IND vs SL: ವೈಡ್ ನೀಡದ ಅಂಪೈರ್; ಕೆರಳಿ ಕೆಂಡವಾದ ದೀಪಕ್ ಹೂಡಾ! ವಿಡಿಯೋ ನೋಡಿ

| Updated By: ಪೃಥ್ವಿಶಂಕರ

Updated on: Jan 04, 2023 | 1:41 PM

Deepak Hooda: ಕಸುನ್ ರಜಿತಾ ಬೌಲ್ ಮಾಡಿದ ಓವರ್‌ನ ಐದನೇ ಎಸೆತವನ್ನು ಆಫ್‌ಸೈಡ್ ಸ್ಟ್ಯಾಂಡ್ ತೆಗೆದುಕೊಂಡು ದೀಪಕ್ ಆಡಲು ಪ್ರಯತ್ನಿಸಿದರು. ಆದರೆ ಚೆಂಡು ವೈಡ್ ಲೈನ್ ದಾಟಿ ಕೀಪರ್ ಕೈ ಸೇರಿತು.

IND vs SL: ವೈಡ್ ನೀಡದ ಅಂಪೈರ್; ಕೆರಳಿ ಕೆಂಡವಾದ ದೀಪಕ್ ಹೂಡಾ! ವಿಡಿಯೋ ನೋಡಿ
ಅಂಪೈರ್ ವಿರುದ್ಧ ಕಿಡಿ ಕಾರಿದ ದೀಪಕ್ ಹೂಡಾ
Follow us on

ಮುಂಬೈನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ (India Vs Sri Lanka) 2 ರನ್‌ಗಳಿಂದ ರೋಚಕ ಜಯ ಸಾಧಿಸಿದೆ. ಭಾರತದ ಗೆಲುವಿನಲ್ಲಿ ಯುವ ಸೆನ್ಸೇಷನ್ ದೀಪಕ್ ಹೂಡಾ (Deepak Hooda) ಪ್ರಮುಖ ಪಾತ್ರ ವಹಿಸಿದ್ದರು. 23 ಎಸೆತಗಳಲ್ಲಿ 41 ರನ್ ಗಳಿಸಿ ಟೀಂ ಇಂಡಿಯಾದ ಬೃಹತ್ ಸ್ಕೋರ್​ಗೆ ನಾಂದಿ ಹಾಡಿದರು. ಅವರ ಇನ್ನಿಂಗ್ಸ್‌ನಲ್ಲಿ ಒಂದು ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ಇದಲ್ಲದೆ, ಅವರು ಅಕ್ಷರ್ ಪಟೇಲ್ ಅವರೊಂದಿಗೆ ಅಜೇಯ ಆರನೇ ವಿಕೆಟ್‌ಗೆ ಕೇವಲ 30 ಎಸೆತಗಳಲ್ಲಿ 61 ರನ್ ಕೂಡ ಸೇರಿಸಿದರು. ಈ ಜೊತೆಯಾಟದಿಂದಾಗಿ ಟೀಂ ಇಂಡಿಯಾ (Team India) ಲಂಕಾ ಎದುರು 163 ರನ್‌ಗಳ ಗೌರವಾನ್ವಿತ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಲಂಕಾ ಪಡೆ 160 ರನ್​ಗಳಿಗೆ ತನ್ನೇಲ್ಲ ವಿಕೆಟ್ ಕಳೆದುಕೊಂಡು ಸೋಲಿಗೆ ಕೊರಳೊಡ್ಡಿತು. ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ದೀಪಕ್ ಹೂಡಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಆದರೆ ಪಂದ್ಯದ ನಡುವೆ ಅಂಪೈರ್ ನಿರ್ಣಯಕ್ಕೆ ತಲೆಬಾಗದೆ ಅಂಪೈರ್​ ವಿರುದ್ಧ ಕೂಗಾಡಿರುವ ಹೂಡಾ ಅವರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ವಾಸ್ತವವಾಗಿ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಅಲ್ಪ ರನ್​ಗಳಿಗೆ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು ಈ ವೇಳೆ ಬ್ಯಾಟಿಂಗ್​ಗೆ ಇಳಿದ ದೀಪಕ್ ಹೂಡಾ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದರು. ಕ್ರೀಸ್‌ನಲ್ಲಿರುವವರೆಗೂ ಬೌಂಡರಿ, ಸಿಕ್ಸರ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಆದರೆ ಈ ನಡುವೆ ಅಂಪೈರ್ ನಿರ್ಣಯದ ವಿರುದ್ಧ ವಿವೇಚನೆಯನ್ನೂ ಕಳೆದುಕೊಂಡ ಹೂಡಾ ಮೈದಾನದಲ್ಲಿಯೇ ಉಗ್ರರೂಪ ತಾಳಿದರು.

Fact Check: ರಿಷಬ್ ಪಂತ್​ಗೆ ರಕ್ತ ನೀಡಿದ್ರಾ ರೋಹಿತ್ ಶರ್ಮಾ? ಇಲ್ಲಿದೆ ಫ್ಯಾಕ್ಟ್ ಚೆಕ್

ಚೆಂಡು ವೈಡ್ ಲೈನ್ ದಾಟಿ ಕೀಪರ್ ಕೈ ಸೇರಿತು

ವಾಸ್ತವವಾಗಿ ಭಾರತದ ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಕಸುನ್ ರಜಿತಾ ಬೌಲ್ ಮಾಡಿದ ಓವರ್‌ನ ಐದನೇ ಎಸೆತವನ್ನು ಆಫ್‌ಸೈಡ್ ಸ್ಟ್ಯಾಂಡ್ ತೆಗೆದುಕೊಂಡು ದೀಪಕ್ ಆಡಲು ಪ್ರಯತ್ನಿಸಿದರು. ಆದರೆ ಚೆಂಡು ವೈಡ್ ಲೈನ್ ದಾಟಿ ಕೀಪರ್ ಕೈ ಸೇರಿತು. ಆದರೆ ಫೀಲ್ಡ್ ಅಂಪೈರ್ ಕೆ.ಎನ್.ಅನಂತಪದ್ಮನಾಭನ್ ಅದನ್ನು ವೈಡ್ ಎಂದು ಪರಿಗಣಿಸಲಿಲ್ಲ. ಇದರಿಂದ ದಿಢೀರ್ ಕೋಪಗೊಂಡ ದೀಪಕ್, ಅಂಪೈರ್‌ ನಿರ್ಧಾರವನ್ನು ಗೇಲಿ ಮಾಡಿದರು. ಅಲ್ಲದೆ ಬ್ಯಾಟ್​ ಸನ್ಹೆಯ ಮೂಲಕ ಐಸಿಸಿ ನಿಯಮದ ಪ್ರಕಾರ ಇದು ವೈಡ್ ಎಂಬುದನ್ನು ಅಂಪೈರ್​ಗೆ ಮನವರಿಕೆ ಮಾಡಲು ದೀಪಕ್ ಯತ್ನಿಸಿದರು. ಆದರೆ ದೀಪಕ್ ಮಾತಿಗೆ ಸೊಪ್ಪು ಹಾಕದ ಅಂಪೈರ್ ತಮ್ಮ ನಿರ್ಣಯಕ್ಕೆ ಬದ್ಧರಾಗಿದ್ದರು.

ದೀಪಕ್ ವರ್ತನೆಗೆ ಕ್ರಿಕೆಟ್ ಅಭಿಮಾನಿಗಳ ಆಕ್ರೋಶ

ಹೀಗಾಗಿ ಮತ್ತಷ್ಟು ಕೋಪಗೊಂಡ ದೀಪಕ್ ಇಲ್ಲಿಗೆ ಸುಮ್ಮನಾಗದೆ ಅಂಪೈರ್ ವಿರುದ್ಧ ಸಿಟ್ಟಿಗೆದ್ದರು. ಇದೆಲ್ಲವೂ ಸ್ಟಂಪ್‌ನ ಮೈಕ್‌ನಲ್ಲಿ ರೆಕಾರ್ಡ್​ ಕೂಡ ಆಯಿತು. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ದೀಪಕ್ ವರ್ತನೆಗೆ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಟಕ್ಕಷ್ಟೇ ಅಲ್ಲ ಅಂಪೈರ್ ಗಳಿಗೂ ಗೌರವ ಕೊಡುವುದನ್ನು ಕಲಿಯಬೇಕು ಎಂದು ಕಮೆಂಟ್​ಗಳನ್ನು ಮಾಡುತ್ತಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:39 pm, Wed, 4 January 23