David warner: ಕೊಹ್ಲಿಯಂತೆ ಮೈದಾನದಲ್ಲೇ ಡೇವಿಡ್ ವಾರ್ನರ್ ಸಖತ್ ಸ್ಟೆಪ್: ವಿಡಿಯೋ ವೈರಲ್

| Updated By: ಝಾಹಿರ್ ಯೂಸುಫ್

Updated on: Mar 08, 2022 | 6:26 PM

David warner funny dance video: ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ನೃತ್ಯ ಮತ್ತು ಇತರೆ ವಿಡಿಯೋ ಮೂಲಕ ರಂಜಿಸುವ ವಾರ್ನರ್ ಈ ಬಾರಿ ಮೈದಾನದಲ್ಲೇ ಸಖತ್ ಸ್ಟೆಪ್ಸ್ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

David warner: ಕೊಹ್ಲಿಯಂತೆ ಮೈದಾನದಲ್ಲೇ ಡೇವಿಡ್ ವಾರ್ನರ್ ಸಖತ್ ಸ್ಟೆಪ್: ವಿಡಿಯೋ ವೈರಲ್
David warner
Follow us on

ರಾವಲ್ಪಿಂಡಿಯಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ (Pakistan vs Australia, 1st Test) ನಡುವನ ಮೊದಲ ಪಂದ್ಯ ನಡೆಯುತ್ತಿದೆ . ನಿರ್ಜೀವ ಎನಿಸಿಕೊಂಡಿರುವ ಪಿಚ್​ನಲ್ಲಿ ಬ್ಯಾಟರ್​ಗಳ ಅಬ್ಬರ ಮುಂದುವರೆದಿದೆ. ಅತ್ತ ವಿಕೆಟ್​ಗಾಗಿ ಬೌಲರುಗಳು ಪರದಾಡುತ್ತಿದ್ದಾರೆ. ಇನ್ನು ಬ್ಯಾಟರ್​ಗಳು ಆಯ್ದ ಶಾಟ್​ಗಳ ಮೂಲಕ ರನ್​ಗಳಿಸುತ್ತಿರುವ ಪರಿಣಾಮ ಫೀಲ್ಡರ್​ಗಳಿಗೂ ಹೆಚ್ಚಿನ ಕೆಲಸವಿಲ್ಲ. ಈ ಸಮಯವಕಾಶವನ್ನು ಬಳಿಸಿಕೊಂಡಿರುವ ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಫನ್ನಿ ಡ್ಯಾನ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ರಾವಲ್ಪಿಂಡಿ ಟೆಸ್ಟ್‌ನ ಐದನೇ ದಿನದಂದು ವಾರ್ನರ್ ಮೈದಾನದಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ನೃತ್ಯ ಮತ್ತು ಇತರೆ ವಿಡಿಯೋ ಮೂಲಕ ರಂಜಿಸುವ ವಾರ್ನರ್ ಈ ಬಾರಿ ಮೈದಾನದಲ್ಲೇ ಸಖತ್ ಸ್ಟೆಪ್ಸ್ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

ಈ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಪಾಕಿಸ್ತಾನದ ಎರಡನೇ ಇನ್ನಿಂಗ್ಸ್‌ನಲ್ಲಿ ಫೀಲ್ಡಿಂಗ್ ಸಮಯದಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ವಿಶೇಷ ಎಂದರೆ ವಾರ್ನರ್ ಅವರ ಡ್ಯಾನ್ಸ್ ವಿರಾಟ್ ಕೊಹ್ಲಿಯನ್ನು ನೆನಪಿಸುವಂತಿದೆ. ಏಕೆಂದರೆ ಕೊಹ್ಲಿ ಕೂಡ ಆಗಾಗ್ಗೆ ಮೈದಾನದಲ್ಲಿ ಸಣ್ಣ ಪುಟ್ಟ ಸ್ಟೆಪ್ಸ್ ಹಾಕುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಅದೇ ಮಾದರಿಯಲ್ಲೇ ವಾರ್ನರ್ ಕೂಡ ಹೆಜ್ಜೆ ಹಾಕಿರುವುದು ವಿಶೇಷ. ಹೀಗಾಗಿ ಫಾಕ್ಸ್ ಸ್ಪೋರ್ಟ್ಸ್ ಚಾನೆಲ್​ ಕೂಡ ವಾರ್ನರ್ ನೃತ್ಯದ ವಿಡಿಯೋ ಜೊತೆ ವಿರಾಟ್ ಕೊಹ್ಲಿ ಕೆಲ ಮೂವ್​ಮೆಂಟ್​ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಇಬ್ಬರಲ್ಲಿ ಯಾರ ಡ್ಯಾನ್ಸ್ ಚೆನ್ನಾಗಿದೆ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ರಾವಲ್ಪಿಂಡಿಯ ಪಿಚ್‌ ಬಗ್ಗೆ ಅಸಮಾಧಾನ:
ರಾವಲ್ಪಿಂಡಿ ಪಿಚ್ ಬಗ್ಗೆ ಪಿಸಿಬಿ ವಿರುದ್ದ ಭಾರೀ ಟೀಕೆಗಳು ಕೇಳಿ ಬರುತ್ತಿದೆ. ಎರಡು ದಶಕಗಳ ಬಳಿಕ ಆಸ್ಟ್ರೇಲಿಯ ತಂಡ ಪಾಕ್ ಪ್ರವಾಸಕ್ಕೆ ಆಗಮಿಸಿದ್ದು, ಮೊದಲ ಪಂದ್ಯದಲ್ಲೇ ತವರಿನ ತಂಡ ಸಂಪೂರ್ಣ ಪಿಚ್​ನ ಆಡುವ ಅವಕಾಶ ಪಡೆದುಕೊಂಡಿದೆ. ಅದರಲ್ಲೂ ಬೌಲರ್‌ಗಳಿಗೆ ನಿರ್ಜೀವ ಎನಿಸಿಕೊಳ್ಳುವ ಪಿಚ್ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ಮತ್ತು ಹ್ಯಾಝಲ್​ವುಡ್​ ಅವರಂತಹ ಬೌಲರ್‌ಗಳು ಕೂಡ ಈ ಪಿಚ್‌ನಲ್ಲಿ ದಯನೀಯವಾಗಿ ವಿಫಲರಾಗಿದ್ದಾರೆ.

ಪಾಕಿಸ್ತಾನದ ಆರಂಭಿಕ ಆಟಗಾರ ಇಮಾಮ್-ಉಲ್-ಹಕ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿ ಮಿಂಚಿದ್ದಾರೆ. ಹಾಗೆಯೇ ಇದುವರೆಗೆ ಆಡಿದ ಎಲ್ಲಾ ಮೂರು ಇನ್ನಿಂಗ್ಸ್‌ಗಳಲ್ಲಿ ಶತಕ ಆರಂಭಿಕ ಜೊತೆಯಾಟ ಮೂಡಿಬಂದಿದೆ. ಇದು 1947 ರ ನಂತರ ಮೊದಲ ಬಾರಿಗೆ ಸಂಭವಿಸಿರುವುದು ವಿಶೇಷ. ಸ್ಟೀವ್ ಸ್ಮಿತ್ ಈ ಪಿಚ್ ನಿರ್ಜೀವ ಎಂದು ಬಣ್ಣಿಸಿದ್ದಾರೆ. ಹಾಗೆಯೇ ಪಾಕ್ ಕ್ರಿಕೆಟಿಗ ಮೊಹಮ್ಮದ್ ಅಮೀರ್ ರಾವಲ್ಪಿಂಡಿಯಲ್ಲಿ ಬೌಲರ್‌ಗಳು ಮನೆಗೆ ಹೋಗಬೇಕು, ಬ್ಯಾಟ್ಸ್‌ಮನ್‌ಗಳು ಮಾತ್ರ ಆಡುತ್ತಲೇ ಇರುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Ipl 2022 Rcb Schedule: RCB ತಂಡ ಸಂಪೂರ್ಣ ವೇಳಾಪಟ್ಟಿ ಹೀಗಿದೆ

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(David warner funny dance video Pakistan vs Australia, 1st Test Rawalpindi)