ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ ದುಲೀಪ್ ಟ್ರೋಫಿಗೆ ತಂಡಗಳನ್ನು ಪ್ರಕಟಿಸಿದೆ. ವಿಶೇಷ ಎಂದರೆ ಈ ಹಿಂದೆ ಆರು ವಲಯಗಳಾಗಿ ಕಣಕ್ಕಿಳಿಯುತ್ತಿದ್ದ ತಂಡಗಳನ್ನು ಈ ಬಾರಿ ಟೀಮ್ ಎ,ಬಿ,ಸಿ ಮತ್ತು ಡಿ ಎಂದು ನಾಲ್ಕು ತಂಡಗಳನ್ನಾಗಿ ವಿಂಗಡಿಸಲಾಗಿದೆ. ಅಲ್ಲದೆ ಈ ತಂಡಗಳನ್ನು ಶುಭ್ಮನ್ ಗಿಲ್, ಅಭಿಮನ್ಯು ಈಶ್ವರನ್, ಶ್ರೇಯಸ್ ಅಯ್ಯರ್ ಹಾಗೂ ರುತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದಾರೆ.
ಹಾಗೆಯೇ ಈ ತಂಡಗಳಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಕೂಡ ಕಾಣಿಸಿಕೊಂಡಿದ್ದಾರೆ. ಅದರಂತೆ ಪ್ರತಿ ತಂಡಗಳಲ್ಲಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…
ಟೀಮ್ A: ಶುಭಮನ್ ಗಿಲ್ (ನಾಯಕ), ಮಯಾಂಕ್ ಅಗರ್ವಾಲ್, ರಿಯಾನ್ ಪರಾಗ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ತಿಲಕ್ ವರ್ಮಾ, ಶಿವಂ ದುಬೆ, ತನುಷ್ ಕೋಟ್ಯಾನ್, ಕುಲ್ದೀಪ್ ಯಾದವ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಖಲೀಲ್ ಅಹ್ಮದ್, ಅವೇಶ್ ಖಾನ್, ವಿದ್ವತ್ ಕಾವೇರಪ್ಪ, ಕುಮಾರ್ ಕುಶಾಗ್ರ, ಶಾಶ್ವತ್ ರಾವತ್ .
ಟೀಮ್ B: ಅಭಿಮನ್ಯು ಈಶ್ವರನ್ (ನಾಯಕ), ಯಶಸ್ವಿ ಜೈಸ್ವಾಲ್, ಸರ್ಫರಾಝ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಮುಶೀರ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಯಶ್ ದಯಾಳ್, ಮುಖೇಶ್ ಕುಮಾರ್, ರಾಹುಲ್ ಚಹರ್, ಆರ್ ಸಾಯಿ ಕಿಶೋರ್, ಮೋಹಿತ್ ಅವಸ್ತಿ, ಎನ್ ಜಗದೇಶನ್ (ವಿಕೆಟ್ ಕೀಪರ್)
ಟೀಮ್ C: ರುತುರಾಜ್ ಗಾಯಕ್ವಾಡ್ (ನಾಯಕ), ಸಾಯಿ ಸುದರ್ಶನ್, ರಜತ್ ಪಾಟಿದಾರ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಬಿ ಇಂದ್ರಜಿತ್, ಹೃತಿಕ್ ಶೋಕೀನ್, ಮಾನವ್ ಸುತಾರ್, ವೈಶಾಕ್ ವಿಜಯ್‌ಕುಮಾರ್, ಅನ್ಶುಲ್ ಖಂಬೋಜ್, ಹಿಮಾಂಶು ಚೌಹಾಣ್, ಮಯಾಂಕ್ ಮಾರ್ಕಾಂಡೆ , ಸಂದೀಪ್ ವಾರಿಯರ್, ಗೌರವ್ ಯಾದವ್,
ಟೀಮ್ D: ಶ್ರೇಯಸ್ ಅಯ್ಯರ್ (ನಾಯಕ), ಅಥರ್ವ ಟೈಡೆ, ಯಶ್ ದುಬೆ, ದೇವದತ್ ಪಡಿಕ್ಕಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಕಿ ಭುಯಿ, ಸರನ್ಶ್ ಜೈನ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಆದಿತ್ಯ ಠಾಕರೆ, ಹರ್ಷಿತ್ ರಾಣಾ, ತುಷಾರ್ ದೇಶಪಾಂಡೆ, ಆಕಾಶ್ ಸೇನ್‌ಗುಪ್ತ, ಕೆಎಸ್ ಭರತ್ (ವಿಕೆಟ್ ಕೀಪರ್) , ಸೌರಭ್ ಕುಮಾರ್.
Published On - 7:28 am, Thu, 15 August 24