ಅಬುಧಾಬಿ ಟಿ10 ಲೀಗ್‌ನಲ್ಲಿ ಕೇವಲ 3 ಎಸೆತಗಳಲ್ಲಿ 4 ನೋ ಬಾಲ್ ಸಹಿತ 33 ರನ್ ನೀಡಿದ್ದ ಶ್ರೀಲಂಕಾದ ಮಾಜಿ ನಾಯಕ ಮತ್ತು ಆಲ್‌ರೌಂಡರ್ ದಸುನ್ ಶನಕ ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸುತ್ತಿದ್ದಾರೆ. ಡೆಲ್ಲಿ ಬುಲ್ಸ್ ಹಾಗೂ ಬೆಂಗಾಲ್ ಟೈಗರ್ಸ್ ನಡುವಿನ ಪಂದ್ಯದಲ್ಲಿ ದಸುನ್ ಶನಕ ಕೇವಲ 3 ಎಸೆತಗಳಲ್ಲಿ 30 ರನ್ ಬಿಟ್ಟುಕೊಟ್ಟ ಘಟನೆ ಇದೀಗ ಕ್ರಿಕೆಟ್ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೇವಲ 4-5 ವರ್ಷಗಳಿಂದ ಹುಟ್ಟಿಕೊಂಡರುವ ಅಬುಧಾಬಿ ಟಿ10 ಲೀಗ್ನ ಆರಂಭದಲ್ಲಿ ಕೇವಲ ಬೆರಳೆಣಿಕೆಯಷ್ಟು ಸ್ಟಾರ್ ಕ್ರಿಕೆಟಿಗರು ಮಾತ್ರ ಆಡುತ್ತಿದ್ದರು. ಆದರೆ ಟಿ20 ಮತ್ತು ಟಿ10 ಕ್ರಿಕೆಟ್‌ಗೆ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ ವಿಶ್ವದ ಪ್ರಸಿದ್ಧ ಕ್ರಿಕೆಟಿಗರು ಈ ಲೀಗ್‌ನಲ್ಲಿ ಆಡುತ್ತಿದ್ದಾರೆ. ಇದರ ಜೊತೆಗೆ ಈ ಲೀಗ್ನ ಪ್ರತಿಯೊಂದು ಪಂದ್ಯವೂ ಒಂದಿಲ್ಲೊಂದು ವಿವಾದಕ್ಕೆ ಸಿಲುಕಿಕೊಳ್ಳುತ್ತಿದೆ.
ಈ ಲೀಗ್‌ನಲ್ಲಿ ನವೆಂಬರ್ 25 ರಂದು ನಡೆದ ಡೆಲ್ಲಿ ಬುಲ್ಸ್ ಮತ್ತು ಬೆಂಗಾಲ್ ಟೈಗರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಡೆಲ್ಲಿ ತಂಡ ಮೊದಲು ಬ್ಯಾಟ್ ಮಾಡಿ 10 ಓವರ್‌ಗಳಲ್ಲಿ 6 ವಿಕೆಟ್‌ಗೆ 123 ರನ್ ಗಳಿಸಿತು. ಈ ಪಂದ್ಯದಲ್ಲಿ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ನಿಖಿಲ್ ಚೌಧರಿ ಡೆಲ್ಲಿ ಪರ ಗರಿಷ್ಠ 47 ರನ್ ಗಳಿಸಿದರು. ಅದು ಕೇವಲ 16 ಎಸೆತಗಳಲ್ಲಿ. ಇದರಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ಗಳಿದ್ದವು. ಇದರಲ್ಲಿ ನಿಖಿಲ್ ಒಂದೇ ಓವರ್‌ನಲ್ಲಿ 28 ರನ್ ಗಳಿಸಿದ್ದು, ಅವರ ಸ್ಫೋಟಕ ಆಟಕ್ಕೆ ಸಾಕ್ಷಿಯಾಗಿತ್ತು.
ಆದರೆ ಮೈದಾನದಲ್ಲಿ ಬೌಂಡರಿಗಳ ಮಳೆಗರೆದ ನಿಖಿಲ್ಗಿಂತ ಹೆಚ್ಚಾಗಿ ಈ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 4 ನೋ ಬಾಲ್ ಎಸೆದ ಶ್ರೀಲಂಕಾದ ಮಾಜಿ ನಾಯಕ ದಸುನ್ ಶನಕ ಚರ್ಚೆಯಲ್ಲಿದ್ದಾರೆ. ಶ್ರೀಲಂಕಾದ ಈ ಸ್ಟಾರ್ ಆಲ್ ರೌಂಡರ್ ಒಂದೇ ಓವರ್‌ನಲ್ಲಿ 33 ರನ್‌ಗಳನ್ನು ಬಿಟ್ಟುಕೊಟ್ಟರು. ಅಚ್ಚರಿಯೆಂದರೆ ಶನಕ ಈ ಓವರ್‌ನಲ್ಲಿ ಬರೋಬ್ಬರಿ 4 ನೋ ಬಾಲ್‌ಗಳನ್ನು ಬೌಲ್ ಮಾಡಿದರು. ಹೀಗಾಗಿ ಶನಕ ಅವರ ಈ ನಡೆ ಎಲ್ಲರಲ್ಲೂ ಅನುಮಾನ ಮೂಡಿಸಿದ್ದು, ಲಂಕಾ ತಂಡದ ಮಾಜಿ ನಾಯಕ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ನೆಟ್ಟಿಗರು ಆರೋಪ ಹೊರಿಸುತ್ತಿದ್ದಾರೆ.
What just happened in the T10 LEAGUE: 4 front foot no balls from Dasun Shanaka 🫡 pic.twitter.com/0kbPZhyXlS
— Dinda Academy (@academy_dinda) November 26, 2024
ಶನಕ ಅವರ ಮೊದಲ ಎಸೆತವನ್ನು ನಿಖಿಲ್ ಬೌಂಡರಿ ಬಾರಿಸಿದರು. ನಂತರ ಮುಂದಿನ ಎರಡು ಎಸೆತಗಳನ್ನು ಶನಕ ನೋ ಬಾಲ್ ಮಾಡಿದರು. ಆ ಎಸೆತದಲ್ಲೂ ನಿಖಿಲ್ ಬೌಂಡರಿ ಕಲೆಹಾಕಿದರು. ಎರಡನೇ ಫೇರ್ ಬಾಲ್ನಲ್ಲಿ ಮತ್ತೊಂದು ಬೌಂಡರಿ ಬಂತು. ನಂತರ ಮೂರನೇ ಬಾಲ್ನಲ್ಲಿ ನಿಖಿಲ್ ಸಿಕ್ಸರ್ ಬಾರಿಸಿದರು. ನಂತರದ ಎಸೆತವೂ ನೋ ಬಾಲ್ ಆಗಿತ್ತು. ಆದರೆ ಅದರಲ್ಲಿ ಯಾವುದೇ ರನ್ ಬರಲಿಲ್ಲ. ಆ ನಂತರದ ಎಸೆತವನ್ನು ಶನಕ ನೋ ಬಾಲ್ ಮಾಡಿದರು. ಇದರಲ್ಲಿ ನಿಖಿಲ್ ಮತ್ತೊಂದು ಬೌಂಡರಿ ಕಲೆಹಾಕಿದರು. ಒಟ್ಟಾರೆ ಶನಕ ಬೌಲ್ ಮಾಡಿದ ಈ ಓವರ್‌ನಲ್ಲಿ 4, 4(nb),4(nb),4,6,(nb),4(nb) ದೃಶ್ಯ ಕಂಡುಬಂತು.
Welcome to Abu Dhabi T10 league
This is a NO BALL bowled by Hazrat Bilal of Morrisville Samp Army against New York Strikers in 4th over.
Tell me a better sign than this to indicate that spot fixing exists#ADT10 #AbuDhabiT10League #AUSvIND #WIvBAN #WBBL10 pic.twitter.com/4nCNuX9d2X
— Scoop Shot (@Scoopshott) November 22, 2024
ಆ ಓವರ್ನ ಉಳಿದ 3 ಎಸೆತಗಳಲ್ಲಿ ಶನಕ ಕೇವಲ ಒಂದು ರನ್ ಬಿಟ್ಟುಕೊಟ್ಟರು. ಹೀಗಾಗಿ ಒಂದೇ ಓವರ್‌ನಲ್ಲಿ 33 ರನ್ ಬಂದವು. ಇಲ್ಲಿ ಶನಕ ಬೌಲ್ ಮಾಡಿದ ನೋ ಬಾಲ್‌ಗಳನ್ನು ನೋಡಿದರೆ, ಶನಕ ಬೇಕಂತಲೇ ನೋ ಬಾಲ್ ಎಸೆದಿದ್ದಾರೆ ಎಂಬುದು ಸ್ಪಷ್ಟವಾಗುತ್ತಿತ್ತು. ಏಕೆಂದರೆ ಶನಕ ಅವರ ಕಾಲು ಕ್ರೀಸ್‌ನ ಹೊರಗೆ ಒಂದು ಅಡಿ ದೂರ ಇತ್ತು. ಇದರಿಂದ ಶನಕ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:05 pm, Thu, 28 November 24