Dinesh Karthik: 4,4,4,6,6,4- ಆ ಒಂದು ಓವರ್ನಲ್ಲಿ ಕಾರ್ತಿಕ್ ಸಿಡಿಲಬ್ಬರ ಬ್ಯಾಟಿಂಗ್ ಹೇಗಿತ್ತು ನೋಡಿ
DC vs RCB, IPL 2022: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ತಮ್ಮ ಭರ್ಜರಿ ಫಾರ್ಮ್ ಅನ್ನು ಮುಂದುವರೆಸಿದ ದಿನೇಶ್ ಕಾರ್ತಿಕ್ ತಂಡಕ್ಕೆ ಉಪಯುಕ್ತವಾದ ಕಾಣಿಕೆ ನೀಡಿದರು. ಪ್ರಮುಖವಾಗಿ ಮುಸ್ತಿಫಿಜುರ್ ರೆಹಮಾನ್ ಓವರ್ನಲ್ಲಿ ಬರೋಬ್ಬರಿ 28 ರನ್ ಚಚ್ಚಿದರು.
ಐಪಿಎಲ್ 2022 (IPL 2022) ರಲ್ಲಿ ಶನಿವಾರ ನಡೆದ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (DC vs RCB) ನಡುವಣ ಕಾದಾಟ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಅಂತಿಮ ಹಂತದ ವರೆಗೂ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 16 ರನ್‌ಗಳ ಭರ್ಜರಿ ಜಯ ಸಾಧಿಸಿ ಪಾಯಿಂಟ್ ಟೇಬಲ್ನಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. ಈ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ಆಧಾರವಾಗಿದ್ದು ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ದಿನೇಶ್ ಕಾರ್ತಿಕ್ (Dinesh Karthik). ಅದರಲ್ಲೂ ಅರ್ಧಶತಕ ಸಿಡಿಸಿ ಮ್ಯಾಕ್ಸಿ ಔಟಾದ ಬಳಿಕ ಕ್ರೀಸ್‌ಗೆ ಬಂದ ಕಾರ್ತಿಕ್ ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದರು. ಸೆಟಲ್ ಆಗುತ್ತಿದ್ದಂತೆ ತನ್ನ ದರ್ಬಾರ್ ಆರಂಭಿಸಿದ ಇವರು ಡೆಲ್ಲಿ ಬೌಲರ್ಗಳ ಬೆವರಿಳಿಸಿಬಿಟ್ಟರು. ತಮ್ಮ ಭರ್ಜರಿ ಫಾರ್ಮ್ ಅನ್ನು ಮುಂದುವರೆಸಿದ ಕಾರ್ತಿಕ್ ತಂಡಕ್ಕೆ ಉಪಯುಕ್ತವಾದ ಕಾಣಿಕೆ ನೀಡಿದರು. ಪ್ರಮುಖವಾಗಿ ಮುಸ್ತಿಫಿಜುರ್ ರೆಹಮಾನ್ ಓವರ್ನಲ್ಲಿ ಬರೋಬ್ಬರಿ 28 ರನ್ ಚಚ್ಚಿದರು.
ಆರ್‌ಸಿಬಿ ಬ್ಯಾಟಿಂಗ್ ಇನ್ನಿಂಗ್ಸ್ನಲ್ಲಿ 18ನೇ ಓವರ್ ಬೌಲಿಂಗ್ ಮಾಡಲು ಮುಸ್ತಿಫಿಜುರ್ ರೆಹಮಾನ್ ಬಂದರು. ಇವರ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರೆ ಎರಡನೇ ಮತ್ತು ಮೂರನೇ ಎಸೆತದಲ್ಲೂ ಚೆಂಡನ್ನು ಬೌಂಡರಿಗೆ ಅಟ್ಟಿದರು. ಹೀಗೆ ಹ್ಯಾಟ್ರಿಕ್ ಫೋರ್ ಬಾರಿಸಿದ ಬಳಿಕ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ಐದನೇ ಎಸೆತವನ್ನು ಕೂಡ ಸಿಕ್ಸ್ಗೆ ಕನ್ವರ್ಟ್ ಮಾಡದರು. ಕೊನೆಯ ಆರನೇ ಎಸೆತದಲ್ಲಿ ಮತ್ತೊಂದು ಫೋರ್ ಬಾರಿಸುವ ಮೂಲಕ ಒಂದೇ ಓವರ್ನಲ್ಲಿ ಬರೋಬ್ಬರಿ 29 ರನ್ ಚಚ್ಚಿದರು. ಈ ರೋಚಕ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಆರ್‌ಸಿಬಿ ತಂಡ 11.2 ಓವರ್‌ಗಳಲ್ಲಿ 92 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ದಿನೇಶ್ ಕಾರ್ತಿಕ್ ಕ್ರೀಸ್‌ಗೆ ಇಳಿದಿದ್ದರು. ಈ ಸಂದರ್ಭದಲ್ಲಿ ರನ್ ಏರಿಸುವುದರ ಜೊತೆಗೆ ತಂಡವನ್ನು ಕುಸಿತದಿಂದ ಪಾರು ಮಾಡುವ ಜವಾಬ್ಧಾರಿ ಕೂಡ ದಿನೇಶ್ ಕಾರ್ತಿಕ್ ಮೇಲಿತ್ತು. ಈ ಜವಾಬ್ಧಾರಿಯನ್ನು ಕಾರ್ತಿಕ್ ಶಹಬಾಜ್ ಅಹ್ಮದ್ ಜೊತೆ ಸೇರಿ ಅದ್ಭುತವಾಗಿ ನಿರ್ವಹಿಸಿದರು. ಈ ಜೋಡಿ ಅಜೇಯ 97 ರನ್‌ಗಳ ಅಮೋಘ ಕೊಡುಗೆ ನೀಡುವ ಮೂಲಕ ನಿಗದಿತ 20 ಓವರ್‌ಗಳಲ್ಲಿ 189 ರನ್‌ಗಳಿಸಲು ಕಾರಣವಾದರು. ಇದರಲ್ಲಿ ದಿನೇಶ್ ಕಾರ್ತಿಕ್ 34 ಎಸೆತಗಳನ್ನು ಎದುರಿಸಿ 66 ರನ್ ಬಾರಿಸಿದ್ದರು. ಐದು ಬೌಂಡಿರಿ ಹಾಗೂ ಐದು ಸಿಕ್ಸ್ ಡಿಕೆ ಬ್ಯಾಟ್‌ನಿಂದ ಸಿಡಿದಿತ್ತು.
ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಡೇವಿಡ್ ವಾರ್ನರ್ 38 ಎಸೆತಗಳಲ್ಲಿ 66 ರನ್ ಬಾರಿಸಿ ಅಬ್ಬರಿಸಿದರೆ, ಮಧ್ಯಮ ಕ್ರಮಾಂಕದಲ್ಲಿ 17 ಎಸೆತಗಳಿಗೆ 34 ರನ್ ಬಾರಿಸಿದ ರಿಷಭ್ ಪಂತ್ ಪಂದ್ಯ ಗೆಲ್ಲಿಸುವ ಭರವಸೆಯನ್ನು ಆ ಕ್ಷಣಕ್ಕೆ ಹುಟ್ಟುಹಾಕಿದ್ದರು. ಆದರೆ, ಇವರಿಬ್ಬರ ಸ್ಫೋಟಕ ಆಟ ವ್ಯರ್ಥವಾಯಿತು. ಇನ್ನುಳಿದಂತೆ ತಂಡದ ಪರ ಪೃಥ್ವಿ ಶಾ 16, ಮಿಚೆಲ್ ಮಾರ್ಷ್ 14, ರೋವ್ಮನ್ ಪೊವೆಲ್ 0, ಲಲಿತ್ ಯಾದವ್ 1, ಶಾರ್ದೂಲ್ ಠಾಕೂರ್ 17, ಅಕ್ಷರ್ ಪಟೇಲ್ ಮತ್ತು ಕುಲ್ ದೀಪ್ ಯಾದವ್ ಅಜೇಯ 10 ರನ್ ಗಳಿಸಿದರು.
ಜೋಷ್ ಹ್ಯಾಜ್ಲೆವುಡ್ ಮಾಡಿದ 15ನೇ ಓವರ್ ಪಂದ್ಯದ ಚಿತ್ರಣವನ್ನೇ ಬದಲಾಯಿಸಿತು. ತಮ್ಮ ಒಂದೇ ಓವರ್ನಲ್ಲಿ ಎರಡು ವಿಕೆಟ್ಗಳನ್ನ ಕಿತ್ತು ಜೋಷ್ ಎದುರಾಳಿಗೆ ನೇರವಾಗಿ ಒತ್ತಡವನ್ನು ಹಾಕಿದರು. ಇದರಿಂದ ಹೊರಬರಲು ಕಠಿಣ ಪರಿಶ್ರಮ ಪಟ್ಟರೂ ಅದು ಸಾಧ್ಯವಾಗಲಿಲ್ಲ. ರೋವಮ್ ಪಾವೆಲ್ ಅವರನ್ನು ಮೊದಲ ಎಸೆತದಲ್ಲೇ ಔಟ್ ಮಾಡಿದರೆ ಕೊನೆಯ ಎಸೆತದಲ್ಲಿ ಅಪಾಯಕಾರಿ ಬ್ಯಾಟರ್ ಲಲಿತ್ ಯಾದವ್ (1) ಅವರಿಗೆ ಪೆವಿಲಿಯನ್ ಹಾದಿ ತೋರಿದರು. ಶಿಸ್ತಿನ ಬೌಲಿಂಗ್ ಮಾಡಿದ ಹ್ಯಾಜ್ಲೆವುಡ್ 4 ಓವರ್ಗೆ ಕೇವಲ 28 ರನ್ ನೀಡಿ ಪ್ರಮುಖ 3 ವಿಕೆಟ್ ಕಿತ್ತರು.
IPL 2022 Points Table: ಪಾಯಿಂಟ್ ಟೇಬಲ್ ಅನ್ನೇ ತಲೆಕೆಳಗಾಗಿಸಿದ ಆರ್‌ಸಿಬಿ ಗೆಲುವು: ಇಲ್ಲಿದೆ ನೂತನ ಅಂಕಪಟ್ಟಿ
Faf Duplessis: ಪಂದ್ಯ ಮುಗಿದ ಬಳಿಕ ಕಾರ್ತಿಕ್ ಬಗ್ಗೆ ಆರ್‌ಸಿಬಿ ನಾಯಕ ಡುಪ್ಲೆಸಿಸ್ ಆಡಿದ ಮಾತು ಕೇಳಿ