IND vs AUS, WC Final: ಮುಂಬೈ ತಲುಪಿದ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ: ಕ್ಯಾಮೆರಾ ಕಂಡು ಗರಂ ಅನುಷ್ಕಾ

IND vs AUS, WC Final: ಮುಂಬೈ ತಲುಪಿದ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ: ಕ್ಯಾಮೆರಾ ಕಂಡು ಗರಂ ಅನುಷ್ಕಾ

Vinay Bhat
|

Updated on: Nov 21, 2023 | 8:18 AM

Virat Kohli and Anushka Sharma arrives in Mumbai: ಐಸಿಸಿ ಏಕದಿನ ವಿಶ್ವಕಪ್ 2023 ಫೈನಲ್​ನಲ್ಲಿ ಸೋಲುಕಂಡ ಬಳಿಕ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ರೋಹಿತ್ ಶರ್ಮಾ-ರಿತಿಕಾ ಮುಂಬೈಗೆ ಆಗಮಿಸಿದ ವಿಡಿಯೋ ವೈರಲ್ ಆಗುತ್ತಿದೆ. ಕೊಹ್ಲಿ-ಅನುಷ್ಕಾ ಏರ್ಪೋರ್ಟ್​ನಿಂದ ಕಾರಿನ ಮೂಲಕ ತೆರಳಿದರು.

ಐಸಿಸಿ ಏಕದಿನ ವಿಶ್ವಕಪ್ 2023ರ ಫೈನಲ್​ನಲ್ಲಿ ಆಸ್ಟ್ರೇಲಿಯಾ ಸೋಲು ಅನುಭವಿಸಿರುವ ಭಾರತ (India vs Australia) ತಂಡ ಆಘಾತದಲ್ಲಿದೆ. ಇದರ ನಡುವೆ ಆಟಗಾರರು ತಮ್ಮ ತಮ್ಮ ಮನೆಗೆ ತೆರಳುತ್ತಿದ್ದಾರೆ. ಇದೀಗ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ರೋಹಿತ್ ಶರ್ಮಾ-ರಿತಿಕಾ ಮುಂಬೈಗೆ ಆಗಮಿಸಿದ ವಿಡಿಯೋ ವೈರಲ್ ಆಗುತ್ತಿದೆ. ಕೊಹ್ಲಿ-ಅನುಷ್ಕಾ ಏರ್ಪೋರ್ಟ್​ನಿಂದ ಕಾರಿನ ಮೂಲಕ ತೆರಳಿದರು. ಈ ಸಂದರ್ಭ ಅನುಷ್ಕಾ ಕ್ಯಾಮೆರಾ ಕಂಡು ವಿಡಿಯೋ ಮಾಡದಂತೆ ಗರಂ ಆದ ಘಟನೆ ಕೂಡ ನಡೆಯಿತು. ಭಾರತ ತನ್ನ ಮುಂದಿನ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧವೇ ನ. 23 ರಿಂದ ಆಡಲಿದೆ. ಇದು ಐದು ಪಂದ್ಯಗಳ ಟಿ20 ಸರಣಿ ಆಗಿದೆ. ಆದರೆ, ಈ ಸರಣಿಯಿಂದ ಕೊಹ್ಲಿ, ರೋಹಿತ್, ಬುಮ್ರಾ ಸೇರಿದಂತೆ ವಿಶ್ವಕಪ್​ನಲ್ಲಿ ಆಡಿದ ಹೆಚ್ಚಿನ ಆಟಗಾರರು ವಿಶ್ರಾಂತಿ ಪಡೆದುಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ