ಏಷ್ಯಾಕಪ್ 2023 ರ ಸೂಪರ್ -4 ನ ಭಾರತ ಹಾಗೂ ಶ್ರೀಲಂಕಾ ಪಂದ್ಯ ಮುಕ್ತಾಯಗೊಂಡಿದೆ. ಇದರಲ್ಲಿ ಟೀಮ್ ಇಂಡಿಯಾ 41 ರನ್ಗಳ ಜಯ ಸಾಧಿಸಿ ಏಷ್ಯಾಕಪ್ ಫೈನಲ್‌ಗೆ ಲಗ್ಗೆಯಿಟ್ಟಿತು. ಆದರೆ, ಈ ಪಂದ್ಯದಲ್ಲಿ ಭಾರತೀಯ ಆಟಗಾರರಿಗೆ ಭಯ ಹುಟ್ಟಿಸಿದ್ದು ಶ್ರೀಲಂಕಾದ ಯುವ ಸ್ಪಿನ್ನರ್ ದುನಿತ್ ವೆಲ್ಲಲಗೆ (Dunith Wellalage). ಭಾರತ ವಿರುದ್ಧ ಇವರು ನೀಡಿದ ಪ್ರದರ್ಶನ ಕ್ರಿಕೆಟ್ ಪಂಡಿತರ ಹಾಗೂ ಅಭಿಮಾನಿಗಳ ಮನ್ನಣೆಗೆ ಪಾತ್ರವಾಯಿತು.
ಭಾರತದ ಸ್ಟಾರ್ ಬ್ಯಾಟರ್ಗಳಾದ ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಕೆಎಲ್ ರಾಹುಲ್ ಅವರ ವಿಕೆಟ್‌ಗಳನ್ನು ಕಿತ್ತು ಒಟ್ಟು ಐದು ವಿಕೆಟ್ ಪಡೆದರು. ಇಷ್ಟು ಮಾತ್ರವಲ್ಲದೆ ಬ್ಯಾಟಿಂಗ್ನಲ್ಲಿ 46 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿ ತಂಡವನ್ನು ಬಹುತೇಕ ಗೆಲುವಿನತ್ತ ಕೊಂಡೊಯ್ದರು. ಮತ್ತೊಂದು ತುದಿಯಲ್ಲಿ ಇವರಿಗೆ ಸರಿಯಾಗಿ ಸಾಥ್ ಸಿಗದ ಕಾರಣ ಲಂಕಾ ಸೋತಿತು. ಇದೀಗ ವೆಲ್ಲಲಗೆ ಅವರ ಪ್ರದರ್ಶನವನ್ನು ಶ್ರೀಲಂಕಾದ ದಂತಕಥೆ ವೇಗದ ಬೌಲರ್ ಬೌಲರ್ ಲಸಿತ್ ಮಾಲಿಂಗ ಹಾಡಿಹೊಗಳಿದ್ದಾರೆ.
ಭಾರತದ ವಿರುದ್ಧ ಸೋಲು: ಪಾಕಿಸ್ತಾನ್ ಪ್ಲೇಯಿಂಗ್ ಇಲೆವೆನ್ನಲ್ಲಿ 5 ಬದಲಾವಣೆ.!
ವೆಲ್ಲಲಗೆ ಅವರ ಆಲ್‌ರೌಂಡ್ ಪ್ರದರ್ಶನವನ್ನು ಗಮನಿಸಿದರೆ, ಶ್ರೀಲಂಕಾ 12 ಆಟಗಾರರೊಂದಿಗೆ ಆಡುತ್ತಿರುವಂತೆ ಭಾಸವಾಗುತ್ತಿದೆ ಎಂದು ಮಾಲಿಂಗ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ ಮತ್ತು ಭವಿಷ್ಯದಲ್ಲಿ ಇವರು ದೊಡ್ಡ ಸ್ಟಾರ್ ಆಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.
It’s fair to say that SL played with 12 players today. That’s how good Dunith was👏
He’s got a brilliant head on his young shoulders to go with his all-round skill set.
I believe he’s on his way to becoming the most important player for SL in ODIs for the next decade❤️#INDvSL— Lasith Malinga (@malinga_ninety9) September 12, 2023
“ಶ್ರೀಲಂಕಾ 12 ಆಟಗಾರರೊಂದಿಗೆ ಆಡಿದೆ ಎಂದು ಹೇಳುವುದು ನ್ಯಾಯೋಚಿತವಾಗಿದೆ. ದುನಿತ್ ಅದ್ಭುತ ಪ್ರದರ್ಶನ ತೋರಿದ್ದಾರೆ” ಎಂದು ಮಾಲಿಂಗ ಎಕ್ಸ್ (ಟ್ವಿಟರ್) ನಲ್ಲಿ ಬರೆದಿದ್ದಾರೆ. “ದುನಿತ್ ಉತ್ತಮವಾದ ಆಲ್-ರೌಂಡ್ ಕೌಶಲ್ಯವನ್ನು ಹೊಂದಿದ್ದಾರೆ. ಅವರು ಮುಂದಿನ ದಶಕದ ಏಕದಿನ ಕ್ರಿಕೆಟ್ನಲ್ಲಿ ಶ್ರೀಲಂಕಾದ ಪ್ರಮುಖ ಆಟಗಾರನಾಗುವ ಹಾದಿಯಲ್ಲಿದ್ದಾರೆ,” ಎಂದು ಮಾಲಿಂಗ ಬರೆದುಕೊಂಡಿದ್ದಾರೆ.
ಭಾರತ ವಿರುದ್ಧದ ಪಂದ್ಯ ಮುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ದುನಿತ್ ವೆಲ್ಲಲಗೆ, “ನನ್ನ ಮಟ್ಟಿಗೆ ವಿರಾಟ್ ಕೊಹ್ಲಿ ನಂ.1 ಬ್ಯಾಟ್ಸ್‌ಮನ್. ಆ ಎರಡು (ಕೊಹ್ಲಿ ಮತ್ತು ರೋಹಿತ್) ದೊಡ್ಡ ವಿಕೆಟ್ ಪಡೆದಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಾನು ನನ್ನ ಮೂಲಭೂತ ಅಂಶಗಳನ್ನು ನಂಬುತ್ತೇನೆ,” ಎಂದು ವೆಲ್ಲಲಗೆ ಪಂದ್ಯದ ನಂತರ ಹೇಳಿದ್ದರು.
“ಭಾರತವು ಅತ್ಯುತ್ತಮ ಆರಂಭವನ್ನು ಪಡೆದುಕೊಂಡಿತು. ಅನುಭವಿ ಬ್ಯಾಟ್ಸ್‌ಮನ್‌ಗಳ ವಿರುದ್ಧ ವಿಕೆಟ್-ಟು-ವಿಕೆಟ್ ಲೈನ್ ಬೌಲ್ ಮಾಡಲು ನಾನು ಪ್ರಯತ್ನಿಸುತ್ತಿದ್ದೇನೆ. ಇಲ್ಲಿ ಅದೇರೀತಿಯ ಪ್ಲಾನ್ ಮಾಡಿದೆ. ಮೂರು ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಪಡೆದ ನಂತರ ಭಾರತವನ್ನು ಒತ್ತಡಕ್ಕೆ ಸಿಲುಕಿಸಲು ಸಾಧ್ಯವಾಯಿತು. ಚೆಂಡು ತುಂಬಾ ಚೆನ್ನಾಗಿ ತಿರುವು ನೀಡುತ್ತಿತ್ತು. ನೀವು ಸರಿಯಾದ ಪ್ರದೇಶದಲ್ಲಿ ಚೆಂಡನ್ನು ಹಾಕಿದಾಗ, ಬ್ಯಾಟ್ಸ್‌ಮನ್‌ಗಳನ್ನು ಅಸ್ಥಿರಗೊಳಿಸಬಹುದು,”ಎಂದು ವೆಲ್ಲಲಗೆ ಹೇಳಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ