ಒಂದು ತಂಡವು ಸೋತಾಗ, ತನ್ನ ಸೋಲಿನ ಬಗ್ಗೆ ಮೆಲುಕು ಹಾಕುವುದು ವಾಡಿಗೆ. ಸೋಲಿಗೆ ಏನು ಕಾರಣ?, ಆಟಗಾರರು ಎಲ್ಲಿ ತಪ್ಪುಗಳನ್ನು ಮಾಡಿದ್ದಾರೆ ಎಂದು ತಂಡದ ಮ್ಯಾನೇಜ್‌ಮೆಂಟ್ ತಲೆಕೆಡೆಸಿಕೊಳ್ಳುತ್ತದೆ. ಅಗತ್ಯವಿದ್ದರೆ ಕಳಪೆ ಪ್ರದರ್ಶನ ನೀಡಿದ ಆಟಗಾರರನ್ನು ಕೈಬಿಡಲಾಗುತ್ತದೆ. ಆದರೆ ಇಂಗ್ಲೆಂಡ್ (India vs England) ತಂಡದಲ್ಲಿ ಹೀಗಿಲ್ಲ. ರಾಂಚಿಯಲ್ಲಿ ಭಾರತ ವಿರುದ್ಧ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡ ಸೋಲನುಭವಿಸಿತ್ತು. ಈ ಹ್ಯಾಟ್ರಿಕ್ ಸೋಲಿನೊಂದಿಗೆ ಆಂಗ್ಲರು ಸರಣಿಯನ್ನು ಕೂಡ ಕಳೆದುಕೊಂಡರು. ಹೀಗಿರುವಾಗ ಇಂಗ್ಲೆಂಡ್ ತಂಡ ತನ್ನ ಸೋಲಿನ ಬಗ್ಗೆ ಯೋಚಿಸದೆ ಜಾಲಿ ಮೂಡ್ನಲ್ಲಿದೆ.
ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡಿತ್ತು. ಆದರೆ ಇದರ ನಂತರ ತಂಡ ಸತತ ಮೂರು ಪಂದ್ಯಗಳಲ್ಲಿ ಸೋತು ಸರಣಿಯನ್ನು ಕಳೆದುಕೊಂಡಿದೆ. ಕನಿಷ್ಠ ಐದನೇ ಪಂದ್ಯದಲ್ಲಿ ಗೆಲ್ಲಲು ಕಠಿಣ ಅಭ್ಯಾಸ ನಡೆಸುವುದು ಬಿಟ್ಟು ಇಂಗ್ಲೆಂಡ್ ತಂಡ ಸೋಲಿಗೆ ಕಾರಣ ಹುಡುಕುವ ಬದಲು ಈಗ ರಜೆಯ ಮೇಲೆ ತೆರಳುತ್ತಿದೆ.
ಭಾರತ ಗೆದ್ದ ತಕ್ಷಣ ಡ್ರೆಸ್ಸಿಂಗ್ ರೂಮ್ನಲ್ಲಿ ರಾಹುಲ್ ದ್ರಾವಿಡ್ ಏನು ಮಾಡಿದ್ರು ನೋಡಿ
ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ರಾಂಚಿ ಟೆಸ್ಟ್ ಬಳಿಕ ಇಂಗ್ಲೆಂಡ್ ತಂಡ ಒಂದು ವಾರ ವಿರಾಮ ತೆಗೆದುಕೊಳ್ಳಲಿದೆ. ಸರಣಿಯ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಮಾರ್ಚ್ 7 ರಿಂದ ಧರ್ಮಶಾಲಾದಲ್ಲಿ ಶುರುವಾಗಲಿದೆ. ಈ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡದ ಕೆಲವು ಆಟಗಾರರು ಚಂಡೀಗಢಕ್ಕೆ ಮತ್ತು ಇನ್ನೂ ಕೆಲವರು ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಇಸಿಬಿ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಪಂದ್ಯ ಆರಂಭಕ್ಕೆ ಮೂರು ದಿನಗಳಿರುವಾಗ ಎಲ್ಲ ಆಟಗಾರರು ಧರ್ಮಶಾಲಾದಲ್ಲಿ ಜಮಾಯಿಸಲಿದೆ.
ಈ ಪ್ರವಾಸದಲ್ಲಿ ಇಂಗ್ಲೆಂಡ್ ತಂಡ ವಿಶ್ರಾಂತಿ ಪಡೆಯುತ್ತಿರುವುದು ಇದೇ ಮೊದಲಲ್ಲ. ಎರಡು ಮತ್ತು ಮೂರನೇ ಟೆಸ್ಟ್ ಪಂದ್ಯಗಳ ನಡುವೆ ಬಹಳ ದೀರ್ಘ ವಿರಾಮವಿತ್ತು. ಈ ಸಮಯದಲ್ಲಿ ಇಂಗ್ಲೆಂಡ್ ತಂಡವು ರಜಾ ಮಜಾವನ್ನು ಆನಂದಿಸುತ್ತು. ಆಗ ಇಂಗ್ಲೆಂಡ್ ತಂಡ ಅಬುಧಾಬಿಯಲ್ಲಿ ರಜೆ ಕಳೆದಿದ್ದರು. ಈ ಬಾರಿ ತಂಡ ಬೇರೆ ಸ್ಥಳವನ್ನು ಆಯ್ಕೆ ಮಾಡಿಕೊಂಡಿದೆ. ಇಂಗ್ಲೆಂಡ್ ತಂಡವು ಸರಣಿಯನ್ನು ಕಳೆದುಕೊಂಡಿದ್ದರೂ, ಕೊನೆಯ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಈ ಪ್ರವಾಸವನ್ನು ಕೊನೆಗೊಳಿಸುತ್ತಾ ನೋಡಬೇಕಿದೆ.
ಭಾರತ-ಇಂಗ್ಲೆಂಡ್ ಐದನೇ ಟೆಸ್ಟ್ ಪಂದ್ಯ ಯಾವಾಗ?, ಎಲ್ಲಿ?: ಇಲ್ಲಿದೆ ಸಂಪೂರ್ಣ ಮಾಹಿತಿ
ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಜೇಮ್ಸ್ ಅ್ಯಂರ್ಸನ್, ಗಸ್ ಅಟ್ಕಿನ್ಸನ್ , ಜಾನಿ ಬೈರ್‌ಸ್ಟೋವ್, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಒಲ್ಲಿ ಪೋಪ್, ಆಲಿ ರಾಬಿನ್ಸನ್ , ಜೋ ರೂಟ್ , ಮಾರ್ಕ್ ವುಡ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ