IPL 2022 ನಲ್ಲಿ ಶನಿವಾರ ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ . ಈ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಅದರಂತೆ CSK ಮೊದಲು ಬ್ಯಾಟ್ ಮಾಡಲಿದೆ. ಈ ಪಂದ್ಯಕ್ಕಾಗಿ ಚೆನ್ನೈ (CSK) ತಂಡದಲ್ಲಿ ಒಂದು ಬದಲಾವಣೆ ಮಾಡಿದೆ. ಹಾಗೆಯೇ ಸನ್‌ರೈಸರ್ಸ್ ಹೈದರಾಬಾದ್ ಎರಡು ಬದಲಾವಣೆಗಳನ್ನು ಮಾಡಿಕೊಂಡಿದೆ. ಗೆಲುವಿನ ಹುಡುಕಾಟದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಇಲ್ಲಿಯವರೆಗೆ ಆಡಿದ ಮೂರೂ ಪಂದ್ಯಗಳಲ್ಲಿ ಚೆನ್ನೈ ಸೋಲು ಕಂಡಿದೆ. ಅದೇ ರೀತಿ ಹೈದರಾಬಾದ್ ಕೂಡ ಇದುವರೆಗೆ ಆಡಿದ 2 ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದೆ.
CSK vs SRH ಪ್ಲೇಯಿಂಗ್ 11 ಬದಲಾವಣೆ:
ವಿಶೇಷವೆಂದರೆ ಗೆಲುವಿನ ಹುಡುಕಾಟದಲ್ಲಿರುವ ಎರಡೂ ತಂಡಗಳು ಪ್ಲೇಯಿಂಗ್ 11 ಇಲೆವೆನ್ ನಲ್ಲಿ ಬದಲಾವಣೆ ಮಾಡಿಕೊಂಡಿವೆ. ಚೆನ್ನೈ ಸೂಪರ್ ಕಿಂಗ್ಸ್ ಡ್ವೇನ್ ಪ್ರಿಟೋರಿಯಸ್ ಬದಲಿಗೆ ಮಹೇಶ್ ತೀಕ್ಷಣ ಅವರನ್ನು ಆಯ್ಕೆ ಮಾಡಿದೆ. ಸನ್‌ರೈಸರ್ಸ್ ಹೈದರಾಬಾದ್ ರೊಮಾರಿಯೊ ಶೆಫರ್ಡ್ ಬದಲಿಗೆ ಮಾರ್ಕೊ ಜಾನ್ಸನ್ ಮತ್ತು ಅಬ್ದುಲ್ ಸಮದ್ ಬದಲಿಗೆ ಶಶಾಂಕ್ ಸಿಂಗ್ ಅವರನ್ನು ಆಯ್ಕೆ ಮಾಡಿದೆ.
ಇನ್ನುಳಿದಂತೆ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರೇ ಕಣಕ್ಕಿಳಿಯಲಿದ್ದಾರೆ. ಸಿಎಸ್ಕೆ ಪರ ರುತುರಾಜ್ ಗಾಯಕ್ವಾಡ್-ರಾಬಿನ್ ಉತ್ತಪ್ಪ ಇನಿಂಗ್ಸ್ ಆರಂಭಿಸಲಿದ್ದಾರೆ. ಮತ್ತೊಂದೆಡೆ, ಸನ್‌ರೈಸರ್ಸ್ ಆರಂಭಿಕರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆರೆಂಜ್ ಆರ್ಮಿ ಖಂಡಿತವಾಗಿಯೂ ತನ್ನ ಮಧ್ಯಮ ಕ್ರಮಾಂಕವನ್ನು ಟ್ಯಾಂಪರ್ ಮಾಡಿದೆ. ಶ್ರೀಲಂಕಾದ ಮಿಸ್ಟರಿ ಸ್ಪಿನ್ನರ್ ಮಹೇಶ್ ಟೀಕ್ಷಣ ಅವರಿಗೆ ಚೆನ್ನೈ ಅವಕಾಶ ನೀಡಿದ್ದು, ಈ ಪ್ಲ್ಯಾನ್ ಫಲಿಸಲಿದೆಯಾ ಕಾದು ನೋಡಬೇಕಿದೆ.
A look at the Playing XI for #CSKvSRH
Live – https://t.co/8pocfkHpDe #CSKvSRH #TATAIPL pic.twitter.com/ztAWNqtV9U
— IndianPremierLeague (@IPL) April 9, 2022
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಹೀಗಿದೆ
ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್, ರಾಹುಲ್ ತ್ರಿಪಾಠಿ, ಏಡನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ಶಶಾಂಕ್ ಸಿಂಗ್, ಮಾರ್ಕೊ ಜಾನ್ಸನ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ.ನಟರಾಜನ್
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ XI: ರುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಮೊಯಿನ್ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ, ಶಿವಂ ದುಬೆ, ಡ್ವೇನ್ ಬ್ರಾವೋ, ಮಹೇಶ್ ತಿಕ್ಷಣ, ಕ್ರಿಸ್ ಜೋರ್ಡಾನ್, ಮುಖೇಶ್ ಚೌಧರಿ
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?