
ಇಂಡಿಯನ್ ಪ್ರೀಮಿಯರ್ ಲೀಗ್ನ ಸಾಂಪ್ರದಾಯಿಕ ಎದುರಾಳಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಜಿದ್ದಾಜಿದ್ದಿ ಈ ಬಾರಿ ಟೂರ್ನಿ ಆರಂಭವಾಗುವುದಕ್ಕಿಂತ ಮುಂಚಿತವಾಗಿಯೇ ಶುರುವಾಗಿದೆ. ಅದು ಸಹ ಸೋಷಿಯಲ್ ಮೀಡಿಯಾದಲ್ಲಿ, ಆರ್‌ಸಿಬಿ ತಂಡವನ್ನು ಕಿಚಾಯಿಸುವ ಮೂಲಕ! ಮುಂಬರುವ ಐಪಿಎಲ್ ಸೀಸನ್‌ಗಾಗಿ ಸಿಎಸ್‌ಕೆ ತನ್ನ ಹಳೆಯ ಮ್ಯಾಚ್ ವಿನ್ನರ್ ಆಲ್ಬಿ ಮಾರ್ಕೆಲ್ ಅವರನ್ನು ನೂತನ ಸಹಾಯಕ ತರಬೇತುದಾರನಾಗಿ ನೇಮಕ ಮಾಡಿಕೊಂಡಿದೆ. ಆದರೆ ಈ ಸಿಹಿ ಸುದ್ದಿಯ ಬೆನ್ನಲ್ಲೇ, ವಿರಾಟ್ ಕೊಹ್ಲಿ ಅವರ ವೃತ್ತಿಜೀವನದ ಮರೆಯಲಾಗದ ‘ಓವರ್’ ಅನ್ನು ನೆನಪಿಸಿ ಆರ್‌ಸಿಬಿ ತಂಡದ ಹಳೆಯ ಗಾಯಕ್ಕೆ ಸಿಎಸ್‌ಕೆ ಉಪ್ಪು ಸವರಿದೆ.
ಸಿಎಸ್‌ಕೆ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಆಲ್ಬಿ ಮಾರ್ಕೆಲ್ ಆಗಮನವನ್ನು ಘೋಷಿಸುವಾಗ “464.626” ಎಂಬ ಐಪಿ ಅಡ್ರೆಸ್ ಕೋಡ್ ಬಳಸಿತ್ತು. ಇದು ಬೇರೇನೂ ಅಲ್ಲ, 2012ರ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬೌಲಿಂಗ್‌ನಲ್ಲಿ ಮಾರ್ಕೆಲ್ ಬಾರಿಸಿದ ಬೌಂಡರಿ ಮತ್ತು ಸಿಕ್ಸರ್‌ಗಳ ರನ್ಗಳಾಗಿವೆ. (4, 6, 4, 6, 2, 6).
ಈ ಒಂದು ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಉಭಯ ತಂಡಗಳ ಅಭಿಮಾನಿಗಳ ನಡುವೆ ಮತ್ತೊಮ್ಮೆ ಮೀಮ್ಸ್ ಜಟಾಪಟಿಗೆ ಕಾರಣವಾಗಿದೆ.
ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಆ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನ ಸನಿಹದಲ್ಲಿತ್ತು. ಸಿಎಸ್‌ಕೆ ಗೆಲುವಿಗೆ ಕೊನೆಯ 2 ಓವರ್‌ಗಳಲ್ಲಿ 43 ರನ್‌ಗಳ ಅಗತ್ಯವಿತ್ತು.
ಆಗ ಆರ್‌ಸಿಬಿ ನಾಯಕರಾಗಿದ್ದ ಡೇನಿಯಲ್ ವೆಟ್ಟೋರಿ, 19ನೇ ಓವರ್ ಬೌಲಿಂಗ್ ಮಾಡಲು ಅರೆಕಾಲಿಕ ಬೌಲರ್ ವಿರಾಟ್ ಕೊಹ್ಲಿ ಕೈಗೆ ಚೆಂಡು ನೀಡಿದರು.
ಕ್ರೀಸ್‌ನಲ್ಲಿದ್ದ ಸೌತ್ ಆಫ್ರಿಕಾದ ಆಲ್‌ರೌಂಡರ್ ಆಲ್ಬಿ ಮಾರ್ಕೆಲ್, ಕೊಹ್ಲಿ ಓವರ್‌ನಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 2 ಫೋರ್ ಸೇರಿದಂತೆ ಬರೋಬ್ಬರಿ 28 ರನ್ ಚಚ್ಚಿದರು. ಈ ಒಂದೇ ಓವರ್ ಪಂದ್ಯದ ಚಿತ್ರಣವನ್ನೇ ಬದಲಾಯಿಸಿ, ಸಿಎಸ್‌ಕೆ ಗೆಲುವಿಗೆ ಹಾದಿ ಮಾಡಿಕೊಟ್ಟಿತು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಮ್ಯಾಚ್ ವಿನ್ನರ್ ಆಗಿಯೇ ಗುರುತಿಸಿಕೊಂಡಿದ್ದ ಆಲ್ಬಿ ಮಾರ್ಕೆಲ್ ಅವರನ್ನು ಸಿಎಸ್‌ಕೆ ಫ್ರಾಂಚೈಸಿ ಇದೀಗ ಸಹಾಯಕ ಕೋಚ್ ಆಗಿ ಮರಳಿ ಬಂದಿದ್ದಾರೆ.
ಈ ಕಂಬ್ಯಾಕ್ ಅನ್ನು ಚೆನ್ನೈ ಸೂಪರ್ ಕಿಂಗ್ಸ್ ಅಡ್ಮಿನ್ ಸ್ವಾಗತಿಸಿದ್ದು, ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ಅಭಿಮಾನಿಗಳನ್ನು ಕೆಣಕುವ ಮೂಲಕ ಎಂಬುದು ವಿಶೇಷ. ಈ ಕೆಣಕುವಿಕೆಯಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ಅಭಿಮಾನಿಗಳ ನಡುವೆ ಟ್ರೋಲ್ ಸಮರ ಶುರುವಾಗಿದೆ. ಈ ಮೂಲಕ ಉಭಯ ತಂಡಗಳ ಅಭಿಮಾನಿಗಳು ಅಧಿಕೃತವಾಗಿ ‘ಸೌತ್ ಡರ್ಬಿ’ ಕಿಚ್ಚನ್ನು ಹೊತ್ತಿಸಿದ್ದು, ಟೂರ್ನಿಗೂ ಮುನ್ನವೇ ಐಪಿಎಲ್ ಹವಾ ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ಸೂರ್ಯಾಭಿಷೇಕ… ಎದುರಾಳಿಗಳಿಗೆ ಎಚ್ಚರಿಕೆಯ ಕರೆಘಂಟೆ!
ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ ಮೈದಾನಕ್ಕಿಳಿಯುವ ಮುನ್ನವೇ ಸಿಎಸ್‌ಕೆ ಹಾಗೂ ಆರ್‌ಸಿಬಿ ಅಭಿಮಾನಿಗಳ ನಡುವಿನ ಈ ಡಿಜಿಟಲ್ ವಾರ್, ಮುಂಬರುವ ಸೀಸನ್ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಆಲ್ಬಿ ಮಾರ್ಕೆಲ್ ಸಿಎಸ್‌ಕೆ ಪಾಳಯಕ್ಕೆ ಕೋಚ್ ಆಗಿ ಮರಳಿರುವುದು ಆರ್‌ಸಿಬಿಗೆ ಹಳೆಯ ಗಾಯವನ್ನು ನೆನಪಿಸಿದ್ದರೆ, ಸಿಎಸ್‌ಕೆ ಅಭಿಮಾನಿಗಳಿಗೆ ಮತ್ತದೇ ಹಳೆಯ ಗೆಲುವಿನ ಜೋಶ್ ತಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಸಿಎಸ್‌ಕೆ ಅಡ್ಮಿನ್ ಮೇಲುಗೈ ಸಾಧಿಸಿರಬಹುದು, ಆದರೆ ಇದಕ್ಕೆ ಆರ್‌ಸಿಬಿ ಅಡ್ಮಿನ್ ಇದಕ್ಕೆ ಹೇಗೆ ತಿರುಗೇಟು ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
Published On - 10:39 am, Wed, 28 October 26