AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ENG vs PAK: ಇಂಗ್ಲೆಂಡ್‌ ವಿರುದ್ಧ ಪಾಕಿಸ್ತಾನಕ್ಕೆ ಇನ್ನಿಂಗ್ಸ್ ಸೋಲು

England vs Pakistan: ಇಂಗ್ಲೆಂಡ್‌ನ ಹೆಡಿಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆತಿಥೇಯ ಇಂಗ್ಲೆಂಡ್ ಪಾಕಿಸ್ತಾನವನ್ನು ಇನ್ನಿಂಗ್ಸ್ ಮತ್ತು 103 ರನ್‌ಗಳಿಂದ ಭರ್ಜರಿ ಸೋಲಿಸಿದೆ. ಓಲಿ ರಾಬಿನ್ಸನ್ ಮತ್ತು ಜೋಶ್ ಟಾಂಗ್ ಮಾರಕ ಬೌಲಿಂಗ್‌ನಿಂದ ಪಾಕಿಸ್ತಾನ ತಂಡ ಎರಡೂ ಇನ್ನಿಂಗ್ಸ್‌ಗಳಲ್ಲಿ ಕೇವಲ 85 ಓವರ್‌ಗಳನ್ನು ಮಾತ್ರ ಆಡಿ, ಮೂರನೇ ದಿನದಂದೇ ಸೋಲಪ್ಪಿತು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ENG vs PAK: ಇಂಗ್ಲೆಂಡ್‌ ವಿರುದ್ಧ ಪಾಕಿಸ್ತಾನಕ್ಕೆ ಇನ್ನಿಂಗ್ಸ್ ಸೋಲು
Eng Vs Pak
ಪೃಥ್ವಿಶಂಕರ
|

Updated on: Aug 21, 2026 | 8:59 PM

Share

ಹೆಡಿಂಗ್ಲೆಯಲ್ಲಿ ನಡೆದ ಇಂಗ್ಲೆಂಡ್ ಮತ್ತು ಪಾಕಿಸ್ತಾನ (England vs Pakistan) ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್, ಪಾಕಿಸ್ತಾನವನ್ನು ಇನ್ನಿಂಗ್ಸ್ ಮತ್ತು 103 ರನ್​ಗಳಿಂದ ಮಣಿಸಿದೆ. ಈ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಈ ಪಂದ್ಯ ಆರಂಭವಾದ ಮೊದಲ ದಿನದಿಂದಲೂ ಪಾಕಿಸ್ತಾನದ ಮೇಲೆ ಮೇಲುಗೈ ಸಾಧಿಸಿದ ಇಂಗ್ಲೆಂಡ್‌ ಮೂರನೇ ದಿನದಾಟದ ಎರಡನೇ ಸೆಷನ್​ನಲ್ಲೇ ಪಾಕಿಸ್ತಾನವನ್ನು ಮಣಿಸುವಲ್ಲಿ ಯಶಸ್ವಿಯಾಯಿತು.

135 ರನ್‌ಗಳಿಗೆ ಆಲೌಟ್

ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ಮೊದಲ ದಿನದ ಆಟ ಮುಗಿಯುವ ಮುನ್ನವೇ 171 ರನ್‌ಗಳಿಗೆ ಆಲೌಟ್ ಆಯಿತು. ಅದರ ನಂತರ ಬ್ಯಾಟಿಂಗ್‌ ಆರಂಭಿಸಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 409 ರನ್‌ ಕಲೆಹಾಕಿತು. ಇದರೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ 238 ರನ್‌ಗಳ ಮುನ್ನಡೆ ಸಾಧಿಸಿತು. ಇತ್ತ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ತಂಡ ಕೇವಲ 135 ರನ್‌ಗಳಿಗೆ ಆಲೌಟ್ ಆಯಿತು.

ಐದೂವರೆ ಗಂಟೆಗಳ ಆಟ

ಏಕಪಕ್ಷೀಯವಾಗಿದ್ದ ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ, ಪಾಕಿಸ್ತಾನವನ್ನು ಕೇವಲ ಐದೂವರೆ ಗಂಟೆಗಳಲ್ಲಿ ಸೋಲಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ 171 ರನ್ ಬಾರಿಸಲು ಪಾಕಿಸ್ತಾನ 3 ಗಂಟೆ 15 ನಿಮಿಷಗಳ ಸಮಯ ತೆಗೆದುಕೊಂಡಿತ್ತು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡ 2 ಗಂಟೆ 15 ನಿಮಿಷಗಳಲ್ಲಿ ಕೇವಲ 36.5 ಓವರ್‌ಗಳನ್ನು ಆಡಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಪಾಕಿಸ್ತಾನ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು ಐದೂವರೆ ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿ 85 ಓವರ್‌ಗಳನ್ನು ಆಡಿತು.

IND vs SL: ಭಾರತ- ಲಂಕಾ ನಡುವಿನ 2ನೇ ಟೆಸ್ಟ್ ಪಂದ್ಯ ಎಲ್ಲಿ, ಯಾವಾಗ ನಡೆಯಲಿದೆ?

ಪಂದ್ಯ ಹೀಗಿತ್ತು

ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್‌ ಪರ ಬೌಲಿಂಗ್​ನಲ್ಲಿ ಮಿಂಚಿದ ಓಲಿ ರಾಬಿನ್ಸನ್ ಮತ್ತು ಜೋಶ್ ಟಾಂಗ್ ತಲಾ 5 ವಿಕೆಟ್​ಗಳ ಗೊಂಚಲು ಪಡೆದರು. ಓಲಿ ರಾಬಿನ್ಸನ್ 18 ಓವರ್​ಗಳಲ್ಲಿ 51 ರನ್​ಗಳಿಗೆ 5 ವಿಕೆಟ್ ಪಡೆದರೆ, ಜೋಶ್ ಟಾಂಗ್ 9.1 ಓವರ್​ಗಳಲ್ಲಿ 46 ರನ್​ಗಳಿಗೆ 5 ವಿಕೆಟ್ ಪಡೆದರು. ಇತ್ತ ಪಾಕಿಸ್ತಾನ ಪರ ಅಬ್ದುಲ್ಲಾ ಶಫೀಕ್ 61 ರನ್​ಗಳ ಇನ್ನಿಂಗ್ಸ್ ಆಡಿದನ್ನು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನವಿರಲಿಲ್ಲ. ಇಂಗ್ಲೆಂಡ್‌ ಪರ ಎರಡನೇ ಇನ್ನಿಂಗ್ಸ್​ನಲ್ಲಿ ಹ್ಯಾರಿ ಬ್ರೂಕ್ 93 ಎಸೆತಗಳಲ್ಲಿ 91 ರನ್, ಜೋರ್ಡಾನ್ ಕಾಕ್ಸ್ 73 ರನ್, ನಾಯಕ ಜೋ ರೂಟ್ 66 ರನ್ ಮತ್ತು ಡಾನ್ ಲಾರೆನ್ಸ್ 51 ರನ್​ಗಳ ಇನ್ನಿಂಗ್ಸ್ ಆಡಿದರು. ಎರಡನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ ಪರ ಓಲಿ ರಾಬಿನ್ಸನ್, ಜೋಶ್ ಟಾಂಗ್ ಮತ್ತು ಜೋಫ್ರಾ ಆರ್ಚರ್ 3 ತಲಾ 3 ವಿಕೆಟ್ ಪಡೆದರೆ ಗಸ್ ಅಟ್ಕಿನ್ಸನ್ 1 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us