಿ ತೆರೆ ಬಿದ್ದಿತು. ಆದರೆ, ನಿಮಗೆ ಒಂದು ವಿಷಯ ಗೊತ್ತಾ? ಈ ಹಿಂದೆ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕೂಡ ಆಡಿಸಲಾಗಿತ್ತು. ನಡೆದಿದ್ದು ಮಾತ್ರ ಒಂದೇ ಒಂದು ಪಂದ್ಯ ಅದು 1900ರ ಒಲಿಂಪಿಕ್ಸ್ನ (Olympics 1900) ಈ ದಿನ ಆಗಸ್ಟ್ 20 ರಂದು. 1900ರಲ್ಲಿ ಪ್ಯಾರಿಸ್ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಆಡಿಸಲಾಗಿತ್ತು. ಈ ವೇಳೆ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ (Great Britain vs France) ತಂಡಗಳು ಭಾಗವಹಿಸಿದ್ದವು. ಆದರೆ ನಂತರದ ದಿನಗಳಲ್ಲಿ ಕ್ರಿಕೆಟ್ ಅನ್ನ ಕೈಬಿಡಲಾಯಿತು.
ಈ ಸಂದರ್ಭದಲ್ಲಿ ಕೇವಲ 2 ಕ್ರಿಕೆಟ್ ತಂಡಗಳು ಮಾತ್ರವೇ ಕ್ರಿಕೆಟ್‌ನಲ್ಲಿ ಪದಕ್ಕಾಗಿ ಭಾಗವಹಿಸಿದ್ದವು. ಫ್ರಾನ್ಸ್ ಹಾಗೂ ಗ್ರೇಟ್ ಬ್ರಿಟನ್ ತಂಡಗಳು ಪದಕಕ್ಕಾಗಿ ಸ್ಪರ್ಧೆಗಿಳಿದ್ದವು. ಸೀಮಿತ ಓವರ್‌ಗಳ ಕ್ರಿಕೆಟ್‌ನ ಕಲ್ಪನೆಯಿಲ್ಲದ ಆ ದಿನಗಳಲ್ಲಿ ಎರಡು ದಿನಗಳ ಕ್ರಿಕೆಟ್ ಪಂದ್ಯವನ್ನು ಒಲಿಂಪಿಕ್ಸ್‌ನಲ್ಲಿ ಆಯೋಜಿಸಲಾಗಿತ್ತು.
ಈ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ 158 ರನ್ಗಳಿಂದ ಫ್ರಾನ್ಸ್ ತಂಡವನ್ನ ಮಣಿಸಿತ್ತು. ಮೊದಲ ಬ್ಯಾಟ್ ಮಾಡಿದ್ದ ಬ್ರಿಟನ್ 117 ರನ್ಗಳಿಸಿತ್ತು. ಈ ಸಂದರ್ಭದಲ್ಲಿ ಫೆಡರಿಕ್ ಕಮ್ಮಿಂಗ್ ಅತ್ಯಧಿಕ 38 ರನ್ಗಳಿಸಿದವರು.
ಇದಕ್ಕೆ ಉತ್ತರವಾಗಿ ಫಸ್ಟ್ ಇನ್ನಿಂಗ್ಸ್ ಆರಂಭಿಸಿದ್ದ ಫ್ರಾನ್ಸ್ 78 ರನ್ಗಳಿಸಿ ಹಿನ್ನಡೆ ಅನುಭವಿಸಿತ್ತು. ವಿಶೇಷ ಅಂದರೆ ಲಂಡನ್ ಫೆಡರಿಕ್ ಈ ಪಂದ್ಯದಲ್ಲಿ ಬರೋಬ್ಬರಿ 7 ವಿಕೆಟ್ ಪಡೆದು ಮಿಂಚಿದ್ದರು. ನಂತರ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದ ಬ್ರಿಟನ್ 145 ರನ್ ಕಲೆ ಹಾಕುವಲ್ಲಿ ಯಶಸ್ವಿಯಾಗಿತ್ತು. ಆದರೆ ಫ್ರಾನ್ಸ್ ಎರಡನೇ ಇನ್ನಿಂಗ್ಸ್ನಲ್ಲಿ 26 ರನ್ಗಳಿಸಿ ಸೋಲನ್ನ ಅನುಭವಿಸಿತು.
ಈಗಿರುವ ನಿಯಮದಂತೆ ಆಗಿನ ಪಂದ್ಯ ಇರಲಿಲ್ಲ. ಪ್ರತಿ ತಂಡದಲ್ಲಿ 12 ಆಟಗಾರರು ಇರುತ್ತಿದ್ದರು. ವಿಶೇಷ ಎಂದರೆ ಈ ಒಲಿಂಪಿಕ್ಸ್‌ನಲ್ಲಿ ಆಡಿದ ಕ್ರಿಕೆಟಿಗರು ತಮ್ಮ ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲಿಲ್ಲ. ಈ ಪಂದ್ಯದಲ್ಲಿ ಬ್ರಿಟನ್ 158 ರನ್ಗಳ ಭರ್ಜರಿ ಜಯ ಸಾಧಿಸಿ ಬೆಳ್ಳೆ ಪದಕಕ್ಕೆ ಮುತ್ತಿಟ್ಟಿತು. ಸೋತ ಫ್ರಾನ್ಸ್ ತಂಡ ಕಂಚಿಗೆ ತೃಪ್ತಿಪಟ್ಟುಕೊಂಡಿತು. ಆ ಬಳಿಕ ಒಲಿಂಪಿಕ್ಸ್‌ನಲ್ಲಿ ಯಾವುದೇ ಕ್ರಿಕೆಟ್ ಪಂದ್ಯಕ್ಕೆ ಅನುಮತಿ ನೀಡಲಿಲ್ಲ.
ಇದೀಗ ಮತ್ತೆ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕೂಡ ಸೇರಿಸಬೇಕು ಎಂಬ ಉದ್ದೇಶವನ್ನ ಹೊಂದಿದೆ. ಅದರಂತೆ 2028 ಲಾಸ್ ಏಂಜಿಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಸಬೇಕು ಅಂತಾ ಒತ್ತಾಯಿಸಲು ಐಸಿಸಿ ಚಿಂತನೆ ನಡೆಸಿದೆ.
ಇದರಲ್ಲಿ ಅವಕಾಶ ದೊರೆತರೆ 8 ತಂಡಗಳ ಮಧ್ಯೆ ಪದಕಕ್ಕಾಗಿ ಕದನ ನಡೆಯುವ ಸಾಧ್ಯತೆಯಿದೆ. ಈ ಮೂಲಕ ಒಲಿಂಪಿಕ್ಸ್‌ಗೆ ಕ್ರಿಕೆಟ್ ಮರು ಸೇರ್ಪಡೆಯಾಗಲು ವೇದಿಕೆ ಸಜ್ಜಾದಂತಾಗುತ್ತದೆ. ವಿಶ್ವದಲ್ಲಿ ಅತಿ ಹೆಚ್ಚು ಆಡುವ ಕ್ರೀಡೆಗಳ ಪೈಕಿ ಕ್ರಿಕೆಟ್ ಕೂಡ ಒಂದಾಗಿದ್ದರೂ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಇಲ್ಲದಿರುವುದು ಕ್ರಿಕೆಟ್ ಪ್ರೇಮಿಗಳ ನಿರಾಸೆಗೆ ಕಾರಣವಾಗಿತ್ತು. ಲಾಸ್ ಏಂಜಲೀಸ್ ಈ ನಿರಾಸೆಯನ್ನು ಅಂತ್ಯಗೊಳಿಸುವ ಸಾಧ್ಯತೆಯಿದೆ.
T20 World Cup: ಟಿ-20 ವಿಶ್ವಕಪ್ನಲ್ಲಿ ಈ ಮೂವರು ಆಟಗಾರರು ಅಪಾಯಕಾರಿ ಎಂದ ದಿನೇಶ್ ಕಾರ್ತಿಕ್
IPL 2021: ಆರ್ಸಿಬಿಗೆ ಬಿಗ್ ಶಾಕ್: ತಂಡದ ಸ್ಟಾರ್ ಆಟಗಾರ ಐಪಿಎಲ್ 2021 ರಿಂದಲೇ ಹೊರಕ್ಕೆ
(Cricket In Olympics france vs great britain only cricket match ever played at the 1900 olympic games on this day)