IPL 2023 Points Table: ಗುಜರಾತ್-ಚೆನ್ನೈ ಪಂದ್ಯದ ಬಳಿಕ ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?, ಪಾಯಿಂಟ್ ಟೇಬಲ್ ಹೇಗಿದೆ?

IPL 2023 Orange and Purple Cap: ಇದೀಗ ಐಪಿಎಲ್ 2023ರ ಮೊದಲ ಪಂದ್ಯ ಮುಗಿದ ಬಳಿಕ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?, ಪಾಯಿಂಟ್ ಟೇಬಲ್ ಹೇಗಿದೆ ಎಂಬುದನ್ನು ನೋಡೋಣ.

IPL 2023 Points Table: ಗುಜರಾತ್-ಚೆನ್ನೈ ಪಂದ್ಯದ ಬಳಿಕ ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?, ಪಾಯಿಂಟ್ ಟೇಬಲ್ ಹೇಗಿದೆ?
rajvardhan hangargekar and ruturaj gaikwad
Follow us
|

Updated on:Apr 01, 2023 | 9:10 AM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ (IPL 2023) ಅದ್ಧೂರಿ ಚಾಲನೆ ಸಿಕ್ಕಿದೆ. ಹಾಲಿ ಚಾಂಪಿಯನ್ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಮೊದಲ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿದೆ. ಶುಕ್ರವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಗುಜರಾತ್ (GT vs CSK) 5 ವಿಕೆಟ್​ಗಳ ಜಯ ಸಾಧಿಸಿತು. ರುತುರಾಜ್ ಗಾಯಕ್ವಾಡ್ (Ruturaj Gaikwad) 90 ರನ್ ಸಿಡಿಸಿದ ಪರಿಣಾಮ ಸಿಎಸ್​ಕೆ 178 ರನ್ ಗಳಿಸಿತು. ಇದಕ್ಕುತ್ತರವಾಗಿ ಜಿಟಿ ಭರ್ಜರಿ ಬ್ಯಾಟಿಂಗ್ ನಡೆಸಿ ಇನ್ನೂ 4 ಎಸೆತ ಇರುವಂತೆ ಗೆದ್ದು ಬೀಗಿತು.

ಇದೀಗ ಮೊದಲ ಪಂದ್ಯ ಮುಗಿದ ಬಳಿಕ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?, ಪಾಯಿಂಟ್ ಟೇಬಲ್ ಹೇಗಿದೆ ಎಂಬುದನ್ನು ನೋಡೋಣ.

ಮೊದಲ ಪಂದ್ಯದಲ್ಲಿ ಗೆದ್ದ ಪರಿಣಾಮ ಗುಜರಾತ್ ಟೈಟಾನ್ಸ್ ತಂಡ 2 ಅಂಕ ಸಂಪಾದಿಸಿ ಟೇಬಲ್ ಟಾಪ್​​ನಲ್ಲಿದೆ. +0.514 ರನ್​ರೇಟ್ ಹೊಂದಿದೆ.

ಇದನ್ನೂ ಓದಿ
Image
IPL 2023, PBKS vs KKR: ಐಪಿಎಲ್​ನಲ್ಲಿಂದು ಡಬಲ್ ಧಮಾಕ: ಒಂದೇ ದಿನ ಎರಡು ಪಂದ್ಯ: ಯಾವುದೆಲ್ಲ?, ಇಲ್ಲಿದೆ ಮಾಹಿತಿ
Image
MS Dhoni: ಎಂಎಸ್ ಧೋನಿ ಕಾಲು ಮುಟ್ಟಿ ನಮಸ್ಕರಿಸಿದ ಅರಿಜಿತ್ ಸಿಂಗ್: ಚೆನ್ನೈ-ಗುಜರಾತ್ ಪಂದ್ಯದ ರೋಚಕ ಫೊಟೋ ಇಲ್ಲಿದೆ
Image
IPL 2023: ಈ ಬಾರಿ ಪ್ಲೇಆಫ್ ಪ್ರವೇಶಿಸುವ 4 ತಂಡಗಳನ್ನು ಆಯ್ಕೆ ಮಾಡಿದ ಎಬಿಡಿ
Image
MS Dhoni: ಐಪಿಎಲ್ ಸಿಕ್ಸರ್ ಕಿಂಗ್​ಗಳ ಪಟ್ಟಿಗೆ ಎಂಎಸ್ ಧೋನಿ ಎಂಟ್ರಿ..!

ಇತ್ತ ಸೋತ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ಯಾವುದೇ ಅಂಕ ಪಡೆಯದೆ ಕೊನೆಯ ಸ್ಥಾನದಲ್ಲಿದೆ. -0.514 ರನ್​ರೇಟ್​ ಹಿನ್ನಡೆಯಲ್ಲಿದೆ.

IPL 2023: ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿ ಹಿನ್ನೆಲೆ ಮಧ್ಯರಾತ್ರಿ 1 ಗಂಟೆಯ ತನಕ ಮೆಟ್ರೋ ಸೇವೆ ವಿಸ್ತರಣೆ

ಆರೆಂಜ್ ಕ್ಯಾಪ್:

ಸಿಎಸ್​ಕೆ ತಂಡದ ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಆರೆಂಕ್ ಕ್ಯಾಪ್ ತೊಟ್ಟಿದ್ದಾರೆ. ಇವರು ಜಿಟಿ ವಿರುದ್ಧ 92 ರನ್ ಸಿಡಿಸಿದ್ದರು. ಇದರಲ್ಲಿ 4 ಪೋರ್ ಮತ್ತು ಬರೋಬ್ಬರಿ 9 ಸಿಕ್ಸರ್​​ಗಳಿದ್ದವು. 8 ರನ್​ಗಳ ಅಂತರದಿಂದ ಶತಕ ವಂಚಿತರಾದರು. ದ್ವಿತೀಯ ಸ್ಥಾನದಲ್ಲಿ 63 ರನ್ ಗಳಿಸಿ ಶುಭ್​ಮನ್ ಗಿಲ್ ಇದ್ದಾರೆ.

ಪರ್ಪಲ್ ಕ್ಯಾಪ್:

ಚೆನ್ನೈ ಸೂಪರ್ ಕಿಂಗ್ಸ್ ತಂಡದ ರಾಜ್​ವರ್ಧನ್ ಹಂಗರ್ಗೇಕರ್ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತೊಟ್ಟಿದ್ದಾರೆ. ಇವರು ಜಿಟಿ ವಿರುದ್ಧ 4 ಒವರ್ ಬೌಲಿಂಗ್ ಮಾಡಿ 36 ರನ್ ನೀಡಿ 3 ವಿಕೆಟ್ ಕಬಳಿಸಿದರು. ನಂತರದ ಸ್ಥಾನದಲ್ಲಿ 2 ವಿಕೆಟ್​ಗಳನ್ನು ಪಡೆದು ಮೊಹಮ್ಮದ್ ಶಮಿ, ರಶೀದ್ ಖಾನ್ ಮತ್ತು ಅಲ್ಜರಿ ಜೋಸೆಫ್ ಇದ್ದಾರೆ.

ಇಂದು ಎರಡು ಪಂದ್ಯ:

ಇಂದು ಐಪಿಎಲ್ 2023 ರಲ್ಲಿ ಎರಡು ಪಂದ್ಯಗಳು ನಡೆಯಲಿದೆ. ಮಧ್ಯಾಹ್ನ 3:30ಕ್ಕೆ ಶುರುವಾಗಲಿರುವ ಮೊದಲ ಮ್ಯಾಚ್​ನಲ್ಲಿ ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ಮತ್ತು ನಿತೀಶ್ ರಾಣ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಖಾಮುಖಿ ಆಗಲಿದೆ. ಸಂಜೆ 7:30ಕ್ಕೆ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಕೆಎಲ್ ರಾಹುಲ್ ಅವರ ಲಖನೌ ಸೂಪರ್ ಜೇಂಟ್ಸ್ ಡೇವಿಡ್ ವಾರ್ನರ್ ಕ್ಯಾಪ್ಟನ್ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಎದುರಿಸಲಿದೆ. ಪಂಜಾಬ್ vs ಕೋಲ್ಕತ್ತಾ ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರ ಸ್ಟೇಡಿಯಂನಲ್ಲಿ ನಡೆಯಲಿದ್ದರೆ, ಲಖನೌ vs ಡೆಲ್ಲಿ ಪಂದ್ಯ ಲಖನೌದ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿಇ ಆಯೋಜಿಸಲಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:09 am, Sat, 1 April 23

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ