ಐಪಿಎಲ್ 2023ಕ್ಕೆ (IPL 2023) ಬಿಸಿಸಿಐ ಬರದ ಸಿದ್ಧತೆ ಆರಂಭಿಸಿದೆ. ಅದರ ಅಂಗವಾಗಿ ಫ್ರಾಂಚೈಸಿಗಳಿಗೆ ನೀಡಿದ್ದ ಟ್ರೇಡಿಂಗ್ ಗಡುವು ನವೆಂಬರ್ 15ಕ್ಕೆ ಮುಕ್ತಾಯಗೊಂಡಿದೆ. ಹೀಗಾಗಿ ಎಲ್ಲಾ ತಂಡಗಳು ತಮ್ಮಲ್ಲಿ ಉಳಿಸಿಕೊಂಡ ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿವೆ. ಇದರಲ್ಲಿ 4 ಬಾರಿಯ ಚಾಂಪಿಯನ್ ಚೆನ್ನೈ ಕೂಡ ಸೇರಿದ್ದು, ಇದರ ಅಂಗವಾಗಿ ಚೆನ್ನೈ (Chennai Super Kings) ಫ್ರಾಂಚೈಸಿ ಡ್ವೇನ್ ಬ್ರಾವೋ ಸೇರಿದಂತೆ 8 ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದೆ. ಈ ಹಿಂದೆ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರನ್ನು ತಂಡದಿಂದ ಕೈಬಿಡಲಾಗುತ್ತಿದೆ ಎಂದು ವರದಿಗಳು ಬಂದಿದ್ದವು. ಆದರೆ ಈ ಎಲ್ಲಾ ಊಹಾಪೋಹಗಳನ್ನು ಮಂಡಳಿ ಅಲ್ಲಗಳೆದಿತ್ತು. ಈಗ ಈ ವರ್ಷದ ಮಿನಿ ಹರಾಜಿಗೆ ಮುಂಚಿತವಾಗಿ ಚೆನ್ನೈ ಯಾವ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದೆ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಸಿಎಸ್‌ಕೆ ಬಿಡುಗಡೆ ಮಾಡಿದ ಆಟಗಾರರು
ಡ್ವೇನ್ ಬ್ರಾವೋ, ಆಡಮ್ ಮಿಲ್ನೆ, ಕ್ರಿಸ್ ಜೋರ್ಡಾನ್, ಎನ್ ಜಗದೀಸನ್, ಹರಿ ನಿಶಾಂತ್, ಕೆ ಭಗತ್ ವರ್ಮಾ, ಕೆಎಂ ಆಸಿಫ್, ರಾಬಿನ್ ಉತ್ತಪ್ಪ.
ಸಿಎಸ್‌ಕೆ ಉಳಿಸಿಕೊಂಡಿರುವ ಆಟಗಾರರು
ಎಂಎಸ್ ಧೋನಿ, ರವೀಂದ್ರ ಜಡೇಜಾ, ಡೆವೊನ್ ಕಾನ್ವೆ, ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್, ಶಿವಂ ದುಬೆ, ಅಂಬಟಿ ರಾಯುಡು, ಡ್ವೇನ್ ಪ್ರಿಟೋರಿಯಸ್, ಮಹಿಷ್ ಟೀಕ್ಷಣ, ಪ್ರಶಾಂತ್ ಸೋಲಂಕಿ, ದೀಪಕ್ ಚಾಹರ್, ಮುಖೇಶ್ ಚೌಧರಿ, ಸಿಮರ್ಜಿತ್ ಸಿಂಗ್, ತುಷಾರ್ ದೇಶಪಾಂಡೆ, ರಾಜವರ್ಧನ್ ಹಂಗರಗೇಕರ್, ಮಿಚೆಲ್ ಸ್ಯಾಂಟ್ನರ್, ಮಹಿಷ್ ಪತಿರಾನ, ಸುಭ್ರಾಂಶು ಸೇನಾಪತಿ.
ಇದನ್ನೂ ಓದಿ: RCB Retained Players: 18 ಆಟಗಾರರನ್ನು ಉಳಿಸಿಕೊಂಡ ಆರ್ಸಿಬಿ; ಯಾರ್ಯಾರಿಗೆ ತಂಡದಿಂದ ಕೋಕ್..?
ಐಪಿಎಲ್ 2022 ರಲ್ಲಿ ಕಳಪೆ ಪ್ರದರ್ಶನ
ಚೆನ್ನೈ ಸೂಪರ್ ಕಿಂಗ್ಸ್ 4 ಬಾರಿ ಐಪಿಎಲ್ ಚಾಂಪಿಯನ್ ಆಗಿದೆ. ಆದರೆ, ಹಳದಿ ಜೆರ್ಸಿಯೊಂದಿಗೆ ಈ ತಂಡಕ್ಕೆ ಐಪಿಎಲ್ 2022 ಉತ್ತಮವಾಗಿರಲಿಲ್ಲ. 15ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 10 ತಂಡಗಳ ಕದನದಲ್ಲಿ 9ನೇ ಸ್ಥಾನದಲ್ಲಿ ಉಳಿಯುವ ಮೂಲಕ ತನ್ನ ಪ್ರಯಾಣವನ್ನು ಅಂತ್ಯಗೊಳಿಸಿತು. ಟೂರ್ನಿಯಲ್ಲಿ ಕಳೆದ ವರ್ಷ ಆಡಿದ 14 ಪಂದ್ಯಗಳಲ್ಲಿ ಈ ತಂಡ ಕೇವಲ 4 ಪಂದ್ಯಗಳನ್ನು ಗೆದ್ದು, 10 ಪಂದ್ಯಗಳಲ್ಲಿ ಸೋತಿತ್ತು.
ಸಿಎಸ್‌ಕೆ ಮುಂದಿನ ಯೋಜನೆ ಏನು?
ಆದಾಗ್ಯೂ, ಐಪಿಎಲ್ 2023 ರಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ತನ್ನ ಹಿಂದಿನ ವೈಫಲ್ಯವನ್ನು ಮರೆತು ಈ ಆವೃತ್ತಿಯಲ್ಲಿ ಕಣಕ್ಕಿಳಿಯಲಿದೆ. ಹೀಗಾಗಿ ತಂಡಕ್ಕೆ ಬೇಡದ ಕೆಲವು ಆಟಗಾರರನ್ನು ಬಿಡುಗಡೆ ಮಾಡುವ ಮೂಲಕ ಮತ್ತು ಅನೇಕ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವ ಮೂಲಕ ಮುಂದಿನ ಆವೃತ್ತಿಗೆ ಮೊದಲ ಹೆಜ್ಜೆ ಇಟ್ಟಿದೆ. ಈಗ ಐಪಿಎಲ್ 2023 ರ ಮಿನಿ ಹರಾಜಿನಲ್ಲಿ ಹಳದಿ ಜೆರ್ಸಿಯ ಸಿದ್ಧಾಂತಗಳಿಗೆ ಹೊಂದಿಕೊಳ್ಳುವ ಮತ್ತು ಹಿಟ್ ಎಂದು ಸಾಬೀತುಪಡಿಸುವ ಆಟಗಾರರ ಮೇಲೆ ಬಾಜಿ ಕಟ್ಟುವುದಕ್ಕೆ ಚೆನ್ನೈ ಫ್ರಾಂಚೈಸಿ ಸಜ್ಜಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:06 pm, Wed, 16 November 22