
ಡಿಸೆಂಬರ್ 16 ರಂದು ನಡೆದ ಐಪಿಎಲ್ 2026 ರ ಮಿನಿ ಹರಾಜಿನಲ್ಲಿ (IPL Auction 2026) ಕೆಲವು ಸ್ಟಾರ್ ವಿದೇಶಿ ಆಟಗಾರರು ಮಾರಾಟವಾಗಲಿಲ್ಲ. ಅವರಲ್ಲಿ ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ಡೆವೊನ್ ಕಾನ್ವೇ (Devon Conway) ಕೂಡ ಒಬ್ಬರು. ಕೆಲವು ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆರಂಭಿಕನಾಗಿ ಆಡಿದ್ದ ಕಾನ್ವೇ ಅವರನ್ನು ಮನಿ ಹರಾಜಿಗೂ ಮುನ್ನ ಸಿಎಸ್‌ಕೆ ತಂಡದಿಂದ ಬಿಡುಗಡೆಗೊಳಿಸಿತ್ತು. ಹೀಗಾಗಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ಕಾನ್ವೇ ಅವರನ್ನು ಯಾವುದೇ ಐಪಿಎಲ್ ಫ್ರಾಂಚೈಸಿ ಅವರನ್ನು ಖರೀದಿಸಲಿಲ್ಲ. ಇದೀಗ ಹರಾಜು ಮುಗಿದ ಎರಡು ದಿನಗಳ ಬಳಿಕ ಶತಕ ಬಾರಿಸುವುದರೊಂದಿಗೆ ಕಾನ್ವೇ ಅಬ್ಬರಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಡೆವೊನ್ ಕಾನ್ವೇ ಶತಕ ಬಾರಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಡೆವೊನ್ ಕಾನ್ವೇ 149 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 17 ಬೌಂಡರಿಗಳನ್ನು ಸಹ ಬಾರಿಸಿದರು. ಇದು ಕಾನ್ವೇ ಅವರ ಆರನೇ ಟೆಸ್ಟ್ ಶತಕವಾಗಿದ್ದು, ವೆಸ್ಟ್ ಇಂಡೀಸ್ ವಿರುದ್ಧ ಅವರ ಮೊದಲ ಶತಕವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಪರ ಡೆವೊನ್ ಕಾನ್ವೇ ಇನ್ನಿಂಗ್ಸ್ ಆರಂಭಿಸಿದರು. ಟಾಮ್ ಲೇಥಮ್ ಜೊತೆಗೂಡಿ ಆರಂಭಿಕನಾಗಿ ಶತಕ ಗಳಿಸಿದ್ದಲ್ಲದೆ, ದಾಖಲೆಯ ಪಾಲುದಾರಿಕೆಯನ್ನೂ ನಿರ್ಮಿಸಿದರು. ಡೆವೊನ್ ಕಾನ್ವೇ ಜೊತೆಗೆ ಟಾಮ್ ಲೇಥಮ್ ಕೂಡ ಶತಕ ಬಾರಿಸಿದರು. ಇದು ಲೇಥಮ್ ಅವರ ಟೆಸ್ಟ್ ವೃತ್ತಿಜೀವನದ 15 ನೇ ಶತಕವಾಗಿತ್ತು.
IPL 2026: ಆರ್ಸಿಬಿ ಫ್ಯಾನ್ಸ್ಗೆ ಸಿಹಿ ಸುದ್ದಿ; ಚಿನ್ನಸ್ವಾಮಿಯಲ್ಲಿ ಐಪಿಎಲ್ 2026 ರ ಉದ್ಘಾಟನಾ ಪಂದ್ಯ
2022 ರಲ್ಲಿ ಸಿಎಸ್‌ಕೆ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಕಾನ್ವೇ ಅಂದಿನಿಂದ 2025 ರವರೆಗೆ ಈ ತಂಡದ ಪರ ಆಡಿದ್ದರು. ಈ ಅವಧಿಯಲ್ಲಿ 29 ಪಂದ್ಯಗಳನ್ನಾಡಿದ ಕಾನ್ವೇ 1080 ರನ್ ಕಲೆಹಾಕಿದರು. ಆದಾಗ್ಯೂ, ಸಿಎಸ್‌ಕೆ 2026 ರ ಐಪಿಎಲ್ ಹರಾಜಿಗೂ ಮೊದಲು ಅವರನ್ನು ತಂಡದಿಂದ ಬಿಡುಗಡೆ ಮಾಡಿತು. ಇದರಿಂದಾಗಿ ಕಾನ್ವೇ ಹರಾಜಿಗೆ ಪ್ರವೇಶಿಸಬೇಕಾಯಿತು. ಆದಾಗ್ಯೂ, ಈ ಬಾರಿ ಅವರನ್ನು ಯಾವ ತಂಡವೂ ಖರೀದಿಸಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ