Deodhar Trophy 2023: ದೇವಧರ್ ಟ್ರೋಫಿ ಟೂರ್ನಿಯು ಅಂತಿಮ ಹಂತಕ್ಕೆ ಬಂದು ನಿಂತಿದೆ. ಪುದುಚೇರಿಯ ಕ್ರಿಕೆಟ್ ಅಸೋಷಿಯೇಷನ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ಮತ್ತು ಪೂರ್ವ ವಲಯ ಮುಖಾಮುಖಿಯಾಗಲಿದೆ. ಈ ಬಾರಿಯ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿದಿದ್ದವು. ಅದರಂತೆ ಪ್ರತಿ ತಂಡಗಳು ತಲಾ 5 ಪಂದ್ಯಗಳನ್ನು ಆಡಲಾಗಿತ್ತು.
ಈ ಐದು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದ ದಕ್ಷಿಣ ವಲಯ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ಮೂಲಕ ಫೈನಲ್ ಪ್ರವೇಶಿಸಿದೆ. ಹಾಗೆಯೇ ಐದು ಮ್ಯಾಚ್ಗಳಲ್ಲಿ 4 ರಲ್ಲಿ ಗೆಲುವು ದಾಖಲಿಸಿ ಪೂರ್ವ ವಲಯ ತಂಡವು ಫೈನಲ್ಗೆ ಅರ್ಹತೆ ಪಡೆದಿದೆ. ಅದರಂತೆ ಗುರುವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ದಕ್ಷಿಣ ವಲಯ ಮತ್ತು ಪೂರ್ವ ವಲಯ ತಂಡಗಳು ಸೆಣಸಲಿದೆ.
ದಕ್ಷಿಣ ವಲಯ ಹಾಗೂ ಪೂರ್ವ ವಲಯ ತಂಡಗಳ ನಡುವಣ ಫೈನಲ್ ಪಂದ್ಯವನ್ನು ಬಿಸಿಸಿಐ ಟಿವಿಯಲ್ಲಿ (bcci.tv) ಲೈವ್ ವೀಕ್ಷಿಸಬಹುದು. ಇದರ ಹೊರತಾಗಿ ಬೇರೆ ಯಾವುದೇ ಚಾನೆಲ್ನಲ್ಲಿ ನೇರ ಪ್ರಸಾರ ಇರುವುದಿಲ್ಲ.
ದಕ್ಷಿಣ ವಲಯ ತಂಡ: ಮಯಾಂಕ್ ಅಗರ್ವಾಲ್ (ನಾಯಕ) , ದೇವದತ್ ಪಡಿಕ್ಕಲ್ , ಎನ್. ಜಗದೀಸನ್ , ಅರುಣ್ ಕಾರ್ತಿಕ್ , ರಿಕಿ ಭುಯಿ , ವಾಷಿಂಗ್ಟನ್ ಸುಂದರ್ , ವಿಜಯ್ ಕುಮಾರ್ ವೈಶಾಕ್ , ಅರ್ಜುನ್ ತೆಂಡೂಲ್ಕರ್ , ಸಾಯಿ ಕಿಶೋರ್ , ವಾಸುಕಿ ಕೌಶಿಕ್ , ವಿಧ್ವತ್ ಕಾವೇರಪ್ಪ , ರೋಹನ್ ಕುನ್ನುಮ್ಮಳ್, ಸಿಜೊಮೊನ್ ಜೋಸೆಫ್ , ಮೊಹಿತ್ ರೆಡ್ಕರ್, ರೋಹಿತ್ ರಾಯುಡು, ಸಾಯಿ ಸುದರ್ಶನ್.
ಇದನ್ನೂ ಓದಿ: Team India: ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ
ಪೂರ್ವ ವಲಯ ತಂಡ: ಸೌರಭ್ ತಿವಾರಿ (ನಾಯಕ) , ಅಭಿಷೇಕ್ ಪೊರೆಲ್ , ಅಭಿಮನ್ಯು ಈಶ್ವರನ್ , ರಿಯಾನ್ ಪರಾಗ್ , ಸುಭ್ರಾಂಶು ಸೇನಾಪತಿ , ವಿರಾಟ್ ಸಿಂಗ್ , ಉತ್ಕರ್ಷ್ ಸಿಂಗ್ , ಶಹಬಾಝ್ ಅಹ್ಮದ್ , ಮಣಿಶಂಕರ್ ಮುರಾಸಿಂಗ್ , ಆಕಾಶ್ ದೀಪ್ , ಅವಿನೋವ್ ಚೌಧರಿ , ರಿಷವ್ ಕುಹರಾಮಿ , ಸುದೀಪ್ ಕುಮಾರ್ , ಸುದೀಪ್ ಕುಮಾರ್.
Published On - 5:21 pm, Wed, 2 August 23