T20 World Cup 2022: ದೀಪಕ್ ಹೂಡಾ-ಅಕ್ಷರ್​ ಪಟೇಲ್​ಗೆ ಅಗ್ನಿ ಪರೀಕ್ಷೆ..!

| Updated By: ಝಾಹಿರ್ ಯೂಸುಫ್

Updated on: Sep 15, 2022 | 2:31 PM

Team India: ಪ್ರಸ್ತುತ ತಂಡದಲ್ಲಿ ಆಲ್​ರೌಂಡರ್​ ಆಗಿ ದೀಪಕ್ ಹೂಡಾ ಹಾಗೂ ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದಾರೆ. ಇವರಿಬ್ಬರಲ್ಲಿ ಒಬ್ಬರು ಜಡೇಜಾ ಸ್ಥಾನದಲ್ಲಿ ಕಣಕ್ಕಿಯುವುದು ಖಚಿತ.

T20 World Cup 2022: ದೀಪಕ್ ಹೂಡಾ-ಅಕ್ಷರ್​ ಪಟೇಲ್​ಗೆ ಅಗ್ನಿ ಪರೀಕ್ಷೆ..!
Deepak Hooda-Axar Patel
Follow us on

ಟಿ20 ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾ 6 ಟಿ20 ಪಂದ್ಯಗಳನ್ನಾಡಲಿದೆ. ಆಸ್ಟ್ರೇಲಿಯಾ ವಿರುದ್ಧ 3 ಟಿ20 ಪಂದ್ಯಗಳನ್ನಾಡಿದರೆ, ಇದಾದ ಬಳಿಕ ಸೌತ್ ಆಫ್ರಿಕಾ ವಿರುದ್ದ ಮೂರು ಪಂದ್ಯಗಳಲ್ಲಿ ಸೆಣಸಲಿದೆ. ವಿಶೇಷ ಎಂದರೆ ಈ 6 ಪಂದ್ಯಗಳ ಮೂಲಕ ಟಿ20 ವಿಶ್ವಕಪ್​ಗೆ ಬಲಿಷ್ಠ ಪ್ಲೇಯಿಂಗ್ ಇಲೆವೆನ್​ ಅನ್ನು ರೂಪಿಸಲು ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ಪ್ಲ್ಯಾನ್ ರೂಪಿಸಿದ್ದಾರೆ.

ಏಕೆಂದರೆ ಟಿ20 ವಿಶ್ವಕಪ್ ತಂಡದಲ್ಲಿ ಪ್ರಮುಖ ಆಲ್​ರೌಂಡರ್ ರವೀಂದ್ರ ಜಡೇಜಾ ಇಲ್ಲ. ಗಾಯದ ಕಾರಣ ಜಡೇಜಾ ಅವರನ್ನು ಈ ಬಾರಿ ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಲಾಗಿಲ್ಲ. ಹೀಗಾಗಿ ಅವರ ಸ್ಥಾನದಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆ. ಈ ಪ್ರಶ್ನೆಗೆ ಮುಂಬರುವ 6 ಪಂದ್ಯಗಳ ಮೂಲಕ ಉತ್ತರ ಕಂಡುಕೊಳ್ಳುವ ಇರಾದೆಯಲ್ಲಿದೆ ಟೀಮ್ ಇಂಡಿಯಾ.

ಪ್ರಸ್ತುತ ತಂಡದಲ್ಲಿ ಆಲ್​ರೌಂಡರ್​ ಆಗಿ ದೀಪಕ್ ಹೂಡಾ ಹಾಗೂ ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದಾರೆ. ಇವರಿಬ್ಬರಲ್ಲಿ ಒಬ್ಬರು ಜಡೇಜಾ ಸ್ಥಾನದಲ್ಲಿ ಕಣಕ್ಕಿಯುವುದು ಖಚಿತ. ಇಲ್ಲಿ ಇಬ್ಬರೂ ಸ್ಪಿನ್ ಬೌಲಿಂಗ್ ಆಲ್​ರೌಂಡರ್ ಆಗಿರುವ ಕಾರಣ ಯಾರನ್ನು ಆಯ್ಕೆ ಮಾಡುವುದು ಎಂಬ ಚಿಂತೆ ಎದುರಾಗಿದೆ.

ಇದನ್ನೂ ಓದಿ
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇಲ್ಲಿ ಬ್ಯಾಟಿಂಗ್​ಗೆ ಪ್ರಾಮುಖ್ಯತೆ ನೀಡಿದರೆ ದೀಪಕ್ ಹೂಡಾಗೆ ಚಾನ್ಸ್​ ಸಿಗುವುದು ಖಚಿತ. ಇನ್ನು ಬೌಲಿಂಗ್​​ಗೆ ಮಣೆಹಾಕುವುದಾದರೆ ಹೂಡಾಗಿಂತ ಅಕ್ಷರ್ ಪಟೇಲ್ ಉತ್ತಮ ಆಯ್ಕೆ. ಹೀಗಾಗಿ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ಸರಣಿಗಳಲ್ಲಿ ಈ ಇಬ್ಬರಿಗೂ ಅವಕಾಶ ನೀಡಿ ಪರೀಕ್ಷಿಸಲಾಗುತ್ತದೆ.

ಈ ವೇಳೆ ಯಾರು ಉತ್ತಮ ಪ್ರದರ್ಶನ ನೀಡುತ್ತಾರೋ ಅವರು ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ​ ಪ್ಲೇಯಿಂಗ್ ಇಲೆವೆನ್​ನ ಭಾಗವಾಗಲಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ಧದ ಸರಣಿಯು ಅಕ್ಷರ್ ಪಟೇಲ್ ಹಾಗೂ ದೀಪಕ್ ಹೂಡಾ ಪಾಲಿಗೆ ಅಗ್ನಿ ಪರೀಕ್ಷೆಯಾಗಿರಲಿದೆ.

ಏಕೆಂದರೆ ಏಷ್ಯಾಕಪ್​ ವೇಳೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ ಅನ್ನು ಅನೇಕ ಬಾರಿ ಬದಲಿಸಿದ್ದರು. ಈ ಬಗ್ಗೆ ಭಾರೀ ಟೀಕೆಗಳು ಕೂಡ ಕೇಳಿ ಬಂದಿತ್ತು. ಹಾಗಾಗಿ ಈ ಬಾರಿ ಮುಂಬರುವ 6 ಪಂದ್ಯಗಳ ಮೂಲಕ ಬಲಿಷ್ಠ ಪ್ಲೇಯಿಂಗ್ ಇಲೆವೆನ್​ ಅನ್ನು ರೂಪಿಸಲು ಕೋಚ್ ರಾಹುಲ್ ಹಾಗೂ ನಾಯಕ ರೋಹಿತ್ ಶರ್ಮಾ ಪ್ಲ್ಯಾನ್ ರೂಪಿಸಿದ್ದಾರೆ.

ಅದರಂತೆ ಟಿ20 ವಿಶ್ವಕಪ್​ನ ಟೀಮ್ ಇಂಡಿಯಾ ಪ್ಲೇಯಿಂಗ್​ ಇಲೆವೆನ್ ಅಕ್ಷರ್ ಪಟೇಲ್ ಸ್ಥಾನ ಪಡೆಯಲಿದ್ದಾರಾ ಅಥವಾ ದೀಪಕ್ ಹೂಡಾ ಸ್ಥಾನ ಖಚಿತಪಡಿಸಿಕೊಳ್ಳಲಿದ್ದಾರಾ ಎಂಬುದು ಭಾರತದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ಧದ ಪಂದ್ಯಗಳ ಮೂಲಕ ನಿರ್ಧಾರವಾಗಲಿದೆ.