IPL 2023, PBKS vs KKR: ಐಪಿಎಲ್​ನಲ್ಲಿಂದು ಡಬಲ್ ಧಮಾಕ: ಒಂದೇ ದಿನ ಎರಡು ಪಂದ್ಯ: ಯಾವುದೆಲ್ಲ?, ಇಲ್ಲಿದೆ ಮಾಹಿತಿ

|

Updated on: Apr 01, 2023 | 8:04 AM

LSG vs DC: ಇಂದು ಐಪಿಎಲ್ 2023 ರಲ್ಲಿ ಎರಡು ಪಂದ್ಯಗಳು ನಡೆಯಲಿದೆ. ಮೊದಲ ಮ್ಯಾಚ್​ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ (PBKS vs KKR) ತಂಡ ಮುಖಾಮುಖಿ ಆಗಲಿದೆ. ಮತ್ತೊಂದು ಪಂದ್ಯದಲ್ಲಿ ಲಖನೌ ತಂಡ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಎದುರಿಸಲಿದೆ.

IPL 2023, PBKS vs KKR: ಐಪಿಎಲ್​ನಲ್ಲಿಂದು ಡಬಲ್ ಧಮಾಕ: ಒಂದೇ ದಿನ ಎರಡು ಪಂದ್ಯ: ಯಾವುದೆಲ್ಲ?, ಇಲ್ಲಿದೆ ಮಾಹಿತಿ
PBKS vs KKR and LSG vs DC
Follow us on

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ (IPL 2023) ಅದ್ಧೂರಿ ಚಾಲನೆ ಸಿಕ್ಕಿದೆ. ಶುಕ್ರವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಗುಜರಾತ್ ಟೈಟಾನ್ಸ್ 5 ವಿಕೆಟ್​ಗಳ ಜಯ ಸಾಧಿಸಿ ಶುಭಾರಂಭ ಮಾಡಿತು. ಇಂದು ಐಪಿಎಲ್ 2023 ರಲ್ಲಿ ಎರಡು ಪಂದ್ಯಗಳು ನಡೆಯಲಿದೆ. ಮಧ್ಯಾಹ್ನ 3:30ಕ್ಕೆ ಶುರುವಾಗಲಿರುವ ಮೊದಲ ಮ್ಯಾಚ್​ನಲ್ಲಿ ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ಮತ್ತು ನಿತೀಶ್ ರಾಣ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (PBKS vs KKR) ತಂಡ ಮುಖಾಮುಖಿ ಆಗಲಿದೆ. ಸಂಜೆ 7:30ಕ್ಕೆ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಕೆಎಲ್ ರಾಹುಲ್ ಅವರ ಲಖನೌ ಸೂಪರ್ ಜೇಂಟ್ಸ್ ಡೇವಿಡ್ ವಾರ್ನರ್ ಕ್ಯಾಪ್ಟನ್ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್ (LSG vs DC) ಅನ್ನು ಎದುರಿಸಲಿದೆ. ಈ ಎರಡೂ ಪಂದ್ಯ ರೋಚಕತೆ ಸೃಷ್ಟಿಸಿದ್ದು ಹೈವೋಲ್ಟೇಜ್ ಮ್ಯಾಚ್ ಆಗುವುದರಲ್ಲಿ ಅನುಮಾನವಿಲ್ಲ.

ಪಂಜಾಬ್ vs ಕೋಲ್ಕತ್ತಾ:

ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಹೆಚ್ಚು ಯುವ ಆಟಗಾರರಿಂದ ಕೂಡಿದೆ. ಶಾರುಖ್ ಖಾನ್, ಬಾನುಕಾ ರಾಜಪಕ್ಷ, ಸಿಕಂದರ್ ರಾಜ, ಸ್ಯಾಮ್ ಕುರ್ರನ್, ರಿಶಿ ಧವನ್, ರಾಹುಲ್ ಚಹರ್, ಅರ್ಶ್​ದೀಪ್ ಸಿಂಗ್ ಪ್ರಮುಖ ಆಟಗಾರರಾಗಿದ್ದಾರೆ. ಇತ್ತ ಕೆಕೆಆರ್ ಶ್ರೇಯಸ್ ಅಯ್ಯರ್ ಅಲಭ್ಯತೆಯಲ್ಲಿ ಕಣಕ್ಕಿಳಿಯುತ್ತಿದೆ. ನಿತೀಶ್ ರಾಣಾಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದ್ದು , ಅವರಿಗೆ ಇದೊಂದು ಅಗ್ನಿ ಪರಿಕ್ಷೆ ಎನ್ನಬಹುದು. ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್​ ಥಾಕೂರ್, ವರುಣ್ ಚಕ್ರವರ್ತಿ, ರೆಹಮ್ಮದುಲ್ಲ ಗುರ್ಬಜ್, ಫರ್ಗುಸನ್, ಉಮೇಶ್ ಯಾದವ್ ರಂತಹ ಸ್ಟಾರ್ ಆಟಗಾರರಿದ್ದಾರೆ.

ಸ್ಥಳ: ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರ ಸ್ಟೇಡಿಯಂ, ಮೊಹಾಲಿ

ಇದನ್ನೂ ಓದಿ
MS Dhoni: ಎಂಎಸ್ ಧೋನಿ ಕಾಲು ಮುಟ್ಟಿ ನಮಸ್ಕರಿಸಿದ ಅರಿಜಿತ್ ಸಿಂಗ್: ಚೆನ್ನೈ-ಗುಜರಾತ್ ಪಂದ್ಯದ ರೋಚಕ ಫೊಟೋ ಇಲ್ಲಿದೆ
IPL 2023: ಈ ಬಾರಿ ಪ್ಲೇಆಫ್ ಪ್ರವೇಶಿಸುವ 4 ತಂಡಗಳನ್ನು ಆಯ್ಕೆ ಮಾಡಿದ ಎಬಿಡಿ
MS Dhoni: ಐಪಿಎಲ್ ಸಿಕ್ಸರ್ ಕಿಂಗ್​ಗಳ ಪಟ್ಟಿಗೆ ಎಂಎಸ್ ಧೋನಿ ಎಂಟ್ರಿ..!
IPL 2023 Opening Ceremony: ಐಪಿಎಲ್ ಉದ್ಘಾಟನಾ ಸಮಾರಂಭದ ಝಲಕ್ ಇಲ್ಲಿದೆ

ಸಮಯ: ಮಧ್ಯಾಹ್ನ 3:30ಕ್ಕೆ

MS Dhoni: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ಎಂಎಸ್ ಧೋನಿ

ಲಖನೌ vs ಡೆಲ್ಲಿ:

ಲಖನೌ ಮತ್ತು ಡೆಲ್ಲಿ ನಡುವಣ ದ್ವಿತೀಯ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಲಖನೌ ತಂಡದಲ್ಲಿ ಕೆಎಲ್ ರಾಹುಲ್, ಕ್ವಿಂಟನ್ ಡಿಕಾಕ್, ನಿಕೋಲಸ್ ಪೂರನ್, ಮಾರ್ಕಸ್ ಸ್ಟಾಯಿನಿಸ್, ಆಯುವ್ ಬದೋನಿ, ಕ್ರುನಾಲ್ ಪಾಂಡ್ಯ, ದೀಪಕ್ ಹೂಡ, ಜಯದೇವ್ ಉನಾದ್ಕಟ್, ಆವೇಶ್ ಖಾನ್, ರವಿ ಬಿಷ್ಟೋಯಿ, ಅಮಿತ್ ಮಿಶ್ರಾ ಹೀಗೆ ಅನೇಕ ಆಯ್ಕೆಗಳಿವೆ. ಇತ್ತ ಡೆಲ್ಲಿ ತಂಡದಲ್ಲಿ ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚೆಲ್ ಮಾರ್ಶ್, ಸರ್ಫರಾಜ್ ಖಾನ್, ರೋಮನ್ ಪಾವೆಲ್, ಪಿಲಿಪ್ ಸಾಲ್ಟ್, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಇಶಾಂತ್ ಶರ್ಮಾ, ಕುಲ್ದೀಪ್ ಯಾದವ್ ಇದ್ದಾರೆ.

ಸ್ಥಳ: ಏಕಾನ ಕ್ರಿಕೆಟ್ ಸ್ಟೇಡಿಯಂ, ಲಖನೌ

ಸಮಯ: ಸಂಜೆ 7:30ಕ್ಕೆ

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:04 am, Sat, 1 April 23