Dinesh Karthik: ಬರೀ RCB ಆಟಗಾರರನ್ನ ಮಾತ್ರ ಆಯ್ಕೆ ಮಾಡಿದ್ದೀರಿ: ಆಸ್ಟ್ರೇಲಿಯಾ ತಂಡದ ಕಾಲೆಳೆದ DK

| Updated By: ಝಾಹಿರ್ ಯೂಸುಫ್

Updated on: Sep 15, 2022 | 1:29 PM

Dinesh Karthik: ವಿಶೇಷ ಎಂದರೆ ಈ ಬಾರಿಯ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದಿರುವ ದಿನೇಶ್ ಕಾರ್ತಿಕ್ ಆರ್​ಸಿಬಿ ತಂಡದ ಸಹ ಆಟಗಾರರಾದ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಜೋಶ್ ಹ್ಯಾಝಲ್​ವುಡ್​ ಅವರನ್ನು ಎದುರಿಸಲಿದ್ದಾರೆ.

Dinesh Karthik: ಬರೀ RCB ಆಟಗಾರರನ್ನ ಮಾತ್ರ ಆಯ್ಕೆ ಮಾಡಿದ್ದೀರಿ: ಆಸ್ಟ್ರೇಲಿಯಾ ತಂಡದ ಕಾಲೆಳೆದ DK
Dinesh Karthik
Follow us on

ಟೀಮ್ ಇಂಡಿಯಾದ (Team India) ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್ (Dinesh Karthik) ಮಾಡಿರುವ ಟ್ವೀಟ್​ವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೀಗೆ ವೈರಲ್ ಆಗಲು ಕಾರಣ ಡಿಕೆ ಆಸ್ಟ್ರೇಲಿಯಾ ತಂಡವನ್ನು ಕಾಲೆಳೆದಿರುವುದು. ಅಂದರೆ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಟಿ20 ವಿಶ್ವಕಪ್ ಜೆರ್ಸಿಯನ್ನು ಅನಾವರಣಗೊಳಿಸಿದೆ. ಈ ಜೆರ್ಸಿಯ ಫೋಟೋಶೂಟ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್, ಜೋಶ್ ಹ್ಯಾಝಲ್​ವುಡ್ ಹಾಗೂ ಮಿಚೆಲ್ ಸ್ಟಾರ್ಕ್​ ಕಾಣಿಸಿಕೊಂಡಿದ್ದರು.ಇದನ್ನೇ ಪ್ರಸ್ತಾಪಿಸಿರುವ ದಿನೇಶ್ ಕಾರ್ತಿಕ್, ಕೇವಲ ಆರ್​ಸಿಬಿ ಆಟಗಾರರನ್ನು ಮಾತ್ರವಲ್ಲ, ಇತರ ಫ್ರಾಂಚೈಸಿಗಳ ಆಟಗಾರರನ್ನು ಆಯ್ಕೆ ಮಾಡಬೇಕು ಎಂಬಾರ್ಥದಲ್ಲಿ ಕಿಚಾಯಿಸಿದ್ದಾರೆ.

ಅಂದರೆ ಇಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಜೋಶ್ ಹ್ಯಾಝಲ್​ವುಡ್​ ಪ್ರಸ್ತುತ ಆರ್​ಸಿಬಿ ತಂಡದ ಸದಸ್ಯರು. ಇನ್ನು ಮಿಚೆಲ್ ಸ್ಟಾರ್ಕ್​ ಕೊನೆಯ ಬಾರಿ ಐಪಿಎಲ್​ ಆಡಿದ್ದು ಆರ್​ಸಿಬಿ ಪರ. ಹೀಗಾಗಿಯೇ ದಿನೇಶ್ ಕಾರ್ತಿಕ್ ಆರ್​ಸಿಬಿ ಆಟಗಾರರನ್ನು ಮಾತ್ರ ಆಯ್ಕೆ ಮಾಡಿದ್ದೀರಿ. ಇನ್ನಿತರ ಫ್ರಾಂಚೈಸಿಗಳಲ್ಲಿರುವ ಆಟಗಾರರನ್ನು ಕೂಡ ಆಯ್ಕೆ ಮಾಡಿ ಎಂದು ಟ್ವಿಟರ್ ಮೂಲಕ ಕಾಲೆಳೆದಿದ್ದಾರೆ.

ಇದೀಗ ದಿನೇಶ್ ಕಾರ್ತಿಕ್ ಅವರ ಈ ಟ್ವೀಟ್​ನೊಂದಿಗೆ ಗ್ಲೆನ್ ಮ್ಯಾಕ್ಸ್​ವೆಲ್, ಜೋಶ್ ಹ್ಯಾಝಲ್​ವುಡ್ ಹಾಗೂ ಮಿಚೆಲ್ ಸ್ಟಾರ್ಕ್​ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಅನೇಕರು ಡಿಕೆಯ ಹಾಸ್ಯಪ್ರಜ್ಞೆಗೆ ಮೆಚ್ಚುಗೆಗಳನ್ನು ಸೂಚಿಸಿದ್ದಾರೆ.

ಇದನ್ನೂ ಓದಿ
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ವಿಶೇಷ ಎಂದರೆ ಈ ಬಾರಿಯ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದಿರುವ ದಿನೇಶ್ ಕಾರ್ತಿಕ್ ಆರ್​ಸಿಬಿ ತಂಡದ ಸಹ ಆಟಗಾರರಾದ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಜೋಶ್ ಹ್ಯಾಝಲ್​ವುಡ್​ ಅವರನ್ನು ಎದುರಿಸಲಿದ್ದಾರೆ. ಅದರಲ್ಲೂ ಡೆತ್ ಓವರ್​ಗಳಲ್ಲಿ ಹ್ಯಾಝಲ್​ವುಡ್​ ಟು ಡಿಕೆ ಕದನವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ.