ಮತ್ತೊಂದು ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಜಯಭೇರಿ ಬಾರಿಸಿದೆ. ಗುವಾಹಟಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ 2ನೇ ಪಂದ್ಯದಲ್ಲಿ ಚೇಸಿಂಗ್ ಮಾಡುವಾಗ ಸೋತಿದ್ದ ರಾಜಸ್ಥಾನ, ಈ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 57 ರನ್‌ಗಳಿಂದ ಸೋಲಿಸಿದ ರಾಜಸ್ಥಾನ್ ಟೂರ್ನಿಯ ಎರಡನೇ ಗೆಲುವು ದಾಖಲಿಸಿದೆ. ಅದೇ ಸಮಯದಲ್ಲಿ, ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಡೆಲ್ಲಿ ಸತತ ಮೂರನೇ ಸೋಲನ್ನು ಅನುಭವಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕಿಳಿದಿದೆ.
ಇಂಡಿಯನ್ ಪ್ರೀಮಿಯರ್ ಲೀಗ್-16ರ 11ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೂರನೇ ಪಂದ್ಯದಲ್ಲೂ ಸೋಲು ಕಂಡಿದೆ. ರಾಜಸ್ಥಾನ್ ರಾಯಲ್ಸ್ ನೀಡಿದ್ದ 200 ರನ್‌ಗಳ ಗುರಿ ತಲುಪಲು ವಿಫಲವಾದ ಡೆಲ್ಲಿ ನಿಗದಿತ ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 142 ರನ್ ಮಾತ್ರ ಗಳಿಸಿತು. ಇದರೊಂದಿಗೆ ರಾಜಸ್ಥಾನ ರಾಯಲ್ಸ್ ತಂಡ 57 ರನ್‌ಗಳ ಅಂತರದಲ್ಲಿ ಎರಡನೇ ಜಯ ದಾಖಲಿಸಿತು.
ಕೊನೆಯ 6 ಎಸೆತಗಳಲ್ಲಿ ಡೆಲ್ಲಿಗೆ 60 ರನ್ ಬೇಕಿದೆ. 19ನೇ ಓವರ್‌ನಲ್ಲಿ ಬಿಗ್ ಶಾಟ್ ಹೊಡೆಯುವ ಯತ್ನದಲ್ಲಿ ಅಭಿಷೇಕ್ ಪೊರೆಲ್ ಕ್ಯಾಚಿತ್ತು ಔಟಾದರು.
17ನೇ ಓವರ್‌ನ 3ನೇ ಎಸೆತದಲ್ಲಿ ವಾರ್ನರ್ ಕ್ಯಾಚ್ ನೀಡಿದರು. ಆದರೆ ಫೀಲ್ಡರ್ ಮಾಡಿದ ಎಡವಟ್ಟಿನಿಂದ ನೋ ಬಾಲ್ ಎಂದು ಅಂಪೈರ್ ತೀರ್ಮಾನ ನೀಡಿದರು. ಅಂದರೆ ಫಿಲ್ಡರ್ 30 ಯಾರ್ಡ್ ಸರ್ಕಲ್ನಿಂದ ಹೊರಗಿದ್ದರು.
ಅಕ್ಷರ್ ಪಟೇಲ್ ಬಳಿಕ ಬಂದ ಬಿಗ್ ಹಿಟ್ಟರ್ ಪೊವೆಲ್ ಕೂಡ ಬಿಗ್ ಹಿಟ್ ಹೊಡೆಯುವ ಯತ್ನದಲ್ಲಿ ಕೇವಲ 2 ರನ್ ಗಳಿಸಿ ಕ್ಯಾಚಿತ್ತು ಔಟಾಗಿದ್ದಾರೆ.
15ನೇ ಓವರ್‌ನಲ್ಲಿ ಚಹಲ್ ಬಿಗ್ ವಿಕೆಟ್ ಪಡೆದರು. ಆಲ್ರೌಂಡರ್ ಅಕ್ಷರ್ ಪಟೇಲ್ ಬಿಗ್ ಹಿಟ್ ಹೊಡೆಯುವ ಯತ್ನದಲ್ಲಿ ಸ್ಟಂಪ್ ಔಟ್ ಆಗಿ ವಿಕೆಟ್ ಒಪ್ಪಿಸಿದರು.
14ನೇ ಓವರ್ ಸಂದೀಪ್ ಶರ್ಮಾಗೆ ಡೇವಿಡ್ ವಾರ್ನರ್ ಬೌಂಡರಿ ಬಾರಿಸಿದರು. ಓವರ್‌ನ ಅಂತಿಮ ಎಸೆತವನ್ನು ಮಿಡ್-ವಿಕೆಟ್ ಕಡೆ ಫ್ಲಿಕ್ ಮಾಡಿ ವಾರ್ನರ್ ಬೌಂಡರಿ ಹೊಡೆದರು.
24 ಎಸೆತಗಳಲ್ಲಿ 38 ರನ್ ಗಳಿಸಿ ಆಡುತ್ತಿದ್ದ ಲಲಿತ್ ಯಾದವ್ ಬೋಲ್ಟ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಬೋಲ್ಟ್ಗೆ ಇದು 3ನೇ ವಿಕೆಟ್. ಡೆಲ್ಲಿ ತಂಡ ಈ 13ನೇ ಓವರ್‌ನಲ್ಲಿ ಶತಕ ಪೂರೈಸಿದೆ.
ಡೆಲ್ಲಿ ಇನ್ನಿಂಗ್ಸ್ನ 12 ಓವರ್ಗಳು ಮುಗಿದಿದ್ದು, ತಂಡಕ್ಕೆ ಗೆಲ್ಲಲು 48 ಎಸೆತಗಳಲ್ಲಿ 107 ರನ್‌ಗಳ ಅಗತ್ಯವಿದೆ.
11ನೇ ಓವರ್ ಎಸೆದ ಚಹಲ್ ಕೊಂಚ ದುಬಾರಿಯಾದರು. ಈ ಓವರ್‌ನಲ್ಲಿ ಡೆಲ್ಲಿ 2 ಬೌಂಡರಿ ಸಹಿತ 15 ರನ್ ಕಲೆಹಾಕಿತು.
ಡೆಲ್ಲಿ ತಂಡ ಅಂತಿಮವಾಗಿ 50 ರನ್ ಪೂರ್ಣಗೊಳಿಸಿದೆ. ಇದಕ್ಕಾಗಿ ಬರೋಬ್ಬರಿ 8.1 ಓವರ್ ತೆಗೆದುಕೊಂಡಿದೆ. ತಂಡದ ಪ್ರಮುಖ 3 ವಿಕೆಟ್ ಉರುಳಿದ್ದು, ತಂಡಕ್ಕೆ ಸಾಕಷ್ಟು ಹಿನ್ನಡೆಯುಂಟು ಮಾಡಿದೆ.
ತಮ್ಮ ಖೋಟಾದ ಎರಡನೇ ಒವರ್ ಎಸೆಯಲು ಬಂದ ಅಶ್ವಿನ್ 4ನೇ ಎಸೆತದಲ್ಲಿ ರುಸ್ಸೋ ವಿಕೆಟ್ ಪಡೆದಿದ್ದಾರೆ. ಈ ವಿಕೆಟ್ನೊಂದಿಗೆ ಡೆಲ್ಲಿ ಪಾಳಯದ ಪ್ರಮುಖ 3 ಆಟಗಾರರು ಪೆವಿಲಿಯನ್ ಸೇರಿಕೊಂಡಿದ್ದಾರೆ.
ಡೆಲ್ಲಿ ಇನ್ನಿಂಗ್ಸ್ನ 5 ಓವರ್ ಅಂತ್ಯವಾಗಿದ್ದು, ತಂಡಕ್ಕೆ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಗಿಲ್ಲ. ರಾಜಸ್ಥಾನ್ ಬೌಲರ್ಗಳ ಬಿಗಿ ದಾಳಿಯ ಮುಂದೆ ಬೌಂಡರಿಗಳು ತೀರ ವಿರಳವಾಗಿವೆ.
ಆರಂಭಿಕ ಆಘಾತದಿಂದ ಚೇತರಿಸಿಕೊಂಡಿರುವ ಡೆಲ್ಲಿಗೆ 3ನೇ ಓವರ್‌ನಲ್ಲಿ 2 ಬೌಂಡರಿ ಬಂದವು. ಇನ್ನಿಂಗ್ಸ್ ಭಾರ ಹೊತ್ತಿರುವ ನಾಯಕ ವಾರ್ನರ್ ಈ ಬೌಂಡರಿ ಬಾರಿಸಿದರು.
ಪೃಥ್ವಿ ವಿಕೆಟ್ ಬಳಿಕ ಬಂದ ಮನೀಶ್ ಪಾಂಡೆ ಕೂಡ ಮೊದಲ ಎಸೆತದಲ್ಲೇ ಎಲ್ಬಿ ಬಲೆಗೆ ಬಿದ್ದರು.
ರಾಜಸ್ಥಾನ ನೀಡಿರುವ 200 ರನ್‌ಗಳ ಗುರಿ ಬೆನ್ನಟ್ಟಿರುವ ಡೆಲ್ಲಿಗೆ ಆಘಾತ ಎದುರಾಗಿದೆ. ಮೊದಲ ಓವರ್‌ನ 3ನೇ ಎಸೆತದಲ್ಲೆ ಪೃಥ್ವಿ ಶಾ ವಿಕೆಟ್ ಕೀಪರ್ ಕೈಗೆ ಕ್ಯಾಚಿತ್ತು ಶೂನ್ಯಕ್ಕೆ ಔಟಾದರು.
ಆರಂಭಿಕರಿಬ್ಬರ ಅರ್ಧಶತಕ ಹಾಗೂ ಕೊನೆಯಲ್ಲಿ ಹೆಟ್ಮಯರ್ ಅವರ ಸ್ಫೋಟಕ ಬ್ಯಾಟಿಂಗ್ನಿಂದಾಗಿ ರಾಜಸ್ಥಾನ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 199 ರನ್ ಕಲೆಹಾಕಿದೆ. ಇದರೊಂದಿಗೆ ಡೆಲ್ಲಿಗೆ 200 ರನ್ ಟಾರ್ಗೆಟ್ ಸಿಕ್ಕಿದೆ.
ಮುಖೇಶ್ ಕುಮಾರ್ ದೊಡ್ಡ ವಿಕೆಟ್ ಪಡೆದರು. ಜೋಸ್ ಬಟ್ಲರ್ 79 ರನ್ ಗಳಿಸಿ ಔಟಾದರು. ಓಪನಿಂಗ್ ಬಂದ ಬಟ್ಲರ್ ಅಮೋಘ ಆಟ ಪ್ರದರ್ಶಿಸಿದರು.
18ನೇ ಓವರ್‌ನಲ್ಲಿ ಬಟ್ಲರ್ ಓವರ್‌ನ ಮೂರನೇ ಎಸೆತದಲ್ಲಿ ಫೈನ್ ಲೆಗ್ ಕಡೆ ಬೌಂಡರಿ ಬಾರಿಸಿದರು. ಬಳಿಕ ಅಂತಿಮ ಎಸೆತವನ್ನು ಬೌಲರ್‌ನ ತಲೆಯ ಮೇಲೆ ಫೋರ್ ಹೊಡೆದರು.
17ನೇ ಓವರ್ ಎಸೆಯಲು ಬಂದ ಪೊವೆಲ್ ಮೊದಲ ಎಸೆತದಲ್ಲೇ ನೋ ಬಾಲ್ ಮಾಡಿದರು. ಆದರೆ ನೋ ಬಾಲ್ ಪ್ರಯೋಜನ ಪಡೆದುಕೊಳ್ಳಲು ಬಟ್ಲರ್ಗೆ ಸಾಧ್ಯವಾಗಲಿಲ್ಲ. ಆದರೆ 3ನೇ ಎಸೆತದಲ್ಲಿ ಸ್ಟ್ರೈಕ್ಗೆ ಬಂದ ಹೆಟ್ಮಯರ್ ಲಾಂಗ್ ಆಫ್ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು.
ನಾಯಕ ಸಂಜು ವಿಕೆಟ್ ಬಳಿಕ ಬಂದಿದ್ದ ರಿಯಾನ್ ಪರಾಗ್ 11 ಎಸೆತಗಳಲ್ಲಿ 7 ರನ್ ಬಾರಿಸಿ ಪೊವೆಲ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಜೋಸ್ ಬಟ್ಲರ್ ಅರ್ಧಶತಕ ಪೂರೈಸಿದ್ದಾರೆ. ಸಿಕ್ಸರ್ ಬಾರಿಸುವ ಮೂಲಕ 50ರ ಗಡಿ ದಾಟಿದ್ದಾರೆ. 13ನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಅವರ ಚೆಂಡನ್ನು ಪುಲ್ ಮತ್ತು ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು. ಆ ಓವರ್‌ನಲ್ಲಿ 10 ರನ್ ಬಂದವು.
13 ಓವರ್ಗಳ ಆಟ ಮುಗಿದಿದ್ದು, 2 ವಿಕೆಟ್ ಉರುಳಿದ ಬಳಿಕ ರಾಜಸ್ಥಾನ್ ಬ್ಯಾಟಿಂಗ್ ಕೊಂಚ ನಿಧಾನವಾಗಿದೆ. ಬಟ್ಲರ್ ಹಾಗೂ ಪರಾಗ್ ಈಗ ಕ್ರೀಸ್ನಲ್ಲಿದ್ದಾರೆ. ಸದ್ಯಕ್ಕೆ ರಾಜಸ್ಥಾನ್ 2 ವಿಕೆಟ್ ಕಳೆದುಕೊಂಡು 122 ರನ್ ಗಳಿಸಿದೆ.
ಜೈಸ್ವಾಲ್ ವಿಕೆಟ್ ಬಳಿಕ ಬಂದ ನಾಯಕ ಸಂಜು 4 ಬಾಲ್ ಎದುರಿಸಿ ಯಾವುದೇ ರನ್ ಗಳಿಸದೆ, ಕುಲ್ದೀಪ್ ಓವರ್‌ನಲ್ಲಿ ಲಾಂಗ್ ಆನ್ನಲ್ಲಿ ಕ್ಯಾಚಿತ್ತು ಔಟಾದರು. ಇದರೊಂದಿಗೆ 10 ಓವರ್ಗಳ ಆಟ ಮುಗಿದಿದ್ದು, ರಾಜಸ್ಥಾನದ ಶತಕ ಕೂಡ ಪೂರ್ಣಗೊಂಡಿದೆ.
31 ಎಸೆತಗಳಲ್ಲಿ 60 ರನ್ಗಳಿಸಿ ಅಬ್ಬರಿಸುತ್ತಿದ್ದ ಜೈಸ್ವಾಲ್ರನ್ನು ಯುವ ವೇಗಿ ಮುಖೇಶ್ ಕುಮಾರ್ ಔಟ್ ಮಾಡಿದರು. ಶಾರ್ಟ್ ಬಾಲನ್ನು ಬಿಗ್ ಹಿಟ್ ಮಾಡುವ ಯತ್ನದಲ್ಲಿ ಜೈಸ್ವಾಲ್ ಬೌಲರ್ಗೆ ಕ್ಯಾಚಿತ್ತು ಔಟಾದರು.
ಆರಂಭಿಕ ಜೈಸ್ವಾಲ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. ಇದು ಯಶಸ್ವಿ ಅವರ 5ನೇ ಅರ್ಧಶತಕವಾಗಿದೆ. 7ನೇ ಓವರ್ ಎಸೆದ ಅಕ್ಷರ್ ಪಟೇಲ್ ಈ ಓವರ್‌ನಲ್ಲಿ 2 ಬೌಂಡರಿ ಬಿಟ್ಟುಕೊಟ್ಟರು.
5ನೇ ಓವರ್ ಎಸೆದ ಅಕ್ಷರ್ ಪಟೇಲ್ ಕೂಡ ದುಬಾರಿಯಾದರು. ಈ ಓವರ್ನಲ್ಲೂ ಜೈಸ್ವಾಲ್ ಹ್ಯಾಟ್ರಿಕ್ ಬೌಂಡರಿ ಬಾರಿಸಿದರು.
ರಾಜಸ್ಥಾನ್ಗೆ ಅಬ್ಬರದ ಆರಂಭ ಸಿಕ್ಕಿದೆ. ತಂಡ ಕೇವಲ 4 ಓವರ್ಗಳಲ್ಲೇ ಅರ್ಧಶತಕ ಪೂರೈಸಿದೆ. 4ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಂದರೆ, ಕೊನೆಯ ಎಸೆತದಲ್ಲಿ ಬಟ್ಲರ್ಗೆ 1 ಜೀವದಾನ ಕೂಡ ಸಿಕ್ಕಿತು.
3ನೇ ಓವರ್ನಲ್ಲೂ ಬಟ್ಲರ್ ಮಿಡ್ ಆಫ್ ತಲೆಯ ಮೇಲೆ ಬೌಂಡರಿ ಬಾರಿಸಿದರು. 3 ಓವರ್ ಅಂತ್ಯಕ್ಕೆ 39 ರನ್
ಬ್ಯಾಟಿಂಗ್ ಆರಂಭಿಸಿರುವ ರಾಜಸ್ಥಾನ್ ಆರಂಭಿಕರು ಬರಿ ಬೌಂಡರಿಗಳಲ್ಲೇ ಓವರ್ ಮುಗಿಸುತ್ತಿದ್ದಾರೆ. ಮೊದಲ ಓವರ್‌ನಲ್ಲಿ ಜೈಸ್ವಾಲ್ 5 ಬೌಂಡರಿ ಬಾರಿಸಿದರೆ, 2ನೇ ಓವರ್‌ನಲ್ಲಿ ಬಟ್ಲರ್ 3 ಬೌಂಡರಿ ಬಾರಿಸಿದರು. ಈ ಎರಡು ಓವರ್ಗಳಲ್ಲಿ ಒಂದೇ ಒಂದು ಸಿಂಗಲ್ ಬಂದಿಲ್ಲ.
ರಾಜಸ್ಥಾನ್ ಬ್ಯಾಟಿಂಗ್ ಆರಂಭಿಸಿದೆ. ತಂಡದ ಪರ ಬಟ್ಲರ್ ಹಾಗೂ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಖಲೀಲ್ ಎಸೆದ ಮೊದಲ ಓವರ್ನಲ್ಲೇ ಜೈಸ್ವಾಲ್ 5 ಬೌಂಡರಿ ಬಾರಿಸಿದರು. ಇದರಲ್ಲಿ 4ನೇ ಎಸೆತ ಮಾತ್ರ ಡಾಟ್ ಬಾಲ್ ಆಯಿತು.
ಸಂಜು ಸ್ಯಾಮ್ಸನ್ (ನಾಯಕ), ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಧ್ರುವ್ ಜುರೈಲ್, ರಿಯಾನ್ ಪರಾಗ್, ಆರ್. ಅಶ್ವಿನ್, ಶಿಮ್ರಾನ್ ಹೆಟ್ಮೆಯರ್, ಯುಜ್ವೇಂದ್ರ ಚಾಹಲ್, ಜೇಸನ್ ಹೋಲ್ಡರ್, ಸಂದೀಪ್ ಶರ್ಮಾ, ಟ್ರೆಂಟ್ ಬೌಲ್ಟ್
ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ರೋವ್ಮನ್ ಪೊವೆಲ್, ಲಲಿತ್ ಯಾದವ್, ರಿಲೆ ರುಸ್ಸೋ, ಅಮನ್ ಹಕೀಮ್ ಖಾನ್, ಅಕ್ಷರ್ ಪಟೇಲ್, ಅಭಿಷೇಕ್ ಪೊರೆಲ್, ಕುಲ್ದೀಪ್ ಯಾದವ್, ಅನ್ರಿಚ್ ನೋಕಿಯಾ, ಮುಖೇಶ್ ಕುಮಾರ್
ಮಿಚೆಲ್ ಮಾರ್ಷ್ ವೈಯಕ್ತಿಕ ಕಾರಣಗಳಿಗಾಗಿ ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಆಡುತ್ತಿಲ್ಲ.
ಟಾಸ್ ಗೆದ್ದ ಡೆಲ್ಲಿ ನಾಯಕ ಡೇವಿಡ್ ವಾರ್ನರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ರಾಜಸ್ಥಾನ್ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - 3:01 pm, Sat, 8 April 23