‘ಒಂದು ತಿಂಗಳೊಳಗೆ ಅವರು ನಗುತ್ತಾರೆ’; ರೋಹಿತ್ ಶರ್ಮಾ ಮಗಳ ವೈರಲ್ ವಿಡಿಯೊ ಇತ್ತೀಚಿನದ್ದು ಅಲ್ಲ

|

Updated on: Nov 25, 2023 | 4:17 PM

Fact Check: ವಿಶ್ವಕಪ್ ಕ್ರಿಕೆಟ್ 2023 ಫೈನಲ್ ಪಂದ್ಯದಲ್ಲಿ ಭಾರತ ಪರಾಭವಗೊಂಡ ನಂತರ ರೋಹಿತ್ ಶರ್ಮಾಳ ಮಗಳು ಸಮೈರಾಳ ವಿಡಿಯೊವೊಂದು ವೈರಲ್ ಆಗಿದೆ. ಅಪ್ಪ ಒಂದು ತಿಂಗಳ ನಂತರ ಮತ್ತೆ ನಗುತ್ತಾರೆ ಎಂದು ಸಮೈರಾ ಹೇಳುತ್ತಿರುವ ವಿಡಿಯೊ ಇದಾಗಿದೆ. ಪಂದ್ಯ ಪರಾಭವಗೊಂಡ ನಂತರ ರೋಹಿತ್ ಕುಸಿದುಹೋಗಿದ್ದಾರೆ, ಆವರ ಬಗ್ಗೆ ಮಗಳು ಹೀಗೆ ಹೇಳಿದ್ದಾಳೆ ಎಂಬ ಶೀರ್ಷಿಕೆಯೊಂದಿಗೆ ಹರಿದಾಡುತ್ತಿರುವ ವಿಡಿಯೊದ ಸತ್ಯಾಸತ್ಯತೆ ಇಲ್ಲಿದೆ.

‘ಒಂದು ತಿಂಗಳೊಳಗೆ ಅವರು ನಗುತ್ತಾರೆ’; ರೋಹಿತ್ ಶರ್ಮಾ ಮಗಳ ವೈರಲ್ ವಿಡಿಯೊ ಇತ್ತೀಚಿನದ್ದು ಅಲ್ಲ
ಸಮೈರಾ- ರೋಹಿತ್ ಶರ್ಮಾ
Follow us on

ದೆಹಲಿ ನವೆಂಬರ್ 25: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಪುಟ್ಟ ಮಗಳು ಸಮೈರಾ (Samaira) ಪಾಪರಾಜಿಗಳು ಕೇಳಿದ ಪ್ರಶ್ನೆಗೆ ಮುದ್ದಾಗಿ ಉತ್ತರಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಸಮೈರಾ ತನ್ನ ಅಮ್ಮ ರಿತಿಕಾ ಸಜ್ದಾ  ಮತ್ತು ಮತ್ತೊಬ್ಬ ಮಹಿಳೆ ಜತೆ ಹೊರಗೆ ಹೋಗುತ್ತಿರುವಾಗ ಅಲ್ಲಿಂದ ಯಾರೋ ಒಬ್ಬರು,  ಹಾಯ್ ಸ್ಯಾಮಿ (ಸಮೈರಾಳನ್ನು ಸ್ಯಾಮಿ ಎಂದೇ ಕರೆಯಲಾಗುತ್ತದೆ) ನಿಮ್ಮ ಅಪ್ಪ ಎಲ್ಲಿದ್ದಾರೆ? ಎಂದು ಕೇಳುತ್ತಾರೆ. ಆಗ ಸ್ಯಾಮಿ ಅಪ್ಪ (ರೋಹಿತ್ ಶರ್ಮಾ) ಅವರ ಕೋಣೆಯಲ್ಲಿದ್ದಾರೆ. ಅವರು “ಬಹುತೇಕ ಧನಾತ್ಮಕ”ವಾಗಿದ್ದಾರೆ. ಒಂದು ತಿಂಗಳೊಳಗೆ “ಅವರು ನಗುತ್ತಾರೆ” ಎಂದು  ಹೇಳುವುದನ್ನು ಕೇಳಬಹುದು.

2023 ರ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಸೋಲಿನ ನಂತರ ಚಿತ್ರೀಕರಿಸಲಾದ ಇತ್ತೀಚಿನ ಘಟನೆ ಎಂದು ಹಲವರು ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಫ್ಯಾಕ್ಟ್ ಚೆಕ್

ವೈರಲ್ ವಿಡಿಯೊ ಬಗ್ಗೆ ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ಮಾಡಿದ್ದು, ವೈರಲ್ ವಿಡಿಯೊ 2022 ರದ್ದು ಎಂದು ಕಂಡುಹಿಡಿದಿದೆ. ರೋಹಿತ್ ಶರ್ಮಾಗೆ ಕೋವಿಡ್ ಬಂದಾಗ, ಮಗಳು ಸಮೈರಾ ಅಪ್ಪನ ಆರೋಗ್ಯದ ಬಗ್ಗೆ ಹೇಳಿದ ಮಾತುಗಳಾಗಿತ್ತು ಅದು.

ವೈರಲ್ ವಿಡಿಯೊದಿಂದ ಕೀಫ್ರೇಮ್‌ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಈ ವಿಡಿಯೊ 28, 2022ರದ್ದು ಎಂದು ಗೊತ್ತಾಗುತ್ತದೆ. ಮಾಧ್ಯಮ ವರದಿ ಪ್ರಕಾರ ಜುಲೈ 1, 2022 ರಂದು ಇಂಗ್ಲೆಂಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ ರೋಹಿತ್ ಶರ್ಮಾಗೆ ಕೋವಿಡ್ -19 ಪಾಸಿಟಿವ್  ಆಗಿದ್ದರು. ಸಮೈರಾ ಅವರ ವೈರಲ್ ವಿಡಿಯೊವನ್ನು ಪತ್ರಕರ್ತರು ಚಿತ್ರೀಕರಿಸಿದ್ದಾರೆ. ತಂದೆಯ ಆರೋಗ್ಯದ ಬಗ್ಗೆ ಕೇಳಿದಾಗ ಸಮೈರಾ ಈ ರೀತಿ ಹೇಳಿದ್ದಳು.

ಇದನ್ನೂ ಓದಿ: Fact Check: ವಿಶ್ವಕಪ್ ಪ್ರೆಸೆಂಟೇಷನ್ ಸಮಾರಂಭದಲ್ಲಿ ಪ್ಯಾಟ್ ಕಮಿನ್ಸ್‌ ಕೈಕುಲುಕದೇ ಹೋದರೆ ಮೋದಿ?

ಜೂನ್ 26, 2022 ರಂದು, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಟೀಂ ಇಂಡಿಯಾ ನಾಯಕನಿಗೆ ಕೋವಿಡ್ ಪಾಸಿಟಿವ್ ಆಗಿದ್ದು ಕ್ವಾರಂಟೈನ್ ಮಾಡಲಾಗಿದೆ ಎಂದು ಟ್ವೀಟ್ ಮಾಡಿತ್ತು.

ಲೀಸೆಸ್ಟರ್‌ಶೈರ್ ವಿರುದ್ಧ ಭಾರತದ ನಾಲ್ಕು ದಿನಗಳ ಅಭ್ಯಾಸ ಪಂದ್ಯದ ನಡುವೆ ಶರ್ಮಾಗೆ ಕೋವಿಡ್ ಇರುವುದು ಪತ್ತೆಯಾಗಿತ್ತು. ಆ ಸಮಯದಲ್ಲಿ, ಸಮೈರಾ ಶರ್ಮಾ ಅವರು ಲೀಸೆಸ್ಟರ್‌ನ ಹೋಟೆಲ್ ಕೊಠಡಿಯಿಂದ ಹೊರನಡೆಯುತ್ತಿರುವಾಗ ವರದಿಗಾರರು ಆಕೆಯ ಅಪ್ಪನ ಆರೋಗ್ಯದ ಬಗ್ಗೆ ಕೇಳಿದರು ಎಂದು ವರದಿಯಾಗಿದೆ.

ಆದ್ದರಿಂದ, ವೈರಲ್ ಆಗಿರುವ ವಿಡಿಯೊ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋತ ನಂತರ ಅಪ್ಪ ರೋಹಿತ್ ಶರ್ಮಾ ಬಗ್ಗೆ ಮಗಳು ನೀಡಿದ ಅಪ್ಡೇಟ್ ಅಲ್ಲ ಎಂಬುದು ಸ್ಪಷ್ಟ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ