ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿರುವ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ (India vs England) ವಿರುದ್ಧ ಸೆಣೆಸಾಟ ನಡೆಸಲಿದೆ. ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 3-1 ಅಂತರದ ಮುನ್ನಡೆ ಸಾಧಿಸಿರುವ ಭಾರತ ಈಗಾಗಲೇ ಸರಣಿಯನ್ನು ವಶಪಡಿಸಿಕೊಂಡಾಗಿದೆ. ಕೊನೆಯ ಪಂದ್ಯ ಮಾರ್ಚ್ 7 ರಿಂದ ಆರಂಭವಾಗಲಿದೆ. ಆದರೆ, ಈ ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಧರ್ಮಶಾಲಾ ಹವಾಮಾನ. ಇಂಡೋ-ಇಂಗ್ಲೆಂಡ್ ಐದನೇ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವುದು ದಟ್ಟವಾಗಿದೆ. ಜೊತೆಗೆ ನಗರದಲ್ಲಿ ಭಾರೀ ಚಳಿಯ ವಾತಾವರಣವಿದೆ.
ದಿ ಟೆಲಿಗ್ರಾಫ್‌ನ ವರದಿಯ ಪ್ರಕಾರ, ಹವಾಮಾನವು ತುಂಬಾ ತಂಪಾಗಿರುತ್ತದೆ ಮತ್ತು ಮಳೆಯಾಗುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ. ಗರಿಷ್ಠ ತಾಪಮಾನವು 1 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ ಮತ್ತು ಕನಿಷ್ಠ ತಾಪಮಾನವು -4 ಡಿಗ್ರಿಗಿಂತ ಕಡಿಮೆಯಿರುತ್ತದೆ ಎಂದು ವರದಿ ಆಗಿದೆ. ಮಳೆಯ ಜೊತೆಗೆ ಹಿಮದ ಮಳೆಯೂ ಪಂದ್ಯದ ಮೇಲೆ ಪರಿಣಾಮ ಬೀರಬಹುದು ಎಂದು ವರದಿ ಹೇಳಿದೆ. ಇಂಗ್ಲೆಂಡ್ ಮತ್ತು ಭಾರತ ಎರಡೂ ತಂಡಗಳು ಭಾನುವಾರ ಧರ್ಮಾಶಾಲಾಗೆ ತಲುಪಿದ್ದು, ಇಂದಿನಿಂದ ಅಭ್ಯಾಸ ಸೆಷನ್ ಏರ್ಪಡಿಸಲಾಗಿದೆ.
ಮತ್ತೆ ಅಬ್ಬರಸಿದ ಕೃಷ್ಣ; ಚೆನ್ನೈ ತಂಡವನ್ನು 67 ರನ್ಗಳಿಂದ ಮಣಿಸಿದ ಕರ್ನಾಟಕ
ಧರ್ಮಶಾಲಾ ಕ್ರೀಡಾಂಗಣದಲ್ಲಿ ವೇಗದ ಬೌಲರ್‌ಗಳು ದೊಡ್ಡ ಪಾತ್ರ ವಹಿಸುವ ನಿರೀಕ್ಷೆಯಿದೆ. ಇಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಕೆಟ್‌ಗಳನ್ನು ಬಿಟ್ಟುಕೊಡದಂತೆ ಅತ್ಯಂತ ಜಾಗರೂಕರಾಗಿರಬೇಕು. ಟಾಸ್ ಗೆದ್ದಾಗ ದೊಡ್ಡ ಮೊತ್ತವನ್ನು ಗಳಿಸುವುದು ಕಷ್ಟಕರವಾದ ಕಾರಣ, ಟಾಸ್ ಗೆದ್ದ ತಂಡ ಚೇಸ್ ಮಾಡುವುದು ಉತ್ತಮ ಆಯ್ಕೆ.
ಭವ್ಯವಾದ ಹಿಮಾಲಯ ಪರ್ವತ ಶ್ರೇಣಿಯ ಮಡಿಲಲ್ಲಿರುವ ಕ್ರಿಕೆಟ್ ಸ್ಟೇಡಿಯಂ ಇದಾಗಿದ್ದು, ಕಾಂಗ್ರಾ ಕಣಿವೆಯ ಧೌಲಾಧರ್ ಪರ್ವತ ಶ್ರೇಣಿಯ ನಡುವೆ 1,457 ಎತ್ತರದಲ್ಲಿದೆ. ವಿಶ್ವದ ಅತಿ ಎತ್ತರದ ಕ್ರೀಡಾ ಮೈದಾನ ಇದಾಗಿದೆ.
ರವಿಚಂದ್ರನ್ ಅಶ್ವಿನ್ ಅವರು ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಪಿಸಿಎ) ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್‌ಗೆ ಮೈದಾನಕ್ಕಿಳಿದಾಗ ಅವರ ವೃತ್ತಿಜೀವನದಲ್ಲಿ ದೊಡ್ಡ ಸಾಧನೆ ಮಾಡಲಿದ್ದಾರೆ. ಅವರು 100 ಟೆಸ್ಟ್ ಪಂದ್ಯಗಳನ್ನು ಆಡಿದ 14 ನೇ ಭಾರತೀಯ ಮತ್ತು ಎರಡನೇ ಭಾರತೀಯ ಸ್ಪಿನ್ನರ್ ಆಗಲಿದ್ದಾರೆ. ತಮ್ಮ ಸ್ಮಾರಕ 100ನೇ ಟೆಸ್ಟ್‌ನಲ್ಲಿ ಅಶ್ವಿನ್ ದೊಡ್ಡ ದಾಖಲೆ ಸಾಧಿಸಿದ ಎರಡನೇ ಬೌಲರ್ ಆಗುವ ಅವಕಾಶ ಹೊಂದಿದ್ದಾರೆ.
ಗುಜರಾತ್ಗೆ ಸತತ 4ನೇ ಸೋಲು; ಡೆಲ್ಲಿಗೆ ಸುಲಭ ಜಯ
ಹಾಗೆಯೆ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ರವಿಚಂದ್ರನ್ ಅಶ್ವಿನ್ ಟೆಸ್ಟ್‌ನಲ್ಲಿ 36ನೇ ಬಾರಿ ಐದು ವಿಕೆಟ್ ಕಬಳಿಸಲು ಇನ್ನಿಂಗ್ಸ್‌ನಲ್ಲಿ ಕೇವಲ 5 ವಿಕೆಟ್‌ಗಳ ಅಗತ್ಯವಿದೆ. ವಾಸ್ತವವಾಗಿ ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ಐದು ವಿಕೆಟ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಇತಿಹಾಸದಲ್ಲಿ ಹೆಚ್ಚು ಫೈವ್-ಫೆರ್‌ಗಳೊಂದಿಗೆ ನಾಥನ್ ಲಿಯಾನ್ ದಾಖಲೆ ಪುಡಿಗಟ್ಟಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ