ಸೋತು ಹತಾಶರಾಗಿದ್ದ ಭಾರತೀಯ ಕ್ರಿಕೆಟ್ ಆಟಗಾರರನ್ನು ಡ್ರೆಸಿಂಗ್ ರೂಮಿಗೆ ಹೋಗಿ ಸಂತೈಸಿ, ಗೆಲುವಾಗಿಸಿದ ಪ್ರಧಾನಿ ಮೋದಿ

ಪ್ರಧಾನಿ ಅಲ್ಲಿಗೆ ಹೋಗಿದ್ದೂ ಅಲ್ಲದೆ, ಎಲ್ಲ ಆಟಗಾರರನ್ನು ಹೆಸರಿನಿಂದ ಕರೆದು, ಅವರ ತಲೆ ಮತ್ತು ಬೆನ್ನು ನೇವರಿಸಿ ಸಂತೈಸಿ ಬತ್ತಿ ಹೋಗಿದ್ದ ಚೇತನವನ್ನು ಬಡಿದೆಬ್ಬಿಸಿದ್ದಾರೆ. ಮೊದಲಿಗೆ ಅವರು ತಂಡದ ನಾಯಕ ರೋಹಿತ್ ಶರ್ಮ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಕೈಗಳನ್ನು ಹಿಡಿದು, ಹತ್ತತ್ತು ಮ್ಯಾಚ್ ಗಳನ್ನು ನೀವು ಗೆದ್ದಿದ್ದೀರಿ, ಇಡೀ ದೇಶ ನಿಮ್ಮ ಕಡೆ ಗರ್ವದಿಂದ ನೋಡುತ್ತಿದೆ, ಕ್ರೀಡೆಯಲ್ಲಿ ಸೋಲು ಗೆಲುವು ಇದ್ದಿದ್ದೇ, ಚಿಂತೆ ಬೇಡ, ಉದಾಸೀನರಾಗಬೇಡಿ ಅಂತ ಹೇಳುತ್ತಾರೆ.

ಸೋತು ಹತಾಶರಾಗಿದ್ದ ಭಾರತೀಯ ಕ್ರಿಕೆಟ್ ಆಟಗಾರರನ್ನು ಡ್ರೆಸಿಂಗ್ ರೂಮಿಗೆ ಹೋಗಿ ಸಂತೈಸಿ, ಗೆಲುವಾಗಿಸಿದ ಪ್ರಧಾನಿ ಮೋದಿ
|

Updated on:Nov 21, 2023 | 11:39 AM

ಅಹಮದಾಬಾದ್: ಭಾರತ ವಿಶ್ವಕಪ್ ಪೈನಲ್ ನಲ್ಲಿ ಸೋತರೂ ಪಂದ್ಯ ಮುಗಿದ ಬಳಿಕ ಹತಾಷರಾಗಿ ಡ್ರೆಸಿಂಗ್ ರೂಂನಲ್ಲಿ 1.4 ಬಿಲಿಯನ್ ಭಾರತೀಯರನ್ನು ನಿರಾಸೆಗೊಳಿಸಿದಕ್ಕೆ ಮೌನವಾಗಿ ರೋದಿಸುತ್ತಾ ಪರಿತಪಿಸುತ್ತಾ ಕುಳಿತಿದ್ದ ಟೀಮ್ ಇಂಡಿಯದ ಆಟಗಾರರು ಮತ್ತು ಸಪೋರ್ಟ್ ಸ್ಟಾಫ್ ಬಳಿ ಬಂದು ಅವರನ್ನು ಸಂತೈಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರತಿಯೊಬ್ಬ ಭಾರತೀಯನ ಮನ ಗೆದ್ದಿದ್ದಾರೆ. ಖುದ್ದು ಪ್ರಧಾನಿ ಮೋದಿಯವರೇ ತಮ್ಮಲ್ಲಿಗೆ ನಡೆದು ಬಂದಾರು ಅಂತ ಆಟಗಾರರು ಅಂದುಕೊಂಡಿರಲಾರರು. ಪ್ರಧಾನಿ ಅಲ್ಲಿಗೆ ಹೋಗಿದ್ದೂ ಅಲ್ಲದೆ, ಎಲ್ಲ ಆಟಗಾರರನ್ನು ಹೆಸರಿನಿಂದ ಕರೆದು, ಅವರ ತಲೆ ಮತ್ತು ಬೆನ್ನು ನೇವರಿಸಿ ಸಂತೈಸಿ ಬತ್ತಿ ಹೋಗಿದ್ದ ಚೇತನವನ್ನು ಬಡಿದೆಬ್ಬಿಸಿದ್ದಾರೆ. ಮೊದಲಿಗೆ ಅವರು ತಂಡದ ನಾಯಕ ರೋಹಿತ್ ಶರ್ಮ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಕೈಗಳನ್ನು ಹಿಡಿದು, ಹತ್ತತ್ತು ಮ್ಯಾಚ್ ಗಳನ್ನು ನೀವು ಗೆದ್ದಿದ್ದೀರಿ, ಇಡೀ ದೇಶ ನಿಮ್ಮ ಕಡೆ ಗರ್ವದಿಂದ ನೋಡುತ್ತಿದೆ, ಕ್ರೀಡೆಯಲ್ಲಿ ಸೋಲು ಗೆಲುವು ಇದ್ದಿದ್ದೇ, ಚಿಂತೆ ಬೇಡ, ಉದಾಸೀನರಾಗಬೇಡಿ ಅಂತ ಹೇಳುತ್ತಾರೆ.

ಆಮೇಲೆ ಟೀಮ್ ಇಂಡಿಯ ಕೋಚ್ ರಾಹುಲ್ ದ್ರಾವಿಡ್ ಹೆಸರು ಕರೆದು, ಅತ್ಯುತ್ತಮ ಪ್ರಯತ್ನ ಮಾಡಿದ್ದೀರಿ ಅನ್ನುತ್ತಾರೆ. ತಮ್ಮ ರಾಜ್ಯದವರಾಗಿರುವ ರವೀಂದ್ರ ಜಡೇಜಾ ಜೊತೆ ಗುಜರಾತಿ ಭಾಷೆಯಲ್ಲಿ ಮಾತಾಡುತ್ತಾರೆ. ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಮೊಹಮ್ಮದ್ ಶಮಿಯನ್ನು, ‘ಔರ್ ಶಮೀ’ ಅನ್ನುತ್ತಾ ಹತ್ತಿರಕ್ಕೆ ಕರೆದು ತಬ್ಬಿಕೊಳ್ಳತ್ತಾರೆ. ಅಹಮದಾಬಾದ್ ನಲ್ಲಿ ಹುಟ್ಟಿ ಬೆಳೆದ ಜಸ್ಪ್ರೀತ್ ಬುಮ್ರಾ ಅವರನ್ನು, ‘ನಿಮಗೆ ಗುಜರಾತಿ ಭಾಷೆ ಗೊತ್ತಲ್ವಾ?’ ಅಂದಾಗ ‘ಹೌದು ಸರ್’ ಅನ್ನುತ್ತಾ ಅವರು ಗುಜರಾತಿ ಭಾಷೆಯಲ್ಲೇ ಮೋದಿಯವರೊಂದಿಗೆ ಮಾತಾಡುತ್ತಾರೆ.

ಎಲ್ಲರನ್ನು ಸಂತೈಸಿ ಹುರಿದುಂಬಿಸಿ ಅವರ ಮೂಡ್ ಗಳನ್ನು ಎಲಿವೇಟ್ ಮಾಡಿದ ಬಳಿಕ ಪ್ರಧಾನಿ ಮೋದಿ, ‘ಯಾವ ಕಾರಣಕ್ಕೂ ಅಧೀರರಾಗಬೇಡಿ, ನಿಮ್ಮಲ್ಲಿರುವ ಛಲವಂತಿಕೆಯೊಂದಿಗೆ ರಾಜಿ ಬೇಡ, ನಿಮ್ಮ ಬಿಡುವಿನ ವೇಳೆ ಎಲ್ಲರೂ ದೆಹಲಿಗೆ ಬನ್ನಿ, ನಿಮ್ಮೊಂದಿಗೆ ಕೂತು ಹರಟುತ್ತೇನೆ, ನನ್ನಲ್ಲಿಗೆ ಬರಲು ನಿಮ್ಮೆಲ್ಲರಿಗೆ ಸದಾ ಆಮಂತ್ರಣವಿದೆ,’ ಎಂದು ಹೇಳುತ್ತಾರೆ. ಪ್ರಧಾನಿಯವರ ಭೇಟಿ ಮತ್ತು ಹುಮ್ಮಸ್ಸು ತುಂಬುವ ಮಾತುಗಳಿಂದ ಜೋಲುಬಿದ್ದಿದ್ದ ಭಾರತೀಯ ಆಟಗಾರರ ಮುಖಗಳಲ್ಲಿ ಜೀವಕಳೆ ಬಂದಿದ್ದು ಸುಳ್ಳಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:38 am, Tue, 21 November 23

Follow us