ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ 29 ನೇ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸುಲಭ ಜಯ ಸಾಧಿಸಿದೆ. ಮೊದಲು ಬೌಲಿಂಗ್ನಲ್ಲಿ ರವೀಂದ್ರ ಜಡೇಜಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರೆ, ನಂತರ ಡೆವೊನ್ ಕಾನ್ವೆ ಸತತ ಮೂರನೇ ಅರ್ಧಶತಕ ದಾಖಲಿಸುವ ಮೂಲಕ ಚೆನ್ನೈಗೆ 7 ವಿಕೆಟ್‌ಗಳ ಜಯ ತಂದುಕೊಟ್ಟರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 7 ವಿಕೆಟ್‌ಗೆ 134 ರನ್ ಗಳಿಸಿತು, ಉತ್ತರವಾಗಿ ಚೆನ್ನೈ 8 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. 77 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಡೆವೊನ್ ಕಾನ್ವೇ ಚೆನ್ನೈ ಗೆಲುವಿನ ಹೀರೋ ಎನಿಸಿಕೊಂಡರು.
ಮೊಯಿನ್ ಅಲಿ 19ನೇ ಓವರ್‌ನಲ್ಲಿ ಗೆಲುವಿನ ಬೌಂಡರಿ ಬಾರಿಸಿದರು ಮತ್ತು ಇದರೊಂದಿಗೆ ಚೆನ್ನೈ ಹೈದರಾಬಾದ್ ಅನ್ನು 7 ವಿಕೆಟ್‌ಗಳಿಂದ ಸೋಲಿಸಿತು.
18ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಡೆವೊನ್ ಕಾನ್ವೇ ಬೌಂಡರಿ ಬಾರಿಸಿದರು.
ಮಾರ್ಕಂಡೇ, ಅಂಬಟಿ ರಾಯುಡು ಅವರನ್ನು ಕ್ಲೀನ್ ಬೌಲ್ಡ್ ಮಾಡಿ ವಾಪಸ್ ಕಳುಹಿಸಿದರು. 17ನೇ ಓವರ್‌ನ ಕೊನೆಯ ಎಸೆತದಲ್ಲಿ ರಾಯುಡು ಕ್ಲೀನ್ ಬೌಲ್ಡ್ ಆದರು. ಇದು ಮಯಾಂಕ್ ಅವರ ಎರಡನೇ ವಿಕೆಟ್.
16ನೇ ಓವರ್‌ನ ಕೊನೆಯ ಎಸೆತದಲ್ಲಿ ಚೆನ್ನೈ ಫೋರ್ ರನ್ ಗಳಿಸಿತು. 8 ರನ್ ನೀಡಿದ ಈ ಓವರ್‌ನ ಕೊನೆಯ ಎಸೆತದಲ್ಲಿ ಅಂಬಟಿ ರಾಯುಡು ಶಾರ್ಟ್ ಥರ್ಡ್ ಮ್ಯಾನ್ ಕಡೆ ಬೌಂಡರಿ ಬಾರಿಸಿದರು.
ಆಕಾಶ್ ಸಿಂಗ್ ಬದಲಿಗೆ ಅಂಬಾಟಿ ರಾಯುಡು ಬಂದಿದ್ದಾರೆ. ಧೋನಿ ಪ್ರಭಾವಿ ಆಟಗಾರನಾಗಿ ರಾಯುಡು ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಿದ್ದಾರೆ.
ಮಾರ್ಕಂಡೇ ಚೆನ್ನೈಗೆ ಮತ್ತೊಂದು ಹೊಡೆತ ನೀಡಿದರು. ಅವರು 15ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅಜಿಂಕ್ಯ ರಹಾನೆ ಅವರನ್ನು ಬೇಟೆಯಾಡಿದರು.
14ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಬ್ಯಾಕ್ ಫುಟ್‌ನಿಂದ ಡೆವೊನ್ ಕಾನ್ವೇ ಬೌಂಡರಿ ಕಟ್ ಮಾಡಿದರು.
11ನೇ ಓವರ್‌ನ ಕೊನೆಯ ಎಸೆತದಲ್ಲಿ ರುತುರಾಜ್ ಗಾಯಕ್ವಾಡ್ ರನೌಟ್ ಆದರು. ಉಮ್ರಾನ್ ಎಸೆತದಿಂದ ಗಾಯಕ್ವಾಡ್ ಅವರ ಇನ್ನಿಂಗ್ಸ್ 35 ರನ್‌ಗಳಿಗೆ ಕೊನೆಗೊಂಡಿತು. ಕಾನ್ವೇ ಜೊತೆಗಿನ ಅವರ 87 ರನ್‌ಗಳ ಇನ್ನಿಂಗ್ಸ್ ಕೂಡ ಕೊನೆಗೊಂಡಿತು. ಚೆನ್ನೈಗೆ ಮೊದಲ ಪೆಟ್ಟು ಬಿದ್ದಿತು
ಮಾರ್ಕಂಡೇಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಡೆವೊನ್ ಕಾನ್ವೆ ತಮ್ಮ ಅರ್ಧಶತಕ ಪೂರೈಸಿದರು. ಅವರು 33 ಎಸೆತಗಳಲ್ಲಿ 50 ರನ್ ಪೂರೈಸಿದರು.
ಪವರ್ ಪ್ಲೇಯ ಕೊನೆಯ ಓವರ್‌ನಲ್ಲಿ ಕಾನ್ವೇ ಬೌಂಡರಿ ಬಾರಿಸಿದ್ದು ಬಿಟ್ಟರೆ, 9ನೇ ಓವರ್ವರೆಗೂ ಯಾವುದೇ ಬೌಂಡರಿ ಬಂದಿಲ್ಲ. ಸದ್ಯ ಸಿಎಸ್ಕೆ ಉತ್ತಮ ಸ್ಥಿತಿಯಲ್ಲಿರುವುದರಿಂದ ಬ್ಯಾಟರ್ಗಳು ಬೌಂಡರಿಗಳ ಮೊರೆ ಹೋಗುತ್ತಿಲ್ಲ.
ಪವರ್ ಪ್ಲೇಯ ಕೊನೆಯ ಓವರ್ ಬೌಲ್ ಮಾಡಿದ ಯಾನ್ಸೆನ್ ತುಂಬಾ ದುಬಾರಿಯಾದರು. ಈ ಓವರ್‌ನ ಕೊನೆಯ 5 ಎಸೆತಗಳನ್ನು ಕಾನ್ವೇ ಬೌಂಡರಿಗಟ್ಟಿದರು. 2 ಮತ್ತು 3ನೇ ಎಸೆತದಲ್ಲಿ ಬೌಂಡರಿ ಬಂದರೆ, 4ನೇ ಎಸೆತದಲ್ಲಿ ಸಿಕ್ಸರ್ ಬಂತು. ಇನ್ನುಳಿದ 2 ಎಸೆತಗಳಲ್ಲಿ ಬೌಂಡರಿ ಬಂದವು.
ಚೆನ್ನೈ 5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 37 ರನ್ ಗಳಿಸಿದೆ. ಕಾನ್ವೆ ಮತ್ತು ಗಾಯಕ್ವಾಡ್ ಕ್ರೀಸ್‌ನಲ್ಲಿದ್ದಾರೆ. ಈ ಓವರ್‌ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ.
ಏಡನ್ ಮಾರ್ಕ್ರಾಮ್ ಎಸೆದ ಮೂರನೇ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಕಾನ್ವೇ ಬೌಂಡರಿ ಬಾರಿಸಿದರು.
ಎರಡನೇ ಓವರ್‌ನ ಮೂರನೇ ಎಸೆತದಲ್ಲಿ ಡೆವೊನ್ ಕಾನ್ವೆ ಬೌಂಡರಿ ಬಾರಿಸಿದರು. ನಂತರ ಗಾಯಕ್ವಾಡ್ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದರು. ಈ ಓವರ್‌ನಲ್ಲಿ ಚೆನ್ನೈ 11 ರನ್ ಗಳಿಸಿತು.
ಚೆನ್ನೈ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು. ಭುವನೇಶ್ವರ್ ಕುಮಾರ್ ಮೊದಲ ಓವರ್ ಬೌಲ್ ಮಾಡಿ 6 ರನ್ ನೀಡಿದರು.
ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್ 134 ರನ್‌ಗಳಿಗೆ ಅಂತ್ಯಗೊಂಡಿದೆ. ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಎಂಎಸ್ ಧೋನಿ ವಿಕೆಟ್ ಹಿಂದಿನಿಂದ ರನೌಟ್ ಮಾಡಿದರು. ಹೈದರಾಬಾದ್ ಪರ ಅಭಿಷೇಕ್ ಶರ್ಮಾ ಗರಿಷ್ಠ 34 ರನ್ ಗಳಿಸಿದರು. ಮತ್ತೊಂದೆಡೆ, ಚೆನ್ನೈ ಪರ ರವೀಂದ್ರ ಜಡೇಜಾ ಗರಿಷ್ಠ 3 ವಿಕೆಟ್ ಪಡೆದರು.
ಸನ್ ರೈಸರ್ಸ್ ಹೈದರಾಬಾದ್ ಆರನೇ ವಿಕೆಟ್ ಕಳೆದುಕೊಂಡಿದೆ. ಹೆನ್ರಿಚ್ ಕ್ಲಾಸೆನ್ (17) ಕೂಡ ದೊಡ್ಡ ಇನ್ನಿಂಗ್ಸ್ ಆಡಲು ವಿಫಲರಾದರು. ಎಕ್ಸ್‌ಟ್ರಾ ಕವರ್‌ನಲ್ಲಿ ಮಾರ್ಕೊ ನೇರವಾಗಿ ಗಾಯಕ್ವಾಡ್‌ಗೆ ಕ್ಯಾಚ್ ನೀಡಿದರು.
10ನೇ ಓವರ್‌ನಲ್ಲಿ ಬೌಂಡರಿ ಬಾರಿಸಿದ್ದ ಹೈದರಾಬಾದ್ ಬ್ಯಾಟರ್ ಆ ಬಳಿಕ 17ನೇ ಓವರ್‌ನಲ್ಲಿ ಇನ್ನೊಂದು ಬೌಂಡರಿ ಬಾರಿಸಿದ್ದಾರೆ. ಅಂದರೆ ಬರೋಬ್ಬರಿ 35 ಎಸೆತಗಳ ನಂತರ ಬೌಂಡರಿ ಬಂದಿದೆ.
ಹೈದರಾಬಾದ್ ತಂಡದ 5 ವಿಕೆಟ್ ಉರುಳಿದ್ದು, ತಂಡದ ಬ್ಯಾಟಿಂಗ್ ನಿಧಾನವಾಗಿ ಸಾಗುತ್ತಿದೆ. ತಂಡ 15ನೇ ಓವರ್‌ನಲ್ಲಿ ತನ್ನ ಶತಕ ಪೂರೈಸಿದೆ.
ಸನ್ ರೈಸರ್ಸ್ ಹೈದರಾಬಾದ್ ಐದನೇ ವಿಕೆಟ್ ಕಳೆದುಕೊಂಡಿದೆ. ಓಪನಿಂಗ್‌ನಿಂದ ಕೆಳಗಿಳಿದು ಮಧ್ಯಮ ಕ್ರಮಾಂಕಕ್ಕೆ ಕಳುಹಿಸಿದ ಮಯಾಂಕ್ ಅಗರ್ವಾಲ್ (2) ಅವರನ್ನು ಧೋನಿ ಸ್ಟಂಪ್ ಮಾಡಿದರು. ಇದು ರವೀಂದ್ರ ಜಡೇಜಾ ಅವರ ಮೂರನೇ ವಿಕೆಟ್.
ಸನ್ ರೈಸರ್ಸ್ ಇನ್ನಿಂಗ್ಸ್ ತತ್ತರಿಸುತ್ತಿದೆ. ನಾಯಕ ಏಡನ್ ಮಾರ್ಕ್ರಾಮ್ ಕೂಡ ಪೆವಿಲಿಯನ್‌ಗೆ ಮರಳಿದ್ದಾರೆ. ಮಹಿಷ್ ತೀಕ್ಷಣ ಎಸೆತದಲ್ಲಿ ಧೋನಿ ಮಾರ್ಕ್ರಾಮ್ ಕ್ಯಾಚ್ ಪಡೆದರು.
ಹೈದರಾಬಾದ್ ಕೂಡ ಮೂರನೇ ವಿಕೆಟ್ ಕಳೆದುಕೊಂಡಿದೆ. ರಾಹುಲ್ ತ್ರಿಪಾಠಿ (21) ಅವರ ಕೆಟ್ಟ ಫಾರ್ಮ್ ಮುಂದುವರಿದಿದೆ. ಈಗಾಗಲೇ ಒಂದು ವಿಕೆಟ್ ಪಡೆದಿದ್ದ ರವೀಂದ್ರ ಜಡೇಜಾ ತ್ರಿಪಾಠಿಯನ್ನು ಬೇಟೆಯಾಡಿದ್ದಾರೆ.
10 ಓವರ್‌ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸ್ಕೋರ್ 76-2. ರಾಹುಲ್ ತ್ರಿಪಾಠಿ ಮತ್ತು ಏಡನ್ ಮಾರ್ಕ್ರಾಮ್ ಕ್ರೀಸ್‌ನಲ್ಲಿದ್ದಾರೆ.
ಹೈದರಾಬಾದ್ ತಂಡದ ಎರಡನೇ ವಿಕೆಟ್ ಕೂಡ ಪತನಗೊಂಡಿದೆ. ಎಂಟನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಅಭಿಷೇಕ್ ಶರ್ಮಾ (34) ಅವರ ವಿಕೆಟ್ ಪಡೆದರು.ಜಡೇಜಾ ಬೌಲಿಂಗ್ನಲ್ಲಿ ಲಾಂಗ್ ಆನ್ನಲ್ಲಿ ಕ್ಯಾಚಿತ್ತು ಅಭಿಷೇಕ್ ಔಟಾದರು. 9.2 ಓವರ್‌ಗಳಲ್ಲಿ ಹೈದರಾಬಾದ್ 71-2
ಮೊಯಿನ್ ಅಲಿ ಎಸೆದ 7ನೇ ಓವರ್‌ನ ಮೊದಲ ಎಸೆತದಲ್ಲಿ ರಾಹುಲ್ ಬೃಹತ್ ಸಿಕ್ಸರ್ ಬಾರಿಸಿದರು.
ಪವರ್ ಪ್ಲೇನ ಅಂತಿಮ ಓವರ್‌ನ ಕೊನೆಯ ಎಸೆತದಲ್ಲಿ ಅಭಿಷೇಕ್ ಅದ್ಭುತ ಬೌಂಡರಿ ಬಾರಿಸಿದರು. ಇದರೊಂದಿಗೆ ಪವರ್ ಪ್ಲೇನಲ್ಲಿ ತಂಡದ ಸ್ಕೋರ್ ಒಂದು ವಿಕೆಟ್ ನಷ್ಟಕ್ಕೆ 45 ರನ್ ಆಗಿದೆ.
ಆಕಾಶ್ ಸಿಂಗ್ ಎಸೆದ 5ನೇ ಓವರ್‌ನ ಎರಡನೇ ಎಸೆತದಲ್ಲಿ ಬ್ರೂಕ್ ಕ್ಯಾಚಿತ್ತು ಔಟಾದರು.
ದೇಶಪಾಂಡೆ ಎಸೆದ 4ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಬ್ರೂಕ್ ಬೌಂಡರಿ ಹೊಡೆದರು.
ಆಕಾಶ್ ಎಸೆದ 3ನೇ ಓವರ್‌ನ 4ನೇ ಎಸೆತದಲ್ಲಿ ಅಭಿಷೇಕ್ ಫೈನ್ ಲೆಗ್ ತಲೆಯ ಮೇಲೆ ಸಿಕ್ಸರ್ ಬಾರಿಸಿದರು.
ದೇಶಪಾಂಡೆ ಎಸೆದ 2ನೇ ಓವರ್‌ನ ಕೊನೆಯ ಎಸೆತವನ್ನು ಅಭಿಷೇಕ್ ಥರ್ಡ್ಮ್ಯಾನ್ನಲ್ಲಿ ಬೌಂಡರಿಗಟ್ಟಿದರು.
ಹೈದರಾಬಾದ್ ಇನ್ನಿಂಗ್ಸ್ ಆರಂಭವಾಗಿದೆ ಆದರೆ ಈ ಬಾರಿ ತಂಡವು ಆರಂಭಿಕ ಜೋಡಿಯನ್ನು ಬದಲಾಯಿಸಿದೆ. ಈ ಬಾರಿ, ಮಯಾಂಕ್ ಅಗರ್ವಾಲ್ ಬದಲಿಗೆ ಹ್ಯಾರಿ ಬ್ರೂಕ್ ಅವರೊಂದಿಗೆ ಅಭಿಷೇಕ್ ಶರ್ಮಾ ಅವರನ್ನು ಕಣಕ್ಕಿಳಿಸಲಾಗಿದೆ. ಮೊದಲ ಓವರ್‌ನಲ್ಲಿ 1 ಬೌಂಡರಿ ಕೂಡ ಬಂತು.
ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ಕೀಪರ್/ನಾಯಕ), ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ಆಕಾಶ್ ಸಿಂಗ್, ಮತಿಶಾ ಪತಿರಾನ.
ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್(ನಾಯಕ), ಹೆನ್ರಿಚ್ ಕ್ಲಾಸೆನ್, ಅಭಿಷೇಕ್ ಶರ್ಮಾ, ವಾಷಿಂಗ್ಟನ್ ಸುಂದರ್, ಮಾರ್ಕೊ ಯಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಉಮ್ರಾನ್ ಮಲಿಕ್.
ಟಾಸ್ ಗೆದ್ದ ಚೆನ್ನೈ ನಾಯಕ ಧೋನಿ, ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 7:00 pm, Fri, 21 April 23