ಹೈವೋಲ್ಟೇಜ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 4 ವಿಕೆಟ್ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 4 ವಿಕೆಟ್ ಕಳೆದುಕೊಂಡು 200 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಂಜಾಬ್ 6 ವಿಕೆಟ್ ಕಳೆದುಕೊಂಡು ಈ ಗುರಿ ಮುಟ್ಟಿತು. ಕೊನೆಯ ಎಸೆತದಲ್ಲಿ 3 ರನ್ ಬಾರಿಸುವ ಮೂಲಕ ಪಂಜಾಬ್ಗೆ ಅಮೋಘ ಜಯ ತಂದುಕೊಡುವ ಕೆಲಸವನ್ನು ಸಿಕಂದರ್ ರಜಾ ಮಾಡಿದರು. ಪಂಜಾಬ್ ಪರ ಪ್ರಭಾಸಿಮ್ರಾನ್ ಸಿಂಗ್ ಗರಿಷ್ಠ 42 ರನ್ ಗಳಿಸಿದರೆ, ಚೆನ್ನೈ ಪರ ಡೆವೊನ್ ಕಾನ್ವೇ ಗರಿಷ್ಠ 92 ರನ್ ಬಾರಿಸಿದರು.
ಪತಿರಾನ ಬೌಲ್ ಮಾಡಿದ 18ನೇ ಓವರ್‌ನಲ್ಲಿ 9 ರನ್ ಬಂದವು. ಜಿತೇಶ್ ಈ ಓವರ್‌ನಲ್ಲಿ ಬೌಂಡರಿ ಕೂಡ ಹೊಡೆದರು. ಪಂಜಾಬ್ ಗೆಲುವಿಗೆ 12 ಎಸೆತದಲ್ಲಿ 22 ರನ್ ಬೇಕು
18ನೇ ಓವರ್ನ ಮೊದಲ ಎಸೆತದಲ್ಲೇ ಕರನ್ ಕ್ಲೀನ್ ಬೌಲ್ಡ್ ಆದರು.
17ನೇ ಓವರ್ ಬೌಲ್ ಮಾಡಿದ ಜಡೇಜಾ 7 ರನ್ ಬಿಟ್ಟುಕೊಟ್ಟರು. ಈ ಓವರ್‌ನಲ್ಲಿ 2 ಸಿಕ್ಸರ್ ಬಂದವು. ಪಂಜಾಬ್ ಗೆಲುವಿಗೆ 18 ಎಸೆತದಲ್ಲಿ 31 ರನ್ ಬೇಕು
ದೇಶಪಾಂಡೆ ಓವರ್‌ನಲ್ಲಿ 24 ರನ್ ಚಚ್ಚಿದ ಲಿವಿಂಗ್ಸ್ಟನ್ 5ನೇ ಎಸೆತದಲ್ಲಿ ಮತ್ತೊಂದು ಬಿಗ್ ಶಾಟ್ ಆಡುವ ಯತ್ನದಲ್ಲಿ ಕ್ಯಾಚಿತ್ತು ಔಟಾದರು.
ದೇಶಪಾಂಡೆ ಬೌಲ್ ಮಾಡಿದ 16ನೇ ಓವರ್‌ನಲ್ಲಿ ಲಿವಿಂಗ್ಸ್ಟನ್ 3 ಸಿಕ್ಸರ್ ಹಾಗೂ 1 ಬೌಂಡರಿ ಹೊಡೆದರು.
ಪಂಜಾಬ್ ಇನ್ನಿಂಗ್ಸ್ನ 14ನೇ ಓವರ್ ಮುಗಿದಿದ್ದು, ತಂಡದ ಗೆಲುವಿಗೆ 36 ಎಸೆತಗಳಲ್ಲಿ 82 ರನ್ ಬೇಕು.
12ನೇ ಓವರ್ನ 4ನೇ ಎಸೆತವನ್ನು ಸ್ಕ್ವೇರ್ ಲೆಗ್ನಲ್ಲಿ ಬೌಂಡರಿ ಬಾರಿಸಿದ ಲಿವಿಂಗ್ಸ್ಟನ್ ಪಂಜಾಬ್ ಮೊತ್ತವನ್ನು 100ರ ಗಡಿ ದಾಟಿಸಿದರು.
9ನೇ ಓವರ್‌ನಲ್ಲಿ ಪ್ರಭ್ಸಿಮ್ರಾನ್ ವಿಕೆಟ್ ಉರುಳಿಸಿದ್ದ ಜಡೇಜಾ 11ನೇ ಓವರ್‌ನಲ್ಲಿ ಕಳೆದ ಪಂದ್ಯದ ಹೀರೋ ಅಥರ್ವ್ ಟೈಡೆ ವಿಕೆಟ್ ಉರುಳಿಸಿದರು.
ಪಂಜಾಬ್ ಇನ್ನಿಂಗ್ಸ್ನ 10 ಓವರ್ ಮುಗಿದಿದ್ದು, ಪಂಜಾಬ್ 94 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. ಈ ಓವರ್‌ನಲ್ಲಿ ಲಿವಿಂಗ್ಸ್ಟನ್ ಸಿಕ್ಸರ್ ಕೂಡ ಬಾರಿಸಿದರು.
24 ಎಸೆತಗಳಲ್ಲಿ 42 ರನ್ ಬಾರಿಸಿದ ಪ್ರಭ್ಸಿಮ್ರಾನ್ ಜಡೇಜಾ ಓವರ್‌ನಲ್ಲಿ ಸ್ಟಂಪ್ ಔಟಾದರು. ಪಂಜಾಬ್ 2ನೇ ವಿಕೆಟ್ ಪತನ
8ನೇ ಓವರ್ ಬೌಲ್ ಮಾಡಿದ ಅಲಿ 10 ರನ್ ಬಿಟ್ಟುಕೊಟ್ಟರು. ಈ ಓವರ್ನ 2ನೇ ಎಸೆತದಲ್ಲಿ ಪ್ರಭ್ಸಿಮ್ರಾನ್ ಕೌ ಕಾರ್ನರ್ನಲ್ಲಿ ಸಿಕ್ಸರ್ ಬಾರಿಸಿದರು.
ಪವರ್ ಪ್ಲೇಯ ಕೊನೆಯ ಓವರ್ನ ಮೊದಲ ಎಸೆತದಲ್ಲಿ ಪ್ರಭ್ಸಿಮ್ರಾನ್ ಕವರ್ಸ್ ದಿಕ್ಕಿನಲ್ಲಿ ಬೌಂಡರಿ ಹೊಡೆದರು. ಇದರೊಂದಿಗೆ ಪಂಜಾಬ್ 6 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 66 ರನ್ ಬಾರಿಸಿದೆ.
ಪಂಜಾಬ್ ಅರ್ಧಶತಕ ಪೂರ್ಣಗೊಂಡ ಬೆನ್ನಲ್ಲೇ ಮತ್ತೊಂದು ಬಿಗ್ ಶಾಟ್ ಆಡಲು ಯತ್ನಿಸಿದ ಧವನ್ ಥರ್ಡ್ಮ್ಯಾನ್ನಲ್ಲಿ ಕ್ಯಾಚಿತ್ತು ಔಟಾದರು.
4ನೇ ಓವರ್ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ಧವನ್ ಪಂಜಾಬ್ ಮೊತ್ತವನ್ನು 50ರ ಗಡಿ ದಾಟಿಸಿದರು.
ಆಕಾಶ್ ಸಿಂಗ್ ಬೌಲ್ ಮಾಡಿದ 3ನೇ ಓವರ್ನ 5ನೇ ಎಸೆತವನ್ನು ಧವನ್ ಬೌಂಡರಿಗಟ್ಟಿದರೆ, ಕೊನೆಯ ಎಸೆತವನ್ನು ಸಿಕ್ಸರ್ಗಟ್ಟಿದರು. ಈ ಓವರ್‌ನಲ್ಲಿ 14 ರನ್ ಬಂದವು.
2ನೇ ಓವರ್ ಬೌಲ್ ಮಾಡಿದ ದೇಶಪಾಂಡೆಯ 3ನೇ ಎಸೆತವನ್ನು ಪ್ರಭ್ಸಿಮ್ರಾನ್ ಶಾರ್ಟ್ ಥರ್ಡ್ಮ್ಯಾನ್ನಲ್ಲಿ ಸಿಕ್ಸರ್ಗಟ್ಟಿದರು. ಪಂಜಾಬ್ 20/0
ಇನ್ನಿಂಗ್ಸ್ನ ಮೊದಲ ಓವರ್ನಲ್ಲೇ ನಾಯಕ ಧವನ್ 2 ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದರು. ಪಂಜಾಬ್ಗೆ ಉತ್ತಮ ಆರಂಭ
ಕೊನೆಯ ಓವರ್‌ನಲ್ಲಿ ಧೋನಿ ಸತತ ಎರಡು ಸಿಕ್ಸರ್ ಬಾರಿಸಿದರೆ, ಡೆವೊನ್ ಕಾನ್ವೇ 92 ರನ್ ಬಾರಿಸಿ ಅಜೇಯರಾಗಿ ಉಳಿದರು. ಸಿಎಸ್‌ಕೆ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 200 ರನ್ ಗಳಿಸಿತು.
ಜಡೇಜಾ ವಿಕೆಟ್ ಬಳಿಕ ಬ್ಯಾಟಿಂಗ್ಗೆ ಬಂದ ಧೋನಿ 20ನೇ ಓವರ್ 5ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.
20ನೇ ಓವರ್ನ ಮೊದಲ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಜಡೇಜಾ ಡೀಪ್ ಮಿಡ್ ವಿಕೆಟ್ನಲ್ಲಿ ಲಿವಿಂಗ್ಸ್ಟನ್ಗೆ ಕ್ಯಾಚಿತ್ತು ಔಟಾದರು.
19ನೇ ಓವರ್ ಬೌಲ್ ಮಾಡಿದ ರಬಾಡ ಕೊನೆಯ ಎಸೆತದಲ್ಲಿ ಬೌಂಡರಿ ನೀಡಿದರು. ಇದರೊಂದಿಗೆ ಕಾನ್ವೇ 90ರ ಗಡಿ ದಾಟಿದ್ದು ಶತಕದಂಚಿನಲ್ಲಿದ್ದಾರೆ. ಚೆನ್ನೈ 185/3
ತಮ್ಮ ಖೋಟಾದ ಕೊನೆಯ ಓವರ್ ಬೌಲ್ ಮಾಡಿದ ಅರ್ಶದೀಪ್ ಯಾವುದೇ ಬೌಂಡರಿ ನೀಡಲಿಲ್ಲ. ಚೆನ್ನೈ 177/3
ಮೊಯಿನ್ ಅಲಿ 6 ಎಸೆತಗಳಲ್ಲಿ 10 ರನ್ ಗಳಿಸಿ ರಾಹುಲ್ ಚಹಾರ್ಗೆ ಬಲಿಯಾದರು. ಚೆನ್ನೈ 3ನೇ ವಿಕೆಟ್ ಪತನ
16ನೇ ಓವರ್ನ 2ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಅಲಿ ಚೆನ್ನೈ ಸ್ಕೋರ್ ಅನ್ನು 150 ರನ್ಗಳ ಗಡಿ ದಾಟಿಸಿದರು.
15ನೇ ಓವರ್‌ನಲ್ಲಿ 3 ಬೌಂಡರಿ ಬಂದವು. 2 ಬೌಂಡರಿಗಳನ್ನು ಕಾನ್ವೇ ಹೊಡೆದರೆ, 1 ಬೌಂಡರಿ ಅಲಿ ಬ್ಯಾಟ್ನಿಂದ ಬಂತು.
ಅರ್ಷದೀಪ್ ಸಿಂಗ್ ಶಿವ್ ದುಬೆ ವಿಕೆಟ್ ಉರುಳಿಸಿದ್ದಾರೆ. ಶಿವಂ 16 ಎಸೆತಗಳಲ್ಲಿ 28 ರನ್ ಬಾರಿಸಿ, ಶಾರುಖ್ಗೆ ಕ್ಯಾಚಿತ್ತು ಔಟಾದರು.
13ನೇ ಓವರ್ನ ಮೊದಲ ಎಸೆತವನ್ನು ದುಬೆ ಸಿಕ್ಸರ್ಗಟ್ಟಿದರೆ, ಕೊನೆಯ ಎಸೆತದಲ್ಲಿ ಕಾನ್ವೇ ಬೌಂಡರಿ ಬಾರಿಸಿದರು.
ಅದೇ 12ನೇ ಓವರ್ನ 4ನೇ ಎಸೆತವನ್ನು ಬೌಂಡರಿಗಟ್ಟಿದ ಕಾನ್ವೇ ತಮ್ಮ ಅರ್ಧಶತಕ ಪೂರೈಸಿದರು. ಕಾನ್ವೇ 30 ಎಸೆತದಲ್ಲಿ ಅರ್ಧಶತಕ ಪೂರೈಸಿದರು.
12ನೇ ಓವರ್ನ ಮೊದಲ ಎಸೆತವನ್ನು ಸಿಕ್ಸರ್ಗಟ್ಟಿದ ದುಬೆ ಚೆನ್ನೈ ಮೊತ್ತವನ್ನು ಶತಕದ ಗಡಿ ದಾಟಿಸಿದರು.
10ನೇ ಓವರ್ನ 4ನೇ ಎಸೆತದಲ್ಲಿ ರುತುರಾಜ್ ಸ್ಟಂಪ್ ಔಟ್ ಆದರು. ರಜಾ ಬೌಲ್ ಮಾಡಿದ ಈ ಓವರ್‌ನಲ್ಲಿ ಕಾನ್ವೇ ಮೊದಲೆರಡು ಎಸೆತಗಳನ್ನು ಬೌಂಡರಿಗಟ್ಟಿದ್ದರು.
ಚೆನ್ನೈ 86/1
ರಜಾ ಬೌಲ್ ಮಾಡಿದ 8ನೇ ಓವರ್ನ 4ನೇ ಎಸೆತವನ್ನು ಕಾನ್ವೇ ಎಕ್ಸ್ಟ್ರಾ ಕವರ್ನಲ್ಲಿ ಬೌಂಡರಿ ಗಟ್ಟಿದರು.
ಪವರ್ ಪ್ಲೇನ ಕೊನೆಯ ಓವರ್‌ನಲ್ಲಿ ಬರೋಬ್ಬರಿ 3 ಬೌಂಡರಿ ಬಂದವು. ಇದರೊಂದಿಗೆ ಸಿಎಸ್‌ಕೆ ಅರ್ಧಶತಕ ಕೂಡ ಪೂರೈಸಿತು.
ಚಹರ್ ಬೌಲ್ ಮಾಡಿದ 5ನೇ ಓವರ್‌ನಲ್ಲಿ ರುತುರಾಜ್ ಲಾಂಗ್ ಆನ್ನಲ್ಲಿ ಅದ್ಭುತ ಸಿಕ್ಸರ್ ಬಾರಿಸಿದರು. 5 ಓವರ್ ಅಂತ್ಯಕ್ಕೆ 41/0
ಅರ್ಷದೀಪ್ ಬೌಲ್ ಮಾಡಿದ 3ನೇ ಓವರ್‌ನಲ್ಲಿ 3 ಬೌಂಡರಿ ಬಂದವು. ಮೊದಲೆರಡು ಬೌಂಡರಿಗಳನ್ನು ರುತುರಾಜ್ ಬಾರಿಸಿದರೆ, ಓವರ್ನ ಕೊನೆಯ ಎಸೆತದಲ್ಲಿ ಕಾನ್ವೇ ಬೌಂಡರಿ ಹೊಡೆದರು.
ರಬಾಡ ಬೌಲ್ ಮಾಡಿದ 2ನೇ ಓವರ್ನ 4ನೇ ಮತ್ತು 5ನೇ ಎಸೆತವನ್ನು ಕಾನ್ವೇ ಬೌಂಡರಿಗಟ್ಟಿದರು.
ಚೆನ್ನೈ ಪರ ರುತುರಾಜ್ ಹಾಗೂ ಕಾನ್ವೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅರ್ಷದೀಪ್ ಬೌಲ್ ಮಾಡಿದ ಮೊದಲ ಓವರ್‌ನಲ್ಲಿ ರುತುರಾಜ್ ಕವರ್ಸ್ ಮೇಲೆ ಬೌಂಡರಿ ಹೊಡೆದರು.
ಶಿಖರ್ ಧವನ್, ಅಥರ್ವ ಟೈಡೆ, ಲಿಯಾಮ್ ಲಿವಿಂಗ್ಸ್ಟನ್, ಸಿಕಂದರ್ ರಜಾ, ಜಿತೇಶ್ ಶರ್ಮಾ, ಸ್ಯಾಮ್ ಕರನ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್ದೀಪ್ ಸಿಂಗ್.
ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯಡು, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ, ಪತಿರಾನ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ
ಟಾಸ್ ಗೆದ್ದ ಚೆನ್ನೈ ನಾಯಕ ಎಂಎಸ್ ಧೋನಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
Published On - 3:01 pm, Sun, 30 April 23