ಹೀಗೂ ಕ್ಯಾಚ್ ಹಿಡಿಯಬಹುದು: ಕ್ರಿಕೆಟ್‌ನಲ್ಲಿ ಹಿಂದೆಂದೂ ನಡೆದಿರದ ಅಚ್ಚರಿಯ ಸಂಗತಿ; ವಿಡಿಯೋ ನೋಡಿ

|

Updated on: Aug 05, 2024 | 3:30 PM

Cricket: ಕ್ರಿಕೆಟ್‌ನಲ್ಲಿ ಅಚ್ಚರಿಯ ಘಟನೆಗಳು ಹೊಸದೇನಲ್ಲ. ಈ ಅನಿಶ್ಚಿತತೆಯ ಆಟದಲ್ಲಿ, ನಂಬಲು ಸಾಧ್ಯವಾಗದ ರೀತಿಯಲ್ಲಿ ಅನೇಕ ಸಂಗತಿಗಳು ನಡೆಯುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ. ಆದರೆ ನಾವು ಹೇಳಲು ಮತ್ತು ತೋರಿಸಲು ಹೊರಟಿರುವುದು ಮೊದಲ ಬಾರಿಗೆ ನಡೆದ ಘಟನೆಯಾಗಿದೆ.

ಕ್ರಿಕೆಟ್‌ನಲ್ಲಿ ಅಚ್ಚರಿಯ ಘಟನೆಗಳು ಹೊಸದೇನಲ್ಲ. ಈ ಅನಿಶ್ಚಿತತೆಯ ಆಟದಲ್ಲಿ, ನಂಬಲು ಸಾಧ್ಯವಾಗದ ರೀತಿಯಲ್ಲಿ ಅನೇಕ ಸಂಗತಿಗಳು ನಡೆಯುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ. ಆದರೆ ನಾವು ಹೇಳಲು ಮತ್ತು ತೋರಿಸಲು ಹೊರಟಿರುವುದು ಮೊದಲ ಬಾರಿಗೆ ನಡೆದ ಘಟನೆಯಾಗಿದೆ. ನೀವು ಈ ಹಿಂದೆ ಕ್ರಿಕೆಟ್‌ನಲ್ಲಿ ಅನೇಕ ಫೀಲ್ಡರ್​ಗಳು ಭಿನ್ನ ವಿಭಿನ್ನವಾಗಿ ಸಾಕಷ್ಟು ಕ್ಯಾಚ್‌ಗಳನ್ನು ಹಿಡಿದಿರುವುದನ್ನು ನೋಡಿರುತ್ತೀರಿ. ಆದರೆ ಶೂಗಳ ಸಹಾಯದಿಂದ ಯಾರಾದರೂ ಈ ಅದ್ಭುತವಾದ ಕೆಲಸವನ್ನು ಮಾಡುವುದನ್ನು ನೀವು ನೋಡಿದ್ದೀರಾ?. ಹೌದು.. ಯುರೋಪಿಯನ್ ಕ್ರಿಕೆಟ್‌ ಈ ಘಟನೆಗೆ ಸಾಕ್ಷಿಯಾಗಿದೆ. ವಾಸ್ತವವಾಗಿ ಪಿಎಲ್​ಇ ಹಾಗೂ ಎಎಫ್​ಕೆ ತಂಡಗಳ ನಡುವೆ ನಡೆದ ಈ ಪಂದ್ಯದಲ್ಲಿ ಎಎಫ್​ಕೆ ತಂಡದ ಆಟಗಾರ ಕುರ್ಷಾದ್ ದಲ್ಯಾನಿ ಈ ರೀತಿಯಾಗಿ ವಿಭಿನ್ನ ಕ್ಯಾಚ್ ತೆಗೆದುಕೊಂಡಿದ್ದಾರೆ. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.