Faf Duplessis: ಪಂದ್ಯ ಮುಗಿದ ಬಳಿಕ ಕಾರ್ತಿಕ್ ಬಗ್ಗೆ ಆರ್​ಸಿಬಿ ನಾಯಕ ಡುಪ್ಲೆಸಿಸ್ ಆಡಿದ ಮಾತು ಕೇಳಿ

| Updated By: Vinay Bhat

Updated on: Apr 17, 2022 | 10:09 AM

Dinesh Karthik, DC vs RCB: ದಿನೇಶ್ ಕಾರ್ತಿಕ್ ಹಾಗೂ ಮ್ಯಾಕ್ಸ್‌ವೆಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್​ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ಅನ್ನು 16 ರನ್‌ಗಳಿಂದ ಮಣಿಸಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಏನು ಹೇಳಿದರು ಕೇಳಿ.

Faf Duplessis: ಪಂದ್ಯ ಮುಗಿದ ಬಳಿಕ ಕಾರ್ತಿಕ್ ಬಗ್ಗೆ ಆರ್​ಸಿಬಿ ನಾಯಕ ಡುಪ್ಲೆಸಿಸ್ ಆಡಿದ ಮಾತು ಕೇಳಿ
Faf du Plessis post-match presentation DC vs RCB
Follow us on

ಹೊಸ ನಾಯಕ, ಕೆಲ ಹೊಸ ಆಟಗಾರರೊಂದಿಗೆ ಐಪಿಎಲ್ 2022 ರಲ್ಲಿ ಕಣಕ್ಕಿಳಿದಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ತಂಡ ನಿರೀಕ್ಷೆಗೆ ತಕ್ಕ ಆಟ ಪ್ರದರ್ಶಿಸುತ್ತಿದೆ. ಆರು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆಲುವು ಸಾಧಿಸಿರುವ ಪಾಫ್ ಡುಪ್ಲೆಸಿಸ್ (Faf Duplessis) ಪಡೆ ಈ ಬಾರಿ ಕಪ್ ಗೆಲ್ಲುವ ನಿರೀಕ್ಷೆ ಮೂಡಿಸಿದೆ. ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​ಸಿಬಿ ನೀಡಿದ ಪ್ರದರ್ಶನ ಅಚ್ಚುಕಟ್ಟಾಗಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿದ ಬೆಂಗಳೂರು ಮತ್ತೆ ಗೆಲುವಿನ ಹಾದಿ ಹಿಡಿಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 5 ವಿಕೆಟ್‌ಗೆ 189 ರನ್ ಪೇರಿಸಿತು. ಆರಂಭಿಕ ವೈಫಲ್ಯದ ನಡುವೆಯೂ ದಿನೇಶ್ ಕಾರ್ತಿಕ್ (Dinesh Kartik)-ಅಜೇಯ 66 ರನ್, 34 ಎಸೆತ, 5 ಬೌಂಡರಿ, 5 ಸಿಕ್ಸರ್ ಹಾಗೂ ಮ್ಯಾಕ್ಸ್‌ವೆಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ತಂಡವನ್ನು 16 ರನ್‌ಗಳಿಂದ ಮಣಿಸಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಏನು ಹೇಳಿದರು ಕೇಳಿ.

“ಪ್ರತಿ ಪಂದ್ಯದಲ್ಲಿ ಟಾಪ್ ಆರ್ಡನ್ ಬ್ಯಾಟ್ಸ್​ಮನ್​ಗಳು ಉತ್ತಮ ರನ್ ಕಲೆಹಾಕುವುದು ಮುಖ್ಯ. ನಮ್ಮಲ್ಲಿ ಹಾಗಾಗಲಿಲ್ಲ. ಆದರೆ, ಗ್ಲೆನ್ ಮ್ಯಾಕ್ಸ್​ವೆಲ್ ಬಂದು ಎದುರಾಳಿಗರಿಗೆ ಒತ್ತಡವನ್ನು ಹೇರಿದರು. ನಂತರ ಬಂದ ಒಬ್ಬರು ಬ್ಯಾಟ್ಸ್​ಮನ್​ಗಳು ನಮಗೆ ಹೇಗೆ ಬೇಕೋ, ತಂಡಕ್ಕೆ ಯಾವರೀತಿ ಕೊಡುಗೆ ನೀಡಬೇಕೋ ಅದನ್ನು ನೀಡಿದರು. ಇಂದು ಕೆಲವು ಯೋಜನೆಗಳೊಂದಿಗೆ ನಾವು ಕಣಕ್ಕಿಳಿದೆವು. ಡೆತ್ ಓವರ್​ನಲ್ಲಿ ಈ ಹಿಂದೆ ನಮ್ಮ ಪ್ರದರ್ಶನ ಉತ್ತಮವಾಗಿರಲಿಲ್ಲ. ಆದರೆ, ಇಂದು ಬೌಲರ್​ಗಳು ಭರ್ಜರಿ ಪ್ರದರ್ಶನ ತೋರಿದ್ದಾರೆ. ಹೆಚ್ಚಿನ ತಂಡಗಳು ತುಂಬಾ ಇಬ್ಬನಿಯನ್ನು ನೋಡಿ ಬೇಗನೆ ನಿರ್ಧಾರ ಮಾಡುತ್ತಾರೆ. ಆದರೆ, ನಾವು ನಮ್ಮ ಪ್ಲಾನ್​​ಗೆ ಬದ್ಧರಾಗಿದ್ದೆವು,” ಎಂದು ಹೇಳಿದ್ದಾರೆ.

ದಿನೇಶ್ ಕಾರ್ತಿಕ್ ಆಟದ ಬಗ್ಗೆ ಮಾತನಾಡಿದ ಫಾಫ್, “ಒಂದು ತಂಡ 190 ರನ್ ಗಳಿಸಬೇಕು ಎಂದರೆ ಅದರಲ್ಲಿ ಒಬ್ಬ ಬ್ಯಾಟ್ಸ್​​ಮನ್​ ಅತ್ಯುತ್ತಮ ಇನ್ನಿಂಗ್ಸ್​ ಆಡಬೇಕು. ಇಂದು ಇದರ ಕ್ರೆಡಿಟ್ ದಿನೇಶ್ ಕಾರ್ತಿಕ್ ಮತ್ತು ಶಹ್ಬಾಜ್ ಅಹ್ಮದ್​ಗೆ ಸಲ್ಲಬೇಕು. ಕಾರ್ತಿಕ್ ಅಂತೂ ದಾಖಲೆಯ ರೀತಿಯಲ್ಲಿ ಆಡಿದರು. ಅವರು ಭರ್ಜರಿ ಫಾರ್ಮ್​​ನಲ್ಲಿದ್ದಾರೆ. ಇದು ಅವರ ಬೆಸ್ಟ್ ಇನ್ನಿಂಗ್ಸ್. ಅವರು ಸ್ಪಷ್ಟ, ಶಾಂತ ಮತ್ತು ಸಂಯೋಜನೆ ಆಟಗಾರ. ನಮ್ಮ ತಂಡದಲ್ಲಿ ಡಿಕೆ ಇರುವುದು ಅದೃಷ್ಟ,” ಎಂಬುದು ಫಾಫ್ ಡುಪ್ಲೆಸಿಸ್ ಮಾತು.

ಸೋತ ತಂಡದ ನಾಯಕ ರಿಷಭ್ ಪಂತ್ ಮಾತನಾಡಿ, “ಡೇವಿಡ್ ವಾರ್ನರ್ ಅದ್ಭುತ ಬ್ಯಾಟಿಂಗ್ ನಡೆಸಿದ್ದಾರೆ. ಅವರು ಪ್ರತಿ ಪಂದ್ಯದಲ್ಲಿ ತಂಡದ ಗೆಲುವಿಗೆ ಹೋರಾಟ ನಡೆಸುತ್ತಾರೆ. ಸಾಕಷ್ಟು ಬಾಲ್​ಗಳನ್ನು ತೆಗೆದುಕೊಂಡ ಮಿಚೆಲ್ ಮಾರ್ಶ್ ಅವರನ್ನು ದೂರಲು ಸಾಧ್ಯವಿಲ್ಲ. ಇದು ಅವರ ಮೊದಲ ಪಂದ್ಯ. ಮಧ್ಯಮ ಓವರ್​ನಲ್ಲಿ ನಾವು ಇನ್ನಷ್ಟು ಉತ್ತಮವಾಗಿ ಬ್ಯಾಟಿಂಗ್ ಮಾಡಬಹುದಿತ್ತು. ಓವರ್​ಗಳು ಕಳೆಯುತ್ತಿದ್ದಂತೆ ವಿಕೆಟ್ ತುಂಬಾ ಚೆನ್ನಾಗಿ ಇರುತ್ತಿತ್ತು. ನಾನು ಅಂದುಕೊಂಡ ರೀತಿ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಚೆನ್ನಾಗಿತ್ತು. ಕೊನೆಯ ಓವರ್ ಅನ್ನು ಕುಲ್ದೀಪ್ ಉತ್ತಮವಾಗಿ ಮಾಡಿದರು. ಈ ಸೋಲಿನ ಬಗ್ಗೆ ಚರ್ಚೆ ನಡೆಸುತ್ತೇವೆ. ಮುಂದಿನ ಪಂದ್ಯದಲ್ಲಿ ತಪ್ಪುಗಳನ್ನು ತಿದ್ದಿ ಬಲಿಷ್ಠವಾಗಿ ಕಮ್​ಬ್ಯಾಕ್ ಮಾಡುತ್ತೇವೆ,” ಎಂದು ರಿಷಭ್ ಪಂತ್ ಹೇಳಿದ್ದಾರೆ.

GT vs CSK: ಐಪಿಎಲ್​​ನಲ್ಲಿಂದು ಎರಡು ಪಂದ್ಯ: ರೋಚಕತೆ ಸೃಷ್ಟಿಸಿದೆ ಗುಜರಾತ್-ಚೆನ್ನೈ ಕಾದಾಟ

DC vs RCB: ಪಂದ್ಯದ ಚಿತ್ರಣವನ್ನೇ ಬದಲಾಯಿಸಿತು ಆರ್​ಸಿಬಿ ಬೌಲರ್ ಮಾಡಿದ ಆ ಒಂದು ಓವರ್

Published On - 10:08 am, Sun, 17 April 22