ನಿನ್ನೆಗೆ ಅಂದರೆ ಫೆಬ್ರವರಿ 8 ಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟು 15 ವರ್ಷ ಪೂರೈಸಿದ ಸಂತಸದಲ್ಲಿದ್ದ ರವೀಂದ್ರ ಜಡೇಜಾ (Ravindra Jadeja) ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದೆ. ಟೀಂ ಇಂಡಿಯಾಗೆ ಒಬ್ಬ ಅದ್ಭುತ ಆಲ್ರೌಂಡರ್ನನ್ನು ನೀಡಿದ ಪೋಷಕರೇ ಜಡೇಜಾ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಇದು ಕ್ರಿಕೆಟ್ ಲೋಕದಲ್ಲಿ ಟೀಂ ಇಂಡಿಯಾ ಅಭಿಮಾನಿಗಳು ಹಾಗೂ ರವೀಂದ್ರ ಜಡೇಜಾ ಅವರ ಅಭಿಮಾನಿಗಳನ್ನು ದಿಗ್ಭ್ರಮೆಗೊಳ್ಳುವಂತೆ ಮಾಡಿದೆ. ವಾಸ್ತವವಾಗಿ ಸ್ಥಳೀಯ ಮಾಧ್ಯಮದೊಂದಿಗೆ ತನ್ನ ಅಳಲನ್ನು ತೊಡಿಕೊಂಡಿರುವ ರವೀಂದ್ರ ಜಡೇಜಾ ಅವರ ತಂದೆ ಅನಿರುದ್ಧ್ ಜಡೇಜಾ (Anirudh Singh Jadeja), ಮಗ ಹಾಗೂ ಸೊಸೆಯ ವಿರುದ್ಧ ಹರಿಹಾಯ್ದಿದ್ದಾರೆ. ಅದರಲ್ಲೂ ಜಡೇಜಾ ಪತ್ನಿ ರಿವಾಬ (Rivaba) ಅವರ ವಿರುದ್ಧ ಕಟುವಾದ ಭಾಷೆ ಬಳಸಿರುವ ಅವರು ನನ್ನ ಸೊಸೆ ಮನೆ ಒಡೆಯುವ ಕೆಲಸ ಮಾಡಿದ್ದಾಳೆ. ರಿವಾಬ ಏನು ಮ್ಯಾಜಿಕ್ ಮಾಡಿದಳೋ ಗೊತ್ತಿಲ್ಲ. ನನ್ನ ಮಗ ನನ್ನಿಂದ ದೂರಾಗಿ ವರ್ಷಗಳೇ ಕಳೆದಿವೆ ಎಂದು ಆರೋಪಿಸಿದ್ದಾರೆ.
ರವೀಂದ್ರ ಜಡೇಜಾ ಅವರ ತಂದೆ ಅನಿರುದ್ಧ್ ಸಿಂಗ್ ಜಡೇಜಾ, ಮಗ ಹಾಗೂ ಸೊಸೆಯ ವಿರುದ್ಧ ಹರಿಹಾಯ್ದಿರುವುದನ್ನು ಗಮನಿಸಿದರೆ, ಜಡೇಜಾ ಕುಟುಂಬದಲ್ಲಿ ಬಿರುಗಾಳಿ ಎದ್ದಿದೆ ಎಂಬುದನ್ನು ಅರಿತುಕೊಳ್ಳಬಹುದು. ಜಡೇಜಾ ಮತ್ತು ಅವರ ತಂದೆ ಪರಸ್ಪರ ದೂರಾಗಿ ವರ್ಷಗಳೇ ಕಳೆದಿದ್ದು, ಇಬ್ಬರ ನಡುವೆ ಮಾತುಕತೆ ಕೂಡ ಸಂಪೂರ್ಣ ಬಂದ್ದಾಗಿದೆ ಎಂಬುದನ್ನು ಗಮನಿಸಿಬಹುದು .
Ravindra Jadeja: ಅಂತಾರಾಷ್ಟ್ರೀಯ ವೃತ್ತಿ ಬದುಕಿಗೆ ಭರ್ತಿ 15 ವರ್ಷ; ವಿಶೇಷ ವಿಡಿಯೋ ಹಂಚಿಕೊಂಡ ರವೀಂದ್ರ ಜಡೇಜಾ
ರವೀಂದ್ರ ಜಡೇಜಾ ಅವರ ತಂದೆ ಅನಿರುದ್ಧ್ ಜಡೇಜಾ ಅವರು ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಇಡೀ ಕಥೆಯನ್ನು ವಿವರಿಸಿದ್ದಾರೆ. ‘ನನ್ನ ಮಗ ರವೀಂದ್ರ ಜಡೇಜಾ ತನ್ನೊಂದಿಗೆ ವರ್ಷಗಳಿಂದ ಸಂಪರ್ಕದಲ್ಲಿಲ್ಲ. ಪ್ರಸ್ತುತ ನಾನು ಜಾಮ್‌ನಗರದ 2 ಬಿಎಚ್‌ಕೆ ಫ್ಲಾಟ್‌ನಲ್ಲಿ ಒಬ್ಬನೇ ವಾಸಿಸುತ್ತಿದ್ದೇನೆ. ಒಂದು ಕಾಲದಲ್ಲಿ ನನ್ನ ಮಗ ಕೂಡ ನನ್ನೊಂದಿಗೆ ಒಂದೇ ಫ್ಲಾಟ್‌ನಲ್ಲಿ ಇದ್ದ. ಆದರೆ ಈಗ ಈ ಫ್ಲಾಟ್‌ನಲ್ಲಿ ನಾನೊಬ್ಬನೇ ಬರುವ 20 ಸಾವಿರ ರೂಪಾಯಿಗಳ ಪಿಂಚಣಿಯಲ್ಲಿ ಜೀವನ ಸಾಗಿಸುತ್ತಿದ್ದೇನೆ. ರವೀಂದ್ರ ಮದುವೆಯಾದ ಮುಂದಿನ 2-3 ತಿಂಗಳುಗಳು ಚೆನ್ನಾಗಿಯೇ ಇದ್ದವು. ಆದರೆ ನಂತರ ಜಡೇಜಾ ಅವರ ನಡವಳಿಕೆಯು ಬದಲಾಗಲಾರಂಭಿಸಿತು. ನನ್ನ ಮಗ ನನ್ನೊಂದಿಗೆ ಮಾತನಾಡುವುದಿನ್ನು ಬಿಟ್ಟ. ನನ್ನ ಮಗನ ಮೇಲೆ ಅವನ ಹೆಂಡತಿ ರಿವಾಬ ಏನು ಮ್ಯಾಜಿಕ್ ಮಾಡಿದಳೋ ಗೊತ್ತಿಲ್ಲ.
ಸುಮಾರು 5 ವರ್ಷಗಳಿಂದ ನಮ್ಮ ನಡುವೆ ಯಾವುದೇ ಮಾತುಕತೆ ಇಲ್ಲ. ಮದುವೆಯ ನಂತರ ನನ್ನ ಮಗ ಸಂಪೂರ್ಣವಾಗಿ ಬದಲಾಗಿದ್ದಾನೆ. ಅವನು ಅವನ ಹೆಂಡತಿ ಮಾತನ್ನು ಕೇಳಲು ಪ್ರಾರಂಭಿಸಿದ ನಂತರ ನನ್ನೊಂದಿಗೆ ಮಾತನಾಡುವುದನ್ನು ಬಿಟ್ಟ. ಇದೆಲ್ಲದನ್ನು ನೋಡಿದರೆ ನನ್ನ ಮಗನನ್ನು ಕ್ರಿಕೆಟಿಗನನ್ನಾಗಿ ಮಾಡದಿದ್ದರೆ ಚೆನ್ನಾಗಿರುತ್ತಿತ್ತು. ನನ್ನ ಮಗನಿಗೆ ಮದುವೆ ಮಾಡದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಇಲ್ಲದಿದ್ದರೆ ಈ ದಿನ ನೋಡಲು ಸಿಗುತ್ತಿರಲಿಲ್ಲ. ಇದಕ್ಕೆಲ್ಲ ಜಡೇಜಾ ಪತ್ನಿಯೇ ಕಾರಣ ಎಂದು ತಂದೆ ಆರೋಪಿಸಿದ್ದಾರೆ.
Let’s ignore what’s said in scripted interviews 🙏 pic.twitter.com/y3LtW7ZbiC
— Ravindrasinh jadeja (@imjadeja) February 9, 2024
ಇನ್ನು ತಂದೆ ಮಾಡಿರುವ ಆರೋಪಗಳಿಗೆಲ್ಲ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಎಕ್ಸ್ನಲ್ಲಿ ಸ್ಪಷ್ಟನೆ ನೀಡಿರುವ ಜಡೇಜಾ, ಈ ಆರೋಪಗಳೆಲ್ಲ ಪೂರ್ವ ನಿಯೋಜಿತ ಪಿತೂರಿ. ಅವರು ಹೊರಿಸಿರುವ ಆರೋಪಗಳಲ್ಲಿ ಹುರುಳಿಲ್ಲ. ಎಲ್ಲವೂ ಸತ್ಯಕ್ಕೆ ದೂರವಾದ್ದವು. ಇದೆಲ್ಲ ನನ್ನ ಪತ್ನಿಯ ಹೆಸರಿಗೆ ಕಳಂಕ ತರುವ ಪ್ರಯತ್ನವಾಗಿದೆ. ಇದೆಲ್ಲವನ್ನು ನಾನು ಖಂಡಿಸುತ್ತೇನೆ. ನನಗೂ ಹೇಳಲಿಕ್ಕೆ ಸಾಕಷ್ಟಿದೆ. ಆದರೆ ನಾನು ಅದೆಲ್ಲವನ್ನು ಸಾರ್ವಜನಿಕವಾಗಿ ಬಿಚ್ಚಿಡಲು ಬಯಸುವುದಿಲ್ಲ ಎಂದು ಜಡೇಜಾ ಸ್ಪಷ್ಟನೆ ನೀಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:18 pm, Fri, 9 February 24